ತಮಿಳು Saregamapa ಶೋನಲ್ಲಿ ಕನ್ನಡತಿಯ ಹವಾ! ಫಿನಾಲೆ ತಲುಪಿದ ಗಾಯಕಿ ಶಿವಾನಿ ನವೀನ್
Saregamapa Seniors Season 5 Finale: ಚಿಕ್ಕಮಗಳೂರಿನ ಪ್ರತಿಭೆ ಶಿವಾನಿ ನವೀನ್ ಅವರು ತಮಿಳಿನ 'ಸರಿಗಮಪ ಸೀನಿಯರ್ಸ್ ಸೀಸನ್ 5' ಫಿನಾಲೆ ತಲುಪಿದ್ದಾರೆ. ಈಗಾಗಲೇ ಕನ್ನಡದ 'ಸರಿಗಮಪ ಲಿಟಲ್ ಚಾಂಪ್ಸ್ 19' ಶೋನಲ್ಲಿ ರನ್ನರ್ ಅಪ್ ಆಗಿದ್ದ ಶಿವಾನಿ, ತಮ್ಮ ವಿಶಿಷ್ಟ ಕಂಠಸಿರಿಯಿಂದ ತಮಿಳು ವೀಕ್ಷಕರ ಮನ ಗೆದ್ದಿದ್ದಾರೆ.
-
'ಸರಿಗಮಪ' ಲಿಟಲ್ ಚಾಂಪ್ಸ್ ಸೀಸನ್ 19ರ ಫಸ್ಟ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ಶಿವಾನಿ ನವೀನ್ (Singer Shivani Naveen) ಅವರು ಈಗ ತಮಿಳು 'ಸರಿಗಮಪ' ಶೋನಲ್ಲೂ ಜಾದೂ ಮಾಡಿದ್ದಾರೆ. ಈಗಾಗಲೇ ಅವರು Saregamapa Seniors Season 5 ಶೋನಲ್ಲಿ ಶಿವಾನಿ ನವೀನ್ ಅವರು ಫಿನಾಲೆ ತಲುಪಿದ್ದು, ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದ್ಧಾರೆ.
ಫಿನಾಲೆ ರೀಚ್ ಆದ ಶಿವಾನಿ
ಚಿಕ್ಕಮಗಳೂರು ಮೂಲದ ಪ್ರತಿಭಾನ್ವಿತ ಗಾಯಕಿ ಶಿವಾನಿ ನವೀನ್ ಅವರು ಈಗ ತಮಿಳಿನ 'ಸರಿಗಮಪ' ಶೋನಲ್ಲಿ ಎಲ್ಲರ ಮೋಡಿ ಮಾಡುತ್ತಲೇ 5ನೇ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದಾರೆ. ಈ ಬಾರಿಯ ಫಿನಾಲೆಯ ಗೆಲ್ಲುವ ಸ್ಪರ್ಧಿಗಳ ಸಾಲಿನಲ್ಲಿ ಶಿವಾನಿ ಕೂಡ ಮುಂಚೂಣಿಯಲ್ಲಿದ್ದಾರೆ. ಒಂದು ವೇಳೆ ಶಿವಾನಿ ಗೆದ್ದುಬಿಟ್ಟರೆ, ಅದು ದೊಡ್ಡ ದಾಖಲೆಯಾಗಲಿದೆ.
Lahari Mahesh: ಸರಿಗಮಪ ಸೆಮಿ ಫೈನಲ್ನಲ್ಲಿ ಹೊರಬಿದ್ದ ಲಹರಿಗೆ ಬಂಪರ್ ಚಾನ್ಸ್ ಕೊಟ್ಟ ಅರ್ಜುನ್ ಜನ್ಯ
ಕಂಠಸಿರಿಯಿಂದ ಮೋಡಿ ಮಾಡಿರುವ ಪ್ರತಿಭೆ
'ಸರಿಗಮಪ ಸೀನಿಯರ್ಸ್ ಸೀಸನ್ 5' ಶೋನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಶಿವಾನಿ ಆರಂಭದಿಂದಲೂ ಅಲ್ಲಿನ ವೀಕ್ಷಕರ ಗಮನಸೆಳೆದುಕೊಂಡೇ ಬಂದರು. ಪ್ರತಿಬಾರಿಯೂ ತಮ್ಮ ಕಂಠಸಿರಿಯಿಂದ ಸಂಗೀತಪ್ರಿಯರ ಮನಗೆದ್ದರು. 'ಸರಿಗಮಪ ಸೀನಿಯರ್ಸ್ ಸೀಸನ್ 5' ಶೋ ಕಳೆದ ಮೇ 24ರಿಂದ ಆರಂಭವಾಗಿದ್ದು, ಮೆಗಾ ಆಡಿಷನ್ ರೌಂಡ್‌ನಲ್ಲಿ ತಮಿಳಿನ 'ವಾಗೈ ಸೂಡ ವಾ' ಸಿನಿಮಾದ 'ಪೋರಾನೇ ಪೋರಾನೇ' ಹಾಡನ್ನು ಶಿವಾನಿ ಹಾಡಿದ್ದರು. ಅಂದು ಆ ಹಾಡಿಗೆ ಜಡ್ಜ್‌ಗಳಾದ ಶ್ರೀನಿವಾಸ್, ಶ್ವೇತಾ ಮೋಹನ್, ಟಿ. ರಾಜೇಂದರ್ ತಲೆದೂಗಿದ್ದರು. ನಂತರ ಅದೇ ವೇದಿಕೆಯಲ್ಲಿ 'ಸೋಜುಗದ ಸೂಜು ಮಲ್ಲಿಗೆ' ಹಾಡನ್ನು ಹಾಡುವಂತೆ ಶಿವಾನಿಗೆ ವಿಜಯ್ ಪ್ರಕಾಶ್ ಸೂಚಿಸಿದ್ದರು. ಶಿವಾನಿ ಕಂಠಸಿರಿಯನ್ನು ಕೇಳಿ ರೋಮಾಂಚಿತಗೊಂಡ ಜಡ್ಜ್‌ಗಳು ಶಿವಾನಿ ಅವರನ್ನು ಸೆಲೆಕ್ಟ್ ಮಾಡಿದ್ದರು. ಅಂದು ಶುರುವಾದ ಸರಿಗಮಪ ಸೀನಿಯರ್ಸ್ ಸೀಸನ್ 5' ಜರ್ನಿ ಈಗ ಫಿನಾಲೆ ತನಕ ಬಂದು ನಿಂತಿದೆ.
Sarigamapa: ಅಪ್ಪು ಸಮಾಧಿ ಮೇಲೆ ಟ್ರೋಫಿ ಇಟ್ಟು ಆಶೀರ್ವಾದ ಪಡೆದ ಸರಿಗಮಪ ವಿನ್ನರ್ ಶಿವಾನಿ ಸ್ವಾಮಿ
ಕನ್ನಡಿಗರ ಹಾರೈಕೆ
ಇದೀಗ ತಮಿಳು ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಫಿನಾಲೆ ತಲುಪಿರುವ ಶಿವಾನಿಗೆ ಕನ್ನಡಿಗರು ಶುಭ ಹಾರೈಸಿದ್ದಾರೆ. ಫಿನಾಲೆಯಲ್ಲಿ ಗೆಲ್ಲಲಿ ಎಂದು ಆಶೀರ್ವದಿಸಿದ್ದಾರೆ. ಅಂದಹಾಗೆ, ಶಿವಾನಿ ಅವರ ಜೊತೆಗೆ ಇತರೆ ಸ್ಪರ್ಧಿಗಳಾದ ಸುಶಾಂತಿಕಾ, ಶ್ರೀಹರಿ, ಸಪೇಶನ್, ಸೆಂತಮಿಲನ್, ಪವಿತ್ರಾ ಸೇರಿ ಒಟ್ಟು ಆರು ಮಂದಿ ಸ್ಪರ್ಧಿಗಳು 'ಸರಿಗಮಪ ಸೀನಿಯರ್ಸ್ ಸೀಸನ್ 5' ಶೋನಲ್ಲಿ ಫಿನಾಲೆ ತಲುಪಿದ್ದಾರೆ. ನವೆಂಬರ್ 23ರಂದು ಈ ಫಿನಾಲೆ ನಡೆಯಲಿದ್ದು, ಅಂದು ಯಾರಿಗೆ ವಿನ್ನರ್ ಪಟ್ಟ ಸಿಗಲಿದೆ ಎಂದು ಕಾದುನೋಡಬೇಕು.