ಬೆಂಗಳೂರು: ಚಾಟ್ ಜಿಪಿಟಿ (ChatGPT) ಬಳಕೆದಾರರಿಗೆ ಒಂದು ಶುಭ ಸುದ್ದಿ. ಇನ್ನು ಒಂದು ವರ್ಷದವರೆಗೆ ಎಲ್ಲಾ ಭಾರತೀಯ ಬಳಕೆದಾರರಿಗೆ ಚಾಟ್‌ಜಿಪಿಟಿ ಗೋ (OpenAI's ChatGPT) ಉಚಿತವಾಗಿದೆ. ನವೆಂಬರ್ 4ರಿಂದಲೇ ಈ ಕೊಡುಗೆ ಆರಂಭವಾಗಲಿದೆ. ಕಳೆದ ಆಗಸ್ಟ್ ನಲ್ಲಿ ಪ್ರಾರಂಭಿಸಿರುವ ಚಾಟ್‌ಜಿಪಿಟಿ ಗೋ ಅನ್ನು ಇತ್ತೀಚೆಗೆ ಜಿಪಿಟಿ-5 (GPT-5) ಮಾದರಿಗೆ ವಿಸ್ತರಿಸಲಾಗಿದೆ. OpenAIನ ChatGPT Go ಅನ್ನು ಇದೀಗ ಅಧಿಕೃತವಾಗಿ ಭಾರತೀಯ ಬಳಕೆದಾರರಿಗೆ ಉಚಿತವಾಗಿ ನೀಡಲು ಕಂಪೆನಿ ಪ್ರಾರಂಭಿಸಿದೆ. ಭಾರತದಲ್ಲಿ ಚಾಟ್‌ಜಿಪಿಟಿ ಖಾತೆಯನ್ನು ಹೊಂದಿರುವ ಎಲ್ಲರೂ ಕೂಡ ಈ ಕೊಡುಗೆಯನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಕಂಪೆನಿ ತಿಳಿಸಿದೆ.
ಕಳೆದ ಆಗಸ್ಟ್‌ನಲ್ಲಿ ಚಾಟ್‌ಜಿಪಿಟಿ ಗೋವನ್ನು ಭಾರತದಲ್ಲಿ ಕೈಗೆಟುಕುವ ದರದಲ್ಲಿ ಪರಿಚಯಿಸಲಾಗಿತ್ತು. ಈ ಯೋಜನೆಯ ಬೆಲೆ ತಿಂಗಳಿಗೆ 399 ರೂ. ಗಳಾಗಿದ್ದವು. ಇತ್ತೀಚೆಗೆ ಚಾಟ್‌ಜಿಪಿಟಿಯ ಓಪನ್‌ಎಐನ ಜಿಪಿಟಿ-5 ಮಾದರಿಯನ್ನು ಪ್ರಾರಂಭಿಸಿದೆ. ಭಾರತವು ಈಗಾಗಲೇ ವಿಶ್ವದಲ್ಲೇ ಎರಡನೇ ಅತಿದೊಡ್ಡ ಓಪನ್ ಎಐ ಮರುಕಟ್ಟೆಯಾಗಿರುವುದರಿಂದ ಕಂಪನಿಯು ಒಂದು ವರ್ಷದವರೆಗೆ ಬಳಕೆದಾರರಿಗೆ ಉಚಿತ ಚಾಟ್‌ಜಿಪಿಟಿ ಗೋ ಚಂದಾದಾರಿಕೆಯನ್ನು ನೀಡುವ ಮೂಲಕ ಗ್ರಾಹಕರ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: UIDAI Aadhaar Update: ಆಧಾರ್ ಕಾರ್ಡ್‌ನಲ್ಲಿರೋ ಫೋಟೋ ಚೇಂಜ್ ಮಾಡ್ಬೇಕೆ? ಇಲ್ಲಿದೆ ಸರಳ ಮಾರ್ಗ
ಎಲ್ಲಾ ಬಳಕೆದಾರರಿಗೆ ಉಚಿತ
ChatGPT Go ಈಗ ಭಾರತದ ಎಲ್ಲಾ ಬಳಕೆದಾರರಿಗೆ ಒಂದು ವರ್ಷದವರೆಗೆ ಉಚಿತವಾಗಿದೆ. ಈಗಾಗಲೇ ಬಳಸಲಾಗುತ್ತಿರುವ ಗ್ರಾಹಕರು ಸೇರಿದಂತೆ ಎಲ್ಲರಿಗೂ ಸ್ವಯಂಚಾಲಿತವಾಗಿ ಉಚಿತ ಒಂದು ವರ್ಷದ ಯೋಜನೆಯನ್ನು ಒದಗಿಸಲಾಗುತ್ತದೆ.
ಉಚಿತ ಸೌಲಭ್ಯ ಪಡೆಯುವುದು ಹೇಗೆ?
ಚಾಟ್ ಜಿಪಿಟಿ ಗೋ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಲು ಖಾತೆಯ ರುಜುವಾತುಗಳೊಂದಿಗೆ ChatGPT ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಲಾಗಿನ್ ಆಗಬೇಕು. ಬಳಿಕ ಚಿತವಾಗಿ ಅಪ್‌ಗ್ರೇಡ್ ಮಾಡಲು ಸಿಗುವ ಪಾಪ್-ಅಪ್ ಅನ್ನು ನೋಡಬಹುದು. ಒಂದು ವೇಳೆ ಪಾಪ್-ಅಪ್ ಕಾಣಿಸದಿದ್ದರೆ ಪ್ರೊಫೈಲ್ ವಿಭಾಗಕ್ಕೆ ಹೋಗಿ 'ಅಪ್‌ಗ್ರೇಡ್' ಮೇಲೆ ಕ್ಲಿಕ್ ಮಾಡಬಹುದು. ಅಪ್‌ಗ್ರೇಡ್ ಪುಟವು ChatGPT Go ಯೋಜನೆ ಉಚಿತವಾಗಿ ಲಭ್ಯವಿದೆ ಎಂದು ತೋರಿಸುತ್ತದೆ. ಬಳಕೆದಾರರು ಕೇವಲ ಯೋಜನೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ಯೋಜನೆಯು ಒಂದು ವರ್ಷದವರೆಗೆ ಉಚಿತವಾಗಿದ್ದರೂ ಅದನ್ನು ಸಕ್ರಿಯಗೊಳಿಸಲು ಬಳಕೆದಾರರು ತಮ್ಮ ಪಾವತಿ ವಿವರಗಳನ್ನು ನೀಡಬೇಕಾಗುತ್ತದೆ.
ಇದನ್ನೂ ಓದಿ: Reliance Jio: ಜಿಯೋ ಬಳಕೆದಾರರಿಗೆ 18 ತಿಂಗಳು ಉಚಿತವಾಗಿ ಸಿಗಲಿದೆ ಗೂಗಲ್ ಎಐ ಪ್ರೊ
ವೈಶಿಷ್ಟ್ಯಗಳೇನು?
ಚಾಟ್ ಜಿಪಿಟಿ ಗೋ ಜಿಪಿಟಿ-5 ಮಾದರಿಯಲ್ಲಿ ಬಳಕೆದಾರರು ಉಚಿತ ಬಳಕೆದಾರರಿಗೆ ಹೋಲಿಸಿದರೆ ಸಂದೇಶಗಳು, ಚಿತ್ರ ರಚನೆಗಳು ಮತ್ತು ಫೈಲ್ ಅಪ್‌ಲೋಡ್‌ಗಳಿಗೆ 10 ಪಟ್ಟು ಹೆಚ್ಚಿನ ಮಿತಿಗಳನ್ನು ಪಡೆಯಬಹುದು. ಅಲ್ಲದೇ ಇಲ್ಲಿ ಕಸ್ಟಮ್ ಜಿಪಿಟಿಗಳು ಮತ್ತು ಯೋಜನೆಗಳಿಗೆ ಪ್ರವೇಶವನ್ನು ಕೂಡ ಪಡೆಯಬಹುದು.
ಚಾಟ್ ಜಿಪಿಟಿ ಗೋ ಮೂಲಕ ಬಳಕೆದಾರರು ವೆಬ್ ನಲ್ಲಿ ಅಗತ್ಯ ಮಾಹಿತಿಯನ್ನು ಕೂಡ ಹುಡುಕಾಡಬಹುದು. ChatGPT Go AI ಯೋಜನೆಯ ಬಳಕೆದಾರರು OpenAI ನ ವಿಡಿಯೊ ತಯಾರು ಮಾಡುವ Sora ಅಥವಾ ಕೋಡಿಂಗ್ ಏಜೆಂಟ್ Codex ಗೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ.