ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಗಳನ್ನೇ ನರಬಲಿ ಕೊಡಲು ತಾಯಿಯ ಸಂಚು? ಕುತ್ತಿಗೆ ಕಡಿದ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌

Bengaluru News: ಗಂಡನನ್ನು ಬಿಟ್ಟು ತವರು ಮನೆಗೆ ಬಂದಿದ್ದ ಮಗಳನನ್ನು ಹೆತ್ತ ತಾಯಿಯೇ ಕುತ್ತಿಗೆ ಕಡಿದ ಘಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ತಾಯಿ ತನ್ನ ಮಗಳನ್ನು ನರಬಲಿ ಕೊಡಲು ಮುಂದಾಗಿದ್ದಳು ಎಂಬ ಅನುಮಾನ ಮೂಡುತ್ತಿದೆ.

ಮಗಳನ್ನೇ ನರಬಲಿ ಕೊಡಲು ಸಂಚು ನಡೆಸಿದ್ದಳಾ ಪಾಪಿ ತಾಯಿ?

ಘಟನೆಯ ದೃಶ್ಯ -

Vishakha Bhat
Vishakha Bhat Nov 20, 2025 7:40 AM

ಬೆಂಗಳೂರು: ಗಂಡನನ್ನು ಬಿಟ್ಟು ತವರು ಮನೆಗೆ ಬಂದಿದ್ದ ಮಗಳನನ್ನು ಹೆತ್ತ ತಾಯಿಯೇ ಕುತ್ತಿಗೆ ಕಡಿದ ಘಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ತಾಯಿ ತನ್ನ ಮಗಳನ್ನು ನರಬಲಿ ಕೊಡಲು (Crime News) ಮುಂದಾಗಿದ್ದಳು ಎಂಬ ಅನುಮಾನ ಮೂಡುತ್ತಿದೆ. ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಅಗ್ರಹಾರ ಲೇಔಟ್ ಹರಿಹರೇಶ್ವರ ದೇವಸ್ಥಾನದ ಬಳಿ ಘಟನೆ ನಡೆದಿದ್ದು, ತಾಯಿ ಸರೋಜಮ್ಮ ತನ್ನ ಮಗಳು ರಮ್ಯ(22)ಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಬಂದು ಮಚ್ಚಿನಿಂದ ಮಗಳ ಕುತ್ತಿಗೆಗೆ ಕಡಿದಿದ್ದಾಳೆ. ನಮಸ್ಕರಿಸುವಾಗ ಮಗಳ ಕುತ್ತಿಯನ್ನು ಕತ್ತರಿಸಿಸಲು ತಾಯಿ ಪ್ರಯತ್ನಿಸಿದ್ದಾಳೆ.

ರಮ್ಯಾ ಗಂಡನ ಜೊತೆ ಆನೇಕಲ್‌ನಲ್ಲಿ ವಾಸವಿದ್ದಳು. ರಮ್ಯಾಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಗಂಡ ಸೋಮಶೇಖರ್ ಜೊತೆಗೆ ರಮ್ಯಾ ತಾಯಿ ಮನೆಗೆ ಬಂದಿದ್ದಳು. ಮೂರು ದಿನಗಳ ಹಿಂದೆ ತವರು ಮನೆಗೆ ಬಂದಿದ್ರು. ಬೆಳಗಿನ ಜಾವ 3.45 ಗಂಟೆಗೆ ಪೂಜೆಗೆ ಅಂತಾ ಮನೆಯಿಂದ ಸ್ವಲ್ಪ ದೂರ ಇರುವ ದೇವಸ್ಥಾನಕ್ಕೆ ರಮ್ಯಾಳನ್ನು ತಾಯಿ ಸುಜಾತ ಕರೆ ತಂದಿದ್ದಳು. ದೇವರಿಗೆ ನಮಸ್ಕರಿಸುವಂತೆ ಹೇಳಿದ್ದಾರೆ. ರಮ್ಯಾ ನಮಸ್ಕಾರ ಮಾಡುವಾಗ ಆಕೆಯ ಕುತ್ತಿಗೆ ಕುತ್ತಿಗೆಗೆ ಮಚ್ಚಿನಿಂದ ಕಡಿದಿದ್ದಾಳೆ. ಘಟನೆ ನಂತರ ಸ್ಥಳದಿಂದ ಎಸ್ಕೇಪ್ ಆಗಿದ್ದಾಳೆ. ಸದ್ಯ ಪೊಲೀಸರು ಸುಜಾತಾಳಿಗೋಸ್ಕರ ಹುಡುಕಾಟ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Missing Case: 2023ರಲ್ಲಿಯೇ ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದ ಮಹಿಳೆ ಮನೆಗೆ ವಾಪಸ್‌, ಆಕೆಯ ಕೊಲೆ ಆರೋಪದ ಮೇಲೆ ಜೈಲಿನಲ್ಲಿರುವ ನಾಲ್ವರು

ಕಳೆದ ಒಂದು ತಿಂಗಳಿನಿಂದ ದೇವಸ್ಥಾನಕ್ಕೆ ಬಂದು ಬೆಳಗಿನಜಾವ ನಾಲ್ಕುಗಂಟೆಗೆ ಸುಜಾತ ಪೂಜೆ ಶುರು ಮಾಡುತ್ತಿದ್ದಳು. ಕಳೆದ ಎರಡು ಮೂರು ದಿನಗಳ ಹಿಂದಷ್ಟೇ ಮಗಳು ರಮ್ಯಾಳನ್ನ ಮನೆಗೆ ಕರೆಸಿಕೊಂಡಿದ್ದಳು. ಇಬ್ಬರೂ ಕೂಡ ಮೂರ್ನಾಲ್ಕು ದಿನಗಳಿಂದ ಪೂಜೆಗೆ ಬರ್ತಿದ್ರು. ಅದ್ರಂತೆ ಇಂದು ಬೆಳಗಿನ ಜಾವ ಕೂಡ ಇಬ್ಬರೂ ಪೂಜೆಗೆ ಬಂದಿದ್ರು. ಸಿಸಿಟಿವಿಯಲ್ಲಿ ಮಗಳೇ ಮಚ್ಚುಗಳನ್ನ ಹಿಡಿದುಕೊಂಡು ಬಂದಿದ್ದು ಪತ್ತೆಯಾಗಿದೆ. ಈ ವೇಳೆ ಇಬ್ಬರೂ ಕೂಡ ಒಬ್ಬರಿಗೊಬ್ಬರು ಹಲ್ಲೆ ಮಾಡಿಕೊಂಡಿರುವ ಶಂಕೆ ಇದೆ.

ನಮಸ್ಕರಿಸುವ ವೇಳೆ ರಮ್ಯಾ ಕುತ್ತಿಗೆಗೆ ಮಚ್ಚು ಬೀಸಿರುವ ಸುಜಾತ, ನಂತರ ರಮ್ಯಾ ಕೂಡ ಸುಜಾತ ಮೇಲೆ ಹಲ್ಲೆ ಮಾಡಿರುವ ಮಾಹಿತಿ ಇದೆ. ಹಲ್ಲೆ ಪರಿಣಾಮ ಸುಜಾತ ಹಣೆಗೆ ಗಾಯವಾಗಿದೆ. ಸುಜಾತ‌‌ ಗಾಯವಾಗಿ ರಕ್ತ ಸುರಿಸಿಕೊಂಡೇ ದೇವಸ್ಥಾನದಿಂದ ಕಾಲ್ಕಿತ್ತಿದ್ದಳು. ಸುಸ್ತಾಗಿ ನೇರವಾಗಿ ಮನೆಗೆ ಹೋಗಿದ್ದ ಸುಜಾತ. ಈ ಬಗ್ಗೆ ಮಾಹಿತಿ ಪಡೆದು ಸುಜಾತಳನ್ನ ವಶಪಡೆದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸ್ರಿಗೆ ಸಾಕಷ್ಟು ಅನುಮಾನ‌‌ ಮೂಡಿದೆ. ಇಬ್ಬರೂ ಒಬ್ಬರಿಗೊಬ್ಬರು ಬಲಿ ಕೊಟ್ಟುಕೊಳ್ಳಲು ಮುಂದಾಗಿದ್ರಾ ಅನ್ನೋ ಅನುಮಾನ ಕೂಡ ಇದೆ. ಸದ್ಯ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಸಂಪಿಗೇಹಳ್ಳಿ ಪೊಲೀಸರು.