ನವದೆಹಲಿ: ಜೆಟ್ ಇಂಧನ ಬೆಲೆ (Jet fuel price) ಮತ್ತೊಮ್ಮೆ ಹೆಚ್ಚಳವಾಗಿದೆ. ಕಳೆದ ಆಗಸ್ಟ್ 1ರಂದು ಹೆಚ್ಚಳವಾಗಿದ್ದ ವಾಣಿಜ್ಯ ವಿಮಾನಗಳು (commercial aircraft) ಬಳಸುವ ಇಂಧನವಾದ ಏವಿಯೇಷನ್ ಟರ್ಬೈನ್ ಇಂಧನ (Aviation turbine fuel) ದರವನ್ನು ಇದೀಗ ಮತ್ತೆ ಹೆಚ್ಚಿಸಲಾಗಿದೆ. ಕಳೆದ ತಿಂಗಳು 5 ರೂಪಾಯಿ ಹೆಚ್ಚಳವಾಗಿದ್ದರೆ ಈ ಬಾರಿ 6.28 ರೂ. ಹೆಚ್ಚಳವಾಗಿದೆ. ಇದು ಈಗ ವಿಮಾನ ಪ್ರಯಾಣ ದರ ಹೆಚ್ಚಿಸುವುದೇ ಎನ್ನುವ ಆತಂಕ ಉಂಟು ಮಾಡಿದೆ. ಈಗಾಗಲೇ ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚವನ್ನು ಪರಿಷ್ಕರಿಸುವ ಕುರಿತು ಚಿಂತನೆ ನಡೆದಿದೆ.
ಫೆಬ್ರವರಿ ತಿಂಗಳಾಂತ್ಯದಿಂದ ಇರಾನ್ ಮತ್ತು ಯುಎಸ್ ನಡುವೆ ಉಂಟಾಗಿರುವ ಸಂಘರ್ಷದ ಪರಿಣಾಮ ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಏರಿಕೆ ನಿರಂತರವಾಗಿದೆ. ಇದರಲ್ಲಿ ಏವಿಯೇಷನ್ ಟರ್ಬೈನ್ ಇಂಧನ ದರವು ಸೇರಿದೆ. ಇರಾನ್ ಯುದ್ಧದ ಬಳಿಕ ಜೆಟ್ ಇಂಧನ ಬೆಲೆಗಳು ಶೇ. 5.46 ರಷ್ಟು ಏರಿಕೆಯಾಗಿವೆ.
Gold Price Today On Sept 1st 2026: ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಬೆಲೆ ಇಲ್ಲಿದೆ ನೋಡಿ
ಎಟಿಎಫ್ ಬೆಲೆ ಲೀಟರ್‌ಗೆ ರೂ. 6.28 ರಷ್ಟು ಅಂದರೆ ಶೇಕಡಾ 5.46 ರಷ್ಟು ಹೆಚ್ಚಿಸಲಾಗಿದೆ, ಇದರಿಂದ ಲೀಟರ್ ಎಟಿಎಫ್ ಬೆಲೆ 115 ರಿಂದ 121.28 ರುಪಾಯಿಗೆ ಹೆಚ್ಚಳವಾಗಿದೆ. ಎಟಿಎಫ್ ಬೆಲೆ ಹೆಚ್ಚಳವಾಗಿರುವುದರಿಂದ ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಇಂಧನ ಬೆಲೆ ಹೆಚ್ಚಳವು ವಿಮಾನ ಪ್ರಯಾಣ ದರಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ವಿಮಾನ ಟಿಕೆಟ್ ಬೆಲೆಗಳು ಪ್ರಯಾಣಿಕರ ಬೇಡಿಕೆ, ವಿಮಾನಯಾನ ಸಂಸ್ಥೆಗಳ ನಡುವಿನ ಪೈಪೋಟಿ ಮತ್ತು ಆಸನ ಲಭ್ಯತೆ ಆಧಾರದಲ್ಲಿ ನಿರ್ಧರಿಸಲಾಗುತ್ತದೆ.
ಎಟಿಎಫ್ ಬೆಲೆಯನ್ನು ಆಗಸ್ಟ್ 1 ರಂದು ಲೀಟರ್‌ಗೆ ಸುಮಾರು 5 ರೂ. ಗಳಷ್ಟು ಹೆಚ್ಚಿಸಲಾಗಿತ್ತು. ಆಗ ಪ್ರತಿ ಲೀಟರ್ ಎಟಿಎಫ್ ದರ 110 ರೂ. ಇದ್ದದ್ದು, 115 ರೂ. ಗಳಿಗೆ ಹೆಚ್ಚಿಸಲಾಗಿತ್ತು. ಇದಕ್ಕೂ ಮೊದಲು ಜುಲೈನಲ್ಲಿ ಇಂಧನ ಬೆಲೆಗಳನ್ನು ಲೀಟರ್‌ಗೆ 5 ರೂ. ಗಳಷ್ಟು ಕಡಿಮೆ ಮಾಡಲಾಗಿತ್ತು.
ವಿಮಾನಯಾನ ಸಂಸ್ಥೆಯ ನಿರ್ವಹಣಾ ವೆಚ್ಚದಲ್ಲಿ ಶೇಕಡಾ 35 ರಿಂದ 40ರಷ್ಟು ವಾಯುಯಾನ ಇಂಧನಕ್ಕೆ ವೆಚ್ಚವಾಗುತ್ತದೆ. ಎಟಿಎಫ್ ದರ ಹೆಚ್ಚಳವು ಉದ್ಯಮಕ್ಕೆ ದೊಡ್ಡ ಹೊಡೆತವನ್ನು ನೀಡುತ್ತದೆ. ಆದರೆ ಇದನ್ನು ವಿಮಾನಯಾನ ಸಂಸ್ಥೆಗಳು ವಿಮಾನ ಟಿಕೆಟ್ ದರಗಳನ್ನು ಹೆಚ್ಚಿಸುವ ಮೂಲಕ ಸರಿದೂಗಿಸಿಕೊಳ್ಳುತ್ತವೆ.
ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ದೋಷ; ತುರ್ತು ಭೂಸ್ಪರ್ಶ
ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಸಂಘರ್ಷ ತೀವ್ರಗೊಂಡಿದ್ದು, ಹೊರ್ಮುಜ್ ಜಲ ಮಾರ್ಗದಲ್ಲಿ ಸರಕು ಸಾಗಣೆ ಕಷ್ಟವಾಗಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಳವಾಗುತ್ತಿದ್ದು, ಕಳವಳಕ್ಕೆ ಕಾರಣವಾಗಿದೆ. ಸೋಮವಾರ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಶೇಕಡಾ 2.8ರಷ್ಟು ಹೆಚ್ಚಳವಾಗಿದೆ. ಯುಎಸ್ ಬೆಂಚ್‌ಮಾರ್ಕ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲವು ಬ್ಯಾರೆಲ್‌ಗೆ 86 ಡಾಲರ್ ಹಾಗೂ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ 90 ಡಾಲರ್ ನಲ್ಲಿ ಮಾರಾಟವಾಗಿದೆ.