ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಮಾನ ಪ್ರಯಾಣ ಟಿಕೆಟ್ ಬುಕ್ಕಿಂಗ್ ನಲ್ಲಿ ಹೆಸರು ತಪ್ಪಾಗಿದ್ದರೆ ತಿಳಿದಿರಲಿ ಈ ನಿಯಮ

ವಿಮಾನ ಟಿಕೆಟ್ ಬುಕ್ಕಿಂಗ್ ಮಾಡುವಾಗ ಈ ನಿಯಮದ ಅರಿವು ಇರಲಿ. ಯಾಕೆಂದರೆ ಇದು ನಿಮ್ಮ ಜೇಬಿಗೆ ಕತ್ತರಿ ಬೀಳುವುದನ್ನು ತಪ್ಪಿಸುತ್ತದೆ. ಡಿಜಿಸಿಎ ನಿಯಮಗಳನ್ನು ಪರಿಷ್ಕರಿಸಲಾಗಿದ್ದು, ಹೊಸ ನಿಯಮದ ಪ್ರಕಾರ ವಿಮಾನ ಟಿಕೆಟ್ ಬುಕ್ ಮಾಡುವಾಗ ಹೆಸರಿನಲ್ಲಿ ತಪ್ಪುಗಳಾದರೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಿಲ್ಲ. ಆದರೆ ಇದಕ್ಕೆ ಕೆಲವು ನಿಯಮ ಪಾಲಿಸಬೇಕು. ಅದು ಏನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಸಂಗ್ರಹ ಚಿತ್ರ

ನವದೆಹಲಿ: ನಾಗರಿಕ ವಿಮಾನಯಾನ ಮಹಾನಿರ್ದೇಶಕರು (Director General of Civil Aviation) ವಿಮಾನ ಪ್ರಯಾಣಕ್ಕೆ (Flight travel) ಸಂಬಂಧಿಸಿದ ಕೆಲವು ನಿಯಮಗಳನ್ನು ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಇದರಲ್ಲಿ ಈ ಒಂದು ನಿಯಮವು ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದನ್ನು ತಪ್ಪಿಸಲಿದೆ. ವಿಮಾನ ಪ್ರಯಾಣದ ಟಿಕೆಟ್ ಬುಕ್ಕಿಂಗ್ (air ticket booking) ಮಾಡಿದ ಮೇಲೆ ಹೆಸರಿನಲ್ಲಿ ಯಾವುದೇ ಲೋಪಗಳಿದ್ದರೆ ಅದನ್ನು 24 ಗಂಟೆಗಳ ಒಳಗೆ ಸೂಚಿಸಿದರೆ ಹೆಸರಿನಲ್ಲಿ ಮಾಡಬೇಕಾಗಿರುವ ತಿದ್ದುಪಡಿಗೆ ವಿಮಾನಯಾನ (Indian airlines) ಸಂಸ್ಥೆಗಳು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವಂತಿಲ್ಲ.

ವಿಮಾನ ಪ್ರಯಾಣಕ್ಕೆ ಟಿಕೆಟ್ ಬುಕ್ಕಿಂಗ್ ಮಾಡಿದ 48 ಗಂಟೆಗಳ ಒಳಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸದೆ ಪ್ರಯಾಣಿಕರು ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಲು ಅಥವಾ ಬದಲಾಯಿಸಲು ಅವಕಾಶವಿದೆ ಎಂಬುದಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ತಿಳಿಸಿದ್ದಾರೆ.

8ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ವಿವಾದಾತ್ಮಕ ಅಧ್ಯಾಯ: ಕ್ಷಮೆ ಕೋರಿದ ಎನ್‌ಸಿಇಆರ್‌ಟಿಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ಹೊಸ ನಿಯಮ ಏನು?

  1. ವಿಮಾನಯಾನ ಸಂಸ್ಥೆಯ ವೆಬ್‌ಸೈಟ್ ಮೂಲಕ ನೇರವಾಗಿ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರು ವಿಮಾನ ಪ್ರಯಾಣದ ಟಿಕೆಟ್ ಬುಕ್ಕಿಂಗ್ ಮಾಡಿದ 24 ಗಂಟೆಗಳ ಒಳಗೆ ಪ್ರಯಾಣಿಕರು ಬುಕ್ಕಿಂಗ್ ನಲ್ಲಿ ಆಗಿರುವ ದೋಷವನ್ನು ಎತ್ತಿ ತೋರಿಸಿದಾಗ ವಿಮಾನಯಾನ ಸಂಸ್ಥೆಗಳು ತಿದ್ದುಪಡಿಗಾಗಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಬಾರದು.
  2. ಏಜೆಂಟ್ ಅಥವಾ ಪೋರ್ಟಲ್ ಮೂಲಕ ಟಿಕೆಟ್ ಖರೀದಿಸಿದರೆ ಮರುಪಾವತಿಯ ಜವಾಬ್ದಾರಿ ವಿಮಾನಯಾನ ಸಂಸ್ಥೆಗಳ ಮೇಲಿರುತ್ತದೆ. ಇದು 14 ಕೆಲಸದ ದಿನಗಳಲ್ಲಿ ಪೂರ್ಣಗೊಳ್ಳುತ್ತದೆ ಎಂಬುದನ್ನು ವಿಮಾನಯಾನ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು.
  3. ಟಿಕೆಟ್‌ಗಳನ್ನು ಕಾಯ್ದಿರಿಸಿದ ಅನಂತರ ಪ್ರಯಾಣಿಕರಿಗೆ 48 ಗಂಟೆಗಳ ಅವಧಿಗೆ ಲುಕ್-ಇನ್ ಆಯ್ಕೆಯನ್ನು ನೀಡಬೇಕು. ಈ ಅವಧಿಯಲ್ಲಿ ಟಿಕೆಟ್ ನಲ್ಲಿ ತಿದ್ದುಪಡಿ ಮಾಡಲು ಬಯಸುವವರಿಗೆ ಚಾಲ್ತಿಯಲ್ಲಿರುವ ದರವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವಂತಿಲ್ಲ. ಈ ಸಂದರ್ಭದಲ್ಲಿ ಪ್ರಯಾಣಿಕರಿಗೆ ಟಿಕೆಟ್ ಅನ್ನು ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಅವಕಾಶ ನೀಡಲಾಗುತ್ತದೆ.
  4. ದೇಶೀಯ ವಿಮಾನಕ್ಕೆ ಏಳು ದಿನಗಳಿಗಿಂತ ಮೊದಲು ಅಂತಾರಾಷ್ಟ್ರೀಯ ವಿಮಾನಕ್ಕೆ 15 ದಿನಗಳಿಗಿಂತ ಮೊದಲು ವಿಮಾನಯಾನ ವೆಬ್‌ಸೈಟ್ ಮೂಲಕ ನೇರವಾಗಿ ಟಿಕೆಟ್ ಬುಕ್ ಮಾಡಿದವರಿಗೆ ಮಾತ್ರ ಆರಂಭಿಕ ಬುಕ್ಕಿಂಗ್ ಸಮಯದ 48 ಗಂಟೆಗಳ ಅನಂತರ ಈ ಆಯ್ಕೆಯು ಲಭ್ಯವಿರುವುದಿಲ್ಲ. ಅನಂತರ ತಿದ್ದುಪಡಿ ಮಾಡುವವರಿಗೆ ಸಂಬಂಧಿತ ಶುಲ್ಕವನ್ನು ಪಾವತಿಸಬೇಕು.
  5. ವೈದ್ಯಕೀಯ ತುರ್ತು ಪರಿಸ್ಥಿತಿಯ ಕಾರಣದಿಂದ ಟಿಕೆಟ್ ರದ್ದುಗೊಳಿಸುವ ಪ್ರಯಾಣಿಕರು ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕ ಅಥವಾ ಅದೇ ಪಿಎನ್ ಆರ್ ನಲ್ಲಿ ಪಟ್ಟಿ ಮಾಡಲಾದ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಾದಾಗ ವಿಮಾನಯಾನ ಸಂಸ್ಥೆಗಳು ಮರುಪಾವತಿ ಅಥವಾ ಕ್ರೆಡಿಟ್ ಶೆಲ್ ಅನ್ನು ಒದಗಿಸಲಿದೆ.
  6. ಇತರ ಎಲ್ಲಾ ಸಂದರ್ಭಗಳಲ್ಲಿ ಪ್ರಯಾಣಿಕರ ಪ್ರಯಾಣಕ್ಕೆ ಫಿಟ್ನೆಸ್ ಪ್ರಮಾಣ ಪತ್ರದ ಕುರಿತು ವಿಮಾನಯಾನ ಸಂಸ್ಥೆಯ ಏರೋಸ್ಪೇಸ್ ಮೆಡಿಸಿನ್ ತಜ್ಞರು ಎಂಪನೇಲ್ಡ್ ಏರೋಸ್ಪೇಸ್ ಮೆಡಿಸಿನ್ ತಜ್ಞರಿಂದ ಅಭಿಪ್ರಾಯವನ್ನು ಸ್ವೀಕರಿಸಿದ ಅನಂತರ ಮರುಪಾವತಿಯನ್ನು ನೀಡುತ್ತದೆ.

ಇತಿಹಾಸ ಸೃಷ್ಟಿಸಿದ ಪ್ರಧಾನಿ ಮೋದಿ; ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ ಮೊದಲ ವಿಶ್ವನಾಯಕ!

ಕಳೆದ ಡಿಸೆಂಬರ್ ನಲ್ಲಿ ಇಂಡಿಗೋ ವಿಮಾನ ಅಡಚಣೆಗಳ ಬಳಿಕ ಸಮಯಕ್ಕೆ ಸರಿಯಾಗಿ ಮರುಪಾವತಿ ಆಗದಿರುವ ಕುರಿತು ಪ್ರಯಾಣಿಕರ ದೂರಿನ ಹಿನ್ನೆಲೆಯಲ್ಲಿ ಈ ಪರಿಷ್ಕರಣೆ ಮಾಡಲಾಗಿದೆ ಎಂದು ಡಿಜಿಸಿಎ ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author