ನವದೆಹಲಿ: ದೇಶದಲ್ಲಿ ಹಣದುಬ್ಬರ (inflation) ದರ ಏರಿಕೆಯಾಗುತ್ತಲೇ ಇದ್ದು, ಇದನ್ನು ನಿಯಂತ್ರಿಸಲು ಅಮೆರಿಕದ ಫೆಡರಲ್ ರಿಸರ್ವ್ (Federal Reserve) ಬಡ್ಡಿ ದರಗಳನ್ನು (Fed rate) ಈಗಾಗಲೇ ಹೆಚ್ಚಿಸಬೇಕಿತ್ತು ಎಂದು ಅಮೆರಿಕದ ಕೇಂದ್ರ ಬ್ಯಾಂಕ್ (US central bank) ಅನ್ನು ಪರಿಶೀಲಿಸಲು ರಚಿಸಲಾದ ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಮುಖ್ಯಸ್ಥ ರಘುರಾಮ್ ರಾಜನ್ (Ex-RBI Chief Raghuram Rajan) ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಈಗ ಇರುವ ಫೆಡ್ ಬಡ್ಡಿ ದರದ ಬಗ್ಗೆ ಆತಂಕವಿದೆ. ಹಣದುಬ್ಬರ ಹೆಚ್ಚುತ್ತಲೇ ಇರುವುದರಿಂದ ಡಿಸೆಂಬರ್‌ನಲ್ಲಿ ಫೆಡ್ ದರ ಹೆಚ್ಚಾಗಬಹುದು ಎಂದು ಮಾರುಕಟ್ಟೆಗಳು ನಿರೀಕ್ಷಿಸುತ್ತಿವೆ ಎಂದು ಅವರು ಹೇಳಿದರು.
ಈಗ ಹಣಕಾಸಿನ ಪರಿಸ್ಥಿತಿಗಳು ನಿರ್ಬಂಧಿತವಾಗಿಲ್ಲ. ಅಮೆರಿಕದ ಡೇಟಾ ಸೆಂಟರ್‌ಗಳಲ್ಲಿ ಬಹಳ ಬಲವಾದ ಹೂಡಿಕೆಯಾಗುತ್ತಿದ್ದು, ಯುಎಸ್ ಬೆಳವಣಿಗೆ ಹೊಂದುತ್ತಿದೆ. ಆದರೆ ಯುಎಸ್ ಬಹಳ ಬಲವಾದ ಹಣಕಾಸಿನ ಕೊರತೆಯನ್ನು ಎದುರಿಸುತ್ತಿದೆ. ಇದು ಶೀಘ್ರದಲ್ಲೇ ಕಡಿಮೆಯಾಗುವಂತೆ ಕಾಣುತ್ತಿಲ್ಲ ಎಂದರು.
ಅಮೆರಿಕನ್ ಗ್ರಾಹಕರು ತಮ್ಮ ಉಳಿತಾಯವನ್ನು ಕಡಿಮೆ ಮಾಡಿ ಖರ್ಚು ಹೆಚ್ಚಿಸುತ್ತಾರೆ. ಇದು ತಡೆಹಿಡಿಯಲಾಗದ ದೇಶದ ಆರ್ಥಿಕತೆಯನ್ನು ಸೂಚಿಸುತ್ತದೆ. ಆದರೆ ಫೆಡ್ ಅಧ್ಯಕ್ಷರಾಗಿ ಕೆವಿನ್ ವಾರ್ಷ್ ಅಧಿಕಾರ ವಹಿಸಿಕೊಂಡ ಮೇಲೆ ಅವರು ತಮ್ಮ ಆರ್ಥಿಕತೆ ಅಭಿಪ್ರಾಯಗಳ ಬಗ್ಗೆ ಹೆಚ್ಚಿನ ಒಳನೋಟವನ್ನು ನೀಡಲಿಲ್ಲ. ಇದರಿಂದ ದರಗಳ ಕುರಿತು ಮುಂದಿನ ಮಾರ್ಗದರ್ಶನ ನೀಡಲು ಸಾಧ್ಯವಾಗುವುದಿಲ್ಲ. ಇದು ಹಣದುಬ್ಬರವನ್ನು ಗುರಿಗೆ ಮರಳಿ ತರುವಲ್ಲಿ ಅವರ ದೃಢಸಂಕಲ್ಪದ ಕೊರತೆಯನ್ನು ತೋರಿಸುತ್ತವೆ. ಹೀಗಾಗಿ ದೀರ್ಘಾವಧಿಯ ಬಾಂಡ್ ಗಳ ಮೇಲೆ ಹೂಡಿಕೆಗಳು ಎರಡು ದಶಕಗಳ ಬಳಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ ಎಂದು ತಿಳಿಸಿದರು.
ಪ್ರಧಾನಿಯಾಗಲು ಯಾರು ಸೂಕ್ತ ? ಟಾಪ್ 3 ಪಟ್ಟಿಯಲ್ಲಿ ತಮಿಳುನಾಡು ಸಿಎಂ ವಿಜಯ್‌ಗೆ ಸ್ಥಾನ, ಉಳಿದ ಇಬ್ಬರು ಯಾರು?
ವಾರ್ಷ್ ಅವರು ಹಣದುಬ್ಬರವನ್ನು ತುಂಬಾ ವಿರೋಧಿಸುತ್ತಾರೆ ಮತ್ತು ಅದನ್ನು ಕಡಿಮೆ ಮಾಡಲು ಬಯಸುತ್ತಾರೆ. ಆದರೆ ಅವರು ಅದನ್ನು ಮಾಡಲು ಒಂದು ಯೋಜನೆಯನ್ನು ಹೊಂದಿದ್ದಾರೆಯೇ; ಅವರು ಏನು ಮಾಡಬೇಕೆಂದು ತಿಳಿದಿದ್ದಾರೆಯೇ ಮತ್ತು ಅವರು ಅದನ್ನು ಸ್ಪಷ್ಟವಾಗಿ ತಿಳಿಸಬಲ್ಲರೇ ಎಂದು ಪ್ರಶ್ನಿಸಿದ ಅವರು ಹಣದುಬ್ಬರ ಹೆಚ್ಚಿರುವುದರಿಂದ ಡಿಸೆಂಬರ್‌ನಲ್ಲಿ ಫೆಡ್ ಸಾಲ ವೆಚ್ಚ ಕೂಡ ಹೆಚ್ಚಾಗುತ್ತದೆ. ಭಾರತದ ರೂಪಾಯಿ ಬಗ್ಗೆ ಭಯ ಪಡಬೇಕಿಲ್ಲ. ಅದು ಉತ್ತಮವಾಗಿದೆ. ಕರೆನ್ಸಿ ಪ್ರಸ್ತುತ ಡಾಲರ್‌ಗೆ 95.50 ರೂಪಾಯಿಯ ಆಸುಪಾಸಿನಲ್ಲಿದೆ ಎಂದರು.