ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಧ್ಯಪ್ರಾಚ್ಯದಲ್ಲಿ ಮಿಲಿಟರಿ ಸಂಘರ್ಷ: ಭಾರತದ ಎಲೆಕ್ಟ್ರಾನಿಕ್ಸ್‌ ವಲಯಕ್ಕೆ ಭಾರಿ ಹೊಡೆತ?

ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ಇರಾನ್ ಮೇಲೆ ನಡೆಸಿರುವ ದಾಳಿಯು ಭಾರತದ ಮೇಲೆ ಭಾರಿ ಪರಿಣಾಮ ಬೀರಲಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚಾಗಿರುವ ಮಿಲಿಟರಿ ಸಂಘರ್ಷವು ಭಾರತದ ಎಲೆಕ್ಟ್ರಾನಿಕ್ ರಫ್ತಿನ ಮೇಲೆ ಪರಿಣಾಮ ಬೀರಲಿದೆ. ಸಂಘರ್ಷದ ವಾತಾವರಣವು ರಫ್ತಿಗೆ ಅಡ್ಡಿ ಪಡಿಸಲಿದೆ ಎಂದು ಎಲೆಕ್ಟ್ರಾನಿಕ್ಸ್ ಉದ್ಯಮ ಸಂಸ್ಥೆಗಳು ಎಚ್ಚರಿಸಿವೆ.

ಸಂಗ್ರಹ ಚಿತ್ರ

ನವದೆಹಲಿ: ಇರಾನ್ (Iran) ಮೇಲೆ ಇಸ್ರೇಲ್ (israel) ಮತ್ತು ಯುಎಸ್ (US) ಸೇನಾ ಪಡೆಯು ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ನಡೆಸಿರುವ ದಾಳಿಯು ಮಧ್ಯಪ್ರಾಚ್ಯದಲ್ಲಿ (Middle East) ಉದ್ವಿಗ್ನತೆಯನ್ನು (Military conflict) ಹೆಚ್ಚಿಸಿದೆ. ಇದು ಭಾರತದ ಮೇಲೆ ಪರಿಣಾಮ ಬೀರಲಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚಾಗಿರುವ ಮಿಲಿಟರಿ ಸಂಘರ್ಷವು ಭಾರತದ ಎಲೆಕ್ಟ್ರಾನಿಕ್ ರಫ್ತಿಗೆ (Electronics Export) ಹೊಡೆತ ನೀಡಲಿದೆ. ಇದು ಭಾರತದ ಸುಮಾರು 4 ಲಕ್ಷ ಕೋಟಿ ರೂ. ಹೆಚ್ಚು ಮೌಲ್ಯದ ಎಲೆಕ್ಟ್ರಾನಿಕ್ಸ್ ರಫ್ತನ್ನು ಅಡ್ಡಿಪಡಿಸಬಹುದು ಎಂದು ಎಲೆಕ್ಟ್ರಾನಿಕ್ಸ್ ಉದ್ಯಮ ಸಂಸ್ಥೆಗಳು ಎಚ್ಚರಿಸಿವೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚಾಗಿರುವ ಮಿಲಿಟರಿ ಸಂಘರ್ಷವು ವಾಯುಪ್ರದೇಶ ಮತ್ತು ವ್ಯಾಪಾರ ಕಾರಿಡಾರ್ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ವಿವಿಧ ಸಾಮಗ್ರಿಗಳ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ. ಇದು ಭಾರತದ ಎಲೆಕ್ಟ್ರಾನಿಕ್ಸ್ ರಫ್ತಿನ ಮೇಲೆ ಪರಿಣಾಮ ಬೀರುವ ಜೊತೆಗೆ ದೇಶದಲ್ಲಿ ಉತ್ಪಾದನಾ ವೆಚ್ಚವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಇರಾನ್‌ ಯುದ್ಧ ಎಫೆಕ್ಟ್:‌ ಚಿನ್ನದ ದರ ತೀವ್ರ ಏರಿಕೆ; ಈಗ ಹೂಡಿಕೆ ಮಾಡಬೇಕೆ? ದರ ಇಳಿಯುತ್ತಾ?

ಈ ಕುರಿತು ಮಾಹಿತಿ ನೀಡಿರುವ ಆಪಲ್, ವಿವೋ, ಒಪ್ಪೋ, ಲಾವಾ, ಡಿಕ್ಸನ್, ಇತ್ಯಾದಿಗಳನ್ನು ಒಳಗೊಂಡಿರುವ ಭಾರತ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಸಂಘ (ICEA) ಅಧ್ಯಕ್ಷ ಪಂಕಜ್ ಮೊಹಿಂದ್ರೂ, ಭಾರತದ ಎಲೆಕ್ಟ್ರಾನಿಕ್ಸ್ ರಫ್ತುಗಳು ಜಾಗತಿಕ ಪೂರೈಕೆ ಸರಪಳಿಗಳೊಂದಿಗೆ ನಿಕಟವಾಗಿ ಸಂಯೋಜಿಸಲ್ಪಟ್ಟಿವೆ. ಇದರ ಸಾಗಾಟ ವಾಯು ಸಾರಿಗೆ ಮೂಲಕ ನಡೆಯುತ್ತದೆ. ಆದರೆ ಮಧ್ಯಪ್ರಾಚ್ಯ ವಾಯುಪ್ರದೇಶ ಅಥವಾ ಪ್ರಮುಖ ವ್ಯಾಪಾರ ಕಾರಿಡಾರ್‌ಗಳಲ್ಲಿ ಉಂಟಾಗಿರುವ ತೊಂದರೆಯಿಂದ ಅನೇಕ ಸವಾಲುಗಳು ಎದುರಾಗಲಿದೆ. ಈ ಅಸ್ಥಿರತೆ ದೀರ್ಘಕಾಲದವರೆಗೆ ಮುಂದುವರಿದರೆ ರಫ್ತು ಪ್ರಕ್ರಿಯೆ ತಾತ್ಕಾಲಿಕವಾಗಿ ವಿಳಂಬವಾಗಲಿದೆ ಎಂದು ತಿಳಿಸಿದ್ದಾರೆ.

ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರ ಮತ್ತು ಮಧ್ಯಪ್ರಾಚ್ಯ ಮಾರುಕಟ್ಟೆಗಳಲ್ಲಿ ಅದರ ವಿಸ್ತರಣೆ ಜಾಲದ ಮೇಲೆ ಇದು ಪರಿಣಾಮ ಬೀರಲಿದೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಲಿದೆ ಮತ್ತು ಸಾಗಣೆ ಸಮಯವು ವಿಸ್ತರಣೆಯಾಗಲಿದೆ. ಇದು ದೀರ್ಘಕಾಲದವರೆಗೆ ಮುಂದುವರಿದರೆ ಹೆಚ್ಚಿನ ಸಮಸ್ಯೆಗಳು ಉಂಟಾಗಲಿದೆ ಎಂದು ಅವರು ತಿಳಿಸಿದರು.

ದೇಶದಿಂದ ಎಲೆಕ್ಟ್ರಾನಿಕ್ಸ್ ರಫ್ತು 2025ರಲ್ಲಿ ರೂ. 4 ಲಕ್ಷ ಕೋಟಿ ರೂ. ದಾಟಿದೆ. ಈ ವರ್ಷ ನಾಲ್ಕು ಸೆಮಿಕಂಡಕ್ಟರ್ ಸ್ಥಾವರಗಳು ಉತ್ಪಾದನೆಯನ್ನು ಪ್ರಾರಂಭಿಸಿದ್ದುವು, ಇದು ಮತ್ತಷ್ಟು ಬೆಳೆಯುವ ನಿರೀಕ್ಷೆಯಿದೆ. 2025ರಲ್ಲಿ 2.74 ಲಕ್ಷ ಕೋಟಿ ರೂ. ಮೌಲ್ಯದ ವಿದೇಶಿ ಸಾಗಣೆಗಳೊಂದಿಗೆ ಸ್ಮಾರ್ಟ್‌ಫೋನ್‌ಗಳು ಭಾರತದ ಪ್ರಮುಖ ರಫ್ತು ವರ್ಗವಾಗಿ ಪರಿಗಣಿಸಲ್ಪಟ್ಟಿದೆ.

ಹೊರ್ಮುಜ್‌ ಜಲಸಂಧಿ ಸ್ಥಗಿತಗೊಂಡರೂ ಭಾರತಕ್ಕಿಲ್ಲ ಸಮಸ್ಯೆ; 25 ದಿನಕ್ಕಾಗುವಷ್ಟು ಕಚ್ಚಾ ತೈಲ ದಾಸ್ತಾನಿದೆ ಎಂದ ಕೇಂದ್ರ: ಪ್ಲ್ಯಾನ್‌ ಬಿಯೂ ಸಿದ್ಧ

ಎಲೆಕ್ಟ್ರಾನಿಕ್ಸ್ ಘಟಕಗಳ ಉದ್ಯಮ ಸಂಸ್ಥೆ ಎಲ್ಸಿನಾದ ಪ್ರಧಾನ ಕಾರ್ಯದರ್ಶಿ ರಾಜೂ ಗೋಯೆಲ್ ಅವರು ಪ್ರತಿಕ್ರಿಯಿಸಿ, ಮಧ್ಯಪ್ರಾಚ್ಯದೊಂದಿಗಿನ ಭಾರತದ ಸಂಬಂಧಗ ಕೇವಲ ಸಾಮಾಜಿಕ, ಆರ್ಥಿಕ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಇದೆ. ಇತ್ತೀಚಿನ ವರ್ಷಗಳಲ್ಲಿ ಮಧ್ಯಪ್ರಾಚ್ಯವು ಎಲೆಕ್ಟ್ರಾನಿಕ್ಸ್, ವಿಶೇಷವಾಗಿ ಮೊಬೈಲ್‌ಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಘಟಕಗಳ ರಫ್ತಿಗೆ ಪ್ರಮುಖ ತಾಣವಾಗಿದ್ದು, ಯುಎಇ, ಸೌದಿ ಅರೇಬಿಯಾ ಮತ್ತು ಇಸ್ರೇಲ್ ಪ್ರಮುಖ ಮಾರುಕಟ್ಟೆಗಳಾಗಿವೆ. ಹೀಗಾಗಿ ಸಂಘರ್ಷದ ವಾತಾವರಣ ವಾರ್ಷಿಕ ರಫ್ತುಗಳ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ ಎಂದು ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author