ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಲೆಕ್ಸಸ್ ಇಂಡಿಯಾ ಪುಣೆಯಲ್ಲಿ ತನ್ನ ನೂತನ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್ ಉದ್ಘಾಟನೆಯ ಮೂಲಕ ಮಹಾರಾಷ್ಟ್ರದಲ್ಲಿ ತನ್ನ ಉಪಸ್ಥಿತಿಗೆ ಶಕ್ತಿ

ಟ್ಸುಶೋ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್'(ಬಿಟಿಟಕೆಎಂ) ಪ್ರಾರಂಭಿಸದ್ದು ಲೆಕ್ಸಸ್ ಭಾರತ್ ಎಂಬ ವ್ಯಾಪಾರದ ಹೆಸರು ಹೊಂದಿದೆ. ಇದು ಕಿರ್ಲೋಸ್ಕರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ (ಕೆ.ಎಸ್.ಪಿ.ಎಲ್.), ಟೊಯೋಟಾ ಟ್ಸುಶೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಟಿಟಿಐಪಿಎಲ್) ಮತ್ತು ಜಪಾನ್‌ನ ಟೊಯೋಟಾ ಟ್ಸುಶೋ ಕಾರ್ಪೊರೇಷನ್ (ಟಿಟಿಸಿ) ನಡುವಿನ ಹೊಸ ಜಂಟಿ ಸಹಭಾಗಿತ್ವದ ಸಂಸ್ಥೆಯಾಗಿದೆ.

ಭಾರತದಾದ್ಯಂತ ಗ್ರಾಹಕರ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುವ ತನ್ನ ನಿರಂತರ ಶ್ರಮದ ಭಾಗವಾಗಿ, ಲೆಕ್ಸಸ್ ಇಂಡಿಯಾ ಪುಣೆಯಲ್ಲಿ ತನ್ನ ನೂತನ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್ ಅನ್ನು ಉದ್ಘಾಟಿಸಿದೆ. ಭಾರತದ ಐಷಾರಾಮಿ ವಾಹನ ಮಾರುಕಟ್ಟೆಯು ನಿರಂತರವಾಗಿ ಬೆಳೆಯುತ್ತಿದ್ದು, ಹಿಂದೆಂದೂ ಇಲ್ಲದಂತೆ ಐಷಾರಾಮಿ ಸಂಚಾರ ಆಯ್ಕೆಗಳನ್ನು ಅನ್ವೇಷಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ, ದೇಶದಾದ್ಯಂತ ಇರುವ ಗ್ರಾಹಕರಿಗೆ ಲೆಕ್ಸಸ್‌ ನ ನೈಜ ಅನುಭವವನ್ನು ಹತ್ತಿರವಾಗಿಸಲು ಬ್ರಾಂಡ್ ತನ್ನ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸು ತ್ತಿದೆ.

ಪುಣೆಯಲ್ಲಿ ಸ್ಥಾಪಿಸಲಾದ ನೂತನ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್ ಅನ್ನು 'ಭಾರತ್ ಟೊಯೋಟಾ ಟ್ಸುಶೋ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್'(ಬಿಟಿಟಕೆಎಂ) ಪ್ರಾರಂಭಿಸದ್ದು ಲೆಕ್ಸಸ್ ಭಾರತ್ ಎಂಬ ವ್ಯಾಪಾರದ ಹೆಸರು ಹೊಂದಿದೆ. ಇದು ಕಿರ್ಲೋಸ್ಕರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ (ಕೆ.ಎಸ್.ಪಿ.ಎಲ್.), ಟೊಯೋಟಾ ಟ್ಸುಶೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಟಿಟಿಐಪಿಎಲ್) ಮತ್ತು ಜಪಾನ್‌ನ ಟೊಯೋಟಾ ಟ್ಸುಶೋ ಕಾರ್ಪೊರೇಷನ್ (ಟಿಟಿಸಿ) ನಡುವಿನ ಹೊಸ ಜಂಟಿ ಸಹಭಾಗಿತ್ವದ ಸಂಸ್ಥೆಯಾಗಿದೆ. ಭಾರತದಲ್ಲಿ ತನ್ನ ಉಪಸ್ಥಿತಿಯನ್ನು ವಿಸ್ತರಿಸಲು ಮತ್ತು ಐಷಾರಾಮಿ ವಾಹನಗಳ ಗ್ರಾಹಕ ಅನುಭವವನ್ನು ಉನ್ನತ ಹಂತಕ್ಕೇರಿಸಲು ಲೆಕ್ಸಸ್‌ ಗೆ ಇರುವ ದೀರ್ಘಕಾಲೀನ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.

ಇದನ್ನೂ ಓದಿ: Drought Compensation: ಬರಪೀಡಿತ ರೈತರಿಗೆ ತುರ್ತು ನೆರವು; 5000 ರೂ. ಬರ ಪರಿಹಾರ ನೀಡಲು ತೀರ್ಮಾನ: ಸಿಎಂ ಡಿ.ಕೆ. ಶಿವಕುಮಾರ್

ಈ ಕೇಂದ್ರವನ್ನು ಕೆ.ಎಸ್‌.ಪಿ.ಎಲ್ ಸಂಸ್ಥೆಯ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಗೀತಾಂಜಲಿ ವಿಕ್ರಮ್ ಕಿರ್ಲೋಸ್ಕರ್, ಟಿ.ಟಿ.ಐ.ಪಿ.ಎಲ್ ಸಂಸ್ಥೆಯ ನಿರ್ದೇಶಕ ಹಾಗೂ ಚೀಫ್ ಫೈನಾನ್ಷಿಯಲ್ ಆಫೀಸರ್ ಶ್ರೀ ಜುನ್ ಶಿರಾಟೋರಿ, ಲೆಕ್ಸಸ್ ಭಾರತ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶ್ರೀನಿವಾಸ್ ಚಿವಿಕುಲ ಮತ್ತು ಲೆಕ್ಸಸ್ ಇಂಡಿಯಾದ ಅಧ್ಯಕ್ಷ ಶ್ರೀ ಹಿಕಾರು ಇಕೆಉಚಿ ಅವರು ಜಂಟಿಯಾಗಿ ಉದ್ಘಾಟಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಡೀಲರ್ ಪಾಲುದಾರ ಸಂಸ್ಥೆಗಳ ಹಿರಿಯ ನಾಯಕರು, ಲೆಕ್ಸಸ್ ಭಾರತ್ ಹಾಗೂ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ನ ಉನ್ನತ ಅಧಿಕಾರಿಗಳು ಮತ್ತು ಅನೇಕ ಗಣ್ಯರು ಉಪಸ್ಥಿತರಿದ್ದರು.

ಮುಂಬೈ ನಂತರ ಮಹಾರಾಷ್ಟ್ರದಲ್ಲಿ ತೆರೆಯಲಾದ ಲೆಕ್ಸಸ್‌ ನ ಮೊದಲ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್ ಎಂಬ ಹೆಗ್ಗಳಿಕೆಗೆ ಈ ಪುಣೆ ಜಿ.ಇ.ಸಿ. ಪಾತ್ರವಾಗಿದೆ. ಇತ್ತೀಚೆಗಷ್ಟೇ ಅಹಮದಾಬಾದ್ ಮತ್ತು ಸೂರತ್‌ ಗಳಲ್ಲಿ ಜಿ.ಇ.ಸಿಗಳನ್ನು ಯಶಸ್ವಿಯಾಗಿ ಉದ್ಘಾಟಿಸಿದ ನಂತರ, ದೇಶದಾದ್ಯಂತ ತನ್ನ ಜಾಲವನ್ನು ವಿಸ್ತರಿಸುವ ಲೆಕ್ಸಸ್ ಇಂಡಿಯಾದ ಯೋಜಿತ ಹೆಜ್ಜೆಯಲ್ಲಿ ಈ ಕೇಂದ್ರವು ಪ್ರಮುಖ ಮೈಲಿಗಲ್ಲಾಗಿದೆ.ಮೋಟಾರು ವಾಹನ ಉತ್ಪಾದನಾ ಕ್ಷೇತ್ರ, ಬೆಳೆಯುತ್ತಿರುವ ಐಟಿ ವಲಯ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಮೃದ್ಧ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾದ ಪುಣೆ ನಗರವು ಸಂಪ್ರದಾಯ, ಆವಿಷ್ಕಾರ ಹಾಗೂ ಪ್ರಗತಿಯ ಅನನ್ಯ ಸಂಗಮವಾಗಿದೆ. ಭಾರತದಾದ್ಯಂತ ತನ್ನ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್‌ ಗಳ ಜಾಲವನ್ನು ಮತ್ತಷ್ಟು ವಿಸ್ತರಿಸುವ ಮೂಲಕ, ಐಷಾರಾಮಿ ಗ್ರಾಹಕರೊಂದಿಗೆ ಆಳವಾದ ಬಾಂಧವ್ಯ ಬೆಳೆಸಿಕೊಳ್ಳುವುದು ಹಾಗೂ ತನ್ನ ಉತ್ಪನ್ನಗಳು ಮತ್ತು ಸೇವೆಗಳನ್ನು ಸುಲಭವಾಗಿ ದೊರೆಯುವಂತೆ ಮಾಡುವುದು ಲೆಕ್ಸಸ್ ಇಂಡಿಯಾದ ಪ್ರಮುಖ ಉದ್ದೇಶವಾಗಿದೆ.

lexus

ಲೆಕ್ಸಸ್‌ ನ "ಸರಳ ಆದರೆ ಭವ್ಯ" ಮತ್ತು "ಸೂಕ್ಷ್ಮ ಆದರೆ ಸಮೃದ್ಧ” ಎಂಬ ವೈ.ಇ.ಟಿ ಸಿದ್ಧಾಂತದ ಅಡಿಯಲ್ಲಿ ರೂಪುಗೊಂಡಿರುವ ಈ ನೂತನ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್ ಐಷಾರಾಮಿತನದ ಆಧುನಿಕ ಶೈಲಿಯನ್ನು ಪ್ರಸ್ತುತಪಡಿಸುತ್ತದೆ. ಈ ಆವರಣವು ಅತ್ಯಾಧುನಿಕ ವಿನ್ಯಾಸ, ಗ್ರಾಹಕರ ಅಗತ್ಯಗಳನ್ನು ಗ್ರಹಿಸುವ ಸತ್ಕಾರ ಮನೋಭಾವ ಮತ್ತು ಶ್ರದ್ಧೆಯಿಂದ ರೂಪಿಸಿದ ಸೇವೆಗಳನ್ನು ಒಳಗೊಂಡಿದ್ದು, ಪ್ರತಿಯೊಬ್ಬರಿಗೂ ಶ್ರೇಷ್ಠ ಹಾಗೂ ಸಾರ್ಥಕ ಅನುಭವವನ್ನು ನೀಡುತ್ತದೆ.

ಇದರೊಂದಿಗೆ, ಗ್ರಾಹಕರ ಅಗತ್ಯಗಳನ್ನು ಮೊದಲೇ ಗ್ರಹಿಸಿ ಅತ್ಯಂತ ಕಾಳಜಿಯಿಂದ ಆದರಿಸುವ ಜಪಾನ್‌ ನ ಒಮೊಟೆನಾಶಿ ಸತ್ಕಾರ ಸಂಸ್ಕೃತಿ ಹಾಗೂ ಭಾರತದ ಪವಿತ್ರ ಅತಿಥಿ ದೇವೋ ಭವ ಪರಂಪರೆಯನ್ನು ಈ ಜಿ.ಇ.ಸಿ ಸುಂದರವಾಗಿ ಸಂಯೋಜಿಸಿದೆ. ಇದು ಲೆಕ್ಸಸ್ ಪ್ರಯಾಣದ ಪ್ರತಿ ಹಂತದಲ್ಲೂ ಪ್ರತಿಯೊಬ್ಬ ಗ್ರಾಹಕರಿಗೆ ಅತ್ಯುನ್ನತ ಗೌರವ, ಆದರ ಮತ್ತು ಸಾಮೀಪ್ಯದ ಭಾವ ಮೂಡುವಂತೆ ಮಾಡುತ್ತದೆ.

ಉದ್ಘಾಟನೆ ಕುರಿತು ಮಾತನಾಡಿದ ಲೆಕ್ಸಸ್ ಇಂಡಿಯಾದ ಅಧ್ಯಕ್ಷ ಶ್ರೀ ಹಿಕಾರು ಇಕೆಉಚಿ, "ಭಾರತದ ಐಷಾರಾಮಿ ವಾಹನ ಮಾರುಕಟ್ಟೆಯು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಗ್ರಾಹಕರು ಈಗ ವಿಶಿಷ್ಟ ಉತ್ಪನ್ನಗಳು, ಅರ್ಥಪೂರ್ಣ ಅನುಭವಗಳು ಹಾಗೂ ತಮ್ಮ ಮೌಲ್ಯಗಳಿಗೆ ತಕ್ಕಂತೆ ಸ್ಪಂದಿಸುವ ಬ್ರಾಂಡ್ಗಳನ್ನು ಬಯಸುತ್ತಿದ್ದಾರೆ. ಲೆಕ್ಸಸ್‌ ನ ಅನುಭವವನ್ನು ದೇಶದಾದ್ಯಂತ ಇರುವ ಪ್ರತಿಯೊಬ್ಬ ಗ್ರಾಹಕರಿಗೂ ತಲುಪಿಸುವುದು ನಮ್ಮ ಪ್ರಮುಖ ಆಶಯವಾಗಿದೆ. ಈ ನಿಟ್ಟಿನಲ್ಲಿ ಪುಣೆಯ ನೂತನ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್ ಉದ್ಘಾಟನೆಯು ಲೆಕ್ಸಸ್ ಇಂಡಿಯಾ ಪಾಲಿಗೆ ಪ್ರಮುಖ ಮೈಲಿಗಲ್ಲಾಗಿದೆ.

ಮುಂಬೈ ನಂತರ ಮಹಾರಾಷ್ಟ್ರದ ಎರಡನೇ ಜಿ.ಇ.ಸಿ ಆಗಿ ಆರಂಭವಾಗಿರುವ ಈ ಕೇಂದ್ರವು, ಬೆಳೆಯುತ್ತಿರುವ ಈ ಐಷಾರಾಮಿ ಮಾರುಕಟ್ಟೆಯಲ್ಲಿ ನಮ್ಮ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸುತ್ತದೆ. ವಾಹನ ಕ್ಷೇತ್ರದ ಶ್ರೀಮಂತ ಪರಂಪರೆ ಹಾಗೂ ಶೈಕ್ಷಣಿಕ ಶ್ರೇಷ್ಠತೆಗೆ ಹೆಸರಾಗಿರುವ ಪುಣೆಯ ಕಲಿಕೆಯ ಹಂಬಲ ಮತ್ತು ಸತತ ಪ್ರಗತಿಯ ಹಾದಿಯು ಲೆಕ್ಸಸ್‌ ನ ತತ್ವಗಳಿಗೆ ಅತ್ಯಂತ ಹತ್ತಿರವಾಗಿದೆ. ನಮ್ಮ ಕರಕುಶಲತೆ, ನಾವೀನ್ಯತೆ ಹಾಗೂ ಒಮೊಟೆನಾಶಿ ಸತ್ಕಾರ ಮನೋಭಾವ ವನ್ನು ಪ್ರತಿಬಿಂಬಿಸುವ ಈ ಆವರಣಕ್ಕೆ ಗ್ರಾಹಕರನ್ನು ಸ್ವಾಗತಿಸಲು ನಾವು ಅತ್ಯಂತ ಸಂತೋಷ ಪಡುತ್ತೇವೆ. ಈ ನೂತನ ಕೇಂದ್ರದ ಮೂಲಕ ಗ್ರಾಹಕರೊಂದಿಗೆ ಇನ್ನಷ್ಟು ಆಳವಾದ ಬಾಂಧವ್ಯ ಬೆಳೆಸಿಕೊಳ್ಳಲು ಮತ್ತು ಲೆಕ್ಸಸ್‌ ಗೆ ಅನನ್ಯ ಎನಿಸಿರುವ ಶ್ರೇಷ್ಠ ಐಷಾರಾಮಿ ಅನುಭವವನ್ನು ಅವರಿಗೆ ತಲುಪಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲೆಕ್ಸಸ್ ಭಾರತ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶ್ರೀನಿವಾಸ್ ಚಿವಿಕುಲ, "ಪುಣೆಯಲ್ಲಿ ನಮ್ಮ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್ ಉದ್ಘಾಟನೆಯಾಗಿರು ವುದು ಭಾರತದಲ್ಲಿ ಲೆಕ್ಸಸ್ ಪ್ರಯಾಣದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ಲೆಕ್ಸಸ್ ಭಾರತ್ ಸಂಸ್ಥೆಯು ಪ್ರಸ್ತುತ ಮೂರು ಜಿ.ಇ.ಸಿ.ಗಳನ್ನು ಹೊಂದಿದ್ದು, ಗ್ರಾಹಕರಿಗೆ ಅತ್ಯುತ್ತಮ ಅನುಭವಗಳನ್ನು ತಲುಪಿಸುವ ಲೆಕ್ಸಸ್ ಇಂಡಿಯಾದ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ ನೀಡಲು ಬದ್ಧವಾಗಿದೆ. ನಾವು ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸುತ್ತಿದ್ದಂತೆ, ಜಾಗತಿಕ ಮಟ್ಟದ ಐಷಾರಾಮಿ ರೀಟೇಲ್ ಮಾನದಂಡಗಳನ್ನು ಕಾಯ್ದುಕೊಳ್ಳುವುದು ಹಾಗೂ ಲೆಕ್ಸಸ್‌ ನ ಅನನ್ಯತೆಗೆ ತಕ್ಕಂತೆ ಗ್ರಾಹಕರಿಗೆ ವೈಯಕ್ತಿಕ ಮತ್ತು ಅರ್ಥಪೂರ್ಣ ಅನುಭವಗಳನ್ನು ನೀಡುವುದೇ ನಮ್ಮ ಮುಖ್ಯ ಗುರಿಯಾಗಿದೆ" ಎಂದು ಹೇಳಿದರು.

ಪುಣೆಯ ನೂತನ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್ ಗೆ ಭೇಟಿ ನೀಡುವ ಗ್ರಾಹಕರು, ಲೆಕ್ಸಸ್‌ ನ ಐಷಾರಾಮಿ ವಾಹನಗಳನ್ನು ನೇರವಾಗಿ ವೀಕ್ಷಿಸಬಹುದಾಗಿದೆ. ಜೊತೆಗೆ ಬ್ರಾಂಡ್ ಪ್ರಸಿದ್ಧ ಕರಕುಶಲತೆ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ವಿದ್ಯುದೀಕರಿಸಿದ ಸಂಚಾರ ಪರಿಹಾರಗಳ ನೈಜ ಅನುಭವವನ್ನು ಪಡೆಯಬಹುದು. ಅಲ್ಲದೆ, ಪುಣೆಯಲ್ಲಿ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿರುವ ಲೆಕ್ಸಸ್ ಸರ್ವಿಸ್ ಪಾಯಿಂಟ್ ನಲ್ಲಿ ತಮ್ಮ ವಾಹನಗಳ ಸೇವೆಯನ್ನೂ ಪಡೆದುಕೊಳ್ಳಬಹುದು.

ಪ್ರಮುಖ ಐಷಾರಾಮಿ ಮಾರುಕಟ್ಟೆಗಳಲ್ಲಿ ತನ್ನ ಗ್ರಾಹಕ ಅನುಭವವನ್ನು ಇನ್ನಷ್ಟು ಹತ್ತಿರ ವಾಗಿಸುವ ಉದ್ದೇಶದಿಂದ, ಲೆಕ್ಸಸ್ ಇಂಡಿಯಾ ಪ್ರಸ್ತುತ ಮುಂಬೈ, ನವದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಚಂಡೀಗಢ, ಕೊಚ್ಚಿ, ಅಹಮದಾಬಾದ್, ಸೂರತ್ ಮತ್ತು ಪುಣೆ ನಗರಗಳಲ್ಲಿ ತನ್ನ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್ ಗಳನ್ನು ನಿರ್ವಹಿಸುತ್ತಿದೆ.

ಲೆಕ್ಸಸ್ ಇಂಡಿಯಾ ತನ್ನ ಮಾರಾಟದ ನಂತರದ ಸೇವಾ ಜಾಲವನ್ನೂ ಬಲಪಡಿಸುತ್ತಿದೆ. ಪುಣೆಯಲ್ಲಿ ತನ್ನ ಮಾರಾಟ ಜಾಲವನ್ನು ವಿಸ್ತರಿಸುವುದರ ಜೊತೆಗೆ, ಬ್ರ್ಯಾಂಡ್ ಒಟ್ಟು 19 ಎಲ್.ಎಸ್.ಪಿ. ಟಚ್ ಪಾಯಿಂಟ್ ಗಳನ್ನು ಹೊಂದಿದೆ. ಈ ಸೇವಾ ಕೇಂದ್ರಗಳು ಗ್ರಾಹಕರು ತಮ್ಮ ವಾಹನದ ಮಾಲೀಕತ್ವದ ಇಡೀ ಪಯಣದಲ್ಲಿ ಹೆಚ್ಚಿನ ಅನುಕೂಲತೆ, ಸುಲಭ ಲಭ್ಯತೆ ಮತ್ತು ನೆಮ್ಮದಿಯನ್ನು ನೀಡುತ್ತವೆ.

ಮತ್ತಷ್ಟು ಕೊಡುಗೆಯಾಗಿ, ಲೆಕ್ಸಸ್ ಇಂಡಿಯಾ ತನ್ನ ವಾಹನ ಮಾಲೀಕತ್ವದ ಪ್ರಯಾಣವನ್ನು ಯಾವುದೇ ತೊಂದರೆಯಿಲ್ಲದೆ ಸುಗಮಗೊಳಿಸಲು ಸಮಗ್ರ ಮೌಲ್ಯವರ್ಧಿತ ಸೇವೆಗಳು ಹಾಗೂ ಉನ್ನತೀಕರಿಸಿದ ರೋಡ್ ಸೈಡ್ ಅಸಿಸ್ಟೆನ್ಸ್ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದು ಟೋಯಿಂಗ್, ಟ್ಯಾಕ್ಸಿ ಸೇವೆ ಮತ್ತು ಪ್ರಯಾಣಿಕರನ್ನು ಅವರ ತಾಣಕ್ಕೆ ತಲುಪಿಸುವ ಸೌಲಭ್ಯಗಳನ್ನು ಒಳಗೊಂಡ 5 ವರ್ಷಗಳ ರಸ್ತೆಬದಿ ನೆರವಿನ ಪ್ಯಾಕೇಜ್ ಅನ್ನು ಒಳಗೊಂಡಿದೆ. ಇದರ ಜೊತೆಗೆ, ವಾಹನ ಮಾಲೀಕತ್ವದ ಇಡೀ ಪಯಣದಲ್ಲಿ ಗ್ರಾಹಕರಿಗೆ ಹೆಚ್ಚಿನ ಮನಃಶಾಂತಿ ನೀಡಲು, ಲೆಕ್ಸಸ್ ಇಂಡಿಯಾ ತನ್ನ ಎಲ್ಲಾ ಮಾದರಿಗಳ ಮೇಲೆ 8-ವರ್ಷ/2,00,000 ಕಿ.ಮೀ ವಾಹನ ಮತ್ತು ಹೈಬ್ರಿಡ್ ಬ್ಯಾಟರಿ ವಾರಂಟಿ**ಯನ್ನು ಒದಗಿಸುತ್ತಿದೆ. ಅಲ್ಲದೆ, ಕಡಿಮೆ ಇಎಂಐ ಹಾಗೂ ಭವಿಷ್ಯದ ನಿಶ್ಚಿತ ಮೌಲ್ಯದ ಭರವಸೆ ನೀಡುವ ಅಶ್ಯೂರ್ಡ್ ಬೈ ಬ್ಯಾಕ್ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಇದು ಹಣಕಾಸಿನ ನಮ್ಯತೆ ಹಾಗೂ ಪ್ರೀಮಿಯಂ ಮಾಲೀಕತ್ವದ ಅನುಭವವನ್ನು ಬಯಸುವ ಗ್ರಾಹಕರಿಗೆ ಅನುಕೂಲಕರವಾಗಿದ್ದು, ಆರ್.ಎಕ್ಸ್, ಎನ್.ಎಕ್ಸ್. ಮತ್ತು ಇ.ಎಸ್. ಮಾದರಿಗಳಿಗೆ ಅನ್ವಯಿಸುತ್ತದೆ. ಇದರೊಂದಿಗೆ ಕಂಫರ್ಟ್, ರಿಲ್ಯಾಕ್ಸ್ ಮತ್ತು ಪ್ರೀಮಿಯರ್ ಎಂಬ ವಿಶಿಷ್ಟ ಆಯ್ಕೆಗಳನ್ನು ಹೊಂದಿರುವ ಲೆಕ್ಸಸ್ ಲಕ್ಸರಿ ಕೇರ್ ಸೇವಾ ಪ್ಯಾಕೇಜ್‌ಗಳನ್ನೂ ಸಂಸ್ಥೆ ನೀಡುತ್ತಿದೆ.