ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಮಾನ ಹಾರಾಟಕ್ಕೆ ಅಡ್ಡಿ; ಇಂಡಿಗೋಗೆ 22 ಕೋಟಿ ರೂ. ದಂಡ

ಕಳೆದ ಡಿಸೆಂಬರ್ ತಿಂಗಳಲ್ಲಿ ಇಂಡಿಗೋ ವಿಮಾನ ಹಾರಾಟಕ್ಕೆ ಸುಮಾರು ವಾರಗಳ ಕಾಲ ಉಂಟಾದ ತೊಂದರೆಗಾಗಿ ನಾಗರಿಕ ವಿಮಾನಯಾನ ನಿಯಂತ್ರಕ ಡಿಜಿಸಿಎ 22.20 ಕೋಟಿ ರೂ. ದಂಡ ವಿಧಿಸಿದೆ. ಅದರ ನಿರ್ವಹಣೆಯ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ವಿಮಾನ ಹಾರಾಟದಲ್ಲಿ ಉಂಟಾದ ತೊಂದರೆಗಳಿಗೆ ಯೋಜನೆ, ಕಾರ್ಯಾಚರಣೆ ಮತ್ತು ನಿಯಂತ್ರಣದಲ್ಲಿ ದೋಷಗಳಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ.

ಸಂಗ್ರಹ ಚಿತ್ರ

ನವದೆಹಲಿ: ನಾಗರಿಕ ವಿಮಾನಯಾನ ನಿಯಂತ್ರಕ (civil aviation regulator) ಡಿಜಿಸಿಎಯು ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋಗೆ (IndiGo flight) 22.20 ಕೋಟಿ ರೂ. ದಂಡ ವಿಧಿಸಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಸುಮಾರು ವಾರಗಳ ಕಾಲ ಇಂಡಿಗೋ (indiGO) ವಿಮಾನ ಹಾರಾಟಕ್ಕೆ ಉಂಟಾದ ತೊಂದರೆಗಳಿಗೆ ಯೋಜನೆ, ಕಾರ್ಯಾಚರಣೆ ಮತ್ತು ನಿಯಂತ್ರಣದಲ್ಲಿ ದೋಷಗಳಾಗಿರುವುದು ತನಿಖೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಈ ದಂಡವನ್ನು ವಿಧಿಸಲಾಗಿದೆ ಮತ್ತು ಅದರ ನಿರ್ವಹಣೆಗಾಗಿ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

2025ರ ವರ್ಷಾಂತ್ಯದಲ್ಲಿ ಸಂಭವಿಸಿದ ಬೃಹತ್ ವಿಮಾನ ಹಾರಾಟದ ತೊಂದರೆಯ ಹಿಂದೆ ಯೋಜನೆ, ಕಾರ್ಯಾಚರಣೆ ಮತ್ತು ನಿಯಂತ್ರಣದಲ್ಲಿ ಲೋಪವಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ನಿಯಂತ್ರಕ ಡಿಜಿಸಿಎ ಇಂಡಿಗೋಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಿದೆ.

ಯುಪಿಐ ಮೂಲಕ ಇಪಿಎಫ್ ಹಣ ಪಡೆಯಲು ಅವಕಾಶ; ಯಾವಾಗ, ಹೇಗೆ?

ಡಿಸೆಂಬರ್ 3ರಿಂದ 5ರ ನಡುವೆ ಇಂಡಿಗೋ ವಿಮಾನ ಹಾರಾಟದಲ್ಲಿ ವಿಳಂಬ ಮತ್ತು ರದ್ದತಿ ಉಂಟಾಯಿತು. ಈ ಸಂದರ್ಭದಲ್ಲಿ ಸುಮಾರು 2,507 ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, 1,852 ವಿಮಾನಗಳು ವಿಳಂಬವಾಗಿದ್ದವು. ಇದರಿಂದ ದೇಶಾದ್ಯಂತ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡರು. ಈ ಕುರಿತು ತನಿಖಾ ಕಾರ್ಯ ಪೂರ್ಣಗೊಂಡಿದ್ದು, ಇದೀಗ ಇಂಡಿಗೋಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಇಂಡಿಗೋ ವಿಮಾನಗಳ ಮಾಲೀಕತ್ವ ಹೊಂದಿರುವ ಇಂಟರ್‌ಗ್ಲೋಬ್ ಏವಿಯೇಷನ್ ​​ಲಿಮಿಟೆಡ್‌, ಡಿಜಿಸಿಎ ಆದೇಶಗಳನ್ನು ಸ್ವೀಕರಿಸಲಾಗಿದೆ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು. ಇಂಡಿಗೋದ ಆಡಳಿತ ಮಂಡಳಿಯು ಆದೇಶಗಳನ್ನು ಸಂಪೂರ್ಣವಾಗಿ ಅರಿತುಕೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಮ್ಮ ಎಲ್ಲಾ ಪಾಲುದಾರರಿಗೆ, ವಿಶೇಷವಾಗಿ ನಮ್ಮ ಮೌಲ್ಯಯುತ ಗ್ರಾಹಕರಿಗೆ ತಿಳಿಸಲು ಬಯಸುತ್ತೇವೆ ಎಂದು ಹೇಳಿದೆ.

ಅಡಚಣೆಗೆ ಕಾರಣ

ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶನದ ಮೇರೆಗೆ ಸ್ಥಾಪಿಸಲಾದಾ ನಾಗರಿಕ ವಿಮಾನಯಾನ ನಿರ್ದೇಶನಾಲಯದ ನಾಲ್ಕು ಸದಸ್ಯರ ತನಿಖಾ ಸಮಿತಿಯು, ಇಂಡಿಗೋ ವಿಮಾನ ಹಾರಾಟದಲ್ಲಿ ಉಂಟಾದ ತೊಂದರೆಗಳಿಗೆ ಅಸಮರ್ಪಕ ಸಿದ್ಧತೆ, ದುರ್ಬಲ ಸಾಫ್ಟ್‌ವೇರ್ ವ್ಯವಸ್ಥೆಗಳು ಮತ್ತು ನಿರ್ವಹಣಾ ಮೇಲ್ವಿಚಾರಣೆ, ಒಟ್ಟಿಗೆ ಸಾಕಷ್ಟು ಕಾರ್ಯಾಚರಣೆಗಳನ್ನು ನಿರ್ವಹಿಸುವಲ್ಲಿ ಇಂಡಿಗೋ ವಿಫಲವಾಗಿದೆ. ಪರಿಷ್ಕೃತ ವಿಮಾನ ಕರ್ತವ್ಯ ಸಮಯ ಮಿತಿ ಮತ್ತು ಮಾನದಂಡವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿಲ್ಲ ಎಂದು ತಿಳಿಸಿದೆ.

ಏನು ಕ್ರಮ?

ಅಸಮರ್ಪಕ ಮೇಲ್ವಿಚಾರಣೆ ಮತ್ತು ಬಿಕ್ಕಟ್ಟು ನಿರ್ವಹಣೆಗಾಗಿ ವಾಯುಯಾನ ನಿಯಂತ್ರಕವು ಇಂಡಿಗೋ ಸಿಇಒ, ವಿಮಾನ ಕಾರ್ಯಾಚರಣೆಗಳ ಉಪ ಮುಖ್ಯಸ್ಥ, ಸಿಬ್ಬಂದಿ ಸಂಪನ್ಮೂಲ ಯೋಜನೆಯ ಎವಿಪಿ ಮತ್ತು ವಿಮಾನ ಕಾರ್ಯಾಚರಣೆಗಳ ನಿರ್ದೇಶಕರಿಗೆ ಎಚ್ಚರಿಕೆಯನ್ನು ನೀಡಿದೆ. ಈಗಾಗಲೇ ಉಂಟಾಗಿರುವ ತೊಂದರೆಗಳಿಗಾಗಿ ಅವರನ್ನು ಜವಾಬ್ದಾರಿಗಳಿಂದ ಬಿಡುಗಡೆ ಮಾಡುವ ಮತ್ತು ಯಾವುದೇ ಹೊಸ ಜವಾಬ್ದಾರಿಯುತ ಸ್ಥಾನಕ್ಕೆ ನಿಯೋಜಿಸದಂತೆ ನಿರ್ದೇಶಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲದೇ ಸಮಸ್ಯೆಗಳಿಗೆ ಕಾರಣವಾದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲು ಮತ್ತು ಈ ಕುರಿತು ವರದಿಯನ್ನು ಸಲ್ಲಿಸಲು ಇಂಡಿಗೋಗೆ ತಿಳಿಸಲಾಗಿದೆ.

ದಂಡ

ಎಫ್ ಡಿಟಿಎಲ್ ಮಾನದಂಡಗಳನ್ನು ಪಾಲಿಸದಿರುವುದು, ಅನುಚಿತ ಕಾರ್ಯಾಚರಣೆ ಮತ್ತು ಅಸಮರ್ಪಕ ನಿರ್ವಹಣೆ ಸೇರಿದಂತೆ ಆರು ನಿಯಮಗಳ ಉಲ್ಲಂಘನೆಗಳಿಗಾಗಿ ಏಕಕಾಲಕ್ಕೆ 1.80 ಕೋಟಿ ರೂ. ದಂಡವನ್ನು ಪಾವತಿಸಬೇಕು. ಬಳಿಕ 2025ರ ಡಿಸೆಂಬರ್ 5ರಿಂದ 2026ರ ಫೆಬ್ರವರಿ 10ರವರೆಗೆ ದಿನಕ್ಕೆ 30 ಲಕ್ಷ ರೂ. ಗಳಂತೆ ಒಟ್ಟು 68 ದಿನಗಳವರೆಗೆ 20.40 ಕೋಟಿ ರೂ. ಗಳ ದಂಡವಾಗಿ ಪಾವತಿಸಲು ನಿರ್ದೇಶಿಸಲಾಗಿದೆ.

ಸುಧಾರಣೆಗಾಗಿ ಬ್ಯಾಂಕ್ ಗ್ಯಾರಂಟಿ

ಹಿಂದಿನ ಅಡಚಣೆಯ ಬಳಿಕ ಹೊಸದಾಗಿ ಇಂಡಿಗೋ ಸಿಸ್ಟಮ್ಯಾಟಿಕ್ ರಿಫಾರ್ಮ್ ಅಶ್ಯೂರೆನ್ಸ್ ಸ್ಕೀಮ್ (ISRAS) ಅನ್ನು ಸ್ಥಾಪಿಸಿದ್ದು, ಇದರ ಅಡಿಯಲ್ಲಿ 50 ಕೋಟಿ ರೂ. ಗಳ ಬ್ಯಾಂಕ್ ಗ್ಯಾರಂಟಿಯನ್ನು ನೀಡಲು ಇಂಡಿಗೋಗೆ ಆದೇಶಿಸಲಾಗಿದೆ. ಇದನ್ನು ನಾಲ್ಕು ಹಂತದಲ್ಲಿ ಯೋಜನೆ ಅನುಷ್ಠಾನದ ಪರಿಶೀಲನೆ ಆಧಾರದಲ್ಲಿ ರೂಪಿಸಲಾಗಿದೆ. ಇದರಲ್ಲಿ ನಾಯಕತ್ವ ಮತ್ತು ಆಡಳಿತ, ಕಾರ್ಯಪಡೆಯ ಯೋಜನೆ, ರೋಸ್ಟರಿಂಗ್ ಮತ್ತು ಅಪಾಯ ನಿರ್ವಹಣೆ, ಡಿಜಿಟಲ್ ವ್ಯವಸ್ಥೆಗಳು ಮತ್ತು ಕಾರ್ಯಾಚರಣೆಯ ಸ್ಥಿತಿಸ್ಥಾಪಕತ್ವ, ಮಂಡಳಿ ಮಟ್ಟದ ಮೇಲ್ವಿಚಾರಣೆ ಮತ್ತು ನಿರಂತರ ಅನುಸರಣೆ ಸೇರಿದೆ. ಈ ಪ್ರತಿ ಹಂತವನ್ನು ಡಿಜಿಸಿಎ ಸ್ವತಂತ್ರವಾಗಿ ಪರಿಶೀಲಿಸಿ ವ್ಯವಸ್ಥಿತ ತಿದ್ದುಪಡಿಯನ್ನು ಖಚಿತಪಡಿಸಿಕೊಳ್ಳಲಿದೆ.

ಇಂಡಿಗೋ ಅಳವಡಿಸಿಕೊಂಡಿರುವ ವ್ಯವಸ್ಥಿತ ಸುಧಾರಣೆಗಳನ್ನು ಖಚಿತ ಪಡಿಸಿಕೊಳ್ಳಲು ಆಂತರಿಕ ವಿಚಾರಣೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಸಮಿತಿಗೆ ನಿರ್ದೇಶಿಸಿರುವ ಡಿಜಿಸಿಎ ಇದರೊಂದಿಗೆ ಸುರಕ್ಷತೆ ಮತ್ತು ನಿಯಮಗಳ ಅನುಸರಣೆ ಅತ್ಯಂತ ಮುಖ್ಯವೆಂದು ಹೇಳಿದೆ. ಅಲ್ಲದೇ ಪ್ರಯಾಣಿಕರ ಹಿತಾಸಕ್ತಿ, ಪೈಲಟ್‌ ಮತ್ತು ಸಿಬ್ಬಂದಿಯ ಯೋಗಕ್ಷೇಮ ಕಾಪಾಡುವುದು ಕೂಡ ತನ್ನ ಮುಖ್ಯ ಗುರಿ ಎಂದು ಹೇಳಿದೆ.

‘ಶ್ರೀರಾಮ್‌ ಮನಿ ಮಾರ್ಕೆಟ್‌ ಫಂಡ್‌' ಆರಂಭಿಸಿದ ಶ್ರೀರಾಮ್‌ ಎಎಮ್‌ಸಿ

ಪ್ರಯಾಣಿಕರಿಗೆ ಪರಿಹಾರ

ವಿಮಾನ ಅಡಚಣೆಯ ಬಳಿಕ ಇಂಡಿಗೋ ತ್ವರಿತ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಮರುಪಾವತಿ ಮತ್ತು ಕಡ್ಡಾಯ ಪರಿಹಾರದ ಹೊರತಾಗಿ ತೊಂದರೆಗೊಳಗಾದ ಪ್ರಯಾಣಿಕರಿಗೆ 12 ತಿಂಗಳವರೆಗೆ ಮಾನ್ಯವಾಗಿರುವ 10,000 ರೂ. ಗಳ 'ಗೆಸ್ಚರ್ ಆಫ್ ಕೇರ್' ವೋಚರ್ ಅನ್ನು ನೀಡಿದೆ.

ವಿದ್ಯಾ ಇರ್ವತ್ತೂರು

View all posts by this author