ತಂದೆಗೆ ತಕ್ಕ ಮಗ; ಸೆಹ್ವಾಗ್ ಪುತ್ರನ ಬ್ಯಾಟಿಂಗ್‌ಗೆ ನೆಟ್ಟಿಗರು ಫಿದಾ!
Aryavir Sehwag: ಸೆಹ್ವಾಗ್ ತಮ್ಮ ಅದ್ಭುತ ವೃತ್ತಿಜೀವನದಲ್ಲಿ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ. 374 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಅವರು, ಮೂರು ಸ್ವರೂಪಗಳಲ್ಲಿ 17,253 ರನ್ ಗಳಿಸಿದರು. ಅವರ ಒಟ್ಟು ಮೊತ್ತ 72 ಅರ್ಧಶತಕಗಳು ಮತ್ತು 38 ಅಂತರರಾಷ್ಟ್ರೀಯ ಶತಕ ಬಾರಿಸಿದ್ದಾರೆ.
Virender Sehwag's Son Aryavir -
ನವದೆಹಲಿ, ಆ.25: ಭಾರತ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವೀರೇಂದ್ರ ಸೆಹ್ವಾಗ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಶ್ವದ ಅನೇಕ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದ್ದರು. ಸೆಹ್ವಾಗ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಅವರ ಪರಂಪರೆ ಅವರ ಮಗ ಆರ್ಯವೀರ್ ಸೆಹ್ವಾಗ್ ಮೂಲಕ ಮುಂದುವರೆದಿದೆ. ಪ್ರಸ್ತುತ ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್) ನಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ಅನ್ನು ಪ್ರತಿನಿಧಿಸುತ್ತಿರುವ ಆರ್ಯವೀರ್ ಇತ್ತೀಚೆಗೆ ಅಭಿಮಾನಿಗಳಿಗೆ ತಮ್ಮ ತಂದೆಯ ಬ್ಯಾಟಿಂಗ್ ಶೈಲಿಯ ಒಂದು ನೋಟವನ್ನು ನೀಡಿದರು.
ಈ ಯುವ ಬ್ಯಾಟ್ಸ್‌ಮನ್ ಸೆಹ್ವಾಗ್ ಅವರ ಸ್ಕ್ವೇರ್ ಡ್ರೈವ್ ಮತ್ತು ಕವರ್ ಡ್ರೈವ್ ಸೇರಿದಂತೆ ಕೆಲವು ಐಕಾನಿಕ್ ಶಾಟ್‌ಗಳನ್ನು ಪುನರಾವರ್ತಿಸುತ್ತಿರುವುದು ಅಭಿಮಾನಿಗಳನ್ನು ಮೆಚ್ಚಿಸಿತು. ಡಿಪಿಎಲ್ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹೋಲಿಕೆ ವೀಡಿಯೊವನ್ನು ಹಂಚಿಕೊಂಡಿದ್ದು, ತಂದೆ ಮತ್ತು ಮಗನ ಬ್ಯಾಟಿಂಗ್ ತಂತ್ರಗಳ ನಡುವಿನ ಗಮನಾರ್ಹ ಹೋಲಿಕೆಗಳನ್ನು ತೋರಿಸುತ್ತದೆ.
Virender Sehwag 🤝 Aaryavir Sehwag.
— CricketGully (@thecricketgully) August 21, 2026
Like Father, Like Son... 🔥 pic.twitter.com/pNDY0db6KB
ಡಿಪಿಎಲ್ ಬಗ್ಗೆ ಹೇಳುವುದಾದರೆ, ಶನಿವಾರ ನಡೆದ ಪಂದ್ಯದಲ್ಲಿ ವೆಸ್ಟ್ ಡೆಲ್ಲಿ ಲಯನ್ಸ್ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ವಿರುದ್ಧ 21 ರನ್‌ಗಳ ಸೋಲು ಅನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಸೆಂಟ್ರಲ್ ಡೆಲ್ಲಿ ಕಿಂಗ್ಸ್ ತಂಡವು 20 ಓವರ್‌ಗಳಲ್ಲಿ 232/8 ರನ್ ಗಳಿಸಿತು. 233 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಡೆಲ್ಲಿ ಲಯನ್ಸ್ ತಂಡವು 20 ಓವರ್‌ಗಳಲ್ಲಿ 211/8 ಗಳಿಸಿತು.
ಯಾರಿಗಾದರೂ ಚಿಂತೆ ಇದೆಯೇ? ವಿಶ್ವಕಪ್ ಸೋಲಿನ ನಂತರ ಹಾಕಿ ಇಂಡಿಯಾಕ್ಕೆ ಪ್ರಶ್ನೆ ಮಾಡಿದ ಪಿ.ಆರ್. ಶ್ರೀಜೇಶ್
ಸೆಹ್ವಾಗ್ ತಮ್ಮ ಅದ್ಭುತ ವೃತ್ತಿಜೀವನದಲ್ಲಿ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ. 374 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಅವರು, ಮೂರು ಸ್ವರೂಪಗಳಲ್ಲಿ 17,253 ರನ್ ಗಳಿಸಿದರು. ಅವರ ಒಟ್ಟು ಮೊತ್ತ 72 ಅರ್ಧಶತಕಗಳು ಮತ್ತು 38 ಅಂತರರಾಷ್ಟ್ರೀಯ ಶತಕಗಳು. ತಮ್ಮ ನಿರ್ಭೀತ ವಿಧಾನ ಮತ್ತು ಟ್ರೇಡ್‌ಮಾರ್ಕ್ ಸ್ಟ್ರೋಕ್‌ಪ್ಲೇಗೆ ಹೆಸರುವಾಸಿಯಾಗಿದ್ದರು.