Javed Akhtar: ನಾಚಿಕೆಯಾಗಬೇಕು ನಿಮಗೆ; ತಾಲಿಬಾನ್ ಸಚಿವರಿಗೆ ನೀಡಿದ ಸ್ವಾಗತ ಕುರಿತು ಜಾವೇದ್ ಅಖ್ತರ್ ಕಿಡಿ
ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಫ್ಘಾನ್ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರಿಗೆ ನೀಡಿದ "ಸ್ವಾಗತದ ಕುರಿತು ಚಿತ್ರಕಥೆಗಾರ-ಗೀತರಚನೆಕಾರ ಜಾವೇದ್ ಅಖ್ತರ್ ಟೀಕಿಸಿದ್ದಾರೆ. ತಾಲಿಬಾನಿಗಳಿಗೆ ನೀಡಿದ ಸ್ವಾಗತ ನೋಡಿ ನಾನು ತಲೆ ತಗ್ಗಿಸಿದೆ ಎಂದು ಅವರು ಹೇಳಿದರು.

-

ನವದೆಹಲಿ: ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಫ್ಘಾನ್ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ (Taliban Minister) ಅವರಿಗೆ ನೀಡಿದ "ಸ್ವಾಗತದ ಕುರಿತು ಚಿತ್ರಕಥೆಗಾರ-ಗೀತರಚನೆಕಾರ ಜಾವೇದ್ ಅಖ್ತರ್ (Javed Akhtar) ಟೀಕಿಸಿದ್ದಾರೆ. ತಾಲಿಬಾನಿಗಳಿಗೆ ನೀಡಿದ ಸ್ವಾಗತ ನೋಡಿ ನಾನು ತಲೆ ತಗ್ಗಿಸಿದೆ ಎಂದು ಅವರು ಹೇಳಿದರು. ಮುತ್ತಕಿ ಪ್ರಸ್ತುತ ಆರು ದಿನಗಳ ಭಾರತ ಭೇಟಿಯಲ್ಲಿದ್ದಾರೆ. 2021 ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ ನಾಯಕರೊಬ್ಬರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದು.
ಎಲ್ಲಾ ರೀತಿಯ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸಿದವರು ವಿಶ್ವದ ಅತ್ಯಂತ ಕೆಟ್ಟ ಭಯೋತ್ಪಾದಕ ಗುಂಪು ತಾಲಿಬಾನ್‌ನ ಪ್ರತಿನಿಧಿಗೆ ನೀಡಿದ ಗೌರವ ಮತ್ತು ಸ್ವಾಗತವನ್ನು ನೋಡಿದಾಗ ನಾನು ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ" ಎಂದು ಅಖ್ತರ್ ಸೋಮವಾರ ಎಕ್ಸ್‌ನಲ್ಲಿ ಬರೆದಿದ್ದಾರೆ. ಗುರುವಾರ ದೆಹಲಿಗೆ ಬಂದಿಳಿದ ಮುತ್ತಕಿ ಅವರಿಗೆ "ಗೌರವಯುತ ಸ್ವಾಗತ" ನೀಡಿದ್ದಕ್ಕಾಗಿ ಅವರು ದಕ್ಷಿಣ ಏಷ್ಯಾದ ಅತ್ಯಂತ ಪ್ರಭಾವಶಾಲಿ ಇಸ್ಲಾಮಿಕ್ ಸೆಮಿನರಿಗಳಲ್ಲಿ ಒಂದಾದ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿರುವ ದಾರುಲ್ ಉಲೂಮ್ ದಿಯೋಬಂದ್ ಅನ್ನು ಟೀಕಿಸಿದರು.
ಜಾವೇದ್ ಅಖ್ತರ್ ಟ್ವೀಟ್
I hang my head in shame when I see the kind of respect and reception has been given to the representative of the world’s worst terrorists group Taliban by those who beat the pulpit against all kind of terrorists . Shame on Deoband too for giving such a reverent welcome to their “…
— Javed Akhtar (@Javedakhtarjadu) October 13, 2025
ಹೆಣ್ಣು ಮಕ್ಕಳ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಿದವರಲ್ಲಿ ಒಬ್ಬರಾದ ತಮ್ಮ "ಇಸ್ಲಾಮಿಕ್ ಹೀರೋ" ಗೆ ಇಷ್ಟೊಂದು ಗೌರವಯುತ ಸ್ವಾಗತ ನೀಡಿದ್ದಕ್ಕಾಗಿ ದಿಯೋಬಂದ್‌ಗೂ ನಾಚಿಕೆಯಾಗಬೇಕು. ನನ್ನ ಭಾರತೀಯ ಸಹೋದರ ಸಹೋದರಿಯರೇ !!! ನಮಗೆ ಏನಾಗುತ್ತಿದೆ," ಎಂದು ಅಖ್ತರ್ ಹೇಳಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಾಲಿಬಾನ್ ನಿರ್ಬಂಧ ಸಮಿತಿಯು ತಾಲಿಬಾನ್ ನಾಯಕನ ಮೇಲೆ ವಿಧಿಸಲಾದ ಪ್ರಯಾಣ ನಿಷೇಧಕ್ಕೆ ವಿನಾಯಿತಿಯನ್ನು ಅನುಮೋದಿಸಿದ ನಂತರ ಮುತಾಕಿ ಭಾರತಕ್ಕೆ ಭೇಟಿ ನೀಡಿದರು. ಕಳೆದ ವಾರ, ದೆಹಲಿಯಲ್ಲಿ ಮುತ್ತಕಿ ಅವರ ಮಾಧ್ಯಮ ಸಂವಾದದಲ್ಲಿ ಮಹಿಳಾ ಪತ್ರಕರ್ತರ ಅನುಪಸ್ಥಿತಿಯ ಬಗ್ಗೆ ದೊಡ್ಡ ವಿವಾದ ಭುಗಿಲೆದ್ದಿತು .
ಈ ಸುದ್ದಿಯನ್ನೂ ಓದಿ: Afghan Minister: ದೆಹಲಿಯಲ್ಲಿ ತಾಲಿಬಾನ್ ಸಚಿವನ ಪತ್ರಿಕಾಗೋಷ್ಠಿ; ಪತ್ರಕರ್ತೆಯರಿಗೆ ನಿಷೇಧ, ಹಲವರ ಆಕ್ರೋಶ
ವಿರೋಧ ಪಕ್ಷಗಳು ಈ ಘಟನೆಯ ಕುರಿತು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದವು. ವಿದೇಶಾಂಗ ಸಚಿವಾಲಯ (MEA) ಪತ್ರಿಕಾ ಸಂವಾದದಲ್ಲಿ ಯಾವುದೇ ಪಾತ್ರ ವಹಿಸಿಲ್ಲ ಎಂದು ಹೇಳಿದೆ. ವಿವಾದ ತೀವ್ರಗೊಳ್ಳುತ್ತಿದ್ದಂತೆ, ಮುತ್ತಕಿ ಭಾನುವಾರ ಮತ್ತೊಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಹಲವಾರು ಮಹಿಳಾ ಪತ್ರಕರ್ತರನ್ನು ಆಹ್ವಾನಿಸಿದರು. ಮಹಿಳಾ ಪತ್ರಕರ್ತರನ್ನು ಹೊರಗಿಡುವ ಯಾವುದೇ ಉದ್ದೇಶವಿಲ್ಲ ಎಂದು ಅವರು ಹೇಳಿದರು. ಪತ್ರಿಕಾ ಗೋಷ್ಠಿಗೆ ಸಂಬಂಧಿಸಿದಂತೆ, ಅದನ್ನು ಅಲ್ಪಾವಧಿಯಲ್ಲಿಯೇ ಆಯೋಜಿಸಲಾಗಿತ್ತು. ಪತ್ರಕರ್ತರ ಸಣ್ಣ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಇದು ಹೆಚ್ಚಾಗಿ ತಾಂತ್ರಿಕ ಸಮಸ್ಯೆಯಾಗಿತ್ತು" ಎಂದು ಅವರು ಹೇಳಿದರು.