ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಜೆಟ್ ಮಂಡನೆಗೂ ಮುನ್ನ ಜಿಎಸ್‌ಟಿ ಆದಾಯ ಶೇ. 6.2ರಷ್ಟು ಹೆಚ್ಚಳ

ಬಜೆಟ್ ಮಂಡನೆಗೂ ಮುನ್ನ ದೇಶದ ಜಿಎಸ್‌ಟಿ ಆದಾಯ 15.95 ಕೋಟಿ ರೂ.ಗಳನ್ನು ತಲುಪಿದೆ. ಒಟ್ಟಾರೆ ಜಿಎಸ್‌ಟಿ ಆದಾಯವು ಶೇ. 6.2ರಷ್ಟು ಹೆಚ್ಚಳವಾಗಿದೆ. ಕೇವಲ ಜನವರಿ ಒಂದು ತಿಂಗಳಿನಲ್ಲಿ 1.93 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಶೇ. 7.6 ರಷ್ಟು ಹೆಚ್ಚಳವಾಗಿದೆ. ಜಿಎಸ್‌ಟಿ ಆದಾಯದಲ್ಲಿನ ಈ ಹೆಚ್ಚಳವು ದೇಶದ ಲಾಭದ ಹರಿವು ಸ್ಥಿರವಾಗಿರುವುದನ್ನು ತೋರಿಸಿದೆ.

ಸಂಗ್ರಹ ಚಿತ್ರ

ನವದೆಹಲಿ: ದೇಶದ ಬೇಡಿಕೆ ಮತ್ತು ಆಮದು ಚಟುವಟಿಕೆಯ ಕಾರಣದಿಂದ ದೇಶದ ಒಟ್ಟಾರೆ ಸರಕು ಮತ್ತು ಸೇವಾ ತೆರಿಗೆ (Goods and Services Tax) ಆದಾಯ (GST revenue) ಸಂಗ್ರಹವು ಬಜೆಟ್ ಮಂಡನೆಗೂ (Budget 2026) ಮೊದಲು ಶೇ. 6.2ರಷ್ಟು ಹೆಚ್ಚಳವಾಗಿದೆ. ಜನವರಿ ಒಂದು ತಿಂಗಳಲ್ಲಿ ಶೇ. 7.6 ರಷ್ಟು ಹೆಚ್ಚಳವಾಗಿರುವುದನ್ನು ಅಂಕಿಅಂಶಗಳು ತೋರಿಸಿವೆ. ಜನವರಿಯಲ್ಲಿ ಜಿಎಸ್‌ಟಿ ಸಂಗ್ರಹ 1,70,719 ಕೋಟಿ ರೂ. ಗಳಾಗಿದ್ದು ಒಟ್ಟು ನಿವ್ವಳ ಆದಾಯವು ವರ್ಷಕ್ಕೆ 15,95,752 ಕೋಟಿ ರೂ. .ಗಳಾಗಿವೆ.

ಮರುಪಾವತಿ ಮತ್ತು ಸೆಸ್ ಸಂಗ್ರಹದಲ್ಲಿ ಒತ್ತಡವಿದ್ದರೂ ಬೇಡಿಕೆ ಮತ್ತು ಆಮದು ಚಟುವಟಿಕೆಯು ದೇಶದ ಜಿಎಸ್ ಟಿ ಆದಾಯ ಸಂಗ್ರಹದಲ್ಲಿ ಶೇ. 6.2ರಷ್ಟು ಹೆಚ್ಚಳವನ್ನು ಉಂಟು ಮಾಡಿದೆ. ಈ ಬಾರಿ ಜನವರಿಯಲ್ಲಿ ಒಟ್ಟು ಜಿಎಸ್ ಟಿ ಆದಾಯವು 1,93,384 ಕೋಟಿ ರೂ. ಗಳಾಗಿದ್ದು ಇದು ಹಿಂದಿನ ವರ್ಷದ 1,82,094 ಕೋಟಿ ರೂ. ಗಲಾಗಿತ್ತು. ಕಳೆದ ಏಪ್ರಿಲ್ ನಿಂದ ಜನವರಿವರೆಗೆ ಒಟ್ಟು ಆದಾಯವು 18,43,423 ಕೋಟಿ ರೂ. ಗಳಿಗೆ ಏರಿಕೆಯಾಗಿದೆ. ಇದು ಸ್ಥಿರ ಬೇಡಿಕೆ ಮತ್ತು ಬಳಕೆ ಯಲ್ಲಿ ಶೇ.8.3ರಷ್ಟು ಹೆಚ್ಚಳವಾಗಿರುವುದನ್ನು ಸೂಚಿಸುತ್ತದೆ.

Budget 2026: ಏಪ್ರಿಲ್‌ನಿಂದ ಹೊಸ ಹೊಸ ತೆರಿಗೆ ಪದ್ಧತಿ ಜಾರಿ

ವರ್ಷದ ಆರಂಭದ ಮೊದಲ ತಿಂಗಳಾಂತ್ಯದಲ್ಲಿ ಜಿಎಸ್‌ಟಿ ನಿವ್ವಳ ಆದಾಯವು 1,70,719 ಕೋಟಿ ರೂ. ಆಗಿದ್ದು, ಶೇ. 7.6 ರಷ್ಟು ಹೆಚ್ಚಾಗಿದೆ. ಈ ಮೂಲಕ ಒಟ್ಟು ನಿವ್ವಳ ಆದಾಯವು ವರ್ಷಕ್ಕೆ ಶೇ. 6.8ರಷ್ಟು ಹೆಚ್ಚಳವಾಗಿದ್ದು, 15,95,752 ಕೋಟಿ ರೂ. ಗೆ ತಲುಪಿದೆ.

ಮರುಪಾವತಿಯಲ್ಲಿ ಶೇ. 3.1 ರಷ್ಟು ಕುಸಿದಿದ್ದು 22,665 ಕೋಟಿ ರೂ. ತಲುಪಿದೆ. ದೇಶೀಯ ಮರುಪಾವತಿಗಳು ಶೇ. 7.1 ರಷ್ಟು ಕುಸಿದರೆ, ರಫ್ತು ಮರುಪಾವತಿ ಶೇ. 2.9 ರಷ್ಟು ಹೆಚ್ಚಾಗಿದೆ. ದೇಶೀಯ ಜಿಎಸ್‌ಟಿ ಸಂಗ್ರಹ ಶೇ. 4.8 ರಷ್ಟು ಹೆಚ್ಚಾಗಿದ್ದು, 1,41,132 ಕೋಟಿ ರೂ. ಗೆ ತಲುಪಿದೆ. ಆಮದು ಜಿಎಸ್‌ಟಿ ಕಳೆದ ವರ್ಷಕ್ಕಿಂತ ಶೇ. 10.1 ರಷ್ಟು ಹೆಚ್ಚಾಗಿದ್ದು, 52,253 ಕೋಟಿ ರೂ. ತಲುಪಿದೆ.

ಪರಿವರ್ತನಾ ಕಾರ್ಯವಿಧಾನಗಳಲ್ಲಿ ಮಾಡಿರುವ ಕಡಿತದಿಂದಾಗಿ ಪರಿಹಾರ ಸೆಸ್ ನಲ್ಲಿ ಶೇ. 55.6 ರಷ್ಟು ಕುಸಿತವಾಗಿದ್ದು, 5,768 ಕೋಟಿ ರೂ. ಗೆ ತಲುಪಿದೆ.

ರಾಜ್ಯವಾರು ತೆರಿಗೆ ಹರಿವಿನಲ್ಲಿ ಹರಿಯಾಣ ಶೇ. 27ರಷ್ಟು, ಮಹಾರಾಷ್ಟ್ರ ಶೇ. 15, ಗುಜರಾತ್ ಶೇ. 13, ಹಿಮಾಚಲ ಪ್ರದೇಶ ಶೇ. 18 ಮತ್ತು ಪಂಜಾಬ್ ಶೇ. 12 ರಷ್ಟು ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಶೇ. 5, ಕರ್ನಾಟಕದಲ್ಲಿ ಶೇ. 7, ಉತ್ತರ ಪ್ರದೇಶದಲ್ಲಿ ಶೇ. 2, ದೆಹಲಿಯಲ್ಲಿ ಶೇ. 3 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ. 1 ರಷ್ಟು ಹೆಚ್ಚಳ ದಾಖಲಾಗಿದೆ. ಮಧ್ಯಪ್ರದೇಶದಲ್ಲಿ ಶೇ. 15, ಜಾರ್ಖಂಡ್‌ನಲ್ಲಿ ಶೇ. 6, ಒಡಿಶಾದಲ್ಲಿ ಶೇ. 10, ಛತ್ತೀಸ್‌ಗಢದಲ್ಲಿ ಶೇ. 23, ಲಡಾಖ್ ಮತ್ತು ಲಕ್ಷದ್ವೀಪಗಳಲ್ಲಿ ಶೇ. 30 ರಷ್ಟು ಕುಸಿತ ಉಂಟಾಗಿದೆ.

ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಸೀರೆಯಲ್ಲಿ ಭಾರತದ ಸಂಸ್ಕೃತಿಯ ಪ್ರತಿಬಿಂಬ

ಇನ್ನು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಂಡೀಗಢ ಶೇ. 15 ಮತ್ತು ಪುದುಚೇರಿಯಲ್ಲಿ ಶೇ. 11 ರಷ್ಟು ಬೆಳವಣಿಗೆ ಉಂಟಾಗಿದ್ದರೆ ಲಕ್ಷದ್ವೀಪದಲ್ಲಿ ತೀವ್ರ ಕುಸಿತವಾಗಿದೆ ಎಂಬುದನ್ನು ಅಂಕಿ ಅಂಶಗಳು ಸೂಚಿಸಿವೆ.

ವಿದ್ಯಾ ಇರ್ವತ್ತೂರು

View all posts by this author