ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

EPFO rules: ಮಹತ್ವದ ಬದಲಾವಣೆ- ಪಿಎಫ್ ಖಾತೆಯಿಂದ ಶೇ. 100ರಷ್ಟು ವಿಥ್‌ಡ್ರಾ ಸಾಧ್ಯ!

EPFO Withdraw: ಪಿಎಫ್ ಖಾತೆ ಹೊಂದಿದ್ದೀರಾ ? ಹಾಗಿದ್ದರೆ ಇಲ್ಲೊಂದು ಶುಭ ಸುದ್ದಿ ಇದೆ. ಇನ್ನು ಮುಂದೆ ಪಿಎಫ್ ಖಾತೆಯಿಂದ ಅರ್ಹ ಬ್ಯಾಲೆನ್ಸ್ ನ ಶೇ. 100ರಷ್ಟನ್ನು ಮರಳಿ ಪಡೆಯಲು ಅವಕಾಶವಿದೆ. ಈ ನಿರ್ಣಯವನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕೇಂದ್ರ ಟ್ರಸ್ಟಿಗಳ ಮಂಡಳಿಯ ಸಭೆಯಲ್ಲಿ ಕೈಗೊಳ್ಳಲಾಗಿದೆ.

ನವದೆಹಲಿ: ಉದ್ಯೋಗಿಗಳು, ಪಿಂಚಣಿದಾರರಿಗೆ ಒಂದು ಶುಭ ಸುದ್ದಿ ಇದೆ. ಇನ್ನು ಮುಂದೆ ಪಿಎಫ್ ಖಾತೆಯಲ್ಲಿರುವ ಉದ್ಯೋಗಿ ಮತ್ತು ಉದ್ಯೋಗದಾತರ ಪಾಲು ಸೇರಿದಂತೆ ಅರ್ಹ ಬ್ಯಾಲೆನ್ಸ್ ನ ಶೇ. 100ರಷ್ಟನ್ನು ಹಿಂಪಡೆಯಬಹುದಾಗಿದೆ. ಈ ಕುರಿತು ನವದೆಹಲಿಯಲ್ಲಿ (New Delhi) ನಡೆದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organisation) ಕೇಂದ್ರ ಟ್ರಸ್ಟಿಗಳ ಮಂಡಳಿಯ (Central Board of Trustees) 238ನೇ ಸಭೆಯಲ್ಲಿ (EPFO’s Central Board of Trustees Meeting) ನಿರ್ಣಯ ಕೈಗೊಳ್ಳಲಾಗಿದೆ. ತನ್ನ ಸದಸ್ಯರಿಗೆ ಸುಲಭ ಜೀವನ ನಡೆಸಲು ಅನುಕೂಲವಾಗುವಂತೆ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವೆ ಮನ್ಸುಖ್ ಮಾಂಡವಿಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ವಂದನಾ ಗುರ್ನಾನಿ ಮತ್ತು ಕೇಂದ್ರ ಭವಿಷ್ಯ ನಿಧಿ ಆಯುಕ್ತ ರಮೇಶ್ ಕೃಷ್ಣಮೂರ್ತಿ ಭಾಗವಹಿಸಿದ್ದರು.

ಹಲವು ಪ್ರಮುಖ ನಿರ್ಣಯ

ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕೇಂದ್ರ ಟ್ರಸ್ಟಿಗಳ ಮಂಡಳಿಯ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಇದು ಕೂಡ ಒಂದಾಗಿದೆ. ಪಿಎಫ್ ಹೊಂದಿರುವ ಸದಸ್ಯರು, ಉದ್ಯೋಗಿ ಮತ್ತು ಉದ್ಯೋಗದಾತರ ಪಾಲು ಸೇರಿದಂತೆ ಭವಿಷ್ಯ ನಿಧಿಯಲ್ಲಿನ ಅರ್ಹ ಬ್ಯಾಲೆನ್ಸ್‌ನ ಶೇ. 100ರಷ್ಟು ಹಿಂಪಡೆಯಲು ಇನ್ನು ಮುಂದೆ ಅವಕಾಶವಿದೆ. ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳಲ್ಲಿ ಇದು ಒಂದಾಗಿದೆ.

ಏನಿದೆ ಹಿಂದಿನ ನಿಯಮ ?

ನಿರುದ್ಯೋಗ ಅಥವಾ ನಿವೃತ್ತಿಯ ಬಳಿಕ ಮಾತ್ರ ಪಿಎಫ್ ಖಾತೆಯಿಂದ ಸಂಪೂರ್ಣ ಹಣ ಹಿಂಪಡೆಯುವ ಅವಕಾಶವಿತ್ತು. ಅಲ್ಲದೇ ಒಬ್ಬ ಸದಸ್ಯ ನಿರುದ್ಯೋಗಿಯಾದರೆ 1 ತಿಂಗಳ ಅನಂತರ ಪಿಎಫ್ ಖಾತೆಯ ಬಾಕಿಯ ಶೇ. 75 ಮತ್ತು 2 ತಿಂಗಳ ಅನಂತರ ಉಳಿದ ಶೇ. 25 ಅನ್ನು ಮರಳಿ ಪಡೆಯಬಹುದಿತ್ತು. ಇದರೊಂದಿಗೆ ನಿವೃತ್ತಿಯ ಅನಂತರ ಯಾವುದೇ ಮಿತಿಯಿಲ್ಲದೆ ಪೂರ್ಣ ಬಾಕಿಯನ್ನು ಹಿಂಪಡೆಯಲು ಅವಕಾಶವಿತ್ತು. ಆದರೆ ಇಲ್ಲಿ ಅನುಮತಿಸಲಾದ ಗರಿಷ್ಠ ಭಾಗಶಃ ಹಿಂಪಡೆಯುವಿಕೆ ಶೇ. 90 ಆಗಿತ್ತು

ಭೂಮಿ, ಹೊಸ ಮನೆಯ ನಿರ್ಮಾಣ ಅಥವಾ ಇಎಂಐ ಮರುಪಾವತಿಗಾಗಿ ಇಪಿಎಫ್ ಸದಸ್ಯರು ತಮ್ಮ ಖಾತೆಯಿಂದ ಶೇ. 90ರಷ್ಟನ್ನು ಮರಳಿ ಪಡೆಯಬಹುದಿತ್ತು. ಆದರೆ ಈ ಬಾರಿಯ ಸಭೆಯಲ್ಲಿ ಹಿಂಪಡೆಯುವ ನಿಯಮಗಳನ್ನು ಸರಳಗೊಳಿಸಲು ಮಂಡಳಿಯು ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅವುಗಳು ಇಂತಿವೆ.

ಜೀವನದ ಅಗತ್ಯ ಅವಶ್ಯಕತೆಗಳೆಂದು ಪರಿಗಣಿಸಲಾಗಿರುವ ಅನಾರೋಗ್ಯ, ಶಿಕ್ಷಣ, ಮದುವೆ, ವಸತಿ ಮತ್ತು ವಿಶೇಷ ಸಂದರ್ಭಗಳನ್ನು ಒಂದೇ ಸುವ್ಯವಸ್ಥಿತ ನಿಯಮವಾಗಿ ವಿಲೀನಗೊಳಿಸಲು ಇಪಿಎಫ್ ಯೋಜನೆಯ ಭಾಗಶಃ ಹಿಂಪಡೆಯುವಿಕೆ ನಿಬಂಧನೆಗಳನ್ನು ಸರಳಗೊಳಿಸಲು ನಿರ್ಧರಿಸಿದೆ.

ಹಿಂಪಡೆಯುವಿಕೆ ಮಿತಿಗಳಲ್ಲಿ ಶಿಕ್ಷಣಕ್ಕಾಗಿ 10 ಬಾರಿ, ಮದುವೆಗೆ 5 ಬಾರಿ ಅವಕಾಶ ನೀಡಲಾಗಿದೆ. ಈ ಹಿಂದೆ ಮದುವೆ ಮತ್ತು ಶಿಕ್ಷಣಕ್ಕಾಗಿ ಒಟ್ಟು 3 ಬಾರಿ ಮಾತ್ರ ಭಾಗಶಃ ಹಿಂಪಡೆಯುವಿಕೆಗೆ ಅವಕಾಶವಿತ್ತು. ಭಾಗಶಃ ಹಿಂಪಡೆಯಲು ಕನಿಷ್ಠ ಸೇವೆ ಅವಧಿ ಕೇವಲ 12 ತಿಂಗಳುಗಳಿಗೆ ಇಳಿಸಲಾಗಿದೆ. ಅಲ್ಲದೇ ವಿಶೇಷ ಸಂದರ್ಭಗಳ ಅಡಿಯಲ್ಲಿ ಭಾಗಶಃ ಹಿಂಪಡೆಯುವಿಕೆಗೆ ಕಾರಣಗಳನ್ನು ಉಲ್ಲೇಖಿಸುವ ಅಗತ್ಯ ಕೂಡ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಹಿಂದೆ ವಿಶೇಷ ಸಂದರ್ಭಗಳಿಗೆ ಕಾರಣ ನೀಡಬೇಕಿತ್ತು. ಆದರೆ ಇದು ಹೆಚ್ಚಾಗಿ ಹಕ್ಕುಗಳ ನಿರಾಕರಣೆಗೆ ಕಾರಣವಾಗುತ್ತಿತ್ತು. ಆದರೆ ಇನ್ನು ಮುಂದೆ ಇದರ ಅಗತ್ಯವಿರುವುದಿಲ್ಲ. ಮಂಡಳಿಯ ಸಭೆಯ ಬಳಿಕ ಹೇಳಿಕೆ ನೀಡಿರುವ ಕಾರ್ಮಿಕ ಸಚಿವಾಲಯವು ಸದಸ್ಯರು ಖಾತೆಯಲ್ಲಿ ಶೇ. 25ರಷ್ಟು ಕನಿಷ್ಠ ಬ್ಯಾಲೆನ್ಸ್ ಅನ್ನು ಕಾಯ್ದುಕೊಳ್ಳಬೇಕು. ಇದು ಸದಸ್ಯರಿಗೆ ಹೆಚ್ಚಿನ ಮೌಲ್ಯದ ನಿವೃತ್ತಿ ನಿಧಿಯನ್ನು ಸಂಗ್ರಹಿಸಲು ಮತ್ತು ವಿವಿಧ ಪ್ರಯೋಜನಗಳೊಂದಿಗೆ ಹೆಚ್ಚಿನ ಬಡ್ಡಿದರವನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ ಎಂದು ತಿಳಿಸಿದೆ.

ಶೇ. 100ರಷ್ಟು ಹಿಂಪಡೆಯುವಿಕೆ ಸುಲಭ ಹೇಗೆ?

ಇನ್ನು ಮುಂದೆ ಪಿಎಫ್ ಹೊಂದಿರುವ ಸದಸ್ಯರು, ಉದ್ಯೋಗಿ ಮತ್ತು ಉದ್ಯೋಗದಾತರ ಪಾಲು ಸೇರಿದಂತೆ ಭವಿಷ್ಯ ನಿಧಿಯಲ್ಲಿನ ಅರ್ಹ ಬ್ಯಾಲೆನ್ಸ್‌ನ ಶೇ. 100ರಷ್ಟು ಹಿಂಪಡೆಯಲು ಅವಕಾಶ ನೀಡಲಾಗಿದೆ. ಈ ಮೂಲಕ ಪಿಎಫ್ ಖಾತೆದಾರರು ತಮ್ಮ ಪಿಎಫ್ ಖಾತೆಯಲ್ಲಿರುವ ಹಣವನ್ನು ಅತ್ಯಂತ ಸುಲಭವಾಗಿ ಮರಳಿ ಪಡೆಯಬಹುದಾಗಿದೆ. ಇದಕ್ಕಾಗಿ ಯಾವುದೇ ದಾಖಲೆಗಳು ಬೇಕಾಗಿರುವುದಿಲ್ಲ.

ಇದನ್ನೂ ಓದಿ: Javed Akhtar: ನಾಚಿಕೆಯಾಗಬೇಕು ನಿಮಗೆ; ತಾಲಿಬಾನ್ ಸಚಿವರಿಗೆ ನೀಡಿದ ಸ್ವಾಗತ ಕುರಿತು ಜಾವೇದ್ ಅಖ್ತರ್ ಕಿಡಿ

ಇನ್ನು ಇಪಿಎಫ್‌ನ ಕೊನೆಯ ಹಿಂಪಡೆಯುವಿಕೆಯ ಅವಧಿಯನ್ನು ಅಕಾಲಿಕ ಸಂದರ್ಭವಾದರೆ ಈಗ ಅಸ್ತಿತ್ವದಲ್ಲಿರುವ ಅವಧಿಯನ್ನು 2 ತಿಂಗಳುಗಳಿಂದ 12 ತಿಂಗಳುಗಳಿಗೆ ಮತ್ತು ಅಂತಿಮ ಪಿಂಚಣಿ ಮೊತ್ತ ಹಿಂಪಡೆಯುವಿಕೆಯನ್ನು 2 ತಿಂಗಳುಗಳಿಂದ 36 ತಿಂಗಳುಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಭಾಗಶಃ ಹಿಂಪಡೆಯುವಿಕೆಗೆ ಅವಕಾಶವಿರುವುದರಿಂದ ಇದು ತುರ್ತು ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಇಪಿಎಫ್‌ಒ ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author