ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Digital Gold Investment: ಡಿಜಿಟಲ್‌ ಗೋಲ್ಡ್‌ನಲ್ಲಿ ಹೂಡಿಕೆ ಅಪಾಯಕಾರಿ; ಹೂಡಿಕೆದಾರರಿಗೆ ಸೆಬಿ ಎಚ್ಚರಿಕೆ

ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಇತ್ತೀಚೆಗೆ ಹೊರಡಿಸಿದ ಪ್ರಕಟಣೆಯಲ್ಲಿ, ಡಿಜಿಟಲ್‌ ಗೋಲ್ಡ್‌ನಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಎಂದು ಜನರಿಗೆ ಎಚ್ಚರಿಕೆ ಕೊಟ್ಟಿದೆ. ಡಿಜಿಟಲ್‌ ಗೋಲ್ಡ್‌ ಪ್ರಾಡಕ್ಟ್‌ ಗಳು ಸೆಬಿಯ ನಿಯಂತ್ರಣದಲ್ಲಿ ಇರುವುದಿಲ್ಲ. ಅಂದರೆ ಡಿಜಿಟಲ್‌ ಗೋಲ್ಡ್‌ ಮೇಲೆ ಸೆಬಿ ಯಾವುದೇ ನಿಗಾ ವಹಿಸುವುದಿಲ್ಲ. ಆದ್ದರಿಂದ ಅಲ್ಲಿ ಏನಾದರೂ ವಂಚನೆ ಆದರೆ ಸೆಬಿಯ ಬಳಿ ಬಂದು ಕೇಳಿದರೆ, ಅದು ತನ್ನ ವ್ಯಾಪ್ತಿಯಲ್ಲಿ ಇಲ್ಲ ಎಂದು ಹೇಳಲಿದೆ.

ಡಿಜಿಟಲ್‌ ಗೋಲ್ಡ್‌ನಲ್ಲಿ ಹೂಡಿಕೆ ಅಪಾಯಕಾರಿ; ಸೆಬಿ ಏನು ಹೇಳುತ್ತೇ?

ಡಿಜಿಟಲ್‌ ಗೋಲ್ಡ್‌ನಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಎಂದು ಎಚ್ಚರಿಸಿ ಸೆಬಿ -

Vishakha Bhat
Vishakha Bhat Nov 11, 2025 11:59 AM

ಕೇಶವಪ್ರಸಾದ.ಬಿ

ಮುಂಬೈ: ಮಾರುಕಟ್ಟೆ ನಿಯಂತ್ರಕ ಸೆಬಿ ಇತ್ತೀಚೆಗೆ ಹೊರಡಿಸಿದ ಪ್ರಕಟಣೆಯಲ್ಲಿ, ಡಿಜಿಟಲ್‌ ಗೋಲ್ಡ್‌ನಲ್ಲಿ ಹೂಡಿಕೆ ಮಾಡುವುದು (Digital Gold Investment) ಅಪಾಯಕಾರಿ ಎಂದು ಜನರಿಗೆ ಎಚ್ಚರಿಕೆ ಕೊಟ್ಟಿದೆ. ಡಿಜಿಟಲ್‌ ಗೋಲ್ಡ್‌ ಪ್ರಾಡಕ್ಟ್‌ ಗಳು ಸೆಬಿಯ (SEBI) ನಿಯಂತ್ರಣದಲ್ಲಿ ಇರುವುದಿಲ್ಲ. ಅವುಗಳನ್ನು ಕಮಾಡಿಟಿ ಡಿರೈವಟೀಸ್‌ ಎಂದು ಸೆಬಿ ನಿಯಂತ್ರಿಸುತ್ತಿಲ್ಲ. ಆದ್ದರಿಂದ ಹೂಡಿಕೆದಾರರು ಇದರಲ್ಲಿ ವಂಚನೆಗೆ ಗುರಿಯಾಗುವ ಅಪಾಯ ಇದೆ ಎಂದು ಸೆಬಿ ಎಚ್ಚರಿಸಿದೆ.

ಸೆಬಿಯ ನಿಯಂತ್ರಣದಲ್ಲಿ ಇಲ್ಲ ಎಂದರೆ ಅರ್ಥವೇನು?

ಅಂದರೆ ಡಿಜಿಟಲ್‌ ಗೋಲ್ಡ್‌ ಮೇಲೆ ಸೆಬಿ ಯಾವುದೇ ನಿಗಾ ವಹಿಸುವುದಿಲ್ಲ. ಆದ್ದರಿಂದ ಅಲ್ಲಿ ಏನಾದರೂ ವಂಚನೆ ಆದರೆ ಸೆಬಿಯ ಬಳಿ ಬಂದು ಕೇಳಿದರೆ, ಅದು ತನ್ನ ವ್ಯಾಪ್ತಿಯಲ್ಲಿ ಇಲ್ಲ ಎಂದು ಹೇಳಲಿದೆ. ಆ ಅಪಾಯ ಇದ್ದೇ ಇರುತ್ತದೆ. ಹಾಗಾದ್ರೆ ಏನಿದು ಡಿಜಿಟಲ್‌ ಗೋಲ್ಡ್?‌ ಇದು ಫಿನ್‌ ಟೆಕ್‌ ಪ್ರಾಡಕ್ಟ್‌ ಆಗಿದ್ದು, ಮೊಬೈಲ್‌ ನಲ್ಲಿ ಸುಲಭವಾಗಿ ಯುಪಿಐ ಮೂಲಕ ಖರೀದಿಸಬಹುದು. ಪೇಟಿಎಂ, ಗೂಗಲ್‌ ಪೇ, ಫೋನ್‌ ಪೇ ಮೂಲಕ ಸುಲಭವಾಗಿ ಖರೀದಿಸಬಹುದು. ಯುಪಿಐನ ವ್ಯಾಲೆಟ್‌ಗಳಲ್ಲಿ ಡಿಜಿಟಲ್‌ ಗೋಲ್ಡ್‌ ಇಡಲಾಗುತ್ತದೆ. ಯಾವಾಗ ಏಕಾದರೂ ಅದನ್ನು ಮಾರಬಹುದು ಅಥವಾ ಭೌತಿಕ ಚಿನ್ನವನ್ನು ಬಳಿಕ ತರಿಸಿಕೊಳ್ಳಬಹುದು. ಇದು ಅನುಕೂಲಕರ ಎಂದು ಅನ್ನಿಸಬಹುದು. 2024ರಲ್ಲಿ ಜನರು 13,888 ಕೋಟಿ ರುಪಾಯಿಗಳನ್ನು ಡಿಜಿಟಲ್‌ ಗೋಲ್ಡ್‌ ನಲ್ಲಿ ಹೂಡಿಕೆ ಮಾಡಿದ್ದಾರೆ. ಇದು ಹೆಚ್ಚುತ್ತಿದೆ. ಆದರೆ ಸೆಬಿಯ ಈ ಎಚ್ಚರಿಕೆಯನ್ನು ಗಮನಿಸಬೇಕು.

ಹೀಗಿದ್ದರೂ ಗೋಲ್ಡ್‌ ಇಟಿಎಫ್‌ಗಳು ಹೂಡಿಕೆಗೆ ಉತ್ತಮ. ಏಕೆಂದರೆ ಇವುಗಳು ಸೆಬಿಯ ನಿಯಂತ್ರಣದಲ್ಲಿ ಇರುತ್ತವೆ. ಗೋಲ್ಡ್‌ ಇಟಿಎಫ್‌ಗಳು ಎನ್‌ ಎಸ್‌ ಇ ಮತ್ತು ಬಿಎಎಸ್‌ ಇ ಸ್ಟಾಕ್‌ ಎಕ್ಸ್‌ ಚೇಂಜ್‌ ಮೂಲಕ ನಡೆಯುತ್ತವೆ. ಅದು ಸೇಫ್.‌ ಇಟಿಎಫ್‌ಗಳನ್ನುಅಸೆಟ್‌ ಮ್ಯಾನೇಜ್‌ ಮೆಂಟ್‌ ಕಂಪನಿಗಳು ನಡೆಸುತ್ತವೆ. ಹಲವಾರು ಮ್ಯೂಚುವಲ್‌ ಫಂಡ್‌ ಕಂಪನಿಗಳೂ ಗೋಲ್ಡ್‌ ಇಟಿಎಫ್‌ ಗಳನ್ನು ನೀಡುತ್ತವೆ.

ಬ್ಯಾಂಕ್‌ಗಳ ವಿಲೀನಕ್ಕೆ ಸಿದ್ಧತೆ:

ಭಾರತದಲ್ಲಿ ವಿಶ್ವ ದರ್ಜೆಯ ಬ್ಯಾಂಕ್‌ಗಳ ನಿರ್ಮಾಣಕ್ಕೆ ಪೂರಕವಾದ ವಾತಾವರಣ ನಿರ್ಮಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಕೇಂದ್ರ ಸರಕಾರವು ಆರ್‌ ಬಿಐ ಜತೆಗೆ ಮತ್ತು ಬ್ಯಾಂಕ್‌ಗಳ ಮುಖ್ಯಸ್ಥರುಗಳ ಜತೆಗೆ ಮಾತುಕತೆ ಆರಂಭಿಸಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಸಾರ್ವಜನಿಕ ಬ್ಯಾಂಕ್‌ಗಳ ಮತ್ತೊಂದು ಸುತ್ತಿನ ಮಹಾ ವಿಲೀನಕ್ಕೆ ಸಿದ್ಧತೆ ನಡೆಯುತ್ತಿದೆ.

ಇದರ ಉದ್ದೇಶ ಭಾರತದ ಆರ್ಥಿಕತೆಯ ಅಭಿವೃದ್ಧಿಗೆ ಪೂರಕವಾಗಿ ವಿಶ್ವದರ್ಜೆಯ ಪ್ರಮುಖ ಬ್ಯಾಂಕ್‌ ಗಳನ್ನು ಸೃಷ್ಟಿಸುವುದು. ದೇಶ ಇವತ್ತು 5 ಟ್ರಿಲಿಯನ್‌ ಡಾಲರ್‌ ಇಕಾನಮಿಯಾಗುವ ಗುರಿಯನ್ನು ಹೊಂದಿದೆ. ಇದಕ್ಕೆ ಬಲಾಢ್ಯ ಬ್ಯಾಂಕ್‌ಗಳು ಅಗತ್ಯವಾಗಿದೆ.

ವಿಲೀನದ ಬಳಿಕ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಲಾಭದ ಹಳಿಗೆ ಮರಳಿವೆ. ಸಾಲ ವಿತರಣೆಯ ಗ್ರೋತ್ ರೇಟ್‌ 15% ಕ್ಕೆ ಏರಿಕೆ ಆಗಿದೆ. ಪಬ್ಲಿಕ ಸೆಕ್ಟರ್‌ ಬ್ಯಾಂಕ್‌ ಗಳು 2023-24ರಲ್ಲಿ 1 ಲಕ್ಷದ 40 ಸಾವಿರ ಕೋಟಿ ರುಪಾಯಿ ಲಾಭ ಗಳಿಸಿವೆ. ಇದು ಭಾರತದ ಆತ್ಮ ವಿಶ್ವಾಸ ಮತ್ತು ಸ್ಥಿರತೆಯನ್ನು ಬಿಂಬಿಸಿದೆ.

ಸಾರ್ವಜನಿಕ ಬ್ಯಾಂಕ್‌ಗಳನ್ನು ವಿಲೀನಗಳಿಸುವ ಮೂಲಕ ಭಾರತವು ವಿಶ್ವದರ್ಜೆಯ ದೊಡ್ಡ ಬ್ಯಾಂಕ್‌ ಗಳನ್ನು ಸೃಷ್ಟಿಸಬಹುದು. ದೇಶದ ಮೂಲಸೌಕರ್ಯ, ಉತ್ಪಾದನೆ, ತಂತ್ರಜ್ಞಾನ ಅಭಿವೃದ್ಧಿಗೆ ಬ್ಯಾಣಕ್‌ಗಳು ಫೈನಾನ್ಸ್‌ ಮಾಡಬೇಕಾಗುತ್ತದೆ. ಆಗ ದೊಡ್ಡ ಮತ್ತು ವಿಶ್ವದರ್ಜೆಯ ಬ್ಯಾಂಕ್‌ ಇರಬೇಕಾಗುತ್ತದೆ.

ಬ್ಯಾಂಕ್‌ ಗಳ ದೊಡ್ಡ ಗಾತ್ರ ಏಕೆ ಮುಖ್ಯವಾಗುತ್ತದೆ?

ಎಂದು ನೀವು ಕೇಳಬಹುದು. ಇದಕ್ಕೆ ಕಾರಣ ಇದೆ. ದೊಡ್ಡ ಬ್ಯಾಂಕ್‌ಗಳಿಗೆ ದೊಡ್ಡ ಪ್ರಾಜೆಕ್ಟ್‌ಗಳಿಗೆ ಫೈನಾನ್ಸ್‌ ಒದಗಿಸುವ ಸಾಮರ್ಥ್ಯ ಇರುತ್ತದೆ. ಸಣ್ಣ ಬ್ಯಾಂಕ್‌ಗಳಿಗೆ ಅದು ಸಾಧ್ಯವಾಗುವುದಿಲ್ಲ. ಮಾರುಕಟ್ಟೆ ಮೇಲೆ ಪ್ರಭಾವ ಬೀರಲು, ರಿಸ್ಕ್‌ ಗಳನ್ನು ಮ್ಯಾನೇಜ್‌ ಮಾಡಲೂ ದೊಡ್ಡ ಬ್ಯಾಂಕ್‌ ಗಳಿಗೆ ಅನುಕೂಲ ಆಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ದೊಡ್ಡ ಬ್ಯಾಂಕ್‌ಗಳಿಗೆ ಹೆಚ್ಚು ಅನುಕೂಲವಾಗುತ್ತದೆ.

ಈ ಸುದ್ದಿಯನ್ನೂ ಓದಿ: Gold price today on 11th November 2025: ಚಿನ್ನದ ದರದಲ್ಲಿ ಭಾರೀ ಏರಿಕೆ; ಸ್ವರ್ಣ ಪ್ರಿಯರಿಗೆ ಶಾಕ್‌ ಮೇಲೆ ಶಾಕ್‌

ಈಗ ಜಗತ್ತಿನ ಟಾಪ್‌ 10 ಬ್ಯಾಂಕ್‌ಗಳಲ್ಲಿ ಅಮೆರಿಕ ಮತ್ತು ಚೀನಾದ ಪ್ರಾಬಲ್ಯ ಇದೆ. ಮಾರುಕಟ್ಟೆ ಬಂಡವಾಳ ಅಥವಾ ಮಾರ್ಕೆಟ್‌ ಕ್ಯಾಪಿಟಲೈಸೇಶನ್‌ ದೃಷ್ಟಿಯಿಂದ ಭಾರತದ ಎಚ್‌ಡಿಎಫ್‌ಸಿ ಬ್ಯಾಂಕ್‌ 10ನೇ ಸ್ಥಾನದಲ್ಲಿದೆ. ಅಂದರೆ ಷೇರುಗಳ ಮಾರುಕಟ್ಟೆ ಮೌಲ್ಯದ ದೃಷ್ಟಿಯಿಂದ. ಆದ್ದರಿಂದ ಭಾರತದಲ್ಲಿ ದೊಡ್ಡ ಬ್ಯಾಂಕ್‌ ಗಳ ಸ್ಥಾಪನೆ ಆಗಬೇಕು ಎಂಬುದರಲ್ಲಿ ಅರ್ಥ ಇದೆ.

ಈಗ ವಿಶ್ವದ ಮೊದಲ 100 ದೊಡ್ಡ ಬ್ಯಾಂಕ್‌ಗಳಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ 43ನೇ ಸ್ಥಾನದಲ್ಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ 75ನೇ ಸ್ಥಾನದಲ್ಲಿದೆ. ಇಕನಾಮಿಕ್‌ ಟೈಮ್ಸ್‌ನ ಇತ್ತೀಚಿನ ವರದಿಯ ಪ್ರಕಾರ ಬ್ಯಾಂಕ್‌ ಆಫ್‌ ಬರೋಡಾ, ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ವಿಲೀನವಾಗುವ ಸಾಧ್ಯತೆ ಇದೆ.