ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ದೋಷ; ತುರ್ತು ಭೂಸ್ಪರ್ಶ
IndiGo Flight: ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದು ಬಂದಿದ್ದು, ವಿಮಾನವು ಮಂಗಳವಾರ ಗೋವಾದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನ ನಿಯಂತ್ರಣ (ಎಟಿಸಿ) ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಿತು ಎಂದು ಮೂಲಗಳು ತಿಳಿಸಿವೆ.
ಸಂಗ್ರಹ ಚಿತ್ರ -
ನವದೆಹಲಿ: ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ (IndiGo Flight) ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದು ಬಂದಿದ್ದು, ವಿಮಾನವು ಮಂಗಳವಾರ ಗೋವಾದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನ ನಿಯಂತ್ರಣ (ಎಟಿಸಿ) ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಿತು ಎಂದು ಮೂಲಗಳು ತಿಳಿಸಿವೆ. 6E 2102 ವಿಮಾನವು ಬೆಳಿಗ್ಗೆ 9:16 ಕ್ಕೆ ಗೋವಾದಿಂದ ಹೊರಟಿತ್ತು. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಎಂಜಿನ್‌ನಲ್ಲಿ ಸಮಸ್ಯೆ ಕಂಡುಬಂದಿದೆ. ತಕ್ಷಣವೇ ವಿಮಾನವನ್ನು ನಿಲ್ದಾಣದಲ್ಲಿ ಇಳಿಸಲು ಪ್ರಯತ್ನಿಸಲಾಗಿದೆ.
ಬೆಳಿಗ್ಗೆ 9:51 ಕ್ಕೆ ರನ್‌ವೇ 28 ರಲ್ಲಿ ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನ ಟ್ರ್ಯಾಕರ್ ಫ್ಲೈಟ್‌ರಾಡಾರ್ 24 ರ ದತ್ತಾಂಶವು ವಿಮಾನವು ದಕ್ಷಿಣ ಮಹಾರಾಷ್ಟ್ರದ ಕರಾವಳಿಯಿಂದ ಗೋವಾಕ್ಕೆ ಹಿಂತಿರುಗುತ್ತಿರುವುದನ್ನು ತೋರಿಸಿದೆ. ವಿಮಾನ ನಿಲ್ದಾಣದ ಕಡೆಗೆ ಹಿಂತಿರುಗಿದಾಗ ಅದು ಸುಮಾರು 14,000 ಅಡಿ ಎತ್ತರದಲ್ಲಿ ಹಾರುತ್ತಿತ್ತು ಎಂದು ತಿಳಿದು ಬಂದಿದೆ. ಸದ್ಯ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಕಳೆದ ತಿಂಗಳು ದುಬೈನಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು, ಸರಕು ಸಾಗಿಸುವ ವಿಭಾಗದಲ್ಲಿ (ಕಾರ್ಗೋ ಹೋಲ್ಡ್) ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಇಂಡಿಗೋ ವಿಮಾನ 6E 1452ರಲ್ಲಿ 194 ಪ್ರಯಾಣಿಕರಿದ್ದರು. ತುರ್ತು ಭೂಸ್ಪರ್ಶದ ನಂತರ ಅವರೆಲ್ಲರೂ ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿದರು. ವಿಮಾನದ ಸರಕು ಸಾಗಿಸುವ ವಿಭಾಗದಲ್ಲಿ ಹೊಗೆಯನ್ನು ಗಮನಿಸಿದ ನಂತರ, ಪೈಲಟ್‌ಗಳು ರಾಜ್‌ಕೋಟ್ ವಿಮಾನ ನಿಲ್ದಾಣವನ್ನು ಸಂಪರ್ಕಿಸಿ, ಯಶಸ್ವಿ ತುರ್ತು ಭೂಸ್ಪರ್ಶ ಮಾಡಿದರು. ಈ ವೇಳೆ "ಸಂಪೂರ್ಣ ತುರ್ತು ಪರಿಸ್ಥಿತಿ" ಘೋಷಣೆ ಮಾಡಲಾಗಿತ್ತು.
ಮಧ್ಯಾಹ್ನ ಸುಮಾರು 3:25ಕ್ಕೆ ಬಂದಿಳಿದಿದ್ದು, ರನ್‌ವೇಗೆ ಬರುತ್ತಿದ್ದಂತೇ, ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಮೊದಲು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ ಆ ಬಳಿಕ ಕಾರ್ಗೋ ಹೋಲ್ಡ್‌ನಲ್ಲಿ ಕಾಣಿಸಿಕೊಂಡ ಹೊಗೆಯನ್ನು ನಿಯಂತ್ರಣ ಮಾಡಲಾಯಿತು.