ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತ- ಅಮೆರಿಕ ವ್ಯಾಪಾರ ಒಪ್ಪಂದದಿಂದ ಯಾವ ವಲಯಕ್ಕೆ ಹೆಚ್ಚಿನ ಲಾಭ? ಇಲ್ಲಿದೆ ಸಂಪೂರ್ಣ ವಿವರ

ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದಿಂದಾಗಿ ಯಾವ ಭಾರತೀಯ ವಲಯಗಳಿಗೆ ಹೆಚ್ಚಿನ ಲಾಭವಿದೆ ಎನ್ನುವ ಕುರಿತು ಚರ್ಚೆಗಳು ಪ್ರಾರಂಭವಾಗಿವೆ. ರೈತರಿಗೆ ಇದು ತುಂಬಾ ಪ್ರಯೋಜನಕಾರಿ ಎಂದು ಸರ್ಕಾರ ಹೇಳುತ್ತಿದ್ದರೂ ಇವರಲ್ಲೂ ಯಾವ ವಲಯದ ರೈತರು ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ ? ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಸಂಗ್ರಹ ಚಿತ್ರ

ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ (India-US Trade Deal) ಮಾತುಕತೆಗಳು ಪೂರ್ಣಗೊಂಡು ಘೋಷಣೆಯಾದ ಬಳಿಕ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Commerce minister Piyush Goyal) ಅವರು ಮಂಗಳವಾರ ಈ ಕುರಿತು ಘೋಷಣೆ ಮಾಡಿ ಇದು ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಿಂದ ಡೈರಿ ಮತ್ತು ಕೃಷಿ ಕ್ಷೇತ್ರಗಳ ಸಂಪೂರ್ಣ ರಕ್ಷಣೆಯಾಗಲಿದೆ ಎಂದು ತಿಳಿಸಿದರು. ಅಮೆರಿಕವು ಭಾರತೀಯ ಸರಕುಗಳ ಮೇಲಿನ ಸುಂಕವನ್ನು (US tariff) ಶೇ. 50ರಿಂದ 18ಕ್ಕೆ ಇಳಿಸಲು ಒಪ್ಪಿಕೊಂಡ ಬಳಿಕ ಹಲವಾರು ರಫ್ತು ಆಧಾರಿತ ಕಾರ್ಮಿಕ ವಲಯಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ.

ಯಾರಿಗೆ ಹೆಚ್ಚಿನ ಲಾಭ?

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದ ಹಲವಾರು ವಲಯಗಳಿಗೆ ಲಾಭವಾಗಲಿದೆ ಎನ್ನಲಾಗಿದೆ. ಅವುಗಳ ಕುರಿತು ವಿಸ್ತೃತ ವಿವರಣೆ ಇಲ್ಲಿದೆ.

ʼʼಅತ್ಯುತ್ತಮ ಒಪ್ಪಂದʼʼ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದೇನು?

ಕೃಷಿ ಮತ್ತು ಡೈರಿ

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಭಾರತವು ತನ್ನ ಸೂಕ್ಷ್ಮ ಡೈರಿ ಮತ್ತು ಕೃಷಿ ಕ್ಷೇತ್ರಗಳನ್ನು ಸಂಪೂರ್ಣವಾಗಿ ರಕ್ಷಿಸಿಕೊಂಡಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ಡೈರಿ ಉತ್ಪನ್ನಗಳು, ಹಲವಾರು ಪ್ರಮುಖ ಕೃಷಿ ಸರಕುಗಳು ವಸ್ತುಗಳನ್ನು ಸುಂಕದಿಂದ ಹೊರಗಿಡಲಾಗಿದೆ ಎಂದು ಅವರು ಹೇಳಿದರು.

ಜವಳಿ ಮತ್ತು ಉಡುಪು

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದಾಗಿ ಜವಳಿ ಮತ್ತು ಬಟ್ಟೆ ವಲಯಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ. ಇದರ ಹೆಚ್ಚಿನ ಸಾಗಣೆಗಳಿಗೆ ಯುಎಸ್ ಸುಂಕ ಕಡಿತ ಮಾಡಿದೆ. ಭಾರತದ ಏಕೈಕ ಅತಿದೊಡ್ಡ ಜವಳಿ ಮತ್ತು ಉಡುಪು ಮಾರುಕಟ್ಟೆ ಅಮೆರಿಕವಾಗಿದ್ದು, ಶೇ. 29 ರಷ್ಟನ್ನು ರಫ್ತನ್ನು ಹೊಂದಿದೆ.

ಚರ್ಮ ಮತ್ತು ಪಾದರಕ್ಷೆಗಳು

ಚರ್ಮದ ಸರಕುಗಳು ಮತ್ತು ಪಾದರಕ್ಷೆಗಳ ರಫ್ತುದಾರರಿಗೆ ಸುಂಕ ಕಡಿತವು ಹೆಚ್ಚಿನ ಪ್ರಯೋಜನವನ್ನು ಕೊಡಲಿದೆ. ಭಾರತೀಯ ಚರ್ಮ ಮತ್ತು ಪಾದರಕ್ಷೆ ಉತ್ಪನ್ನಗಳಿಗೆ ಯುಎಸ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಉತ್ತಮ ಬೆಲೆ ನಿಗದಿಯಾಗಲಿದ್ದು, ಸಣ್ಣ ಮತ್ತು ಮಧ್ಯಮ ಗಾತ್ರದ ರಫ್ತು ಘಟಕಗಳಿಗೆ ಪುನರುಜ್ಜೀವನ ದೊರೆಯಲಿದೆ.

ಗೃಹಾಲಂಕಾರ ಮತ್ತು ಕರಕುಶಲ ವಸ್ತುಗಳು

ಯುಎಸ್ ಗೆ ರಫ್ತಾಗುವ ಗೃಹಾಲಂಕಾರ, ಕಾರ್ಪೆಟ್‌ಗಳು ಮತ್ತು ಕರಕುಶಲ ವಸ್ತುಗಳ ತಯಾರಕರಿಗೆ ಇದು ಗಮನಾರ್ಹವಾಗಿ ಪ್ರಯೋಜನವನ್ನು ನೀಡಲಿದೆ. ಕಾರ್ಪೆಟ್ ರಫ್ತುದಾರರು ವಾರ್ಷಿಕವಾಗಿ ಸುಮಾರು 2 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಯುಎಸ್‌ಗೆ ರಫ್ತು ಮಾಡುತ್ತಾರೆ. ಸುಂಕ ಕಡಿತವು ಲಕ್ಷಾಂತರ ಕುಶಲಕರ್ಮಿಗಳು ಮತ್ತು ನೇಕಾರರಿಗೆ ನೇರವಾಗಿ ಪ್ರಯೋಜನ ನೀಡಲಿದೆ.

ಸಮುದ್ರ ಉತ್ಪನ್ನಗಳು ಮತ್ತು ಸಂಸ್ಕರಿಸಿದ ಆಹಾರ

ಸಂಸ್ಕರಿತ ಕೃಷಿ ಸರಕುಗಳ ಜೊತೆಗೆ ಸಮುದ್ರ ಉತ್ಪನ್ನಗಳು, ವಿಶೇಷವಾಗಿ ಸೀಗಡಿ ಯುಎಸ್ ಸುಂಕ ಕಡಿತದಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಸ್ಥಿರ ಬೇಡಿಕೆಯ ಹೊರತಾಗಿ ಹೆಚ್ಚಿದ ಸುಂಕಗಳಿಂದಾಗಿ ಸಮುದ್ರಾಹಾರ ಮತ್ತು ಸಂಸ್ಕರಿಸಿದ ಆಹಾರ ರಫ್ತಿನ ಮೇಲೆ ಪರಿಣಾಮ ಬೀರಿತ್ತು. ಆದರೆ ಇದೀಗ ಇದಕ್ಕೆ ಮತ್ತೆ ಉತ್ತೇಜನ ಸಿಗುವ ನಿರೀಕ್ಷೆ ಇದೆ.

ರಾಸಾಯನಿಕ, ಪ್ಲಾಸ್ಟಿಕ್‌ ಮತ್ತು ರಬ್ಬರ್ ಸರಕುಗಳು

ಕೈಗಾರಿಕಾ ಮತ್ತು ಮಧ್ಯಂತರ ಸರಕುಗಳಿಗೂ ಸುಂಕ ಕಡಿತವು ವ್ಯಾಪಕವಾಗಿ ಪ್ರಯೋಜನ ನೀಡಲಿದೆ. ಮುಖ್ಯವಾಗಿ ಸಾವಯವ ರಾಸಾಯನಿಕಗಳು, ಪ್ಲಾಸ್ಟಿಕ್‌ಗಳು, ರಬ್ಬರ್ ಉತ್ಪನ್ನಗಳು ನೇರವಾಗಿ ಪೂರ್ವ ಮತ್ತು ಆಗ್ನೇಯ ಏಷ್ಯಾದ ಪೂರೈಕೆದಾರರೊಂದಿಗೆ ಸ್ಪರ್ಧಿಸಲಿದೆ.

ರತ್ನಗಳು ಮತ್ತು ಆಭರಣಗಳು

ರತ್ನ, ಆಭರಣ ರಫ್ತುದಾರರಿಗೂ ಸುಂಕ ಕಡಿತವು ಪ್ರಯೋಜನ ಕೊಡಲಿದೆ. ವಿಶೇಷವಾಗಿ ವಜ್ರ ಮತ್ತು ಸ್ಟಡ್ಡ್ ಆಭರಣಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗಲಿದೆ. ಸೂರತ್ ಮತ್ತು ಮುಂಬೈನಂತಹ ಪ್ರಮುಖ ರಫ್ತು ಕೇಂದ್ರಗಳು ಅಮೆರಿಕ ಸುಂಕ ಏರಿಕೆಯ ಬಳಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯನ್ನು ಎದುರಿಸಿದ್ದವು. ಆದರೆ ಈಗ ಅಮೆರಿಕದ ಬೇಡಿಕೆ ಸ್ಥಿರಗೊಳ್ಳುವ ಮತ್ತು ಬೆಳೆಯುವ ನಿರೀಕ್ಷೆ ಇದೆ.

ಅಮೆರಿಕ- ಭಾರತ ವ್ಯಾಪಾರ ಒಪ್ಪಂದ: ರೈತರ ವಿಚಾರದಲ್ಲಿ ರಾಜಿ ಇಲ್ಲ, ವೆನೆಜುವೆಲಾ ತೈಲ ಖರೀದಿ ಮಾಡೋದಿಲ್ಲ

ಯಂತ್ರೋಪಕರಣ

ಸುಂಕ ಕಡಿತದ ಪ್ರಯೋಜನವೂ ಯಂತ್ರೋಪಕರಣ ಮತ್ತು ವಿಮಾನ ಘಟಕ ರಫ್ತಿನ ಮೇಲೂ ಪರಿಣಾಮ ಬೀರಲಿದೆ. ಇದು ಭಾರತದಲ್ಲಿ ಬೆಳೆಯುತ್ತಿರುವ ಉತ್ಪಾದನಾ ನೆಲೆಗೆ ಉತ್ತೇಜನ ಕೊಡಲಿದೆ.

ಔಷಧ, ಮೊಬೈಲ್ ಫೋನ್‌ಗಳು

ಈಗಾಗಲೇ ಔಷಧ ಮತ್ತು ಮೊಬೈಲ್ ಫೋನ್‌ಗಳು ಯುಎಸ್ ಸುಂಕಗಳಿಂದ ಹೆಚ್ಚಾಗಿ ವಿನಾಯಿತಿ ಪಡೆದಿವೆ. ವ್ಯಾಪಾರ ಒಪ್ಪಂದದಿಂದ ಇವುಗಳು ಸುಂಕ ಮುಕ್ತ ಪ್ರವೇಶ ಪಡೆಯುವುದರಿಂದ ಭಾರತದ ಎರಡು ದೊಡ್ಡ ರಫ್ತು ವರ್ಗಗಳು ಖಚಿತ ಲಾಭವನ್ನು ಪಡೆಯಲಿದೆ.

ವಿದ್ಯಾ ಇರ್ವತ್ತೂರು

View all posts by this author