ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

E-Khata: ಹಳ್ಳಿ ಮನೆಗೆ ಇ-ಖಾತಾ ಮಾಡಿಸೋದು ಹೇಗೆ? ಇಲ್ಲಿದೆ ಪಿನ್‌ ಟು ಪಿನ್ ವಿವರ

ಗ್ರಾಮ ಪಂಚಾಯತ್‌ ಇ-ಖಾತಾ ಎಂದರೇನು? ಹಳ್ಳಿಯ ಪ್ರದೇಶಗಳಲ್ಲಿ ಮನೆ ಅಥವಾ ಜಮೀನು ಖರೀದಿಸಿದ ಮೇಲೆ ಇ-ಖಾತಾ ಹೇಗೆ ಮಾಡಿಸಬೇಕು? ಅರ್ಜಿ ಪ್ರಕ್ರಿಯೆ, ಅಗತ್ಯ ದಾಖಲೆಗಳು, ಪಿಡಿಒ ವೆರಿಫಿಕೇಷನ್‌ ಹೇಗೆ? ಬಿಬಿಎಂಪಿ ಖಾತಾಗೆ ಇರುವ ವ್ಯತ್ಯಾಸವೇನು? ಇಲ್ಲಿದೆ ವಿವರ.

ಹಳ್ಳಿ ಮನೆಗೆ ಇ-ಖಾತಾ ಮಾಡಿಸೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

-

Ramesh B Ramesh B Oct 15, 2025 8:31 PM
  • ವಿಜೇತ್‌ ಕುಮಾರ್‌ ಡಿ.ಎನ್‌.

ಬೆಂಗಳೂರು: ಹಳ್ಳಿಯಲ್ಲಿರುವ ರೆವೆನ್ಯೂ ಸೈಟ್‌ ಅಥವಾ ಗ್ರಾಮೀಣ ಭಾಗದ ಪ್ರಾಪರ್ಟಿ‌ಗಳಿಗೆ ಇ-ಖಾತಾ (E-Khata) ಬೇಕಾ? ಅದು ಹೇಗೆ ಮಾಡಿಸಬೇಕು? ಅದು ಬಿ-ಖಾತಾ ಅಥವಾ ಬಿಬಿಎಂಪಿ ಖಾತಾಗೆ ಹೋಲಿಸಿದರೆ ಹೇಗಿರುತ್ತದೆ? ಈ ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರಗಳನ್ನು ತಿಳಿಯೋಣ. ಮೊದಲು ಗ್ರಾಮ ಪಂಚಾಯತ್‌ ಇ-ಖಾತಾ ಅಂದ್ರೇನು? ಅರ್ಥ ಮಾಡಿಕೊಳ್ಳೋಣ. ಖಾತಾ ಅಂದ್ರೆ ಪ್ರಾಪರ್ಟಿಯ ಮಾಲೀಕತ್ವ ಮತ್ತು ತೆರಿಗೆ ಕಟ್ಟುವ ದಾಖಲಾತಿ ಆಗಿದೆ. ನಗರಗಳಲ್ಲಿ ಇದು ಬಿಬಿಎಂಪಿ ಖಾತಾ / ಬಿಡಿಎ ಖಾತಾ, ಹಳ್ಳಿಗಳಲ್ಲಿ ಇದನ್ನು ಗ್ರಾಮ ಪಂಚಾಯ್ತಿ ಖಾತಾ ಅಂತ ಕರಿತಾರೆ.

ಹಿಂದೆ ಇದನ್ನು ರಿಜಿಸ್ಟರ್‌ನಲ್ಲಿ ಬರೆಯಲಾಗುತ್ತಿತ್ತು. ಈಗ ಕಾಲ ಬದಲಾಗಿದೆ — ಸರ್ಕಾರ ಇ-ಖಾತಾ ಸಿಸ್ಟಮ್ ಅಂದರೆ ಡಿಜಿಟಲ್‌ ಪ್ರಾಪರ್ಟಿ ರೆಕಾರ್ಡ್‌ ಸಿಸ್ಟಮ್ ತರಲಾಗಿದೆ. ಇ-ಖಾತಾ ಅಂದ್ರೆ — ಪ್ರಾಪರ್ಟಿ‌ಯ ಸಂಪೂರ್ಣ ವಿವರಗಳು ಆನ್‌ಲೈನ್‌‌ನಲ್ಲಿ ಎಂಟ್ರಿ ಆಗಿರೋ ಡಿಜಿಟಲ್ ರೆಕಾರ್ಡ್‌. ಯಾರ ಮನೆ ಯಾರ ಹೆಸರಿನಲ್ಲಿದೆ, ಎಷ್ಟು ಏರಿಯಾ ಇದೆ, ಪ್ರಾಪರ್ಟಿ ಟ್ಯಾಕ್ಸ್‌ ಪಾವತಿ ಸ್ಥಿತಿ, ಅಪ್ರೂವಲ್‌ ಸ್ಟೇಟಸ್‌, ಇವೆಲ್ಲವೂ ಇ-ಖಾತಾ ಮೂಲಕ ನೋಡಬಹುದು.



ಈ ಸುದ್ದಿಯನ್ನೂ ಓದಿ: e-khata: ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ; ಜುಲೈ 1ರಿಂದ ಮನೆ ಬಾಗಿಲಿಗೆ ಇ-ಖಾತಾ ಅಭಿಯಾನ

ಗ್ರಾಮ ಪಂಚಾಯತ್‌ ಇ-ಖಾತಾಗಾಗಿ ಯಾರು ಅರ್ಜಿ ಹಾಕಬಹುದು?

ರೆವೆನ್ಯೂ ಸೈಟ್‌ ಮಾಲೀಕರು, ಡಿಸಿ ಕನ್ವರ್ಷನ್‌ ಆಗಿರುವ ಸೈಟ್‌‌ಗಳು, ಗ್ರಾಮ ಠಾಣಾ ವ್ಯಾಪ್ತಿ ಒಳಗಿನ ಮನೆಗಳು, ವಿಲೇಜ್‌ ಸರ್ವೇ ನಂಬರ್‌ ಪ್ರಾಪರ್ಟಿಗಳು, ಈ ಮಾದರಿಯ ಆಸ್ತಿಗೆ ಗ್ರಾಮ ಪಂಚಾಯ್ತಿಯಲ್ಲಿ, ಇ-ಖಾತಾ ಸಲುವಾಗಿ ಅರ್ಜಿ ಸಲ್ಲಿಸಬಹುದು. ಅಂದರೆ, ಹಳ್ಳಿಯ ಪಂಚಾಯತ್‌ ವ್ಯಾಪ್ತಿಯಲ್ಲಿರುವ ರೆಸಿಡೆನ್ಷಿಯಲ್‌ / ಕಮರ್ಷಿಯಲ್ ಪ್ರಾಪರ್ಟಿ ಎಲ್ಲದಕ್ಕೂ ಇ-ಖಾತಾ ಅತ್ಯಗತ್ಯ.

ಅರ್ಜಿಗೆ ಬೇಕಾದ ದಾಖಲೆಗಳೇನು?

ಇ-ಖಾತಾ ಪಡೆಯಲು ಬೇಕಾಗುವ ದಾಖಲೆಗಳು: 1. ಸೇಲ್‌ ಡೀಡ್, 2. ಕಳೆದ 3 ವರ್ಷಗಳಲ್ಲಿ ಪ್ರಾಪರ್ಟಿ ಟ್ಯಾಕ್ಸ್‌ ಕಟ್ಟಿರುವ ರಸೀತಿ, 3. ಡಿ.ಸಿ ಕನ್ವರ್ಷನ್‌ ಸರ್ಟಿಫಿಕೇಟ್‌, 4. ಸರ್ವೇ ಮ್ಯಾಪ್‌ ಅಥವಾ ವಿಲೇಜ್‌ ಮ್ಯಾಪ್‌ ಕಾಪಿ, 5. ಬಿಲ್ಡಿಂಗ್‌ ಪ್ಲಾನ್‌ ಅಪ್ರೂವಲ್‌, 6. ವಿದ್ಯುತ್‌ ಅಥವಾ / ನೀರಿನ ಬಿಲ್‌, 7. ಐಡಿ ಪ್ರೂಫ್‌, ಆಧಾರ್‌ ಅಥವಾ ಪ್ಯಾನ್‌, 8. ಅರ್ಜಿ ಸಲ್ಲಿಸುವವರ ಒಂದು ಫೋಟೊ ಮತ್ತು ಅಪ್ಲಿಕೇಷನ್‌ ಫಾರ್ಮ್. ಈ ದಾಖಲೆಗಳು ಪಂಚಾಯತ್‌ ಕಚೇರಿ‌ಗೆ ಅಥವಾ ತಾಲೂಕು ಇ-ಗವರ್ನೆನ್ಸ್‌ ಕೇಂದ್ರಕ್ಕೆ ಸಲ್ಲಿಸಬಹುದು.

ಅರ್ಜಿ ಪ್ರಕ್ರಿಯೆ ಹೇಗೆ ನಡೆಯುತ್ತದೆ?

  • ಗ್ರಾಮ ಪಂಚಾಯತ್ ಕಚೇರಿ ಅಥವಾ ತಾಲೂಕು ಮಟ್ಟದ ಇ-ಸ್ವತ್ತು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು.
  • ಪಂಚಾಯತ್ ಡೆವಲಪ್ಮೆಂಟ್‌ ಆಫೀಸರ್‌ ಜಾಗಕ್ಕೆ ಬಂದು ಪರಿಶೀಲನೆ ಮಾಡ್ತಾರೆ. ಪ್ರಾಪರ್ಟಿಯ ಸರಹದ್ದು, ಬಳಕೆ ಮತ್ತು ದಾಖಲೆಗಳನ್ನು ಪರಿಶೀಲಿಸ್ತಾರೆ.
  • ಎಲ್ಲ ವಿವರಗಳು ಆನ್‌ಲೈನ್‌ನಲ್ಲಿ ದಾಖಲಾಗಿ ಸಿಸ್ಟಮ್‌ನಲ್ಲಿ ಖಾತಾ ನಂಬರ್‌ ಜನರೇಟ್‌ ಆಗುತ್ತದೆ.
  • ಕಾರ್ಯದರ್ಶಿ ಅಥವಾ ಪಿಡಿಒ ಖಾತಾ ಮಾನ್ಯತೆ ಮಾಡಿ, ಅರ್ಜಿದಾರರಿಗೆ ಇ-ಖಾತಾ ಸರ್ಟಿಫಿಕೇಟ್‌ ನೀಡುತ್ತಾರೆ.
  • ಮಾನ್ಯತೆ ಪಡೆದ ಇ-ಖಾತಾ ಸರ್ಟಿಫಿಕೇಟ್‌ ಅನ್ನು ಇ-ಸ್ವತ್ತು ಪೋರ್ಟಲ್‌ ಅಥವಾ ಸೇವಾ ಸಿಂಧೂ ಮೂಲಕ ಡೌನ್ಲೋಡ್‌ ಮಾಡಬಹುದು.

ಸಾಮಾನ್ಯ ತಪ್ಪುಗಳು ಮತ್ತು ವಹಿಸಬೇಕಾದ ಎಚ್ಚರಿಕೆಗಳು

  • ಫೇಕ್‌ ಇ-ಖಾತಾ ಸರ್ಟಿಫಿಕೇಟ್‌ ಹಂಚಿಕೆ ಇದೆ-ಹೀಗಾಗಿ ಪಿಡಿಒ ಸಹಿ ಮತ್ತು ಮುದ್ರೆ ವೆರಿಫೈ ಮಾಡಿ.
  • ರೆವೆನ್ಯೂ ಸೈಟ್‌ಗಳಲ್ಲಿ ಮಾನ್ಯತೆ ಇಲ್ಲದೇ ಮನೆ ಕಟ್ಟೋದು ತಪ್ಪು.
  • ಬ್ರೋಕರ್‌ ಮೂಲಕ ಖಾತಾ ಮಾಡಿಸೋ ಮೊದಲು ಪಂಚಾಯ್ತಿಯಲ್ಲಿ ಸ್ಟೇಟಸ್‌ ಚೆಕ್ ಮಾಡಿ.

ಗ್ರಾಮ ಪಂಚಾಯತ್‌ ಇ-ಖಾತಾ ಅಂದ್ರೆ ಕೇವಲ ಟ್ಯಾಕ್ಸ್‌ ದಾಖಲೆ ಅಲ್ಲ-ಅದು ನಿಮ್ಮ ಪ್ರಾಪರ್ಟಿಗೆ ಸರಕಾರಿ ಮಾನ್ಯತೆ ನೀಡುವ ದಾಖಲೆ. ಹಳ್ಳಿಯಲ್ಲಿದ್ದರೂ, ದಾಖಲೆ ಸರಿಯಾಗಿದ್ದರೆ ಮನೆಗೆ ಲೀಗಲ್‌ ಸ್ಥಾನಮಾನ ಸಿಗುತ್ತದೆ.