ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಯುಪಿಐ ಮೂಲಕ ಇಪಿಎಫ್ ಹಣ ಪಡೆಯಲು ಅವಕಾಶ; ಯಾವಾಗ, ಹೇಗೆ?

ಇಪಿಎಫ್ ಹಣವನ್ನು ಯುಪಿಐ ಮೂಲಕ ಪಡೆಯುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಯೋಚಿಸುವವರಿಗೆ ಶುಭ ಸುದ್ದಿ ಇಲ್ಲಿದೆ. ಮುಂದಿನ ಏಪ್ರಿಲ್ ತಿಂಗಳಿನಿಂದ ಇಪಿಎಫ್ ಹಣವನ್ನು ಯಾವುದೇ ಕ್ಲೈಮ್ ಅರ್ಜಿ ಸಲ್ಲಿಸದೆ ನೇರವಾಗಿ ಯುಪಿಎಫ್ ಮೂಲಕ ಬ್ಯಾಂಕ್ ಗೆ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಇದು ಯಾಕೆ, ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಯುಪಿಐ ಮೂಲಕವೂ ಇಪಿಎಫ್ ಹಣ ಪಡೆಯಲು ಅವಕಾಶ

ಸಾಂದರ್ಭಿಕ ಚಿತ್ರ -

ನವದೆಹಲಿ: ಭವಿಷ್ಯ ನಿಧಿ (Provident fund) ಹೊಂದಿರುವ ಉದ್ಯೋಗಿಗಳಿಗೆ ಜೀವನ ಸರಳವಾಗಿಸಲು, ಹಣದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಹಾಯವಾಗುವಂತೆ ಮುಂದಿನ ಏಪ್ರಿಲ್ ತಿಂಗಳಿನಿಂದ ಇಪಿಎಫ್ ಹಣವನ್ನು ಯಾವುದೇ ಕ್ಲೈಮ್ ಅರ್ಜಿ ಸಲ್ಲಿಸದೆ ನೇರವಾಗಿ ಯುಪಿಐ (UPI) ಮೂಲಕ ಬ್ಯಾಂಕ್ ಗೆ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಕ್ಲೈಮ್ ಫೈಲಿಂಗ್ (Claim Filing) ಪ್ರಕ್ರಿಯೆ ಸಮಯ ಸಾಕಷ್ಟು ಉಳಿತಾಯವಾಗುತ್ತದೆ. ಇಪಿಎಫ್ ನ (EPF) ಒಂದು ನಿರ್ದಿಷ್ಟ ಭಾಗವನ್ನು ಕಾರ್ಮಿಕ ಸಚಿವಾಲಯ ಇಟ್ಟುಕೊಂಡು ಉಳಿದ ಗಣನೀಯ ಭಾಗವನ್ನು ಬಳಸಲು (EPF UPI Withdrawal) ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡಲಿದೆ.

ಸಂಬಳ ಪಡೆಯುವ ಉದ್ಯೋಗಿಗಳ ಜೀವನ ಸುಲಭವಾಗುವಂತೆ ಮಾಡಲು ಕಾರ್ಮಿಕ ಸಚಿವಾಲಯವು ಭವಿಷ್ಯ ನಿಧಿ ಖಾತೆ ಹೊಂದಿರುವ ಚಂದಾದಾರರಿಗೆ ಶೀಘ್ರದಲ್ಲೇ ಏಕೀಕೃತ ಪಾವತಿ ಇಂಟರ್ಫೇಸ್ (UPI) ಸೌಲಭ್ಯವನ್ನು ಒದಗಿಸಲಿದೆ. ಈ ಮೂಲಕ ಉದ್ಯೋಗಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಮ್ಮ ಇಪಿಎಫ್ ಹಣವನ್ನು ಹಿಂಪಡೆದುಕೊಳ್ಳಬಹುದು. ಇದಕ್ಕಾಗಿ ಯಾವುದೇ ಕ್ಲೈಮ್ ಫೈಲ್ ಮಾಡಬೇಕಿಲ್ಲ. ಮುಂದಿನ ಏಪ್ರಿಲ್ ತಿಂಗಳಿನಿಂದ ಇದು ಜಾರಿಯಾಗಲಿದ್ದು, ಇದರಿಂದ ಭವಿಷ್ಯ ನಿಧಿ ಖಾತೆ ಹೊಂದಿರುವ ಸದಸ್ಯರು ಸುಲಭವಾಗಿ ಯುಪಿಐ ಪಾವತಿ ,ಮೂಲಕ ನೇರವಾಗಿ ಭವಿಷ್ಯ ನಿಧಿ ಬಾಕಿಗಳನ್ನು ಪಡೆಯಲು ಅವಕಾಶ ದೊರೆಯುತ್ತದೆ.

‘ಶ್ರೀರಾಮ್‌ ಮನಿ ಮಾರ್ಕೆಟ್‌ ಫಂಡ್‌' ಆರಂಭಿಸಿದ ಶ್ರೀರಾಮ್‌ ಎಎಮ್‌ಸಿ

ಇಪಿಎಫ್ ನ ಒಂದು ನಿರ್ದಿಷ್ಟ ಬ್ಯಾಲೆನ್ಸ್ ಅನ್ನು ಕಾರ್ಮಿಕ ಸಚಿವಾಲಯ ನಿರ್ವಹಿಸಲಿದ್ದು, ಉಳಿದ ಗಣನೀಯ ಭಾಗವನ್ನು ಯುಪಿಐ ಬಳಸಿಕೊಂಡು ಸದಸ್ಯರು ನೇರವಾಗಿ ನಿರ್ವಹಿಸಬಹುದು. ಇದರಿಂದ ಗ್ರಾಹಕರು ತಮ್ಮ ಖಾತೆಯಲ್ಲಿ ಲಭ್ಯವಾಗಿರುವ ಅರ್ಹ ಮೊತ್ತವನ್ನು ನೋಡಬಹುದಾಗಿದೆ.

ಯುಪಿಐ ಲಿಂಕ್ ಬಳಸಿಕೊಂಡು ಭವಿಷ್ಯ ನಿಧಿ ಖಾತೆಯನ್ನು ನಿರ್ವಹಿಸುವುದರಿಂದ ಹಣದ ಸುರಕ್ಷಿತ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಬಹುದು. ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾದ ಬಳಿಕ ಡಿಜಿಟಲ್ ಪಾವತಿಗಳಿಗೆ ಈ ಹಣವನ್ನು ಮುಕ್ತವಾಗಿ ಬಳಸಬಹುದು ಅಥವಾ ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಎಟಿಎಂಗಳ ಮೂಲಕವು ಹಿಂಪಡೆಯಬಹುದಾಗಿದೆ.

ಯುಪಿಐ ಆಧಾರಿತ ಹಿಂಪಡೆಯುವಿಕೆಯನ್ನು ಅನುಷ್ಠಾನಗೊಳಿಸಲು ಸಂಬಂಧಿತ ಸಾಫ್ಟ್‌ವೇರ್ ಗಳ ಪರಿಶೀಲನೆ ನಡೆಯುತ್ತಿದೆ. ಇದು ಅನುಷ್ಠಾನಕ್ಕೆ ಬಂದರೆ ನೌಕರರ ಭವಿಷ್ಯ ನಿಧಿ ಖಾತೆ ಹೊಂದಿರುವ ಸುಮಾರು ಎಂಟು ಕೋಟಿ ​ಸದಸ್ಯರಿಗೆ ಪ್ರಯೋಜನವಾಗಲಿದೆ.

ಇದು ಅನುಷ್ಠಾನಕ್ಕೆ ಬರುವವರೆಗೆ ಇಪಿಎಫ್ ಒ ಸದಸ್ಯರು ತಮ್ಮ ಭವಿಷ್ಯ ನಿಧಿ ಹಣವನ್ನು ಪಡೆಯಲು ಹಕ್ಕುಗಳನ್ನು ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಈಗಾಗಲೇ ಇಪಿಎಫ್ ಒ ​​ಸ್ವಯಂ ಇತ್ಯರ್ಥ ಮೋಡ್ ಅನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಮೂರು ದಿನಗಳಲ್ಲಿ ಹಕ್ಕುಗಳನ್ನು ಎಲೆಕ್ಟ್ರಾನಿಕ್ ಪ್ರಕ್ರಿಯೆ ಮೂಲಕ ಇತ್ಯರ್ಥ ಪಡಿಸಲಾಗುತ್ತದೆ. ಇದಕ್ಕಾಗಿ ಸದಸ್ಯರು ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ.

Reliance Jio: ಜಿಯೋ ಪ್ಲಾಟ್‌ಫಾರ್ಮ್ಸ್ ಮೂರನೇ ತ್ರೈಮಾಸಿಕ ಲಾಭ ರೂ. 7,629 ಕೋಟಿಗೆ ಜಿಗಿತ

ಸ್ವಯಂ ಇತ್ಯರ್ಥದ ಹಕ್ಕುಗಳ ಮಿತಿಯನ್ನು 1 ಲಕ್ಷ ರೂ. ಗಳಿಂದ 5 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಅನಾರೋಗ್ಯ, ಶಿಕ್ಷಣ, ಮದುವೆ ಮತ್ತು ವಸತಿ ಮುಂತಾದ ಉದ್ದೇಶಗಳಿಗಾಗಿ ಹಣವನ್ನು ವೇಗವಾಗಿ ಇಪಿಎಫ್ ಒ ಖಾತೆಯಿಂದ ಪಡೆದುಕೊಳ್ಳಬಹುದಾಗಿದೆ. ಸ್ವಯಂ ಇತ್ಯರ್ಥ ಮೋಡ್ ಅನುಷ್ಠಾನಗೊಂಡ ಬಳಿಕ ಪ್ರತಿ ವರ್ಷ ಐದು ಕೋಟಿಗೂ ಹೆಚ್ಚು ಇಪಿಎಫ್ ಕ್ಲೈಮ್‌ಗಳನ್ನು ಇತ್ಯರ್ಥ ಪಡಿಸಲಾಗುತ್ತಿದೆ. ಇದರಿಂದ ಸಂಸ್ಥೆಯ ಆಡಳಿತಾತ್ಮಕ ಹೊರೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.