ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Price Today on 26th November 2025: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold and Silver Rate: ಸ್ವರ್ಣಪ್ರಿಯರಿಗೆ ಶಾಕ್‌ ಮೇಲೆ ಶಾಕ್‌ ಎದುರಾಗಿದೆ. ಚಿನ್ನದ ದರದಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆ ಆಗಿದ್ದು, 11,725 ರೂ. ಇದ್ದರೆ, 24 ಕ್ಯಾರಟ್‌ ಚಿನ್ನದ 1 ಗ್ರಾಂ ಚಿನ್ನದ ಬೆಲೆಯಲ್ಲಿ 87 ಏರಿಕೆ ಆಗಿದ್ದು ಇಂದು 12,791 ರೂ. ಇದೆ.

ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ(ಸಂಗ್ರಹ ಚಿತ್ರ) -

Rakshita Karkera
Rakshita Karkera Nov 26, 2025 11:49 AM

ಬೆಂಗಳೂರು: ಇಂದು ಮತ್ತೆ ಚಿನ್ನದ ದರದಲ್ಲಿ ಭಾರೀ ಏರಿಕೆ ಕಂಡಿದೆ (Gold Price Today on 26th November 2025). ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆ ಆಗಿದ್ದು, 11,725 ರೂ. ಇದ್ದರೆ, 24 ಕ್ಯಾರಟ್‌ ಚಿನ್ನದ 1 ಗ್ರಾಂ ಚಿನ್ನದ ಬೆಲೆಯಲ್ಲಿ 87 ಏರಿಕೆ ಆಗಿದ್ದು ಇಂದು 12,791 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ಇಂದು, 93,800 ರೂ. ಇದ್ದರೆ, 10 ಗ್ರಾಂಗೆ ನೀವು 1,17,250 ರೂ. ಪಾವತಿ ಮಾಡಬೇಕು. ಇನ್ನು 100 ಗ್ರಾಂ ಚಿನ್ನಕ್ಕೆ 11,72,500 ರೂ. ಇದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,01,328 ರೂ. ಇದ್ದರೆ, 10 ಗ್ರಾಂಗೆ 1,27,910 ರೂ. ಪಾವತಿಸಬೇಕಾಗಿದೆ. 100 ಗ್ರಾಂಗೆ ನೀವು 12,79,100 ರೂ. ನೀಡಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 11,725 ರೂ. 12,791 ರೂ.
ಮುಂಬೈ 11,725 ರೂ. 12,791 ರೂ.
ದಿಲ್ಲಿ 11,740 ರೂ. 12,806 ರೂ.
ಕೋಲ್ಕತಾ 11,725 ರೂ. 12,791 ರೂ.
ಹೈದರಾಬಾದ್‌ 11,725 ರೂ. 12,791 ರೂ.

ಇನ್ನು ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ಎಂದು ನೋಡುವುದಾದರೆ ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ 22 ಕ್ಯಾರಟ್‌ (1 ಗ್ರಾಂ) ಚಿನ್ನದ ಬೆಲೆ 11,725 ರೂ. ಆಗಿದ್ದರೆ, ದಿಲ್ಲಿಯಲ್ಲಿ 11,740 ರೂ.ಗಳಷ್ಟಿದೆ. ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ 24 ಕ್ಯಾರಟ್‌ (1 ಗ್ರಾಂ) ಚಿನ್ನದ ದರ 12,791 ರೂ. ರಷ್ಟಿದ್ದು, ದಿಲ್ಲಿಯಲ್ಲಿ 12,806 ರೂ. ರಷ್ಟಿದೆ.

ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಈಗ ಚಿನ್ನ-ಬೆಳ್ಳಿ ಖರೀದಿ: ಪ್ರತಿಷ್ಠಿತ ಜ್ಯುವೆಲರಿ ಮಳಿಗೆಯೊಂದಿಗೆ ಇನ್‌ಸ್ಟಾಮಾರ್ಟ್‌ ಸಹಯೋಗ

ಬೆಳ್ಳಿ ದರ

ಇಂದು ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದ್ದು, 1 ಗ್ರಾಂ ಗೆ 169 ರೂ ಇದ್ದು, 8 ಗ್ರಾಂ ಬೆಳ್ಳಿಗೆ 1,352 ರೂ. ಹಾಗೂ ಒಂದು ಕೆಜಿ ಬೆಳ್ಳಿಗೆ ನೀವು 1,69,000 ರೂ. ಪಾವತಿಸಬೇಕು. ಬೆಂಗಳೂರು, ದೆಹಲಿ, ಮುಂಬೈ ನಗರಗಳಲ್ಲಿಇದೇ ದರ ಮುಂದುವರಿದಿದೆ. ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ 1 ಗ್ರಾಂ ಗೆ 176 ರೂ ಇದ್ದು, ಹಾಗೂ ಒಂದು ಕೆಜಿ ಬೆಳ್ಳಿಗೆ ನೀವು 1,76,000 ರೂ. ಪಾವತಿಸಬೇಕು.

ಹಾಲ್‌ಮಾರ್ಕ್ ಇರುವ ಚಿನ್ನದ ದರದಲ್ಲಿ ವ್ಯತ್ಯಾಸ ಇದೆಯೇ?

ಮುಖ್ಯವಾದ ವಿಷಯವೆಂದರೆ ಸಾಮಾನ್ಯ ಚಿನ್ನದ ದರ ಮತ್ತು ಹಾಲ್‌ಮಾರ್ಕ್ ಮಾಡಿದ ಚಿನ್ನದ ದರದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಿಮಗೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ದರವನ್ನು ನೀಡಲು ಯಾರೂ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. ಇದು ಸಾಮಾನ್ಯ ಚಿನ್ನವನ್ನು ಮಾರಾಟ ಮಾಡುವ ದರವೂ ಆಗಿದೆ. ಒಂದೇ ವ್ಯತ್ಯಾಸವೆಂದರೆ ಹಾಲ್‌ ಮಾರ್ಕ್‌ ಇರುವ ಚಿನ್ನದಲ್ಲಿ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಬಹುದು. ಹೀಗಾಗಿ ಹಾಲ್‌ ಮಾರ್ಕ್‌ ಇರುವ ಚಿನ್ನವನ್ನೇ ಖರೀದಿಸುವುದು ಉತ್ತಮ. ಸಾಮಾನ್ಯ ಚಿನ್ನ ಮತ್ತು ಹಾಲ್‌ಮಾರ್ಕ್‌ ಚಿನ್ನದ ದರಗಳಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವೇನೂ ಇಲ್ಲ ಎಂದಾದರೆ ಹಾಲ್‌ ಮಾರ್ಕ್‌ ಇರುವ ಚಿನ್ನ ಖರೀದಿಯತ್ತ ಮುಖ ಮಾಡುವುದು ಉತ್ತಮ.