ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಧಾನಿಯಾಗಲು ಯಾರು ಸೂಕ್ತ ? ಟಾಪ್ 3 ಪಟ್ಟಿಯಲ್ಲಿ ತಮಿಳುನಾಡು ಸಿಎಂ ವಿಜಯ್‌ಗೆ ಸ್ಥಾನ, ಉಳಿದ ಇಬ್ಬರು ಯಾರು?

Prime Minister of India: ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಟ ಸಿ ಜೋಸೆಫ್ ವಿಜಯ್ ಅವರು ಈಗ ಪ್ರಧಾನಿಯಾಗಲು ಸೂಕ್ತ ಅಭ್ಯರ್ಥಿ ಪಟ್ಟಿಯಲ್ಲಿ ಮೊದಲ ಮೂವರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಮಾಧ್ಯಮವೊಂದು ನಡೆಸಿದ ಸಮೀಕ್ಷೆಯಲ್ಲಿ ಇದು ಬಹಿರಂಗವಾಗಿದೆ. ಹಾಗಿದ್ದರೆ ಉಳಿದ ಇಬ್ಬರು ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಪ್ರಧಾನಿ ಹುದ್ದೆಗೆ ಯಾರು ಸೂಕ್ತ? ಏನು ಹೇಳುತ್ತೆ ಸಮೀಕ್ಷೆ ?

ಸಂಗ್ರಹ ಚಿತ್ರ -

ನವದೆಹಲಿ: ರಾಜಕೀಯ ರಂಗದಲ್ಲಿ ಜನಪ್ರಿಯವಾಗಿ ಗುರುತಿಸಿಕೊಂಡವರಲ್ಲಿ ಈಗ ತಮಿಳುನಾಡು ಮುಖ್ಯಮಂತ್ರಿ (Tamil Nadu chief minister) ಸಿ ಜೋಸೆಫ್ ವಿಜಯ್ (C Joseph Vijay) ಕೂಡ ಸೇರಿದ್ದಾರೆ. ಮುಖಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಅವರು ಈಗ ಪ್ರಧಾನಿಯಾಗಲು (top 3 PM choices) ಸೂಕ್ತ ಅಭ್ಯರ್ಥಿ ಪಟ್ಟಿಯಲ್ಲಿ ಮೊದಲ ಮೂವರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ (PM Narendra Modi), ವಿಪಕ್ಷ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಅವರೊಂದಿಗೆ ವಿಜಯ್ ಕೂಡ ಟಾಪ್ 3 ಪ್ರಧಾನಿ ಆಯ್ಕೆಗಳಲ್ಲಿ ಒಬ್ಬರಾಗಿದ್ದಾರೆ.

ಇಂಡಿಯಾ ಟುಡೇ ಸಿವೋಟರ್ ಮೂಡ್ ಆಫ್ ದಿ ನೇಷನ್ (MOTN) ಸಮೀಕ್ಷೆಯಲ್ಲಿ 2029 ರ ಲೋಕಸಭಾ ಚುನಾವಣೆಗೆ ಸಂಭಾವ್ಯ ಪ್ರಧಾನಿ ಅಭ್ಯರ್ಥಿಯಾಗಿ ವಿಜಯ್ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2024ರಲ್ಲಿ ರಾಜಕೀಯ ಪ್ರವೇಶಿಸಿರುವ ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾದ ಮೂರು ತಿಂಗಳಲ್ಲಿ ಭಾರತದ ಪ್ರಧಾನಿ ಪಾತ್ರಕ್ಕೆ ಸೂಕ್ತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ಪಾಕಿಸ್ತಾನದ ಐಎಸ್ಐ ಪರ ಬೇಹುಗಾರಿಕೆ; ದೆಹಲಿಯಲ್ಲಿ ಮುಸ್ಲಿಂ ದಂಪತಿ ಬಂಧನ

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿಕ ವಿಜಯ್ ಅವರು ಸ್ಥಾನ ಪಡೆದಿದ್ದಾರೆ. ಒಟ್ಟು ಶೇಕಡಾ 9.2ರಷ್ಟು ಮಂದಿ ಮುಂದಿನ ಪ್ರಧಾನಿ ಹುದ್ದೆಗೆ ವಿಜಯ್ ಅವರನ್ನು ಆಯ್ಕೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರನ್ನು ಶೇಕಡಾ 48.7ರಷ್ಟು ಮಂದಿ ಬೆಂಬಲಿಸಿದ್ದು, ರಾಹುಲ್ ಗಾಂಧಿ ಅವರನ್ನು ಶೇಕಡಾ 27.1ರಷ್ಟು ಮಂದಿ ಬೆಂಬಲಿಸಿದ್ದಾರೆ. ಉಳಿದಂತೆ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಶೇಕಡಾ 2, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಶೇಕಡಾ 1.7ರಷ್ಟು ಮಂದಿ ಬೆಂಬಲಿಸಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ನಡೆದ ಪ್ರತಿಭಟನೆಯಿಂದಾಗಿ ಜನಪ್ರಿಯತೆ ಗಳಿಸಿರುವ ಕಾಕ್ರೋಚ್ ಜನತಾ ಪಕ್ಷದ ಮುಖ್ಯಸ್ಥ ಅಭಿಜೀತ್ ದಿಪ್ಕೆ ಕೂಡ ಈ ರೇಸಿನಲ್ಲಿದ್ದರೆ. ಅವರಿಗೆ ಶೇಕಾದ 1.3ರಷ್ಟು ಮಂದಿ ಬೆಂಬಲಿಸಿದ್ದರೂ ಅವರು ತಾವು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದಾರೆ. ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶೇಕಡಾ 1.2ರಷ್ಟು ಮಂದಿಯ ಬೆಂಬಲ ಗಳಿಸಿದ್ದಾರೆ.

ಪ್ರಧಾನಿ ಹುದ್ದೆಗೆ ಹೆಚ್ಚಾಗಿ ಉತ್ತರ ಭಾರತದ ಮಂದಿಯೇ ಆಯ್ಕೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ವಿಜಯ್ ಅವರು ಉತ್ತರ ಭಾರತದ ಜನರ ಗಮನವನ್ನು ಸೆಳೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಟಿವಿಕೆ ಹಿರಿಯ ನಾಯಕ ಕೆ.ಎ. ಸೆಂಗೋಟ್ಟೈಯನ್, ಉತ್ತರ ಭಾರತದ ರಾಜ್ಯಗಳ ಜನರು ನಮ್ಮ ನಾಯಕ ವಿಜಯ್ ಅವರನ್ನು ಎದುರು ನೋಡುತ್ತಿದ್ದಾರೆ. ಅವರು ಸಂಪೂರ್ಣ ಭಾರತವನ್ನು ಆಳುವ ಶಕ್ತಿ ಹೊಂದಿದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ಹೇಳಿದರು.

ನ್ಯಾಷನಲ್ ಎಂಟರ್‌ಪ್ರೆನ್ಯೂರ್‌ಶಿಪ್ ನೆಟ್‌ವರ್ಕ್ ಅಧ್ಯಕ್ಷರಾಗಿ ಮನೀಶ್ ದಲಾಲ್ ನೇಮಕ

ತಿರುಪ್ಪೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನಾನು ಎಂಜಿಆರ್ ಮತ್ತು ಜಯಲಲಿತಾ ಅವರೊಂದಿಗೆ ಕೆಲಸ ಮಾಡಿದ್ದೇನೆ. ಈ ಇಬ್ಬರು ನಾಯಕರ ಬಳಿಕ ವಿಜಯ್ ಅವರು ತಮಿಳುನಾಡನ್ನು ಮಾತ್ರವಲ್ಲದೆ ಭವಿಷ್ಯದ ಭಾರತವನ್ನೂ ಆಳುವ ಶಕ್ತಿಯಾಗಿದ್ದಾರೆ ಎಂದರು.