ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

World’s Best Airport: 2026ರ ಟಾಪ್ 10 ವಿಶ್ವದ ವಿಮಾನ ನಿಲ್ದಾಣಗಳ ಪಟ್ಟಿ ಬಿಡುಗಡೆ: ದೆಹಲಿ, ಮುಂಬೈಗೆ ಯಾವ ಸ್ಥಾನ ?

ಸ್ಕೈಟ್ರಾಕ್ಸ್ ಜಾಗತಿಕ ಶ್ರೇಯಾಂಕದಲ್ಲಿ ವಿಶ್ವದಲ್ಲೇ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವು ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವೆಂದು ಗುರುತಿಸಲ್ಪಟ್ಟಿದೆ. 2026ರ ಟಾಪ್ 10 ವಿಶ್ವದ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ದೆಹಲಿ, ಮುಂಬೈಗೆ ಸ್ಥಾನ ದೊರಕಿದ್ದು, ಇವುಗಳು ಎಷ್ಟನೇ ಶ್ರೇಯಾಂಕದಲ್ಲಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಟಾಪ್ 10ರಲ್ಲಿ ಭಾರತದ 2 ವಿಮಾನ ನಿಲ್ದಾಣಗಳು

ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ) -

ನವದೆಹಲಿ: ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವು (Singapores Changi airport) ಹದಿಮೂರನೇ ಬಾರಿಗೆ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣವೆಂದು (top 10 world airports list 2026) ಗುರುತಿಸಲ್ಪಟ್ಟಿದೆ. ಸ್ಕೈಟ್ರಾಕ್ಸ್ (Skytrax) ಜಾಗತಿಕ ಶ್ರೇಯಾಂಕದಲ್ಲಿ ಟಾಪ್ 10 ಪಟ್ಟಿಯಲ್ಲಿ ಒಟ್ಟು 5 ಏಷ್ಯಾದ ವಿಮಾನ ನಿಲ್ದಾಣಗಳು ಪ್ರಾಬಲ್ಯ ಸಾಧಿಸಿದ್ದು, ಇದರಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಹೆಸರುಗಳು ಕೂಡ ಸೇರಿವೆ. ಭಾರತೀಯ ವಿಮಾನ ನಿಲ್ದಾಣಗಳ ಜಾಗತಿಕ ಶ್ರೇಯಾಂಕದಲ್ಲಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (IGI) ವಿಮಾನ ನಿಲ್ದಾಣವು ಮುಂಚೂಣಿಯಲ್ಲಿದೆ.

2025/2026 ರ ವಿಶ್ವ ವಿಮಾನ ನಿಲ್ದಾಣ ಸಮೀಕ್ಷೆಯಲ್ಲಿ ವಿಶ್ವದಾದ್ಯಂತದ ವಿಮಾನ ಪ್ರಯಾಣಿಕರು ಚಲಾಯಿಸಿರುವ ಮತಗಳ ಆಧಾರದಲ್ಲಿ ಸ್ಕೈಟ್ರಾಕ್ಸ್ ಬಿಡುಗಡೆ ಮಾಡಿದ ಜಾಗತಿಕ ಶ್ರೇಯಾಂಕದಲ್ಲಿ ಏಷ್ಯಾದ ವಿಮಾನ ನಿಲ್ದಾಣಗಳು ಅಗ್ರ 3 ಸ್ಥಾನಗಳನ್ನು ಪಡೆದಿದ್ದು, ಇದರಲ್ಲಿ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವನ್ನು ಮೊದಲ ಸ್ಥಾನದಲ್ಲಿದೆ.

ಜೈಪುರದ ʼಪಿಂಕ್ ಎಲಿಫೆಂಟ್' ಇನ್ನಿಲ್ಲ: ಬಣ್ಣ ಬಳಿದಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದೇ ಆನೆಯ ಸಾವಿಗೆ ಕಾರಣ?

ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣದೊಂದಿಗೆ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಊಟ, ಪ್ರಯಾಣಿಕರ ವಿಭಾಗದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ, ಅತ್ಯುತ್ತಮ ವಿಮಾನ ನಿಲ್ದಾಣ ವಲಸೆ ಸೇವೆ ಮತ್ತು ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣ ವಿಭಾಗದಲ್ಲೂ ವಿಮಾನ ನಿಲ್ದಾಣಗಳಿಗೆ ಪ್ರಶಸ್ತಿ ನೀಡಲಾಗಿದೆ.

ಅತ್ಯಂತ ಕುಟುಂಬ ಸ್ನೇಹಿ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ದಕ್ಷಿಣ ಕೊರಿಯಾದ ಇಂಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಜಪಾನ್‌ನ ಟೋಕಿಯೋ ಹನೆಡಾ ವಿಮಾನ ನಿಲ್ದಾಣವು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಇದರೊಂದಿಗೆ ಟೋಕಿಯೋ ಹನೆಡಾ ವಿಮಾನ ನಿಲ್ದಾಣವು ವಿಶ್ವದ ಸ್ವಚ್ಛ, ಅತ್ಯುತ್ತಮ ದೇಶೀಯ ವಿಮಾನ ನಿಲ್ದಾಣ ಮತ್ತು ಕಡಿಮೆ ಸಂಚಾರ ಮತ್ತು ಪ್ರವೇಶಿಸಬಹುದಾದ ಸೌಲಭ್ಯಗಳನ್ನು ಹೊಂದಿರುವ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಪ್ರಶಸ್ತಿಯನ್ನು ಕೂಡ ಗಳಿಸಿದೆ.

ಅತ್ಯುತ್ತಮ ವಿಮಾನ ನಿಲ್ದಾಣ ವಾಶ್‌ರೂಮ್‌ಗಳಿಗಾಗಿ ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಶಸ್ತಿ ಪಡೆದುಕೊಂಡಿದ್ದು, ಪ್ರಯಾಣಿಕರಿಗೆ ಅತ್ಯುತ್ತಮ ಶಾಪಿಂಗ್ ಅನುಭವಕ್ಕೆ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣ, ವಿಶ್ವದ ವರ್ಲ್ಡ್ಸ್ ಅತ್ಯುತ್ತಮ ಹೊಸ ವಿಮಾನ ನಿಲ್ದಾಣ ಟರ್ಮಿನಲ್ ಪ್ರಶಸ್ತಿಯನ್ನು ಜಪಾನ್‌ನ ಕುಮಾಮೊಟೊ ವಿಮಾನ ನಿಲ್ದಾಣ ಪಡೆದುಕೊಂಡಿದೆ.

ಇನ್ನು ಬ್ಯಾಗೇಜ್ ವಿತರಣಾ ವಿಭಾಗದಲ್ಲಿ ತೈವಾನ್ ಟಾವೊಯುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದರೆ, ಹೂಸ್ಟನ್ ವಿಮಾನ ನಿಲ್ದಾಣವು ಸತತ ನಾಲ್ಕನೇ ವರ್ಷವೂ ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಕಲೆಗಾಗಿ ಪ್ರಶಸ್ತಿ ಗಳಿಸಿದೆ.

ಟಾಪ್ 10 ರಲ್ಲಿರುವ ವಿಮಾನ ನಿಲ್ದಾಣಗಳು

2026ರ ಟಾಪ್ 10 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಸಿಂಗಾಪುರದ ಚಾಂಗಿ, ದಕ್ಷಿಣ ಕೊರಿಯಾದ ಸಿಯೋಲ್ ಇಂಚಿಯಾನ್, ಜಪಾನ್ ನ ಟೋಕಿಯೋ ಹನೇಡಾ, ಚೀನಾದ ಹಾಂಗ್ ಕಾಂಗ್, ಜಪಾನ್ ನ ಟೋಕಿಯೋ ನರಿಟಾ, ಫ್ರಾನ್ಸ್ ನ ಪ್ಯಾರಿಸ್ ಸಿಡಿಜಿ, ಇಟಲಿಯ ರೋಮ್ ಫಿಯುಮಿಸಿನೊ, ಟರ್ಕಿಯ ಇಸ್ತಾಂಬುಲ್, ಜರ್ಮನಿಯ ಮ್ಯೂನಿಚ್, ಕೆನಡಾದ ವ್ಯಾಂಕೋವರ್ ಸ್ಥಾನ ಪಡೆದಿದೆ.

ಯಾವ ಸ್ಥಾನದಲ್ಲಿದೆ ಭಾರತದ ವಿಮಾನ ನಿಲ್ದಾಣಗಳು ?

ಜಾಗತಿಕ ಶ್ರೇಯಾಂಕದಲ್ಲಿ, ಭಾರತೀಯ ವಿಮಾನ ನಿಲ್ದಾಣಗಳಲ್ಲಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮುಂಚೂಣಿಯಲ್ಲಿದೆ. 10 ರಲ್ಲಿ ಒಟ್ಟು 5 ಏಷ್ಯಾದ ವಿಮಾನ ನಿಲ್ದಾಣಗಳು ಟಾಪ್ 10 ಪಟ್ಟಿಯಲ್ಲಿ ದೆಹಲಿ, ಬೆಂಗಳೂರಿನ ಕೆಂಪೇಗೌಡ ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಸ್ಥಾನ ಪಡೆದಿವೆ.

ಟಾಪ್ 100 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ದೆಹಲಿಯ ಐಜಿಐ 28, ಬೆಂಗಳೂರು ವಿಮಾನ ನಿಲ್ದಾಣ 41, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 43, ಗೋವಾದ ಮನೋಹರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 64 ಮತ್ತು ಸಿಎಸ್ ಎಂಐಎ 66 ನೇ ಸ್ಥಾನದಲ್ಲಿದೆ.

ಪಶ್ಚಿಮ ಏಷ್ಯಾ ಯುದ್ಧ: ಹೊರ್ಮುಜ್ ಜಲಸಂಧಿ ಬಳಿ ಎಲ್‌ಪಿಜಿ, ಕಚ್ಚಾ ತೈಲ ಹೊತ್ತ 18 ಭಾರತೀಯ ಹಡಗು ಸ್ಥಗಿತ

ದೆಹಲಿ ವಿಮಾನ ನಿಲ್ದಾಣವು ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣ, ಹೈದರಾಬಾದ್ ವಿಮಾನ ನಿಲ್ದಾಣವು ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ವಿಮಾನ ನಿಲ್ದಾಣ ಸಿಬ್ಬಂದಿ ಸೇವೆ, ಬೆಂಗಳೂರು ವಿಮಾನ ನಿಲ್ದಾಣವು ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಸೇವೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.