ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಏಪ್ರಿಲ್ 1ರಿಂದ ಬದಲಾಗಲಿದೆ ಹಣಕಾಸು ನಿಯಮ: ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ತಿಳಿದಿರಲಿ ಈ 5 ವಿಷಯ

ತೆರಿಗೆ, ಉಳಿತಾಯ, ಖರ್ಚಿನ ಮೇಲೆ ಪರಿಣಾಮ ಬೀರುವ ಐದು ಪ್ರಮುಖ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆಗೊಳಿಸಿದೆ. ಇದು ಏಪ್ರಿಲ್ 1ರಿಂದ ಜಾರಿಯಾಗಲಿದೆ. ತೆರಿಗೆ ವಂಚನೆಯನ್ನು ತಡೆಯಲು ಜಾರಿಗೊಳಿಸಲಾದ ಈ ನಿಯಮಗಳನ್ನು ಮುಖ್ಯವಾಗಿ ಕ್ರೆಡಿಟ್ ಕಾರ್ಡ್ ಬಳಕೆದಾರರು ತಿಳಿದಿರಲೇಬೇಕು. ಅವುಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಸಂಗ್ರಹ ಚಿತ್ರ

ನವದೆಹಲಿ: ಕ್ರೆಡಿಟ್ ಕಾರ್ಡ್ (credit card) ಬಳಕೆದಾರರು ತಿಳಿದಿರಲೇಬೇಕಾದ ಐದು ಪ್ರಮುಖ ನಿಯಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಏಪ್ರಿಲ್ 1ರಿಂದ ಇದು ಜಾರಿಯಾಗಲಿದೆ. ಈ ನಿಯಮಗಳು ತೆರಿಗೆ (tax) ವರದಿ, ಪಾನ್ (pan) ಅವಶ್ಯಕತೆ, ಪಾವತಿ ವಿಧಾನದ ಮೇಲೆ ಪರಿಣಾಮ ಬೀರಲಿದೆ. ದೈನಂದಿನ ವೆಚ್ಚ, ಆನ್‌ಲೈನ್ ಶಾಪಿಂಗ್ ಅಥವಾ ತೆರಿಗೆ ಪಾವತಿಗಾಗಿ ಕ್ರೆಡಿಟ್ ಕಾರ್ಡ್ ಬಳಸುವವರು ಈ ನಿಯಮಗಳನ್ನು ತಿಳಿದಿರಲೇಬೇಕು. ಇಲ್ಲವಾದರೆ ಆದಾಯ ತೆರಿಗೆ ಇಲಾಖೆ (Income Tax Department) ಬಹುದೊಡ್ಡ ಶಾಕ್ ಕೊಡಬಹುದು.

ತೆರಿಗೆ ವಂಚನೆಯನ್ನು ತಡೆಗಟ್ಟಲು 1962ರ ಆದಾಯ ತೆರಿಗೆ ನಿಯಮಗಳನ್ನು ಬದಲಾಯಿಸಿರುವ ಕೇಂದ್ರ ಸರ್ಕಾರ ಹೊಸ ಕರಡು ಆದಾಯ ತೆರಿಗೆ ನಿಯಮಗಳು 2026 ಅನ್ನು ಬಿಡುಗಡೆ ಮಾಡಿದೆ. ಈ ನಿಯಮ ಜಾರಿಯಾದ ಮೇಲೆ ದೇಶದ ಪ್ರತಿಯೊಬ್ಬ ವ್ಯಕ್ತಿಯ ಖರ್ಚು- ವೆಚ್ಚದ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಡಲಿದೆ.

ಕರಡು ಆದಾಯ ತೆರಿಗೆ ನಿಯಮಗಳು 2026 ರಲ್ಲಿ ಅಡಿಯಲ್ಲಿ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿ ಐದು ಪ್ರಮುಖ ಬದಲಾವಣೆಗಳಾಗಲಿದೆ. ಆದ್ದರಿಂದ ಈ ಬದಲಾವಣೆಗಳು ಹಣಕಾಸು ಮತ್ತು ತೆರಿಗೆ ಯೋಜನೆಯ ಮೇಲೆ ಪರಿಣಾಮ ಬೀರಲಿದೆ.

ಸುಳ್ಳು ಸುದ್ದಿ ಕಂಪನಿಗಳ ಮೇಲೆ ಪರಿಣಾಮ ಬೀರುತ್ತಾ? ಆಗ ಏನು ಮಾಡಬೇಕು? ತಜ್ಞರ ಕಿವಿಮಾತು ಕೇಳಿ

  1. ಕ್ರೆಡಿಟ್ ಕಾರ್ಡ್ ಬಿಲ್‌ ವರದಿ

ಒಂದು ಹಣಕಾಸು ವರ್ಷದಲ್ಲಿ ನಗದು ಹೊರತುಪಡಿಸಿ ಒಂದು ಅಥವಾ ಹೆಚ್ಚಿನ ಕ್ರೆಡಿಟ್ ಕಾರ್ಡ್‌ಗಳಲ್ಲಿ ಮಾಡಿದ ಒಟ್ಟು ಪಾವತಿಗಳ ಮೊತ್ತವು 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಾದರೆ ಬ್ಯಾಂಕ್ ಅಥವಾ ಕಾರ್ಡ್ ನೀಡುವ ಕಂಪೆನಿಯು ಈ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡುತ್ತದೆ. ಅಂತೆಯೇ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗಳನ್ನು ನಗದು ರೂಪದಲ್ಲಿ ಮಾಡಿದರೆ ಇದು ಕೂಡ ಆದಾಯ ತೆರಿಗೆ ಇಲಾಖೆಗೆ ವರದಿಯಾಗುತ್ತದೆ. ದೊಡ್ಡ ವಹಿವಾಟುಗಳ ಮೇಲೆ ಆದಾಯ ತೆರಿಗೆ ಇಲಾಖೆಯು ಸಂಪೂರ್ಣ ಮೇಲ್ವಿಚಾರಣೆ ಮಾಡಲಿದೆ.

2. ಕ್ರೆಡಿಟ್ ಕಾರ್ಡ್ ಬಿಲ್ ನಿಂದ ಪಾನ್ ಪಡೆಯಬಹುದು

ಪಾನ್ ಕಾರ್ಡ್ ಮಾಡಿಸಲು ವಿದ್ಯುತ್ ಬಿಲ್, ವಾಟರ್ ಬಿಲ್ ಅಗತ್ಯವಾಗಿತ್ತು. ಇನ್ನು ಮುಂದೆ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ವಿಳಾಸ ಪುರಾವೆಯಾಗಿ ನೀಡಬಹುದಾಗಿದೆ. ಈ ಬಿಲ್ ಕಳೆದ 3 ತಿಂಗಳ ಒಳಗಿನದ್ದಾಗಿರಬೇಕು ಮತ್ತು ಅದರಲ್ಲಿ ವಿಳಾಸ ಇರಬೇಕು. ಇದು ಹೊಸ ಪಾನ್ ಅರ್ಜಿದಾರರಿಗೆ ಹೆಚ್ಚಿನ ಅನುಕೂಲತೆಯನ್ನು ನೀಡಲಿದೆ.

3. ಕ್ರೆಡಿಟ್ ಕಾರ್ಡ್ ನಲ್ಲಿ ತೆರಿಗೆ ಪಾವತಿ

ತೆರಿಗೆ ಪಾವತಿಗೆ ಕ್ರೆಡಿಟ್ ಕಾರ್ಡ್ ಕೂಡ ಬಳಕೆ ಮಾಡಬಹುದಾಗಿದೆ. ಈ ಹಿಂದೆ ಕೇವಲ ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಮಾತ್ರ ಬಳಸಬಹುದಾಗಿತ್ತು. ಆದರೆ ಇನ್ನು ಕ್ರೆಡಿಟ್ ಕಾರ್ಡ್ ಬಳಸಬಹುದಾಗಿದೆ. ಆದರೆ ಇದಕ್ಕೆ ಬ್ಯಾಂಕ್ ನಿಂದ ಶುಲ್ಕ ಅಥವಾ ಬಡ್ಡಿ ಬೀಳುವ ಸಾಧ್ಯತೆ ಇದೆ. ಹೀಗಾಗಿ ಬಿಲ್ ಕಟ್ಟುವ ಮೊದಲು ಪಾವತಿಸಬೇಕಾದ ಬಡ್ಡಿ, ಶುಲ್ಕದ ಬಗ್ಗೆ ತಿಳಿದಿರಲಿ.

4. ಕಂಪೆನಿ ಕ್ರೆಡಿಟ್ ಕಾರ್ಡ್‌ಗಳಿಗೂ ತೆರಿಗೆ ನಿಯಮ ಅನ್ವಯ

ಕೆಲಸ ಮಾಡುವ ಕಂಪೆನಿಯಿಂದ ಕ್ರೆಡಿಟ್ ಕಾರ್ಡ್ ಪಡೆದಿದ್ದರೆ ಅದನ್ನು ಖರ್ಚಿಗಾಗಿ ಬಳಸಿದರೆ ಅದಕ್ಕೂ ತೆರಿಗೆ ಬೀಳಲಿದೆ. ವೆಚ್ಚಗಳು ಅಧಿಕೃತ ಉದ್ದೇಶಗಳಿಗಾಗಿ ಮಾತ್ರವಾಗಿದ್ದರೆ ಕಂಪೆನಿಗಳು ಪ್ರತಿಯೊಂದು ಖರ್ಚಿನ ಲೆಕ್ಕವನ್ನು ಇಟ್ಟುಕೊಂಡಿರಬೇಕು. ಒಂದು ವೇಳೆ ಉದ್ಯೋಗಿ ಸ್ವಲ್ಪ ಪಾವತಿ ಮಾಡಿದ್ದರೆ ಅದನ್ನು ತೆರಿಗೆ ವೇಳೆ ಕಳೆಯಲಾಗುತ್ತದೆ.

ಏಷ್ಯಾದಲ್ಲೇ 2 ನೇ ಅತಿದೊಡ್ಡ ಅಮೆಜಾನ್ ಕಚೇರಿ ಬೆಂಗಳೂರಿನಲ್ಲಿ ಉದ್ಘಾಟನೆ

5. ಕ್ರೆಡಿಟ್ ಕಾರ್ಡ್‌ಗಳಿಗೆ ಪಾನ್ ಕಡ್ಡಾಯ

ಹೊಸ ಕ್ರೆಡಿಟ್ ಕಾರ್ಡ್ ಪಡೆಯಬೇಕಾದರೆ ಪಾನ್ ಕಾರ್ಡ್ ಕಡ್ಡಾಯವಾಗಿದೆ. ಪಾನ್ ಕಾರ್ಡ್ ವಿವರ ನೀಡದೆ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಅದನ್ನು ತಿರಸ್ಕರಿಸಲಾಗುತ್ತದೆ.ಹೀಗಾಗಿ ಪ್ರತಿಯೊಬ್ಬರ ಖರ್ಚು-ವೆಚ್ಚಗಳನ್ನು ಪಾನ್ ಕಾರ್ಡ್ ಜೊತೆ ಲಿಂಕ್ ಮಾಡಲಾಗುತ್ತದೆ. ಇದರಿಂದ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆಗೆ ಅನುಕೂಲವಾಗಲಿದೆ. ನಕಲಿ ಖಾತೆಗಳನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.

ವಿದ್ಯಾ ಇರ್ವತ್ತೂರು

View all posts by this author