ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today On 17th February 2026: ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ; ಇಂದು ಅಗ್ಗವಾಗಿದ್ದು ಇಷ್ಟು

Gold Rate Today: ಚಿನ್ನದ ಬೆಲೆಯಲ್ಲಿ ಫೆಬ್ರವರಿ 17ರಂದು ಭಾರಿ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 140 ರುಪಾಯಿ ಇಳಿಕೆಯಾಗಿ 14,200 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 153 ರುಪಾಯಿ ಅಗ್ಗವಾಗಿದ್ದು 15,491 ರುಪಾಯಿ ಇದೆ.

ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ

ಸಾಂದರ್ಭಿಕ ಚಿತ್ರ. -

Ramesh Ballamoole
Ramesh Ballamoole Feb 17, 2026 1:41 PM

ಬೆಂಗಳೂರು, ಫೆ. 17: ಆಭರಣ ಪ್ರಿಯರಿಗೆ ಇಂದು ಶುಭ ಮಂಗಳವಾರ. ಕೆಲವು ದಿನಗಳಿಂದ ಏರಿಳಿತದ ಹಾದಿಯಲ್ಲಿ ಸಾಗುತ್ತಿರುವ ಚಿನ್ನದ ಬೆಲೆಯಲ್ಲಿ ಫೆಬ್ರವರಿ 17ರಂದು ಭಾರಿ ಇಳಿಕೆಯಾಗಿದೆ (Gold Price Today On 17th February 2026). ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 140 ರುಪಾಯಿ ಇಳಿಕೆಯಾಗಿ 14,200 ರುಪಾಯಿಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 153 ರುಪಾಯಿ ಅಗ್ಗವಾಗಿದ್ದು 15,491 ರುಪಾಯಿ ಇದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,13,600 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,42,000 ರುಪಾಯಿ ಹಾಗೂ 100 ಗ್ರಾಂಗೆ ನೀವು 14,20,000 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,23,928 ರುಪಾಯಿ ಹಾಗೂ 10 ಗ್ರಾಂಗೆ ನೀವು 1,54,910 ರುಪಾಯಿ ಹಾಗೂ 100 ಗ್ರಾಂಗೆ ನೀವು 15,49,100 ರುಪಾಯಿ ನೀಡಬೇಕಾಗುತ್ತದೆ.

ಚೆನ್ನೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,320 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,622 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,200 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,491 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,215 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,506 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,200 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,491 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,200 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,491 ರುಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 14,200 ರುಪಾಯಿ 15,491 ರುಪಾಯಿ
ಮುಂಬೈ 14,200 ರುಪಾಯಿ 15,491 ರುಪಾಯಿ
ದೆಹಲಿ 14,215 ರುಪಾಯಿ 15,506 ರುಪಾಯಿ
ಕೋಲ್ಕತ್ತಾ 14,200 ರುಪಾಯಿ 15,491 ರುಪಾಯಿ
ಹೈದರಾಬಾದ್‌ 14,200 ರುಪಾಯಿ 15,491 ರುಪಾಯಿ

ಸಾವು, ಮದುವೆ, ಹಬ್ಬದ ವೇಳೆ ಸಾಲ ವಸೂಲಿ ಮಾಡುವಂತಿಲ್ಲ: ಲೋನ್‌ ರಿಕವರಿ ಏಜೆಂಟರ ಕಿರುಕುಳಕ್ಕೆ ಆರ್‌ಬಿಐ ಬ್ರೇಕ್‌

ಬೆಳ್ಳಿ ದರ

ಬೆಳ್ಳಿ ದರದಲ್ಲಿಯೂ ಇಂದು ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 8 ರುಪಾಯಿ ಕಡಿಮೆಯಾಗಿದ್ದು, 260 ರುಪಾಯಿಗೆ ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿಗೆ 2,600 ರುಪಾಯಿ ಹಾಗೂ 1 ಕೆಜಿ ಬೆಳ್ಳಿಗೆ ನೀವು 2,60,000 ರುಪಾಯಿ ಪಾವತಿಸಬೇಕು.

ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.