ಬೆಂಗಳೂರು: ಮದುವೆಯಾಗುವ ದಂಪತಿಗಳಿಗೆ ಒಂದು ಶಾಕಿಂಗ್ ನ್ಯೂಸ್. ಇನ್ನು ಮುಂದೆ ಬೇಕಾಬಿಟ್ಟಿ ಉಡುಗೊರೆ (Wedding Gift Tax) ಸ್ವೀಕರಿಸುವಂತಿಲ್ಲ ಯಾಕೆಂದರೆ 2025ರಲ್ಲಿ ಮದುವೆಯಾಗುವ ದಂಪತಿಗಳು ಸ್ವೀಕರಿಸುವ ಉಡುಗೊರೆಗಳ (Gift tax rules) ಮೇಲೆ ತೆರಿಗೆ ವಿಧಿಸಲಾಗುತ್ತದೆ. ಇದರಲ್ಲಿ ನಿಕಟ ಸಂಬಂಧಿಗಳು ಅಂದರೆ ಪೋಷಕರು, ಒಡಹುಟ್ಟಿದವರು, ಅತ್ತೆ-ಮಾವಂದಿರು, ವಂಶಸ್ಥರು ನೀಡುವ ಉಡುಗೊರೆಗಳು ಮಾತ್ರ ತೆರಿಗೆ (Tax-Free) ಮುಕ್ತವಾಗಿರುತ್ತದೆ. ಸಂಬಂಧಿಕರಲ್ಲದವರು ನೀಡುವ 50,000 ರೂ.ಗಿಂತ ಹೆಚ್ಚಿನ ಮೌಲ್ಯದ ಉಡುಗೊರೆಗಳು ತೆರಿಗೆಗೆ ಒಳಪಡುತ್ತವೆ. ಇದನ್ನು ಇತರ ಮೂಲಗಳಿಂದ ಬರುವ ಆದಾಯವಾಗಿ ಪರಿಗಣಿಸಲಾಗುತ್ತದೆ.
ಎಲ್ಲರಿಗೂ ವಿವಾಹ ಕೇವಲ ಒಂದು ಆಚರಣೆ ಅಲ್ಲ. ಇದು ತೆರಿಗೆ ಮುಕ್ತವಾಗಿ ಉಡುಗೊರೆಗಳನ್ನು ಸ್ವೀಕರಿಸಲು ಕೂಡ ಅವಕಾಶ ಮಾಡಿಕೊಡುತ್ತದೆ. ಹೀಗಾಗಿ ಅತ್ಯಂತ ದುಬಾರಿ ಮೌಲ್ಯದ ಉಡುಗೊರೆಗಳನ್ನು ಹೆಚ್ಚಿನ ವಧುವರರು ಈ ಸಂದರ್ಭದಲ್ಲಿ ಸ್ವೀಕರಿಸುತ್ತಾರೆ.
ಇದನ್ನೂ ಓದಿ: ಮಗಳನ್ನೇ ನರಬಲಿ ಕೊಡಲು ತಾಯಿಯ ಸಂಚು? ಕುತ್ತಿಗೆ ಕಡಿದ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್
2025ರಲ್ಲಿ ಮದುವೆಯಾಗುವ ದಂಪತಿಗಳು ಸ್ವೀಕರಿಸುವ ವಿಶಿಷ್ಟ ಉಡುಗೊರೆಗಳನ್ನು ತೆರಿಗೆ ನಿಯಮಗಳಿಗಿಂತ ಮುಕ್ತಗೊಳಿಸಲಾಗಿದೆ. ಇದರಲ್ಲಿ ಸಂಬಂಧಿಕರಲ್ಲದವರಿಂದ 50,000 ರೂ. ಗಿಂತ ಹೆಚ್ಚಿನ ಮೌಲ್ಯದ ಉಡುಗೊರೆಗಳು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತವೆ. ಅವುಗಳನ್ನು ಇತರ ಮೂಲಗಳಿಂದ ಬರುವ ಆದಾಯ ಎಂದು ವರದಿ ಮಾಡಬೇಕು. ಇದರಲ್ಲಿ ನಿಕಟ ಸಂಬಂಧಿಗಳಿಂದ ಬರುವ ಉಡುಗೊರೆಗಳು ಮಾತ್ರ ವಿನಾಯಿತಿಗೆ ಅರ್ಹವಾಗಿವೆ. ಇದರಲ್ಲಿ ಪೋಷಕರು, ಒಡಹುಟ್ಟಿದವರು, ಅತ್ತೆ-ಮಾವಂದಿರು, ವಂಶಸ್ಥರು ಸೇರಿದ್ದಾರೆ.
ತೆರಿಗೆ ವಿನಾಯಿತಿಗೆ ಒಳಪಡುವ ಸಂಬಂಧಿ ಕುರಿತು ನ್ಯಾಯಾಲಯವು ಸಾಕಷ್ಟು ವಿಶಾಲವಾಗಿ ವ್ಯಾಖ್ಯಾನಿಸಿವೆ. ಇದಕ್ಕೆ ಸಂಬಂಧಿಸಿ 2025ರ ಮಾರ್ಚ್ ತಿಂಗಳಲ್ಲಿ ರಾಬಿನ್ ಅರೂಪ್ ಮುಖರ್ಜಿ ಮತ್ತು ಆದಾಯ ತೆರಿಗೆ ಅಧಿಕಾರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮುಂಬೈ ನ್ಯಾಯಮಂಡಳಿಯು ಸಂಬಂಧಿ ಎಂಬ ಪದವು ಮಲತಾಯಿ- ಸಹೋದರರನ್ನು ಸಹ ಒಳಗೊಳ್ಳುತ್ತದೆ. ಇವರಿಂದ ಪಡೆದ ಉಡುಗೊರೆಯೂ ತೆರಿಗೆ ಮುಕ್ತವಾಗಿದೆ ಎಂದು ತಿಳಿಸಿದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 56(2)ರ ಪ್ರಕಾರ ಮದುವೆಯ ಉಡುಗೊರೆಗಳನ್ನು ಯಾರೇ ಆಗಲಿ ನಗದು ಅಥವಾ ವಸ್ತುವಿನ ರೂಪದಲ್ಲಿ ನೀಡಲಾಗಿದ್ದರೆ ಅವುಗಳು ತೆರಿಗೆಗೆ ಒಳಪಡುವುದಿಲ್ಲ. ಆದರೆ ಇದು ಮದುವೆಯ ದಿನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಇದರಲ್ಲಿ ಉಡುಗೊರೆಯ ಉದ್ದೇಶವು ಹೆಚ್ಚು ಮುಖ್ಯವಾಗಿರುತ್ತದೆ ಎಂದು ತಿಳಿಸಿದೆ.
ಧೃವ ಸಂಜಯ್ ಗುಪ್ತಾ ವರ್ಸಸ್ ಆದಾಯ ತೆರಿಗೆ ಜಂಟಿ ಆಯುಕ್ತ ಪ್ರಕರಣದಲ್ಲಿ ಮುಂಬೈ ನ್ಯಾಯಮಂಡಳಿಯು, ಮದುವೆಯ ಅನಂತರ 10-15 ದಿನಗಳ ಒಳಗೆ ಸ್ವೀಕರಿಸಿದ ಉಡುಗೊರೆಗಳು ತೆರಿಗೆ ವಿನಾಯಿತಿ ಪಡೆದಿವೆ. ಯಾಕೆಂದರೆ ಅವು ಆ ಸಂದರ್ಭಕ್ಕೆ ಸಂಬಂಧಿಸಿದೆ.
ಇನ್ನು ಉಡುಗೊರೆ ನೀಡಿದವರು ಪುರಾವೆಗಳನ್ನು ಒದಗಿಸಿದರೆ ವಿವಾಹಪೂರ್ವ ಉಡುಗೊರೆಗಳನ್ನು ಸಹ ಮದುವೆ ಉಡುಗೊರೆಗಳಾಗಿ ಸ್ವೀಕರಿಸಲಾಗುತ್ತದೆ ಎಂದು ಮತ್ತೊಂದು ತೀರ್ಪಿನಲ್ಲಿ ತಿಳಿಸಿದೆ.
ಪೋಲೆಪಲ್ಲಿ ಆದಾಯ ತೆರಿಗೆ ಆಯುಕ್ತರು ವರ್ಸಸ್ ಡಾ. ನೀಲಾಂಬಾಯಿ ರಾಮಸ್ವಾಮಿ ಪ್ರಕರಣದಲ್ಲಿ ಮದುವೆಯ 11 ತಿಂಗಳ ಅನಂತರ ಸ್ವೀಕರಿಸಿದ ಮದುವೆಯ ಉಡುಗೊರೆಯನ್ನು ವಿನಾಯಿತಿಗೆ ಹೇಗೆ ಅನುಮತಿಸಲಾಗಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ದಾಖಲೆಗಳು ಮುಖ್ಯ
ಉಡುಗೊರೆಗಳಿಗೆ ತೆರಿಗೆ ವಿನಾಯಿತಿ ಪಡೆಯಲು ದಾಖಲೆಗಳು ಮುಖ್ಯವಾಗಿರುತ್ತದೆ. ಪರಿಶೀಲನೆ ತೆರಿಗೆ ಇಲಾಖೆ ಬಯಸಿದರೆ ಅದನ್ನು ಸಲ್ಲಿಸಬೇಕಾಗುತ್ತದೆ. ಉಡುಗೊರೆಗಳಿಗೆ ವಿನಾಯಿತಿ ಪಡೆಯಲು ಉಡುಗೊರೆ ಮತ್ತು ವಿವಾಹ ಸಂದರ್ಭದ ನಡುವಿನ ಸಮಯ ಕೂಡ ಮುಖ್ಯವಾಗಿರುತ್ತದೆ. ಇದಕ್ಕಾಗಿ ಆಮಂತ್ರಣ ಪತ್ರಗಳು, ಉಡುಗೊರೆ ನೀಡಿದವರ ದಾಖಲೆಗಳು, ಇ-ಮೇಲ್‌ಗಳು ಅಥವಾ ಉಡುಗೊರೆಗಳನ್ನು ಅಂಗೀಕರಿಸುವ ಸಂದೇಶಗಳು, ಬ್ಯಾಂಕ್ ನಮೂದುಗಳು ಮತ್ತು ಸಂದರ್ಭವನ್ನು ದೃಢೀಕರಿಸಲು ಸಹಾಯ ಮಾಡುವ ಯಾವುದೇ ಫೋಟೋಗಳು ಅಥವಾ ವಿಡಿಯೊಗಳನ್ನು ಇಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ.
ಇದನ್ನೂ ಓದಿ: Epstein Files: ಬಯಲಾಗುತ್ತಾ ಜೆಫ್ರಿ ಫೈಲ್ಸ್‌ನಲ್ಲಿರುವ ಅತೀ ದೊಡ್ಡ ಲೈಂಗಿಕ ಹಗರಣ? ಕಡತ ಬಿಡುಗಡೆಗೆ ಟ್ರಂಪ್ ಒಪ್ಪಿಗೆ
ಮದುವೆ ಉಡುಗೊರೆಗಳನ್ನು ಸ್ವೀಕರಿಸುವ ಸಮಯದಲ್ಲಿ ಮಾತ್ರ ತೆರಿಗೆ ಮುಕ್ತವಾಗಿರುತ್ತದೆ. ಉಡುಗೊರೆಯಾಗಿ ನೀಡಿದ ಬೆಲೆಬಾಳುವ ವಸ್ತುಗಳ ಮಾರಾಟವು ಆದಾಯವಾಗಿ ಪರಿಗಣಿಸಲ್ಪಡುತ್ತದೆ. ಇದಕ್ಕೆ ತೆರಿಗೆ ವಿಧಿಸುವ ಅವಕಾಶವಿದೆ. ವಸ್ತುಗಳ ಮೌಲ್ಯಮಾಪನ ನಡೆಸಲು ಹಿಂದಿನ ದಾಖಲೆಗಳನ್ನು ಕೂಡ ಪರಿಗಣಿಸಲಾಗುತ್ತದೆ.