ಮನೆಯ ರೀ-ಸೇಲ್ ಮೌಲ್ಯ ಹೆಚ್ಚಿಸಲು ಟಾಪ್ 5 ಸ್ಮಾರ್ಟ್ ಟಿಪ್ಸ್!
ಮನೆ ಖರೀದಿಸುವಾಗ ಮಾತ್ರವಲ್ಲ, ಮಾರಾಟ ಮಾಡುವಾಗಲೂ ಅದರ ಮೌಲ್ಯ ಹೆಚ್ಚು ಸಿಗಬೇಕೆಂಬುದು ಎಲ್ಲರ ಬಯಕೆ. ಈ ಲೇಖನದಲ್ಲಿ ಮನೆಯ ಮರು ಮಾರಾಟದ ಮೌಲ್ಯ ಹೆಚ್ಚಿಸಲು ಬೇಕಾದ 5 ಅತ್ಯಂತ ಪ್ರಮುಖ ಟಿಪ್ಸ್‌ಗಳನ್ನು ತಿಳಿಸಲಾಗಿದೆ. ರೀಸೇಲ್ ವ್ಯಾಲ್ಯೂ ಹೆಚ್ಚಿಸಲು ಪ್ರಾಪರ್ಟಿ ಲೊಕೇಷನ್, ಲೀಗಲ್ ಡಾಕ್ಯುಮೆಂಟ್ಸ್, ನಿರ್ವಹಣೆ, ಇಂಟೀರಿಯರ್ ಮತ್ತು ಭವಿಷ್ಯದಲ್ಲಿನ ಅಭಿವೃದ್ಧಿ ಯೋಜನೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಸಂಪೂರ್ಣ ಮಾಹಿತಿ ನೀಡಲಾಗಿದೆ. ಈ ಟಿಪ್ಸ್ ಅನುಸರಿಸಿದರೆ, ನಿಮ್ಮ ಮನೆ ರೀಸೇಲ್ ಮೌಲ್ಯ ಖಂಡಿತ ಹೆಚ್ಚುತ್ತದೆ.
ಮನೆಯ ರೀ-ಸೇಲ್ ಮೌಲ್ಯ ಹೆಚ್ಚಿಸಲು ಸ್ಮಾರ್ಟ್ ಟಿಪ್ಸ್ -
Vijeth Kumar DN
Oct 29, 2025 4:08 PM
ಬೆಂಗಳೂರು: ಒಂದು ಮನೆ ಖರೀದಿಸುವಾಗ ಎಲ್ಲರೂ ಮೊದಲು ತಮ್ಮ ವಾಸಕ್ಕೆ ಯೋಗ್ಯವೇ ಎಂದು ನೋಡುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಅದನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಬಂದಾಗ, ಅದರ ಮೌಲ್ಯ ಹೆಚ್ಚಿರಬೇಕು ಎಂಬುದು ಸಹ ಅಷ್ಟೇ ಮುಖ್ಯ. ಹಾಗಾದರೆ ರೀ-ಸೇಲ್ ವ್ಯಾಲ್ಯೂ ಹೆಚ್ಚಿಸಲು ನಾವು ಗಮನಿಸಬೇಕಾದ 5 ಪ್ರಮುಖ ಟಿಪ್ಸ್‌ಗಳನ್ನು ತಿಳಿಯೋಣ.
ಲೊಕೇಷನ್ ಮತ್ತು ಕನೆಕ್ಟಿವಿಟಿ ನೋಡಿ
ಮನೆಯ ರೀ-ಸೇಲ್ ವ್ಯಾಲ್ಯೂ ಹೆಚ್ಚಿಸುವಲ್ಲಿ ಲೋಕೇಶನ್ ಅತಿ ಮುಖ್ಯ ಸಂಗತಿ ಎಂದರೆ ಕನೆಕ್ಟಿವಿಟಿ. ಮೆಟ್ರೋ, ಬಸ್ ಸ್ಟಾಪ್, ರೈಲು ನಿಲ್ದಾಣ ಹತ್ತಿರ ಇದ್ದರೆ ಮರು ಮಾರಾಟದ ವೇಳೆ ಖರೀದಿದಾರರಿಗೆ ನಿಮ್ಮ ಪ್ರಾಪರ್ಟಿ ಮೊದಲ ಆಯ್ಕೆ ಆಗುತ್ತದೆ. ಸುತ್ತಮುತ್ತ ಶಾಲೆ, ಕಾಲೇಜು, ಆಸ್ಪತ್ರೆ, ಸೂಪರ್ ಮಾರ್ಕೆಟ್ ಅಂತಹ ಸೌಕರ್ಯಗಳು ಇದ್ದರೆ ಮೌಲ್ಯ ಡಬಲ್ ಆಗುತ್ತದೆ. ಹೀಗಾಗಿ, ಮೊದಲೇ ರೀ-ಸೇಲ್ ವ್ಯಾಲ್ಯೂ ಬಗ್ಗೆ ಯೋಚನೆ ಮಾಡಿ ಪ್ರಾಪರ್ಟಿ ಖರೀದಿ ಮಾಡಿದ್ದರೆ ಮುಂದಿನ ದಿನಗಳಲ್ಲಿ ಲಾಭ ಸಿಗುವುದು ಖಚಿತ.
ಶುದ್ಧ ದಾಖಲೆ ಪತ್ರಗಳು ಇರಬೇಕು
ಎಷ್ಟೇ ಸುಂದರ ಮನೆ ಇದ್ದರೂ, ಕಾನೂನು ರೀತಿಯಲ್ಲಿ ದಾಖಲೆಗಳು ಸರಿಯಾಗಿ ಇರದಿದ್ದರೆ ಮರು ಮಾರಾಟ ಮಾಡುವುದು ಬಹಳಾ ಕಷ್ಟ. ಖಾತೆ ಪತ್ರ, ಎನ್‌ಕಂಬ್ರನ್ಸ್ ಸರ್ಟಿಫಿಕೇಟ್, ಟ್ಯಾಕ್ಸ್ ಕಟ್ಟಿರುವ ರಸೀತಿ ಇವು ಎಲ್ಲವೂ ಶುದ್ಧವಾಗಿರಬೇಕು. ಅಂದರೆ ದಾಖಲೆ ಪತ್ರಗಳಲ್ಲಿ ಯಾವುದೇ ತಕರಾರು ಇರಬಾರದು. ಬಿಡಿಎ, ಬಿಬಿಎಂಪಿ ಅಥವಾ ಗ್ರಾಮ ಪಂಚಾಯಿತಿ ಕಡೆಯಿಂದ ಮಾನ್ಯತೆ ಇದ್ದರೆ ಭವಿಷ್ಯದಲ್ಲಿ ಕೊಳ್ಳುವವರು ವಿಶ್ವಾಸದಿಂದ ಖರೀದಿ ಮಾಡುತ್ತಾರೆ. ಒಟ್ಟಾರೆ ಲೀಗಲ್ ಕ್ಲಿಯರ್ ಡಾಕ್ಯುಮೆಂಟ್ ಇದ್ದರೆ ಹೆಚ್ಚಿನ ರೀ-ಸೇಲ್ ವ್ಯಾಲ್ಯೂ ಸಿಗುತ್ತದೆ.
ಮನೆ ನಿರ್ವಹಣೆ ಮತ್ತು ನವೀಕರಣ ಕಡೆಗೆ ಗಮನ
ಮನೆಯ ರೀ-ಸೇಲ್ ವ್ಯಾಲ್ಯೂ ಹೆಚ್ಚಿಸಲು ಉತ್ತಮ ನಿರ್ವಹಣೆ ಬಹಳ ಮುಖ್ಯ. ಗೋಡೆಗಳಿಗೆ ಬಣ್ಣ ಚೆನ್ನಾಗಿ ಮಾಡಿಸುವುದು, ಯಾವುದೇ ಲೀಕೇಜ್ ಇರದಂತೆ ನೋಡಿಕೊಳ್ಳುವುದು, ಯಾವುದಾದರೂ ರಿಪೇರಿ ಕೆಲಸಗಳಿದ್ದರೆ ಅದನ್ನು ಸರಿ ಪಡಿಸಿ ನಂತರ ಮಾರಾಟಕ್ಕೆ ಇಡುವುದು ಸೂಕ್ತ. ಮಾಡ್ಯುಲರ್ ಕಿಚನ್, ವಾರ್ಡ್ ರೋಬ್ಸ್ ಮತ್ತು ಸೋಲಾರ್ ಅಂತಹ ಸೌಲಭ್ಯಗಳಿದ್ದರೆ ರೀ-ಸೇಲ್ ಮೌಲ್ಯ ಅಧಿಕ. ಇನ್ನು ಬಾತ್‌ರೂಮ್ ಮತ್ತು ಫ್ಲೋರಿಂಗ್ ಕ್ಲೀನ್ ಆಗಿದ್ದರೆ, ಕೊಂಡುಕೊಳ್ಳುವವರು ಆಕರ್ಷಿತರಾಗುತ್ತಾರೆ. ಇಂದಿನ ಮಾರ್ಕೆಟ್‌ನಲ್ಲಿ ಖರೀದಿದಾರರು ತಮ್ಮ ಮೊದಲ ಇಂಪ್ರೆಷನ್ ಆಧರಿಸಿಯೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗಾಗಿ 'ಔಟ್-ಲುಕ್ ಈಸ್ ವೆರಿ ವೆರಿ ಇಂಪಾರ್ಟಂಟ್'.
ಬೆಂಗಳೂರಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಲು ಕಾರಣವೇನು? ಡಿಮಾಂಡ್ vs ಸಪ್ಲೇ ಲೆಕ್ಕಾಚಾರ ಇಲ್ಲಿದೆ
ವಾಸ್ತು ಮತ್ತು ಇಂಟೀರಿಯರ್ ಪರಿಶೀಲಿಸಿ
ವಾಸ್ತು ದೋಷ ಇಲ್ಲದ ಮನೆಗಳ ಡಿಮಾಂಡ್ ಯಾವಾಗಲೂ ಹೆಚ್ಚು. ಈಸ್ಟ್ ಫೇಸಿಂಗ್ ಅಥವಾ ನಾರ್ತ್ ಫೇಸಿಂಗ್ ಕಡೆಗೆ ಮುಖ್ಯ ದ್ವಾರ ಇದ್ದರೆ, ಮೌಲ್ಯ ತಂತಾನೆಯೇ ಹೆಚ್ಚುತ್ತದೆ. ಜೊತೆಗೆ ಅತ್ಯುತ್ತಮ ಇಂಟೀರಿಯರ್ ಡಿಸೈನ್ ಹೊಂದಿದ್ದು, ನೈಸರ್ಗಿಕ ಬೆಳಕು ಮತ್ತು ಗಾಳಿ ಹೆಚ್ಚಿದ್ದರೆ, ಖರೀದಿದಾರರು ಅದಕ್ಕೆ ಹೆಚ್ಚಿನ ದರ ಕೊಡಲು ಕೂಡ ತಯಾರಿರುತ್ತಾರೆ. ಅಂದಹಾಗೆ, ರೀ-ಸೇಲ್ ಯೋಚನೆ ಮಾಡಿ ಇಂಟೀರಿಯರ್ ಡಿಸೈನ್ ಮಾಡಿಸಿದ್ದರೆ ಅದು ನಿಮ್ಮ ಲಾಂಗ್-ಟರ್ಮ್ ಇನ್ವೆಸ್ಟ್‌ಮೆಂಟ್ ಕೂಡ ಆಗುತ್ತದೆ.
ಹಳ್ಳಿ ಮನೆಗೆ ಇ-ಖಾತಾ ಮಾಡಿಸೋದು ಹೇಗೆ?
ಸವಲತ್ತುಗಳು ಮತ್ತು ಅಭಿವೃದ್ಧಿ ಗಮನಿಸಿ
ರೀ-ಸೇಲ್ ವ್ಯಾಲ್ಯೂ ಹೆಚ್ಚಿಸುವ ಇನ್ನೊಂದು ಪ್ರಮುಖ ಅಂಶ ಎಂದರೆ ಅಲ್ಲಿನ ಸವಲತ್ತುಗಳು ಮತ್ತು ಅಭಿವೃದ್ಧಿಯ ಅಂಶಗಳು. ಅಪಾರ್ಟ್‌ಮೆಂಟ್‌ನಲ್ಲಿ ಇರುವ ಮನೆಯಾದರೆ ಗೇಟೆಡ್ ಕಮ್ಯೂನಿಟಿ, ಸೆಕ್ಯೂರಿಟಿ, ಕ್ಲಬ್‌ಹೌಸ್, ಜಿಮ್, ಮಕ್ಕಳ ಆಟದ ಸ್ಥಳ ಮತ್ತು ವಾಕಿಂಗ್ ಏರಿಯಾ ಎಲ್ಲಾ ಇದ್ದರೆ, ಅದರ ಮೌಲ್ಯ ಹೆಚ್ಚುತ್ತದೆ. ಸುತ್ತಮುತ್ತ ಮೆಟ್ರೋ ಯೋಜನೆ, ಐಟಿ ಪಾರ್ಕ್, ಮಾಲ್ ಅಂತಹ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಅಂದರೆ, ಮುಂದಿನ ದಿನಗಳಲ್ಲಿ ರೀ-ಸೇಲ್ ವ್ಯಾಲ್ಯೂ ಇನ್ನಷ್ಟು ಹೆಚ್ಚುತ್ತದೆ. ಹೀಗಾಗಿ, ಆಯಾ ಸ್ಥಳದ ಅಭಿವೃದ್ಧಿಯನ್ನು ನೋಡಿಕೊಂಡು ಪ್ರಾಪರ್ಟಿ ಮೇಲೆ ಇನ್ವೆಸ್ಟ್ ಮಾಡಿದರೆ ರೀ-ಸೇಲ್ ಮೌಲ್ಯ ಖಂಡಿತ ಹೆಚ್ಚು ಸಿಗುತ್ತದೆ.
ಒಟ್ಟಾರೆ, ರೀ-ಸೇಲ್ ವ್ಯಾಲ್ಯೂ ಹೆಚ್ಚಿಸಲು ಲೊಕೇಷನ್ ಮತ್ತು ಕನೆಕ್ಟಿವಿಟಿ, ಲೀಗಲ್ ಕ್ಲಿಯರ್ ಡಾಕ್ಯುಮೆಂಟ್ಸ್, ನಿರ್ವಹಣೆ, ರೀನೊವೇಷನ್, ವಾಸ್ತು, ಇಂಟೀರಿಯರ್, ಮೂಲ ಸೌಲಭ್ಯಗಳು ಮತ್ತು ಸ್ಥಳೀಯ ಅಭಿವೃದ್ಧಿ ಯೋಜನೆಗಳು ಬಹಳಾ ಮುಖ್ಯ ಪಾತ್ರ ವಹಿಸುತ್ತವೆ.