ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ಅತ್ಯಂತ ಚರ್ಚೆಯಲ್ಲಿ ಇರುವ ವಿಷಯ ಅಂದ್ರೆ ಖಾತಾ ಮಾಡಿಸಿಕೊಳ್ಳಲು ಸರ್ಕಾರ ನೀಡಿರುವ ಅವಕಾಶದ ಬಗ್ಗೆ. ಈ ಸಂದರ್ಭದಲ್ಲಿ ರೆವೆನ್ಯೂ ಸೈಟ್‌ಗೆ E-ಖಾತಾ ಮಾಡಿಸೋದು ಹೇಗೆ? ಅನ್ನೋ ಪ್ರಶ್ನೆ ಸಾಮಾನ್ಯ ಜನರದ್ದು. ಹೀಗಾಗಿ ಈ ಲೇಖನದಲ್ಲಿ ಅದರ ಸವಿರವಾದ ವಿವರಣೆಯನ್ನು ಸ್ಟೆಪ್ ಬೈ ಸ್ಟೆಪ್ ವಿವರಿಸಲಾಗಿದೆ.
ರೆವೆನ್ಯೂ ಸೈಟ್ ಅಂದ್ರೇನು?
ರೆವೆನ್ಯೂ ಸೈಟ್ ಅಂದರೆ - ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನಲ್ಲಿ ಸೈಟ್ ಮಾಡಿ ಹಂಚಿಕೆ ಮಾಡಲ್ಪಟ್ಟ, ಸರ್ಕಾರಿ ದಾಖಲೆಗಳಲ್ಲಿ 'ಅಗ್ರಿಕಲ್ಚರಲ್ ಲ್ಯಾಂಡ್' ಎಂದೇ ಇರುವ ಜಾಗ. ಸಾಧಾರಣವಾಗಿ ಈ ಸೈಟ್‌ಗಳು ಡಿಸಿ ಕನ್ವರ್ಷನ್ ಆಗಿರೋದಿಲ್ಲ. ಅಂದರೆ ಅಧಿಕೃತವಾಗಿ ನಾನ್-ಅಗ್ರಿಕಲ್ಚರಲ್ ಲ್ಯಾಂಡ್ ಆಗಿಲ್ಲ ಅಂತಾ. ಆದ್ದರಿಂದ ಬಿಬಿಎಂಪಿ / ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ಇಂತಹ ಜಾಗಗಳಿಗೆ ನೇರವಾಗಿ ಖಾತೆ (ಇ-ಖಾತಾ) ಕೊಡೋದಿಲ್ಲ. ಆದರೆ ಕೆಲವು ಪ್ರಕರಣಗಳಲ್ಲಿ ಅದು ಸಾಧ್ಯ, ಅದು ಹೇಗೆಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ಈ ಇ-ಖಾತಾ ಅಂದ್ರೆ ಏನು?
ಇ-ಖಾತಾ ಅಂದ್ರೆ ಪ್ರಾಪರ್ಟಿ ಟ್ಯಾಕ್ಸ್ ಮತ್ತು ಮಾಲೀಕತ್ವ ವಿವರವನ್ನು ಬಿಬಿಎಂಪಿ ಅಥವಾ ಸ್ಥಳೀಯ ಸಂಸ್ಥೆ ಡಿಜಿಟಲ್ ರೀತಿಯಲ್ಲಿ ನೋಂದಣಿ ಮಾಡುವ ವ್ಯವಸ್ಥೆ. ಇದರಿಂದ ನಿಮ್ಮ ಪ್ರಾಪರ್ಟಿ ಅಧಿಕೃತವಾಗಿ ಗುರುತಿಸಲಾಗುತ್ತದೆ. ಹಳೆಯ ಖಾತೆ ಪತ್ರಗಳು ಈಗ ಎಲೆಕ್ಟ್ರಾನಿಕ್ ಅಂದ್ರೆ ಇ-ಖಾತಾ ಆಗಲಿದೆ. ನೀವು ಪ್ರಾಪರ್ಟಿ ಮಾರಾಟ, ಲೋನ್ ಅಥವಾ ಬಿಲ್ಡಿಂಗ್ ಪ್ಲಾನ್ ಅನುಮತಿ ಮಾಡಿಸಬೇಕಾದರೆ ಇ-ಖಾತಾ ಅತ್ಯವಶ್ಯಕ.
ರೆವೆನ್ಯೂ ಸೈಟ್‌ಗೆ ಇ-ಖಾತಾ ಸಾಧ್ಯವೇ?
ಇದು ಆಯಾ ಪ್ರಾಪರ್ಟಿ ಇರುವ ಸ್ಥಳದ ಮೇಲೆ ನಿರ್ಧಾರವಾಗುತ್ತದೆ. ಆಸ್ತಿಯು ಬಿಬಿಎಂಪಿ ಮತ್ತು ಬಿಡಿಎ ವ್ಯಾಪ್ತಿಯಲ್ಲಿ ಬರುವ ಪ್ರದೇಶ ಆಗಿರಬೇಕು. ಸೈಟ್ ಡಿಸಿ ಕನ್ವರ್ಷನ್ ಆಗಿಲ್ಲ ಅಂದ್ರೆ ನೇರವಾಗಿ ಇ-ಖಾತಾ ಸಿಗೋದಿಲ್ಲ. ಆದರೆ ಲೇಯೌಟ್‌ಗೆ ಬಿಡಿಎ/ಬಿಎಂಆರ್‌ಡಿಎ ಅಪ್ರೂವಲ್ ಇದ್ದರೆ ಅಥವಾ ಕನ್ವರ್ಷನ್ ಪೆಂಡಿಂಗ್ ಪ್ರೂಫ್ ಇದ್ದರೆ ಅರ್ಜಿ ಸಲ್ಲಿಸಬಹುದು. ಮುಖ್ಯವಾಗಿ ರೆವೆನ್ಯೂ ಸೈಟ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರಬೇಕು. ಆಗ ಸೈಟ್‌ಗೆ ಪಂಚಾಯ್ತಿ ಖಾತಾ ಲಭ್ಯವಾಗುತ್ತದೆ. ಇದು ಇ-ಖಾತಾ ಅಲ್ಲ, ಆದರೆ ಮಾನ್ಯತೆಗೆ ಬೇಕಾದ ಸ್ಥಳೀಯ ದಾಖಲೆ ಆಗಿದೆ. ಸಲಹೆ ಏನಂದ್ರೆ ರೆವೆನ್ಯೂ ಸೈಟ್‌ಗೆ ಇ-ಖಾತಾ ಮಾಡಿಸೋ ಮೊದಲು ಡಿಸಿ ಕನ್ವರ್ಷನ್ ಆಗಬೇಕು.
ಸೈಟ್ vs ಫ್ಲಾಟ್ – ಯಾವುದು ಉತ್ತಮ? ಇದು ನಿಮ್ಮ ಗಮನದಲ್ಲಿರಲಿ!
ಇ-ಖಾತಾಗೆ ಬೇಕಾಗುವ ಪ್ರಮುಖ ದಾಖಲೆಗಳು
* ಸೇಲ್ ಡೀಡ್ (ರಿಜಿಸ್ಟ್ರೇಷನ್ ಕಾಪಿ) * ಇತ್ತೀಚಿನ ತೆರಿಗೆ ಪಾವತಿ ರಸೀತಿ * ಎನ್ಕಂಬ್ರನ್ಸ್ ಸರ್ಟಿಫಿಕೇಟ್ (EC) * ಡಿಸಿ ಕನ್ವರ್ಷನ್ ಆರ್ಡರ್ (ಲಭ್ಯವಿದ್ದರೆ) * ಬಿಡಿಎ, ಬಿಎಂಆರ್‌ಡಿಎ, ಪಂಚಾಯ್ತಿಯಿಂದ ಪಡೆದ ಲೇಯೌಟ್ ಮಾನ್ಯತೆ ಪತ್ರ. * ಮಾಲೀಕರ ಐಡಿ ಪ್ರೂಫ್ (ಆಧಾರ್ ಅಥವಾ ಪ್ಯಾನ್) * ಪ್ರಾಪರ್ಟಿ ಸ್ಕೆಟ್/ಬಿಲ್ಡಿಂಗ್ ಪ್ಲಾನ್ ಅಥವಾ ಲೇಯೌಟ್ ಪ್ಲಾನ್.
ಇ-ಖಾತಾ ಪಡೆಯಲು ಆನ್‌ಲೈನ್ ಅಪ್ಲೇ ಮಾಡುವ ವಿಧಾನ
ಸ್ಟೆಪ್ 1: ಬಿಬಿಎಂಪಿಯ ಈ ವೆಬ್‌ಸೈಟ್‌ಗೆ ಭೇಟಿ ನೀಡಿ https://bbmpeforms.karnataka.gov.in/
ಸ್ಟೆಪ್ 2: ಖಾತಾ ರಿಜಿಸ್ಟ್ರೇಷನ್ ಮತ್ತು ಟ್ರಾನ್ಸ್‌ಫರ್ ಆಯ್ಕೆಮಾಡಿ
ಸ್ಟೆಪ್ 3: ಅಪ್ಲಿಕೇಷನ್ ವಿವರ ಮತ್ತು ಪ್ರಾಪರ್ಟಿ ವಿವರ ತುಂಬಿ
ಸ್ಟೆಪ್ 4: ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ, ಅದು ಪಿಡಿಎಫ್ ಫಾರ್ಮಾಟ್‌ನಲ್ಲಿರಲಿ.
ಸ್ಟೆಪ್ 5: ಅಪ್ಲೋಡ್ ಮಾಡಿದ ಬಳಿಕ ಸಬ್ಮಿಟ್ ಮಾಡಿ – ಅಪ್ಲಿಕೇಷನ್ ನಂಬರ್ ನೋಟ್ ಮಾಡಿ
ಸ್ಟೆಪ್ 6: ನಂತರ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ಮಾಡ್ತಾರೆ
ಸ್ಟೆಪ್ 7: ಪೇಮೆಂಟ್ ಇನ್‌ವಾಯ್ಸ್ ಜನರೇಟ್ ಆಗುತ್ತದೆ – ಪಾವತಿ ಮಾಡಿ ಸ್ಟೆಪ್ 8: ಇ-ಖಾತಾ ಸರ್ಟಿಫಿಕೇಟ್ ಡೌನ್ಲೋಡ್ ಮಾಡಬಹುದು
ಇಲ್ಲಿ ಮುಖ್ಯ ಸಂಗತಿ ಎಂದರೆ: ರೆವೆನ್ಯೂ ಸೈಟ್ ಆಗಿರುವುದರಿಂದ ಬಿಬಿಎಂಪಿ ಅಧಿಕಾರಿಗಳು ಪ್ರಾಪರ್ಟಿ ದಾಖಲೆಗಳನ್ನು ಸಂಪೂರ್ಣ ಪರಿಶೀಲನೆ ಮಾಡ್ತಾರೆ.
ಮನೆಯ ರೀ-ಸೇಲ್ ಮೌಲ್ಯ ಹೆಚ್ಚಿಸಲು ಟಾಪ್ 5 ಸ್ಮಾರ್ಟ್ ಟಿಪ್ಸ್!
ಖಾತಾ ಮಾಡಿಸುವಾಗ ಆಗುವ ಸಾಮಾನ್ಯ ತಪ್ಪುಗಳು
ಡಿಸಿ ಕನ್ವರ್ಷನ್ ಇಲ್ಲದೇ ಅಪ್ಲೇ ಮಾಡಿದ್ರೆ ರಿಜೆಕ್ಟ್ ಆಗುತ್ತದೆ. ಲೇಯೌಟ್ ಅಪ್ರೂವಲ್ ಇಲ್ಲದಿದ್ದರೆ ಡಿಲೇ ಆಗಬಹುದು. ಫೇಕ್ ಏಜೆಂಟ್ಸ್ ಮೂಲಕ ಅಪ್ಲೆ ಮಾಡಿದರೆ ಹಣ ಮತ್ತು ಸಮಯ ವ್ಯರ್ಥ. ರೆವೆನ್ಯೂ ಸೈಟ್‌ನಿಂದ ಇ-ಖಾತಾ ಮಾಡಿಸೋ ವಿಧಾನ ಸ್ವಲ್ಪ ಕಠಿಣ. ಇದಕ್ಕಾಗಿ ವಕೀಲರು ಅಥವಾ ಕನ್ಸಲ್ಟಂಟ್ ಮೂಲಕ ವ್ಯವಹಾರ ನಡೆಸಿ.
ಒಟ್ಟಾರೆ, ರೆವೆನ್ಯೂ ಸೈಟ್ ಅನ್ನು ಇ-ಖಾತಾ ಮಾಡಿಸೋದು ಸಿಂಪಲ್ ಆಗಿ ಕಾಣಿಸಿದ್ರೂ, ನಿಯಮ ಪ್ರಕಾರ ದಾಖಲೆ ಪತ್ರಗಳು ತುಂಬಾ ಮುಖ್ಯ. ನಿಮ್ಮ ಪ್ರಾಪರ್ಟಿ ಸೇಫ್ ಆಗಿ ಇರಬೇಕೆಂದರೆ, ಡಿಸಿ ಕನ್ವರ್ಷನ್, ಟ್ಯಾಕ್ಸ್ ಪೇಮೆಂಟ್ ಮತ್ತು ಸ್ಪಷ್ಟ ದಾಖಲೆಗಳು ಇರಬೇಕು.