ಓಪನ್ ಎಐ-ದ ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್-(ಎಪಿಐ) ಮೂಲಕ ಕಾರ್ಯನಿರ್ವಹಿಸುವ ಚಾಟ್ ಜಿಪಿಟಿ-ಆಧಾರಿತ ಧ್ವನಿ ಮತ್ತು ಪಠ್ಯ ಅಂತರಸಂಪರ್ಕ ಸೌಲಭ್ಯವು ಬಳಕೆದಾರರಿಗೆ ಇಂಟರ್‌ನೆಟ್‌ನಲ್ಲಿ ಮನರಂಜನೆ, ಕ್ರೀಡೆ ಮತ್ತಿತರ ಕಾರ್ಯಕ್ರಮಗಳನ್ನು ವೀಕ್ಷಿಸುವ (ಸ್ಟ್ರೀಮಿಂಗ್) ಸೇವೆಗಳ ಭಾರತದ ಅತಿ ದೊಡ್ಡ ಮಾಹಿತಿ ಕಣಜದಲ್ಲಿ ಸಹಜ ಭಾಷಾ ಸಂವಹನದ ಮೂಲಕ ಬಹು ಭಾಷೆಗಳಲ್ಲಿ ಹುಡುಕಾಟ ನಡೆಸಲು ಅವಕಾಶ ಒದಗಿಸಿ ಕೊಡಲಿದೆ.
ನವದೆಹಲಿ: ಚಾಟ್‌ಜಿಪಿಟಿ- ಆಧಾರಿತ ಧ್ವನಿ ಅನ್ವೇಷಣೆ ಸೌಲಭ್ಯ ಮತ್ತು ತನ್ಮಯಗೊಳಿ ಸುವ ಅನುಭವ ಪರಿಚಯಿಸುವ ಮೂಲಕ ಸ್ಟ್ರೀಮಿಂಗ್ ಅನ್ನು ಭಾಷಾ ಸಂಭಾಷಣೆ ಯನ್ನಾಗಿ ಪರಿವರ್ತಿಸಲು ಓಪನ್‌ಎಐ ಜೊತೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಜಿಯೊಹಾಟ್‌ಸ್ಟಾರ್ ಇಂದು ಇಲ್ಲಿ ಪ್ರಕಟಿಸಿದೆ.
ಒಂದು ದಶಕಕ್ಕೂ ಹೆಚ್ಚು ಕಾಲ, ಡಿಜಿಟಲ್ ಮನರಂಜನೆಯು ಒಮ್ಮುಖ ರಸ್ತೆಯಾಗಿದೆ. ವೀಕ್ಷಕರು ಅಂತರ್ಜಾಲ ಜಾಲಾಡಿ, ಕ್ಲಿಕ್ ಮಾಡಿ ತಮಗೆ ಬೇಕಾದ ಕಾರ್ಯಕ್ರಮಗಳನ್ನು ವೀಕ್ಷಿಸುತ್ತ ಬಂದಿದ್ದಾರೆ. ಓಪನ್‌ಎಐ ಜೊತೆಗಿನ ಜಿಯೊಹಾಟ್‌ಸ್ಟಾರ್ ಪಾಲುದಾರಿಕೆಯು ಸ್ಟ್ರೀಮಿಂಗ್ ಅನುಭವಕ್ಕೆ ಹೊಸ ಸ್ಪರ್ಶ ನೀಡಲಿದೆ. ಸಂಭಾಷಣೆಯ ಮೂಲಕವೇ ಸ್ಟ್ರೀಮಿಂಗ್ ಅನುಭವ ಪರಿವರ್ತಿಸುವ ಹೊಸ ಅಧ್ಯಾಯ ಆರಂಭಿಸಿದೆ.
ಈ ಪಾಲುದಾರಿಕೆ ಮೂಲಕ, ಜಿಯೊಹಾಟ್‌ಸ್ಟಾರ್ ಬಹುಭಾಷಾ ಹುಡುಕಾಟದ ಮೂಲಕ ಅಂತರ್ಜಾಲ ತಾಣಗಳಲ್ಲಿ "ಏನನ್ನು ವೀಕ್ಷಿಸಬೇಕು" ಎಂಬ ಸಂದಿಗ್ಧತೆಯನ್ನು ದೂರ ಮಾಡಲಿದೆ. ಡಿಜಿಟಲ್ ಮಾಹಿತಿ ಜಾಲಾಡುವ ಆಯಾಸವನ್ನು ಕಡಿಮೆ ಮಾಡಲಿದೆ.
Bottom of Form ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಬಗೆಯ ಸೌಲಭ್ಯ ಪರಿಚಯಿಸ ಲಾಗುತ್ತಿದೆ. ಪ್ರೇಕ್ಷಕರು ಈಗ ವಿವಿಧ ಭಾಷೆಗಳಲ್ಲಿ , ವಿಭಿನ್ನ ಧ್ವನಿಗಳಲ್ಲಿ ಮತ್ತು ಕ್ಷಣಗಳಲ್ಲಿ ಮಾತನಾಡುವ ಮೂಲಕ ತಮ್ಮ ನೆಚ್ಚಿನ ವಿಷಯ / ಸಂಗತಿ/ ಮಾಹಿತಿಯನ್ನು ಸುಲಭ ವಾಗಿ ಅನ್ವೇಷಿಸಬಹುದು. ಮನರಂಜನೆಯಲ್ಲಿ ತನ್ಮಯತೆಯಿಂದ ಪಾಲ್ಗೊಳ್ಳಬಹುದು. ಸ್ಟ್ರೀಮಿಂಗ್ ಅನ್ನು ಅರ್ಥಪೂರ್ಣ ಹಾಗೂ ಗಾಢ ಸ್ವರೂಪದ ವೈಯಕ್ತಿಕ ಸಂಭಾಷಣೆ ಯನ್ನಾಗಿ ಪರಿವರ್ತಿಸಬಹುದು.
ಇದನ್ನೂ ಓದಿ: Reliance Jio: ಜಿಯೋ ಪ್ಲಾಟ್‌ಫಾರ್ಮ್ಸ್ ಮೂರನೇ ತ್ರೈಮಾಸಿಕ ಲಾಭ ರೂ. 7,629 ಕೋಟಿಗೆ ಜಿಗಿತ
ಆಯ್ಕೆಗಳ ಪಟ್ಟಿಗಳಲ್ಲಿ ತಮಗೆ ಬೇಕಾಗಿರುವುದನ್ನು ಆಯ್ಕೆ ಮಾಡಲು ಅಥವಾ ನಿರ್ದಿಷ್ಟ ಪಠ್ಯ ಟೈಪ್ ಮಾಡುವ ಬದಲು, ವೀಕ್ಷಕರು ತಮ್ಮ ಉದ್ದೇಶ, ಮನಸ್ಥಿತಿ ಅಥವಾ ಸಂದರ್ಭ ವನ್ನು ಸರಳವಾಗಿ ಧ್ವನಿ ಮೂಲಕವೇ ಹೇಳಬಹುದು. ಇದಕ್ಕೆ ಪ್ರತಿಯಾಗಿ ತಕ್ಷಣವೇ ಜಾಣ ಶಿಫಾರಸುಗಳನ್ನು ಪಡೆದುಕೊಳ್ಳಬಹುದು.
ಚಾಟ್ ಜಿಪಿಟಿ- ಬ್ರ್ಯಾಂಡೆಡ್ ಧ್ವನಿ ಸಹಾಯಕವು ನಿರ್ಬಂಧಿತ ಕೀಲಿಮಣಿ ಆಧಾರಿತ ಮಾಹಿತಿ ಹುಡುಕಾಟವನ್ನು ಸಂಪೂರ್ಣವಾಗಿ ಬದಲಿಸಲಿದೆ. ವೀಕ್ಷಕರು ಸ್ಪಷ್ಟವಾಗಿ ಕೇಳುವುದಕ್ಕೆ ಮಾತ್ರವಲ್ಲದೆ, ಅವರು ಏನನ್ನು ಹುಡುಕಾಟದಲ್ಲಿ ಇರುವರು ಎಂಬುದನ್ನೂ ಊಹಿಸಿ ಸೂಕ್ತ ಶಿಫಾರಸುಗಳನ್ನು ಒದಗಿಸಲಿದೆ. ಮನರಂಜನೆ ಆಸ್ವಾದಿಸಲು ಸಮೃದ್ಧ ಮಾಹಿತಿ ಪಡೆಯುವುದಕ್ಕೆ ಉತ್ಕೃಷ್ಟ, ಹೆಚ್ಚು ಅರ್ಥಪೂರ್ಣ ಮಾರ್ಗವನ್ನು ಅನಾವರಣ ಮಾಡಲಿದೆ.
ಈ ಪಾಲುದಾರಿಕೆಯ ಬಗ್ಗೆ ಮಾತನಾಡಿರುವ, ಜಿಯೊಸ್ಟಾರ್‌ನ ಉಪಾಧ್ಯಕ್ಷ ಉದಯ್ ಶಂಕರ್ ಅವರು, "ಕೃತಕ ಬುದ್ಧಿಮತ್ತೆಯು (ಎಐ) ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಗಮನಾರ್ಹ ಬದಲಾವಣೆ ತಂದಿದೆ. ಇದು ಪರಿಕಲ್ಪನೆ ಮತ್ತು ಉತ್ಪಾದನೆ ಯಿಂದ ಆವಿಷ್ಕಾರ ಮತ್ತು ಆದಾಯ ಗಳಿಕೆಯವರೆಗಿನ ಮೌಲ್ಯ ಸರಪಳಿಯ ಪ್ರತಿ ಯೊಂದು ಸಂಗತಿಯನ್ನು ಗಮನಾರ್ಹವಾಗಿ ಬದಲಾಯಿಸಿದೆ. ಡಿಜಿಟಲ್ ಬದಲಾವಣೆ ಜೊತೆಗೆ ಬೆಳೆದಿರುವ ಬಳಕೆದಾರರ-ಮೊದಲ ವೇದಿಕೆಯಾಗಿ ಜನಪ್ರಿಯವಾಗಿರುವ ಜಿಯೊಸ್ಟಾರ್, ಬಳಕೆದಾರರ ಅನುಭವದಲ್ಲಿ ಈಗ ಹೊಸದಾಗಿ ಕೃತಕ ಜಾಣ್ಮೆ (ಎಐ) ಸೌಲಭ್ಯವನ್ನು ಅಳವಡಿಕೆ ಮಾಡುತ್ತಿದೆ. ಓಪನ್‌ಎಐ ಜೊತೆಗಿನ ನಮ್ಮ ಪಾಲುದಾರಿಕೆಯು ವೀಕ್ಷಕರು ತಮ್ಮ ಧ್ವನಿ ಬಳಸಿಕೊಂಡು ಮಾಹಿತಿ ಅನ್ವೇಷಿಸಲು, ವೀಕ್ಷಣೆಯಲ್ಲಿ ತನ್ಮಯತೆ ಯಿಂದ ತೊಡಗಿಸಿಕೊಳ್ಳಲು ಮತ್ತು ಅನ್ಯ ಮೂಲದಿಂದ ಗರಿಷ್ಠ ಗುಣಮಟ್ಟದ, ಹೆಚ್ಚು ಪ್ರಸ್ತುತವಾಗಿರುವ ಮಾಹಿತಿಯನ್ನು ಕೇವಲ ಧ್ವನಿ ಮೂಲಕ ಪಡೆದುಕೊಳ್ಳುವ ಅವಕಾಶ ಒದಗಿಸಲಿದೆ. ಇದು ಮನರಂಜನಾ ಅನುಭವದ ಮೂಲಭೂತ ಮರುಕಲ್ಪನೆಯಾಗಿದೆʼ ಎಂದು ಹೇಳಿದ್ದಾರೆ.
ʼಸಾಂಪ್ರದಾಯಿಕವಾಗಿ, ಮನರಂಜನೆಯು ಸಕ್ರಿಯ ಭಾಗವಹಿಸುವಿಕೆ ಅಥವಾ ಸಂವಹನವಿಲ್ಲದೆ ಕೇವಲ ವೀಕ್ಷಿಸುವ ಅಥವಾ ಸ್ವೀಕರಿಸುವ ಒಮ್ಮುಖ ಅನುಭವ ವಾಗಿತ್ತು. ಈಗ, ಕೃತಕ ಬುದ್ಧಿಮತ್ತೆಯು ಇಂತಹ ಅನುಭವವನ್ನು ಸಂಪೂರ್ಣ ವಾಗಿ ಬದಲಾಯಿಸಲಿದೆ" ಎಂದು ಓಪನ್‌ಎಐನ ಅಪ್ಲಿಕೇಷನ್‌ಗಳ ಸಿಇಒ ಫಿಡ್ಜಿ ಸಿಮೊ ಅವರು ಹೇಳಿದ್ದಾರೆ.
"ಜಿಯೊಹಾಟ್‌ಸ್ಟಾರ್ ಜೊತೆಗಿನ ನಮ್ಮ ಪಾಲುದಾರಿಕೆಯ ಮೂಲಕ, ನಾವು ವೈಯಕ್ತಿಕ ಗೊಳಿಸಿದ ಕೃತಕ ಜಾಣ್ಮೆ (ಎಐ) ಅನ್ನು ನೇರವಾಗಿ ಮನರಂಜನೆ ಮತ್ತು ಕ್ರೀಡೆಗಳ ನೇರ__ ಪ್ರಸಾರಕ್ಕೆ ಪರಿಚಯಿಸುತ್ತಿದ್ದೇವೆ. ವೀಕ್ಷಣೆಯ ಪ್ರತಿ ಕ್ಷಣವನ್ನು ತೀವ್ರವಾಗಿ ತೊಡಗಿಸಿ ಕೊಳ್ಳುವಿಕೆಯ ಅವಕಾಶವನ್ನಾಗಿ ಪರಿವರ್ತಿಸುತ್ತಿದ್ದೇವೆ. ವೀಕ್ಷಕರು ವೀಕ್ಷಿಸುವುದರಿಂದ ಆಲಿಸುವವರೆಗೆ, ಕುತೂಹಲದಿಂದ ಸಂದರ್ಭಕ್ಕೆ ಮತ್ತು ಅನ್ವೇಷಣೆಯಿಂದ ಶಿಫಾರಸಿ ನವರೆಗೆ ಸಹಜ ಮತ್ತು ತಕ್ಷಣ ಉಪಯುಕ್ತಕರ ಎಂದು ಭಾವಿಸುವ ರೀತಿಯಲ್ಲಿ ಸರಾಗವಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆʼ ಎಂದು ಹೇಳಿದ್ದಾರೆ.
ಉದಾಹರಣಗೆ ಬಳಕೆದಾರರೊಬ್ಬರು, "ನನ್ನ ಮನೆಗೆ ಪಾಲಕರು ಬರಲಿದ್ದಾರೆ. ನಾವೆಲ್ಲರೂ ಒಟ್ಟಿಗೆ ವೀಕ್ಷಿಸಬಹುದಾದ ಕಾರ್ಯಕ್ರಮ ಸೂಚಿಸು" ಅಥವಾ "ನಾವು ಅವಳಿಗಳಾಗಿದ್ದು, ಒಂದೇ ರೀತಿಯ ಬಗೆಗಿನ ಚಲನಚಿತ್ರಗಳನ್ನು ವೀಕ್ಷಿಸುತ್ತೇವೆ" ಎಂದು ಹೇಳಿದರೆ, ಬುದ್ಧಿವಂತ ಸಹಾಯಕ ಸಾಂಸ್ಕೃತಿಕ ಸೂಕ್ಷ್ಮ ವ್ಯತ್ಯಾಸ, ಸನ್ನಿವೇಶದ ಸಂದರ್ಭ ಅರ್ಥೈಸಿ ಸೂಕ್ತವಾದುದನ್ನು ಶಿಫಾರಸು ಮಾಡಲಿದೆ.
ಜಿಯೊಹಾಟ್‌ಸ್ಟಾರ್‌ನಲ್ಲಿ ಕ್ರೀಡೆಗಳ ನೇರ ಪ್ರಸಾರ ವೀಕ್ಷಣೆಯ ಅನುಭವ ಹೆಚ್ಚಿಸುವು ದಕ್ಕೂ ಇದರಿಂದ ಸಾಧ್ಯವಾಗಲಿದೆ. ಕ್ರೀಡೆಗಳ ಪ್ರಮುಖ ಕ್ಷಣಗಳು, ಸ್ಕೋರ್‌ಗಳು, ಆಟಗಾರರ ಆಟದ ವೈಖರಿಯ ಮುಖ್ಯಾಂಶಗಳು ಮತ್ತು ಕ್ರೀಡಾಭಿಮಾನಿಗಳು ತಿಳಿದು ಕೊಳ್ಳಲು ಬಯಸುವ ಇತರ ಯಾವುದೇ ವಿಷಯಗಳ ಸಂವಾದಾತ್ಮಕ ಹುಡುಕಾಟದ ಮೂಲಕ ಹೆಚ್ಚು ಪ್ರಯೋಜನ ಪಡೆದುಕೊಳ್ಳಬಹುದು.
ಆಯ್ದ ಅನುಭವಗಳೊಂದಿಗೆ ಪ್ರಾರಂಭಗೊಳ್ಳಲಿರುವ ಈ ಸೌಲಭ್ಯವು ಅನಂತರ ವಿಸ್ತರಣೆ ಗೊಳ್ಳಲಿದೆ. ನೇರ ಪ್ರಸಾರ ಮತ್ತು ಬಳಕೆದಾರರು / ವೀಕ್ಷಕರು ಇಷ್ಟಪಡುವ ಇತರ ಸೇವೆಗಳಿಗೂ ವ್ಯಾಪಿಸಲಿದೆ.
ಜಿಯೊಹಾಟ್‌ಸ್ಟಾರ್ ಮತ್ತು ಓಪನ್‌ಎಐ, ಅಪ್ಲಿಕೇಷನ್‌ನಲ್ಲಿನ ಅನುಭವ ಮೀರಿದ ಹೊಸ ಅನುಭವಗಳನ್ನು ಚಾಟ್‌ಜಿಪಿಟಿ ಮೂಲಕ ಪರಿಚಯಿಸಲಿದೆ. ಮನರಂಜನೆಯ ಹುಡುಕಾಟ ವನ್ನು ಜಿಯೊಹಾಟ್‌ಸ್ಟಾರ್ ಮೀರಿ ವಿಸ್ತರಿಸಲಿದೆ. ಮನರಂಜನೆ-ಸಂಬಂಧಿತ ಪ್ರಶ್ನೆಗಳಿಗಾಗಿ ಚಾಟ್‌ಜಿಪಿಟಿಯತ್ತ ಮುಖ ಮಾಡುವ ಬಳಕೆದಾರರು ಜಿಯೊಹಾಟ್‌ಸ್ಟಾರ್‌ನ ವಿಶಾಲ ಮಾಹಿತಿ ತಾಣದಿಂದ ಸಂದರ್ಭೋಚಿತ ಶಿಫಾರಸುಗಳು ಮತ್ತು ಸಂಬಂಧಿತ ಸ್ಟ್ರೀಮಿಂಗ್ ಲಿಂಕ್‌ಗಳನ್ನು ಪಡೆದುಕೊಳ್ಳಲಿದ್ದಾರೆ. ಇದು ಈ ಪಾಲುದಾರಿಕೆಯನ್ನು ನಿಜವಾದ ದ್ವಿಮುಖ ಸಂಯೋಜನೆಯನ್ನಾಗಿ ಮಾಡಲಿದೆ.
ಸ್ಟ್ರೀಮಿಂಗ್‌ನಲ್ಲಿ ಕೃತಕ ಬುದ್ಧಿಮತ್ತೆ ಸಂಯೋಜಿಸುವ ಮೂಲಕ, ಜಿಯೊಹಾಟ್‌ಸ್ಟಾರ್ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿನ ನೆಲೆಯನ್ನು ಗಮನಾರ್ಹವಾಗಿ ವಿಸ್ತರಿಸುತ್ತಿದೆ.
ಓಪನ್ ಎಐನ ಅತ್ಯಾಧುನಿಕ 'ಎಐ' ಮಾದರಿಗಳಿಂದ ಕಾರ್ಯನಿರ್ವಹಿಸಲಿರುವ ಹೊಸ ಸಂವಾದಾತ್ಮಕ ಅನ್ವೇಷಣೆ ಅನುಭವವು ಸ್ಟ್ರೀಮಿಂಗ್ ಅನ್ನು ಬುದ್ಧಿವಂತ, ಸಂದರ್ಭದ-ಅರಿವು ಮತ್ತು ವೈಯಕ್ತಿಕ ಅನುಭವವನ್ನಾಗಿ ಪರಿವರ್ತಿಸಲಿದೆ.
ಭಾರತದಲ್ಲಿ ಸ್ಟ್ರೀಮಿಂಗ್ ಬಳಕೆ ಹೆಚ್ಚುತ್ತಿದ್ದಂತೆ ಬಳಕೆದಾರರ ಉದ್ದೇಶ ಮತ್ತು ಸಂದರ್ಭ ವನ್ನು ನೈಜ ಸಮಯದಲ್ಲಿ ಅರ್ಥಮಾಡಿಕೊಳ್ಳುವ ಬುದ್ಧಿವಂತಿಕೆಯಿಂದ ಹೆಚ್ಚಿನ ಪ್ರಯೋಜನ ಲಭಿಸಲಿದೆ. ಕೃತಕ ಬುದ್ಧಿಮತ್ತೆ ಆಧಾರಿತ ವೈಯಕ್ತಿಕ ಅಗತ್ಯಗಳನ್ನು ಅಳವಡಿಕೆ ಮಾಡುವ ಮೂಲಕ ಮತ್ತು ಬಹುಭಾಷಾ ಸಂವಹನ ಸಕ್ರಿಯಗೊಳಿಸುವ ಮೂಲಕ, ಜಿಯೊಹಾಟ್‌ಸ್ಟಾರ್ ಹೆಚ್ಚು ಅಂತರ್ಗತ ವೇದಿಕೆಯನ್ನು ನಿರ್ಮಿಸುತ್ತಿದೆ, ಪ್ರೇಕ್ಷಕರು ತಮ್ಮ ಮನರಂಜನೆ ವೀಕ್ಷಿಸುವ ಅನುಭವವನ್ನು ರೂಪಿಸುವಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವಕಾಶ ಒದಗಿಸಲಿದೆ.