ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Share Market: ಸೆನ್ಸೆಕ್ಸ್‌ 513 ಅಂಕ ಜಿಗಿತ; ನಿಫ್ಟಿ 26,050ಕ್ಕೆ ಏರಿಕೆ

Stock Market: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಬುಧವಾರ 513 ಅಂಕ ಏರಿಕೆಯಾಗಿದೆ. 85,186ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದೆ. ನಿಫ್ಟಿ143 ಅಂಕ ಏರಿಕೆಯಾಗಿ 26,052ಕ್ಕೆ ವೃದ್ಧಿಸಿದೆ. ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಬುಧವಾರ ಆರಂಭದಿಂದಲೇ ಏರುಗತಿಯಲ್ಲಿತ್ತು. ಇದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

ಸೆನ್ಸೆಕ್ಸ್‌ 513 ಅಂಕ ಜಿಗಿತ; ನಿಫ್ಟಿ 26,050ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ. -

Ramesh B
Ramesh B Nov 19, 2025 9:14 PM

ಮುಂಬೈ, ನ. 19: ಮುಂಬೈ ಷೇರು ಮಾರುಕಟ್ಟೆ (Share Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ (Sensex) ಬುಧವಾರ 513 ಅಂಕ ಏರಿಕೆಯಾಗಿದೆ. 85,186ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದೆ. ನಿಫ್ಟಿ (Nifty) 143 ಅಂಕ ಏರಿಕೆಯಾಗಿ 26,052ಕ್ಕೆ ವೃದ್ಧಿಸಿದೆ. ಸೆನ್ಸೆಕ್ಸ್‌ ಮತ್ತು ನಿಫ್ಟಿ ಎರಡೂ ಬುಧವಾರ ಆರಂಭದಿಂದಲೇ ಏರುಗತಿಯಲ್ಲಿತ್ತು. ಐಟಿ ಮತ್ತು ಬ್ಯಾಂಕಿಂಗ್‌ ಷೇರುಗಳ ದರಗಳು ಏರಿಕೆ ದಾಖಲಿಸಿತು. ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ವಲಯದಲ್ಲಿ ಮಿಶ್ರ ಫಲಿತಾಂಶ ಕಂಡು ಬಂದಿತು. ಒಟ್ಟಾರೆಯಾಗಿ ಬಿಎಸ್‌ಇ ಲಿಸ್ಟೆಡ್‌ ಷೇರುಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ 1 ಲಕ್ಷ ಕೋಟಿ ರುಪಾಯಿ ಏರಿಕೆ ಆಯಿತು. 474 ಲಕ್ಷ ಕೋಟಿ ರುಪಾಯಿಯಿಂದ 475 ಲಕ್ಷ ಕೋಟಿ ರುಪಾಯಿಗೆ ಜಿಗಿಯಿತು.

ಸೆನ್ಸೆಕ್ಸ್-ನಿಫ್ಟಿ ಏರಿಕೆಗೆ ಕಾರಣವೇನು? ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಅಂತಿಮ ಹಂತದಲ್ಲಿ ಇರುವುದು ಪ್ರಗತಿದಾಯಕವಾಗಿದೆ. ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರಭಾವ ಬೀರಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯೆಲ್‌ ಕೂಡ ಈ ಕುರಿತ ಸುಳಿವು ನೀಡಿದ್ದಾರೆ. ಈ ಒಪ್ಪಂದದಲ್ಲಿ ರೈತರು, ಸಣ್ಣ ಉದ್ಯಮಿಗಳು ಮತ್ತು ದೇಶದ ಹಿತಾಸಕ್ತಿಯನ್ನು ರಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ಫೋಸಿಸ್‌, ಐಸಿಐಸಿಐ ಬ್ಯಾಂಕ್‌, ಎಚ್‌ಸಿಎಲ್‌ ಟೆಕ್‌ ಮತ್ತುಟಿಸಿಎಸ್‌ ಷೇರು ದರ ಏರಿಕೆ ದಾಖಲಿಸಿತು. ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ ಬಡ್ಡಿ ದರವನ್ನು ಇಳಿಸುವ ಸಾಧ್ಯತೆ ಇದೆ. ಇದು ಸಕಾರಾತ್ಮಕ ಪ್ರಭಾವ ಬೀರಿದೆ.

ನ.14ರಂದು ಕ್ಯಾಪಿಲರಿ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್‌ನ ಐಪಿಓ ಆರಂಭ, ಪ್ರತಿ ಈಕ್ವಿಟಿ ಷೇರಿಗೆ 549- 577 ರೂ ಬೆಲೆ ನಿಗದಿ

ನಿಫ್ಟಿ 50 ಇಂಡೆಕ್ಸ್‌ನಲ್ಲಿ ಲಾಭ ಗಳಿಸಿದ ಪ್ರಮುಖ ಷೇರುಗಳು: ಎಚ್‌ಸಿಎಲ್‌ ಟೆಕ್ನಾಲಜೀಸ್‌, ಇನ್ಫೋಸಿಸ್‌, ಮ್ಯಾಕ್ಸ್‌ ಹೆಲ್ತ್‌ ಕೇರ್‌ ಇನ್‌ ಸ್ಟಿಟ್ಯೂಟ್‌.

ನಿಫ್ಟಿ 50 ಇಂಡೆಕ್ಸ್‌ನಲ್ಲಿ ನಷ್ಟಕ್ಕೀಡಾದ ಪ್ರಮುಖ ಷೇರುಗಳು: ಟಾಟಾ ಮೋಟಾರ್ಸ್‌ ಪ್ಯಾಸೆಂಜರ್‌ ವೆಹಿಕಲ್ಸ್‌, ಕೋಲ್‌ ಇಂಡಿಯಾ, ಮಾರುತಿ ಸುಜುಕಿ.

ಸೆಕ್ಟರ್‌ಗಳ ಪೈಕಿ ನಿಫ್ಟಿ ಐಟಿ, ನಿಫ್ಟಿ ಪಿಎಸ್‌ಯು ಬ್ಯಾಂಕ್‌ ಷೇರು ದರ ಏರಿತು. ಬಿಎಸ್‌ಇನಲ್ಲಿ ಜೈಪ್ರಕಾಶ್‌ ಪವರ್‌ ವೆಂಚರ್ಸ್‌, ಸೆಕ್ಯೂರ್‌ಕ್ಲೌಡ್‌ ಟೆಕ್ನಾಲಜೀಸ್‌, ಸಂಭವ್‌ ಮೀಡಿಯಾ, ಜೆನೆರಿಕ್‌ ಎಂಜಿನಿಯರಿಂಗ್‌ ಕನ್‌ ಸ್ಟ್ರಕ್ಷನ್‌ ಷೇರು ದರದಲ್ಲಿ 15% ಗೂ ಹೆಚ್ಚು ಏರಿಕೆ ಆಯಿತು. ಬಿಎಸ್‌ಇನಲ್ಲಿ 4,346 ಷೇರುಗಳ ಪೈಕಿ 1,841 ಷೇರುಗಳು ಲಾಭ ಗಳಿಸಿದರೆ, 2,338 ಷೇರುಗಳು ನಷ್ಟಕ್ಕೀಡಾಯಿತು.