E Khata: ರಾಜ್ಯದ ಗ್ರಾಮೀಣ ಆಸ್ತಿಗಳಿಗೂ ಇ-ಖಾತಾ: ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ
ಶುಕ್ರವಾರದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆಯಲ್ಲಿ ಇ-ಖಾತಾ ಸಮಸ್ಯೆ ಸರಿಪಡಿಸುವ ಸಂಬಂಧ ತಿದ್ದುಪಡಿ ವಿಧೇಯಕ ಕುರಿತಂತೆ ಚರ್ಚೆ ನಡೆಸಲಾಯಿತು. ಅಂತಿಮವಾಗಿ ರಾಜ್ಯ ಸಚಿವ ಸಂಪುಟ ಸಭೆಯು ವಿಧೇಯಕಕ್ಕೆ ಅಂಗೀಕಾರ ನೀಡಿದೆ.

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಇ-ಖಾತಾ (E Khata) ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರದಿಂದ (Karnataka Government) ಸಿಹಿಸುದ್ದಿಯೊಂದು ಹೊರಬಿದ್ದಿದೆ. ರಾಜ್ಯ ಸಚಿವ ಸಂಪುಟ (Karnataka Cabinet) ಸಭೆಯಲ್ಲಿಈ ಕುರಿತ ವಿಧೇಯಕಕ್ಕೆ (Bill) ಅನುಮೋದನೆ ನೀಡಲಾಗಿದೆ. ಉಭಯ ಸದನದಲ್ಲಿ ವಿಧೇಯಕಕ್ಕೆ ಅಂಗೀಕಾರ ದೊರೆತಿದ್ದೇ ಆದರೆ ಗ್ರಾಮೀಣ ಭಾಗದ ಇ-ಖಾತಾ ಸಮಸ್ಯೆ ಪರಿಹಾರವಾಗಲಿದೆ.
ಶುಕ್ರವಾರದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆಯಲ್ಲಿ ಇ-ಖಾತಾ ಸಮಸ್ಯೆ ಸರಿಪಡಿಸುವ ಸಂಬಂಧ ತಿದ್ದುಪಡಿ ವಿಧೇಯಕ ಕುರಿತಂತೆ ಚರ್ಚೆ ನಡೆಸಲಾಯಿತು. ಅಂತಿಮವಾಗಿ ರಾಜ್ಯ ಸಚಿವ ಸಂಪುಟ ಸಭೆಯು ವಿಧೇಯಕಕ್ಕೆ ಅಂಗೀಕಾರ ನೀಡಿದೆ.
ಶುಕ್ರವಾರದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡಿರುವ ಇ-ಖಾತಾ ಸಮಸ್ಯೆ ಸರಿಪಡಿಸುವ ತಿದ್ದುಪಡಿ ವಿಧೇಯಕವನ್ನು ರಾಜ್ಯದ ಉಭಯ ಸದನಗಳಲ್ಲಿ ಈ ಬಾರಿಯೇ ಮಂಡನೆ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿಯೇ ನಿನ್ನೆ ತರಾತುರಿಯಲ್ಲಿ ಸಂಪುಟ ಸಭೆ ಕರೆಯಲಾಗಿತ್ತು. ಇದಕ್ಕೆ ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ದೊರೆತರೆ ಗ್ರಾಮೀಣ ಭಾಗದ ಇ-ಖಾತಾ ಸಮಸ್ಯೆ ಕ್ಲಿಯರ್ ಆಗಲಿದೆ.
ಗ್ರಾಮೀಣ ಭಾಗದ ಕಂದಾಯ ಭೂಮಿಯಲ್ಲಿನ ನಿವೇಶನ, ಮನೆ ಸಕ್ರಮಕ್ಕೆ ಅವಕಾಶ ಸಿಗಲಿದೆ. ಅಕ್ರಮ ಸಕ್ರಮದ ಜಮೀನುದಾರರಿಗೂ ಇ ಖಾತಾ ಲಭ್ಯವಾಗುವಂತೆ ಆಗಲಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Chikkaballapur News: ಕೇವಲ 15 ದಿನಗಳಲ್ಲಿ ಇ-ಖಾತೆ ಪಡೆದು ಸದುಪಯೋಗ ಮಾಡಿಕೊಳ್ಳಿ