ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೋಟಕ್ ಬಿಜ್‌ ಲ್ಯಾಬ್ಸ್ 3ನೇ ಆವೃತ್ತಿ ದೇಶಾದ್ಯಂತ ವಿಸ್ತರಣೆ: ನೂರಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ

ಆರಂಭವಾದ ದಿನದಿಂದಲೂ ಈ ಆಕ್ಸಲರೇಷನ್ ಕಾರ್ಯಕ್ರಮಕ್ಕೆ ದೇಶಾದ್ಯಂತದ ಸ್ಟಾರ್ಟ್‌ ಅಪ್‌ ಗಳಿಂದ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈವರೆಗೆ ನೂರ ಇಪ್ಪತ್ತೈದಕ್ಕೂ ಹೆಚ್ಚು ಉತ್ತಮ ಸಾಮರ್ಥ್ಯದ ಸಂಸ್ಥೆಗಳಿಗೆ ಆಕ್ಸಲರೇಷನ್ ಬೆಂಬಲ ನೀಡಲಾಗಿದ್ದು, ನೂರಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ ಗಳಿಗೆ ಅನುದಾನ ನೀಡುವ ಮೂಲಕ ಸಂಸ್ಥಾಪಕರು ತಮ್ಮ ನವೀನ ಹಾಗೂ ಸಮಾಜಮುಖಿ ಪರಿಹಾರಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನೆರವು ಒದಗಿಸಲಾಗಿದೆ

ಬೆಂಗಳೂರು: ಕೋಟಕ್ ಮಹೀಂದ್ರಾ ಬ್ಯಾಂಕ್ (ಕೆಎಂಬಿಎಲ್/ ಕೋಟಕ್) ಸಂಸ್ಥೆಯು ಆರಂಭಿಕ ಹಂತದ ಆದಾಯ ಗಳಿಸುತ್ತಿರುವ ಸ್ಟಾರ್ಟ್‌ ಅಪ್‌ ಗಳಿಗಾಗಿ ತನ್ನ ಪ್ರಮುಖ ಸಾಮಾಜಿಕ ಹೊಣೆ ಗಾರಿಕೆ ಯೋಜನೆಯಾದ ಕೋಟಕ್ ಬಿಜ್‌ ಲ್ಯಾಬ್ಸ್ ಆಕ್ಸಲರೇಷನ್ ಕಾರ್ಯಕ್ರಮದ 3ನೇ ಆವೃತ್ತಿ ಯನ್ನು ಇಂದು ಘೋಷಿಸಿದೆ. ಈ 3ನೇ ಆವೃತ್ತಿಯು 2026ರ ಆಗಸ್ಟ್‌ ನಿಂದ 2027ರ ಅಕ್ಟೋಬರ್‌ ವರೆಗೆ ನಡೆಯಲಿದ್ದು, ಸೂಕ್ತ ಮಾರ್ಗದರ್ಶನ, ಪರಿಸರ ವ್ಯವಸ್ಥೆಯ ಪ್ರವೇಶಾವಕಾಶ ಮತ್ತು ಉತ್ತೇಜಕ ಧನಸಹಾಯದ ಮೂಲಕ ದೇಶಾದ್ಯಂತ ನೂರಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ ಗಳಿಗೆ ಬೆಂಬಲ ನೀಡಲಿದೆ.

3ನೇ ಆವೃತ್ತಿಯು ಐಐಎಂ ಕಲ್ಕತ್ತಾ ಇನ್ನೋವೇಷನ್ ಪಾರ್ಕ್, ಸಿಐಐಇ ಇನಿಶಿಯೇಟಿವ್ಸ್ (ಐಐಎಂ ಅಹಮದಾಬಾದ್ ವೆಂಚರ್ಸ್), ಐಐಎಂ ಬೆಂಗಳೂರಿನ ಎನ್‌ಎಸ್‌ಆರ್‌ಸಿಇಎಲ್, ಟಿ-ಹಬ್ ಮತ್ತು ಐಐಟಿ ದೆಹಲಿಯ ಎಫ್‌ಐಟಿಟಿ ಸೇರಿ ದೇಶದ ಐದು ಪ್ರಮುಖ ಪೋಷಣಾ ಪಾಲುದಾರರನ್ನು ಹೊಂದಿದೆ.

ಆರಂಭವಾದ ದಿನದಿಂದಲೂ ಈ ಆಕ್ಸಲರೇಷನ್ ಕಾರ್ಯಕ್ರಮಕ್ಕೆ ದೇಶಾದ್ಯಂತದ ಸ್ಟಾರ್ಟ್‌ ಅಪ್‌ ಗಳಿಂದ ನಾಲ್ಕೂವರೆ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಈವರೆಗೆ ನೂರ ಇಪ್ಪತ್ತೈದಕ್ಕೂ ಹೆಚ್ಚು ಉತ್ತಮ ಸಾಮರ್ಥ್ಯದ ಸಂಸ್ಥೆಗಳಿಗೆ ಆಕ್ಸಲರೇಷನ್ ಬೆಂಬಲ ನೀಡಲಾಗಿದ್ದು, ನೂರಕ್ಕೂ ಹೆಚ್ಚು ಸ್ಟಾರ್ಟ್‌ ಅಪ್‌ ಗಳಿಗೆ ಅನುದಾನ ನೀಡುವ ಮೂಲಕ ಸಂಸ್ಥಾಪಕರು ತಮ್ಮ ನವೀನ ಹಾಗೂ ಸಮಾಜಮುಖಿ ಪರಿಹಾರಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನೆರವು ಒದಗಿಸಲಾಗಿದೆ.

ಇದನ್ನೂ ಓದಿ: Uday Kotak: "ಭಾರತೀಯ ಗೃಹಿಣಿಯರು ವಿಶ್ವದ ಅತ್ಯಂತ ʼಸ್ಮಾರ್ಟ್‌ʼ ಫಂಡ್‌ ಮ್ಯಾನೇಜರ್‌ಗಳು"; ಮಹಿಳೆಯರನ್ನು ಹೊಗಳಿದ ಉದಯ್‌ ಕೋಟಕ್‌

ಈ ಸಂದರ್ಭದಲ್ಲಿ ಮಾತನಾಡಿದ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಮತ್ತು ಪರಿಸರ-ಸಾಮಾಜಿಕ ಆಡಳಿತ ವಿಭಾಗದ ಮುಖ್ಯಸ್ಥ ಹಿಮಾಂಶು ನಿವ್ಸರ್ಕರ್ ಅವರು, “ಉತ್ತಮ ಆಲೋಚನೆಗಳನ್ನು ಹೊಂದಿದ್ದರೂ ಸೂಕ್ತ ಬೆಂಬಲ ವ್ಯವಸ್ಥೆಯಿಲ್ಲದ ಪ್ರದೇಶಗಳ ಉದ್ಯಮಿಗಳಿಗೆ ಈ 3ನೇ ಆವೃತ್ತಿಯ ಮೂಲಕ ಉನ್ನತ ಮಟ್ಟದ ಬೆಂಬಲ ದೊರೆಯ ಲಿದೆ. ಐಐಎಂ ಕಲ್ಕತ್ತಾ ಇನ್ನೋವೇಷನ್ ಪಾರ್ಕ್ ಜೊತೆಗಿನ ನಮ್ಮ ಪಾಲುದಾರಿಕೆಯು ಪೂರ್ವ ಮತ್ತು ಈಶಾನ್ಯ ಭಾರತದಾದ್ಯಂತ ನಮ್ಮ ವ್ಯಾಪ್ತಿಯನ್ನು ವಿಸ್ತರಿಸಲಿದ್ದು, ಕೋಟಕ್ ಬಿಜ್‌ಲ್ಯಾಬ್ಸ್ ಅನ್ನು ಪ್ರಾದೇಶಿಕ ಸ್ಟಾರ್ಟ್‌ಅಪ್ ಕೇಂದ್ರಗಳ ವಿಶಾಲ ಜಾಲದೊಂದಿಗೆ ಜೋಡಿಸುತ್ತದೆ. ಭಾಗವಹಿ ಸುವ ಪ್ರತಿಯೊಂದು ಸ್ಟಾರ್ಟ್‌ಅಪ್ ತನ್ನ ಮುಂದಿನ ಹಂತದ ಬೆಳವಣಿಗೆಗೆ ಅಗತ್ಯವಿರುವ ಮಾರ್ಗ ದರ್ಶನ, ಸಂಪರ್ಕ ಜಾಲ ಮತ್ತು ಆರ್ಥಿಕ ನೆರವನ್ನು ಒದಗಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ” ಎಂದು ತಿಳಿಸಿದರು.

ಈ ಬಾರಿಯ 3ನೇ ಆವೃತ್ತಿಯು ಕೃಷಿ ತಂತ್ರಜ್ಞಾನ, ಹವಾಮಾನ ತಂತ್ರಜ್ಞಾನ, ಹಣಕಾಸು ತಂತ್ರ ಜ್ಞಾನ, ಸುಸ್ಥಿರತೆ, ಆರೋಗ್ಯ ತಂತ್ರಜ್ಞಾನ, ಶಿಕ್ಷಣ ತಂತ್ರಜ್ಞಾನ, ಸ್ವಚ್ಛ ಇಂಧನ, ತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರ ಉತ್ಪಾದನಾ ಕ್ಷೇತ್ರಗಳ ಮೇಲೆ ಪ್ರಮುಖವಾಗಿ ಗಮನ ಹರಿಸಲಿದ್ದು, ತಂತ್ರಜ್ಞಾನ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಿದೆ. ಈ ಐದು ಪೋಷಣಾ ಕೇಂದ್ರಗಳ ಮೂಲಕ ಭಾಗವಹಿಸುವ ಸ್ಟಾರ್ಟ್‌ಅಪ್‌ಗಳಿಗೆ ಉದ್ಯಮ ತಜ್ಞರ ಮಾರ್ಗದರ್ಶನ, ಸಂಪರ್ಕಗಳು ಮತ್ತು ಬೆಳವಣಿಗೆಗೆ ಪೂರಕ ಬೆಂಬಲ ಸಿಗಲಿದೆ. ಆಯಾ ಪೋಷಣಾ ಸಂಸ್ಥೆಗಳೇ ತಂಡಗಳ ಆಯ್ಕೆ ಮತ್ತು ತರಬೇತಿ ಪ್ರಕ್ರಿಯೆ ಗಳನ್ನು ನಿರ್ವಹಿಸಲಿವೆ.

ಕೋಟಕ್ ಬಿಜ್‌ ಲ್ಯಾಬ್ಸ್ ಆಕ್ಸಲರೇಷನ್ ಕಾರ್ಯಕ್ರಮವು ಕೋಟಕ್ ಮಹೀಂದ್ರಾ ಬ್ಯಾಂಕ್ ಲಿಮಿಟೆಡ್ ಸಂಸ್ಥೆಯ ಒಂದು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಯೋಜನೆಯಾಗಿದೆ.

ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯ (ಡಿಪಿಐಐಟಿ) ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳಿಂದ 3ನೇ ಆವೃತ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಸ್ಟಾರ್ಟ್‌ಅಪ್‌ಗಳು ಕೋಟಕ್ ಬಿಜ್‌ಲ್ಯಾಬ್ಸ್ 3ನೇ ಆವೃತ್ತಿಯ ಅಧಿಕೃತ ಅರ್ಜಿ ಪುಟದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.