ನವದೆಹಲಿ: ಐದು ವರ್ಷದೊಳಗಿನ ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸುವ ಯೋಜನೆ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಭಾರತೀಯ ರೈಲ್ವೆಯು (Indian Railway) ಹೊರಡಿಸಿರುವ ಹೊಸ ನಿಯಮಗಳ (IRCTC Child Ticket Rules) ಬಗ್ಗೆ ತಿಳಿದುಕೊಳ್ಳಿ. ಯಾಕೆಂದರೆ ಇದು ಮುಂದಿನ ಪ್ರಯಾಣದಲ್ಲಿ ನಿಮಗೆ ಅನುಕೂಲಕರವಾಗಿರುವುದು. ಪ್ರಯಾಣಿಕರ ಬೇಡಿಕೆಯ ಮೇರೆಗೆ ಭಾರತೀಯ ರೈಲ್ವೆಯು ಮಕ್ಕಳ ಟಿಕೆಟ್ ಬುಕ್ಕಿಂಗ್ (Train rules for children) ವ್ಯವಸ್ಥೆಯಲ್ಲಿ ಕೊಂಚ ಬದಲಾವಣೆಯನ್ನು ಮಾಡಿದೆ. ಇದು ರೈಲು ಪ್ರಯಾಣ (IRCTC New Rules) ಮಾಡಬಯಸುವ ಪೋಷಕರು ತಿಳಿದುಕೊಳ್ಳಬೇಕಾದ ಪ್ರಮುಖ ನಿಯಮಗಳಲ್ಲಿ ಒಂದಾಗಿದೆ.
ಇನ್ನು ಮುಂದೆ ಐದು ವರ್ಷದ ಒಳಗಿನ ಮಕ್ಕಳಿಗೆ ರೈಲು ಟಿಕೆಟ್ ಪಡೆಯಲು ಕೆಲವು ನಿಯಮಗಳು ಅನ್ವಯವಾಗುತ್ತದೆ. ಇದು ಬುಕ್ಕಿಂಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲಿದೆ. ಪ್ರಯಾಣಿಕರ ಬೇಡಿಕೆಯ ಮೇರೆಗೆ ಇನ್ನು ಮುಂದೆ 5 ವರ್ಷದೊಳಗಿನ ಮಗುವಿಗೆ ಬರ್ತ್ ಬುಕ್ ಮಾಡುವ ಆಯ್ಕೆ ಇದೆ. ಮಕ್ಕಳಿಗಾಗಿ ಪ್ರತ್ಯೇಕ ಬರ್ತ್ ಬುಕ್ಕಿಂಗ್ ಮಾಡಬಹುದಾಗಿದೆ. ಒಂದು ವೇಳೆ ಅವರು ಪ್ರತ್ಯೇಕ ಬರ್ತ್ ಬಯಸದೇ ಇದ್ದರೆ ಅದು ಹಿಂದಿನಂತೆ ಉಚಿತವಾಗಿರುತ್ತದೆ.
ಇದನ್ನೂ ಓದಿ: ಸಾಲ ನೀಡಿಕೆಯಲ್ಲಿ ಸಬಲೀಕರಣ: ಎಕ್ಸ್‌ಪೀರಿಯನ್ʼನಿಂದ ಗ್ರಾಮೀಣ ಸ್ಕೋರ್ ಪ್ರಾರಂಭ
ಮುಂದಿನ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜಾದಿನಗಳಿಗೆ ಭಾರತೀಯ ರೈಲ್ವೆ ಟಿಕೆಟ್ ಬುಕ್ಕಿಂಗ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದು, ಈ ವೇಳೆ ಭಾರತೀಯ ರೈಲ್ವೆಯು ಈ ಹೊಸ ನಿಯಮವನ್ನು ಘೋಷಣೆ ಮಾಡಿದೆ.
ಮಕ್ಕಳಿಗಾಗಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವಾಗ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಟಿಕೆಟ್ ಖರೀದಿಸುವ ಅಗತ್ಯವಿಲ್ಲ. ಆದರೆ ಪ್ರತ್ಯೇಕ ಬರ್ತ್ ಬೇಕಿದ್ದರೆ ಟಿಕೆಟ್ ಖರೀದಿ ಮಾಡಬೇಕಾಗುತ್ತದೆ. ಇದಕ್ಕಾಗಿ ನಿರ್ದಿಷ್ಟ ಶುಲ್ಕ ಪಾವತಿ ಮಾಡಬೇಕು. ವಯಸ್ಸಿನ ಮಿತಿಯನ್ನು ಆಧರಿಸಿ ಭಾರತೀಯ ರೈಲ್ವೆ ಮಕ್ಕಳ ಟಿಕೆಟ್ ಶುಲ್ಕವನ್ನು ನಿಗದಿಪಡಿಸಿದೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರತ್ಯೇಕ ಬರ್ತ್ ಅಗತ್ಯವಿಲ್ಲದೆ ಇದ್ದರೆ ಉಚಿತವಾಗಿ ಪ್ರಯಾಣಿಸಬಹುದು. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬರ್ತ್ ಬೇಕಿದ್ದರೆ ಪೂರ್ಣ ವಯಸ್ಕ ದರವನ್ನು ವಿಧಿಸಲಾಗುತ್ತದೆ. 5 ರಿಂದ 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮಕ್ಕಳ ಶುಲ್ಕ ವಿಧಿಸಲಾಗುತ್ತದೆ. 12 ವರ್ಷ ಮೇಲ್ಪಟ್ಟವರಿಗೆ ಪೂರ್ಣ ವಯಸ್ಕರ ದರವನ್ನು ವಿಧಿಸಲಾಗುತ್ತದೆ.
ಹನ್ನೆರಡು ವರ್ಷ ತುಂಬಿದ ಬಳಿಕ ಮಕ್ಕಳಿಗೆ ಪೋಷಕರೊಂದಿಗೆ ಸೀಟು ನೀಡಲಾಗುವುದಿಲ್ಲ. ಅವರಿಗಾಗಿ ಟಿಕೆಟ್ ಕಾಯ್ದಿರಸಲೇಬೇಕು. ಈ ನಿಯಮವನ್ನು 2020ರ ಮಾರ್ಚ್ ತಿಂಗಳಲ್ಲೇ ಭಾರತೀಯ ರೈಲ್ವೆಯ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: Bangalore Metro: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ವ್ಯತ್ಯಯ
ಕ್ರಿಸ್ ಮಸ್ ರಜೆ ಪ್ರಾರಂಭಕ್ಕೂ ಮುನ್ನವೇ ಭಾರತೀಯ ರೈಲ್ವೆಯು ಈ ಪ್ರಕಟಣೆಯನ್ನು ಹೊರಡಿಸಿದೆ. ಯಾಕೆಂದರೆ ಸಾಮಾನ್ಯವಾಗಿ ರಜಾದಿನಗಳಿಗೆ ಬಹುಬೇಗನೆ ಟಿಕೆಟ್ ಬುಕ್ಕಿಂಗ್ ನಡೆಯುತ್ತದೆ. ಹೆಚ್ಚಿನ ಜನದಟ್ಟಣೆ ಉಂಟಾಗುವುದರಿಂದ ನಿಯಮಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಒಳ್ಳೆಯದು. ರೈಲು ಪ್ರಯಾಣವನ್ನು ಸುಗಮವಾಗಿ ನಡೆಸಲು ಇದು ಸಹಾಯ ಮಾಡುತ್ತದೆ.