ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೂವುಗಳ ಬೆಲೆ ಕುಸಿತ: ನೆರೆಯ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ರಫ್ತು ಬೇಡಿಕೆ ಕುಸಿತ

ಭರ್ಜರಿ ಹೂವು ಬೆಳೆದು ಹೂವಿನಂಥ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದರು. ನಾಡ ಹಬ್ಬವೂ ಆರಂಭ ಶುರುವಾಗಿದೆ. ಹೀಗಾಗಿ ಭರ್ಜರಿ ದರ ಸಿಗುತ್ತೆ ಅಂತ ಕನಸು ಹೊತ್ತು ಮಾರುಕಟ್ಟೆಗೆ ಹೊತ್ತು ಆಗಮಿಸಿದ್ದರು. ಆದರೆ ದರ ಕುಸಿತದಿಂದ ಗದಗ ರೈತರೂ ಗೋಳಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಬರದಿದ್ದರೆ ಸಾವಿನ ದಾರಿಯೇ ಗತಿ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿ ದ್ದಾರೆ.

ಹೂವಪ್ಪ ಐ ಹೆಚ್.

ಬೆಂಗಳೂರು: ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಹೂವುಗಳು ಗುಣಮಟ್ಟ ಕಳೆದುಕೊಂಡ ಹಿನ್ನೆಲೆಯಲ್ಲಿ ಹೂವುಗಳು ನೆರೆಯ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ರಫ್ತು ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಬೆಲೆ ಇಳಿಕೆಗೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲೂಕು ವಿವಿಧೆಡೆ ರೈತರು ನಾಡಹಬ್ಬದಸರಾ ಸಂದರ್ಭದಲ್ಲಿ ಹೂವುಗಳಿಗೆ ಉತ್ತಮ ಬೆಲೆ ನಿರೀಕ್ಷಿಸಿದ್ದರು, ಕಲರ್ ಕಲರ್ ಸೇವಂತಿ, ಗುಲಾಬಿ, ಚೆಂಡು ಸೇರಿದಂತೆ ಇತರ ಹೂವಿನ ಬೆಲೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.

ಈ ಹಿಂದೆ ಪಿತೃಪಕ್ಷದ ಸಮಯದಲ್ಲಿ ಬೆಲೆ ಇಳಿಕೆ ಸಹಜ ಎಂದುಕೊಂಡರೆ ಈಗ ದಸರಾ ಸಮಯ ದಲ್ಲೂ ಬೆಲೆ ಏರಿಕೆಯಾಗದಿರುವುದು ರೈತರನ್ನು ಬಾರೀ ಸಂಕಷ್ಟಕ್ಕೆ ದುಡಿದೆ.

ಬಯಲುಸೀಮೆ ಪ್ರದೇಶವಾಗಿರುವ ಚಿಕ್ಕಬಳ್ಳಾಪುರದ ಈ ಭಾಗದಲ್ಲಿ ಯಾವುದೇ ನದಿ ನಾಲಾ ಗಳಿಲ್ಲದ ಜಿಲ್ಲೆ ನಮ್ಮದು. ನೀರಿಗಾಗಿ ಹೆಂಡತಿ ಮಕ್ಕಳ ಮೈಮೇಲಿನ ಒಡವೆಗಳನ್ನು ಮಾರಿ, ಸಾಲ ಸೋಲ ಮಾಡಿ ಬೋರ್‌ ವೆಲ್‌ ಹಾಕಿಸಿ, ಸಮೃದ್ಧ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಕೊಳ್ಳುವವ ರಿಲ್ಲ. 40 ಕೆಜಿ ಹೂವಿನ ಬ್ಯಾಗ್‌ ಮಾರಿದರೂ ರೂ 300 ರಿಂದ 500 ಬರುತ್ತದೆ. ಹೂ ಕೀಳುವ ಕೂಲಿ ಸಹಾ ಬರುವುದಿಲ್ಲ. ಈಗಲಾದರೂ ಸರ್ಕಾರ ನಮ ನೆರವಿಗೆ ಬರಬೇಕಿದೆ ಪುರದಗಡ್ಡೆ ಮಹಿಳೆ ಗಾಯತ್ರಿ ಅಂಬರೀಶ್‌ ಆಗ್ರಹಿಸಿದರು.

ಆದರೆ ಚಿಲ್ಲರೆ ದರ ಸೇವಂತಿಗೆ 200 ರೂ. ಗುಲಾಬಿ 160 ರೂ. ಮಾರಾಟಮಾಡುತ್ತಾರೆ. ನಮಗೆ ಮಾತ್ರ ಬೆಲೆ ಸಿಗುವುದಿಲ್ಲ ಎಂದು ರೈತರು ದೂರುತ್ತಾರೆ.

ಒಂದು ಕಡೆ ಮಳೆ ಬಂದರೂ ಕಷ್ಟ, ಮಳೆ ಬರದಿದ್ದರೂ ಕಷ್ಟ ಎನ್ನುವ ಹಾಗೆ ರೈತರಿಗೆ ನಷ್ಟ ತಪ್ಪಿದ್ದಲ್ಲ ಎಂಬಂತಾಗಿದೆ.

ಇದನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್‌ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ

ಈ ಕಡೆ ಗದಗಿನ ರೈತರು ಇದಕ್ಕೆ ಹೊರತಾಗಿಲ್ಲ. ಭರ್ಜರಿ ಹೂವು ಬೆಳೆದು ಹೂವಿನಂಥ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದರು. ನಾಡ ಹಬ್ಬವೂ ಆರಂಭ ಶುರುವಾಗಿದೆ. ಹೀಗಾಗಿ ಭರ್ಜರಿ ದರ ಸಿಗುತ್ತೆ ಅಂತ ಕನಸು ಹೊತ್ತು ಮಾರುಕಟ್ಟೆಗೆ ಹೊತ್ತುಆಗಮಿಸಿದ್ದರು. ಆದರೆ ದರ ಕುಸಿತದಿಂದ ಗದಗ ರೈತರೂ ಗೋಳಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಬರದಿದ್ದರೆ ಸಾವಿನ ದಾರಿಯೇ ಗತಿ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ ತಾಲೂಕಿನ ಲಕ್ಕುಂಡಿ, ಕದಂಪೂರ, ಶಿರುಂಜ್, ಪಾಪನಾಶಿ ಸೇರಿ ಹಲವುಗ್ರಾಮಗಳಲ್ಲಿ ಅತಿ ಹೇಚ್ಚು ಹೂವು ಬೆಳೆಯಲಾಗುತ್ತೆ. ಆದರೆ ಅತಿಯಾದ ಮಳೆಯಿಂದ ಹೂವು ತನ್ನ ಗುಣಮಟ್ಟ ಕಳೆದುಕೊಂಡಿದೆ. ಹೀಗಾಗಿ ಹೊರರಾಜ್ಯಗಳಿಗೆ ರಪ್ತು ಆಗುತ್ತಿಲ್ಲ. ಹೀಗಾಗಿ ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ಹೂವು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ದರ ಪಾತಾಳಕ್ಕೆ ಕುಸಿದಿದೆ ಎನ್ನುತ್ತಾರೆ ಗದಗ ಹೂವು ಮಂಡಿ ವ್ಯಾಪಾರಿ ಯಲ್ಲಪ್ಪ ಪೂಜಾರಿ

ಒಬ್ಬೊಬ್ಬ ರೈತರು ನಾಲ್ಕು, ಐದು ಎಕರೆ ಪ್ರದೇಶದಲ್ಲಿ ಹೂವು ಬೆಳೆದಿದ್ದಾರೆ. ಒಬ್ಬೊಬ್ಬ ರೈತರು 5 ರಿಂದ 7 ಲಕ್ಷ ರೂ. ಹಣ ಖರ್ಚು ಮಾಡಿದ್ದಾರೆ. ಈಗ ಹೂವಿನ ತೋಟಗಳು ಒಣಗುತ್ತಿರೋದು ನೋಡಿ ರೈತರು ನಲುಗಿ ಹೋಗಿದ್ದಾರೆ. ಹೂವಿನೊಂದಿಗೆ ರೈತರ ಬದುಕು ಬಾಡುತ್ತಿದೆ. ಸೂಕ್ತ ಪರಿಹಾರ ನೀಡುವಂತೆ ಸರಕಾರವನ್ನು ರೈತರು ಒತ್ತಾಯಿಸುತ್ತಿದ್ದಾರೆ.

ಹೂವು ಬೆಳೆದು ಬೆಳೆದ ಹೂವಿನ ಕಟಾವಿಗೆ ಕೂಲಿ ಹಾಗೂ ಮಾರುಕಟ್ಟೆಗೆ ಸಾಗಣೆ ಮಾಡುವ ವೆಚ್ಚವೂ ವಾಪಸ್‌‍ ಬರುತ್ತಿಲ್ಲ. ಹೀಗಾಗಿ ಒಂದಷ್ಟು ಮಂದಿ ರೈತರು ತೋಟದಲ್ಲೇ ನಾಶಕ್ಕೆ ಮುಂದಾಗಿದ್ದರೆ. ಹಾಕಿದ ಬಂಡವಾಳವೂ ಬಾರದೆ ತಲೆಮೇಲೆ ಕೈಹೊತ್ತು ಕುಳಿತ್ತಿದ್ದಾರೆ.

ಚೆಂಡು ಹೂ ಕೇಳೋರಿಲ್ಲ.:-

ಇನ್ನೂ ವರಮಹಾಲಕ್ಷೀ ಮತ್ತು ವರಮಹಾಲಕ್ಷ್ಮಿ ಗೌರಿಗಣೇಶ ಹಬ್ಬದ ಸಮಯದಲ್ಲಿ ಸೇವಂತಿಗೆ ಹೂ 250 ರಿಂದ 300 ರೂಪಾಯಿಗೂ ಮಾರಾಟವಾಗಿದೆ. ಆದರೆ ಈಗ 30 ರೂಪಾಯಿ, 40 ರೂಪಾ ಯಿಗೆ ಬೆಲೆ ಇಳಿದಿದೆ.ಕೆಜಿ ಚೆಂಡು ಹೂ 90 ರಿಂದ 120 ರೂಪಾಯಿಗೆ ಮಾರಾಟವಾಗಿತ್ತು ಆದ್ರೆ ಈಗ ಚೆಂಡು ಹೂ ಖರೀದಿ ಮಾಡುವವರೇ ಇಲ್ಲ. 1 ಕೆಜಿ ಚೆಂಡು ಹೂ 3 ರೂಪಾಯಿ, 4 ಇದೆ.

ಇನ್ನೂ ಮಳೆಯಿಂದ ನೆನೆದು ಒದ್ದೆಯಾದ ಹೂಗಳನ್ನು ಖರೀದಿ ಮಾಡುವವರೇ ಇಲ್ಲ. ಇನ್ನು ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲೂ ಹೆಚ್ಚು ಹೂವು ಬೆಳೆದಿದ್ದು, ಅಲ್ಲಿನ ವರ್ತಕ ರಿಂದಲೂ ಬೇಡಿಕೆ ಇಲ್ಲವಾಗಿದೆ. ಎಂದು ಕುರ್ಲಹಳ್ಳಿ ಗ್ರಾಮದ ನಾರಾಯಣಸೂರಿ ಹೇಳಿದ್ದಾರೆ.

*

ಭರ್ಜರಿ ಹೂವು ಬೆಳೆದು ಹೂವಿನಂಥ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದೆವು ನಾಡ ಹಬ್ಬವೂ ಆರಂಭ ಶುರುವಾಗಿದೆ. ಹೀಗಾಗಿ ಭರ್ಜರಿ ದರ ಸಿಗುತ್ತೆ ಅಂತ ಕನಸು ಹೊತ್ತು ಮಾರುಕಟ್ಟೆಗೆ ಹೊತ್ತು ಆಗಮಿಸಿದರೆ ದರ ಕುಸಿತದಿಂದ ದಿಕ್ಕು ತೋರದಂತಾಗಿದೆ

ಗದಗ ರೈತ ಮಹಾಲಿಂಗಪ್ಪ

ಕೆ ಆರ್ ಮಾರ್ಕಟ್ಟೆ ಪಾರ್ಕಿಂಗ್ ಸಮಸ್ಯೆಯಿಂದ ಬೆಲೆ ಕುಸಿತ:- ಕೆ ಆರ್ ಮಾರ್ಕಟ್ಟೆಯಲ್ಲಿ ಎರಡು ಚಕ್ರ ವಾಹನಗಳ ಪಾರ್ಕಿಂಗ್‌ಗೆ ಐದು ಹಂತಗಳ ದರ ಇದ್ದವು 0-2 ಗಂಟೆಗೆ 5 ರೂರಿಂದ ಪ್ರಾರಂಭವಾಗಿ, 16-24 ಗಂಟೆಗಳಿಗೆ 40 ರೂ. ವರೆಗೆ ಇತ್ತು. ಹೊಸ ಟೆಂಡರ್‌ನಡಿ ಎಂಟು ಹಂತಗಳನ್ನು ಪರಿಚಯಿಸಿದ್ದು, ಪ್ರಾರಂಭಿಕ ಒಂದು ಗಂಟೆಗೆ 15 ರೂರಿಂದ ಶುರುವಾಗಿ, 12-24 ಗಂಟೆಗಳ ಪಾರ್ಕಿಂಗ್‌ಗೆ 175 ರೂವರೆಗೆ ದರ ಏರಿಸಲಾಗಿದೆ.

ನಾಲ್ಕು ಚಕ್ರ ವಾಹನಗಳಿಗೂ ಇದೇ ಎಂಟು ಹಂತಗಳ ದರ ವ್ಯವಸ್ಥೆ ಅನ್ವಯಿಸಿದ್ದು, ಪ್ರಾರಂಭಿಕ ಒಂದು ಗಂಟೆಗೆ 24 ರೂರಿಂದ ಪ್ರಾರಂಭವಾಗಿ, 12-24 ಗಂಟೆಗಳಿಗೆ 275 ರೂ. ಆಗಿದೆ. ಹಿಂದೆ 16-24 ಗಂಟೆಗಳ ಪಾರ್ಕಿಂಗ್‌ಗೆ 100 ರೂ.ಮಾತ್ರ ಇತ್ತು.

ಈ ಸಮಸ್ಯೆ ಹಿನ್ನೆಲೆಯಲ್ಲಿ ಕೆ ಆರ್ ಮಾರುಕಟ್ಟೆಗೆ ಹೂವು ಕೊಳ್ಳಲು ಹೆಚ್ಚಿನ ಗ್ರಾಹಕರು ಬರುತ್ತಿಲ್ಲ ಹೀಗಾಗಿ ಹೂವು ಕೊಳ್ಳವರಿಲ್ಲ ಹೂವು ಬೆಲೆ ಕುಸಿಯಲು ಇದು ಕೂಡಾ ಕಾರಣ ಎನ್ನುತ್ತಾರೆ ಕೆ.ಆರ್ ಮಾರ್ಕೆಟ್ ಮರ್ಚಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ದಿವಾಕರ್ ಅವರು.