ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಷೇರು ವ್ಯಾಪಾರ ಮಾರುಕಟ್ಟೆಯಲ್ಲೂ ಮಾಡಬೇಕು ಗೆರಿಲ್ಲಾ ವಾರ್

ಷೇರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಬಯಸುವವರು ಗೆಲ್ಲಬೇಕಾದರೆ ಶಿವಾಜಿ ಮಹಾರಾಜರ ಯುದ್ಧ ತಂತ್ರವನ್ನು ಅನುಸರಿಸಬೇಕು. ಅದರಲ್ಲೂ ಮುಖ್ಯವಾಗಿ ಅವರು ಭಾರತದ ಆರನೇ ಮೊಘಲ್ ಚಕ್ರವರ್ತಿ ಔರಂಗಜೇಬ್ ವಿರುದ್ಧ ಹೋರಾಡಲು ಮಾಡಿರುವ ಗೆರಿಲ್ಲಾ ಯುದ್ಧ ತಂತ್ರವನ್ನು ಅಳವಡಿಸಿಕೊಂಡರೆ ಸುಲಭವಾಗಿ ಮಾರುಕಟ್ಟೆಯಲ್ಲಿ ಲಾಭ ಗಳಿಸಬಹುದು ಎನ್ನುತ್ತಾರೆ ಹಣಕಾಸು ತಜ್ಞ ಅಶೋಕ್ ದೇವಾನಾಂಪ್ರಿಯ.

ಅಶೋಕ್ ದೇವಾನಾಂಪ್ರಿಯ

ಬೆಂಗಳೂರು, ಜ. 27: ಷೇರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಬಯಸುವ ಸಣ್ಣಪುಟ್ಟ ವ್ಯಾಪಾರಿಗಳು ಗೆಲ್ಲಬೇಕಾದರೆ ಮರಾಠ ಸಾಮ್ರಾಜ್ಯದ ದೊರೆ ಶಿವಾಜಿ ಮಹಾರಾಜರ ಯುದ್ಧ ತಂತ್ರವನ್ನು ಅನುಸರಿಸಬೇಕು. ಅದರಲ್ಲೂ ಮುಖ್ಯವಾಗಿ ಅವರು ಭಾರತದ ಆರನೇ ಮೊಘಲ್ ಚಕ್ರವರ್ತಿ ಔರಂಗಜೇಬ್ ವಿರುದ್ಧ ಹೋರಾಡಲು ಮಾಡಿರುವ ಗೆರಿಲ್ಲಾ ಯುದ್ಧ ನೀತಿಯನ್ನು ಅಳವಡಿಸಿಕೊಂಡರೆ ಸುಲಭವಾಗಿ ಮಾರುಕಟ್ಟೆಯಲ್ಲಿ ಸ್ಥಿರವಾದ ಸ್ಥಾನ ಪಡೆಯಬಹುದು ಮತ್ತು ಹೆಚ್ಚಿನ ಲಾಭ ಗಳಿಸಬಹುದು ಎನ್ನುತ್ತಾರೆ ಹಣಕಾಸು ತಜ್ಞ, ಕೌಟಿಲ್ಯ ಕ್ಯಾಪಿಟಲ್ ಸ್ಥಾಪಕ (Founder of cautilya Capital) ಅಶೋಕ್ ದೇವಾನಾಂಪ್ರಿಯ (Ashok Devanampriya).

'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ವ್ಯಾಪಾರ ಮಾರುಕಟ್ಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಯುದ್ಧ ತಂತ್ರವನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ವಿವರಿಸಿದರು.

ಅಶೋಕ್ ದೇವಾನಾಂಪ್ರಿಯ ಅವರೊಂದಿಗಿನ ಸಂದರ್ಶನದ ವಿಡಿಯೊ ನೋಡಿ:



ಟ್ರೇಡಿಂಗ್ ಮಾರುಕಟ್ಟೆಯಲ್ಲಿ ಸಣ್ಣ ವ್ಯಾಪಾರಿಗಳು ದೊಡ್ಡದೊಡ್ಡ ಸಂಸ್ಥೆಗಳ ವಿರುದ್ಧ ಹೋರಾಡಬೇಕಾಗುತ್ತದೆ. ಇದೊಂದು ರೀತಿಯಲ್ಲಿ ಸಣ್ಣದಾಗಿದ್ದ ಶಿವಾಜಿ ಮಹಾರಾಜರ ಸೈನ್ಯ ಬಹುದೊಡ್ಡದಾಗಿದ್ದ ಔರಂಗಜೇಬನ ಸೈನ್ಯದ ಮುಂದೆ ಯುದ್ಧಕ್ಕೆ ನಿಂತಂತೆ. ಇಲ್ಲಿ ಸೈನ್ಯ ಬಲಕ್ಕಿಂತ ಬುದ್ದಿ ಶಕ್ತಿಯ ಬಲ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ ಎನ್ನುತ್ತಾರೆ ಅಶೋಕ್ ದೇವಾನಾಂಪ್ರಿಯ.

ಸಣ್ಣ ವ್ಯಾಪಾರಿಗಳು ಇಲ್ಲಿ ಸ್ಟಾಪ್ ಪ್ಲಸ್, ಎಡ್ಜಿಂಗ್, ಪೊಜಿಶನ್ ಸೈಜಿಂಗ್, ಸ್ಕೇಲ್ ವಿದ್ ಪ್ರಾಫಿಟ್ ತಂತ್ರವನ್ನು ಅನುಸರಿಸಬೇಕು. ಯಾಕೆಂದರೆ ಸಣ್ಣ ವ್ಯಾಪಾರಿಗಳಿಗೆ ಶತ್ರುವಾಗಿರುವ ದೊಡ್ಡ ಸಂಸ್ಥೆಗಳು ಎಷ್ಟು ಬೇಕಾದರೂ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುತ್ತಾರೆ. ಅವರು ಹಣದ ನಷ್ಟದ ಬಗ್ಗೆ ಹೆಚ್ಚು ಯೋಚನೆ ಮಾಡುವುದಿಲ್ಲ. ಆದರೆ ಸಣ್ಣ ವ್ಯಾಪಾರಿಗಳಿಗೆ ಸಣ್ಣ ನಷ್ಟವೂ ಕೂಡ ದೊಡ್ಡ ಹೊರೆಯಾಗುತ್ತದೆ ಎಂದು ಅವರು ಹೇಳಿದರು.

ಸಣ್ಣ ವ್ಯಾಪಾರಿಗಳು ನಷ್ಟ ಅನುಭವಿಸಿದಾಗ ತಮ್ಮಲ್ಲಿರುವ ಆಸ್ತಿಯನ್ನು ಮಾರಾಟ ಮಾಡಿ ನಷ್ಟ ಸರಿದೂಗಿಸಿಕೊಳ್ಳಬೇಕು. ಇದು ಹೆಚ್ಚಿನ ನ್ ನಷ್ಟವನ್ನು ತಪ್ಪಿಸುತ್ತದೆ. ಇಲ್ಲಿ ಹೆಚ್ಚು ತಲೆ ಖರ್ಚು ಮಾಡಿಯೇ ಗೆಲ್ಲಬೇಕು. ಮುಂದಿನ ವ್ಯಾಪಾರದ ವೇಳೆ ವ್ಯಾಪಾರ ಮಾಡುವ ಶಕ್ತಿ ಎಷ್ಟಿದೆ ಎಂಬುದನ್ನು ನೋಡಬೇಕು. ಈ ರೀತಿ ವ್ಯಾಪಾರ ಮಾರುಕಟ್ಟೆಯಲ್ಲಿ ತೊಡಗಿಕೊಳ್ಳುವುದರಿಂದ ಹೆಚ್ಚು ನಷ್ಟವಾಗುವುದಿಲ್ಲ ಎನ್ನುತ್ತಾರೆ ಅವರು.

ಆಮದು ಕಾರ್‌ಗಳ ಮೇಲಿನ ಸುಂಕವನ್ನು ಶೇ. 40 ಇಳಿಸಲು ಭಾರತ ನಿರ್ಧಾರ

ಇಲ್ಲಿ ಒಂದು ಲಾಟ್‌ನಲ್ಲಿ ಲಾಭ ಮಾಡುವ ಸಾಮರ್ಥ್ಯವಿಲ್ಲದಾಗ ಎರಡನೇ ಲಾಟ್‌ಗೆ ಹೋಗಲೇಬಾರದು. ಎರಡನೆಯದ್ದು ಸಾಧ್ಯವಾಗದೇ ಇದ್ದಾಗ ಮೂರನೆಯದಕ್ಕೆ ಹೋಗಬಾರದು. ಈ ರೀತಿ ನಂಬರ್ ಅನ್ನು ಅನುಸರಿಸಬೇಕು. ಲಾಭ ಮಾರುತ್ತಿದ್ದಂತೆ ಲಾಟ್ ಸೈಜ್ ಹೆಚ್ಚು ಮಾಡಿ, ನಷ್ಟವಾದಾಗ ಲಾಟ್ ಸೈಜ್ ಅನ್ನು ಕಡಿಮೆ ಮಾಡುತ್ತಾ ಹೋಗಬೇಕು ಇದರಿಂದಲೇ ನಾವು ವ್ಯಾಪಾರದಲ್ಲಿ ಗೆಲ್ಲಲು ಸಾಧ್ಯವಿದೆ ಎಂದು ಅವರ ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author