2026ರಲ್ಲಿ ನಿಫ್ಟಿ 30,000ಕ್ಕೆ ಜಿಗಿತ: ವಾಲ್ ಸ್ಟ್ರೀಟ್ ತಜ್ಞರ ಭವಿಷ್ಯ
ರಾಯ್ಟರ್ಸ್ ಸಮೀಕ್ಷೆಯ ಪ್ರಕಾರ, 2026ರ ಮಧ್ಯ ಭಾಗದಲ್ಲಿ ಭಾರತೀಯ ಸ್ಟಾಕ್ ಮಾರ್ಕೆಟ್ ಸೂಚ್ಯಂಕಗಳು ಹೊಸ ಎತ್ತರಕ್ಕೆ ಏರಿಕೆಯಾಗಲಿವೆ. ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ದಿಗ್ಗಜ ಜೆಪಿ ಮೋರ್ಗಾನ್ ಪ್ರಕಾರ ನಿಫ್ಟಿ ಸೂಚ್ಯಂಕವು 2026ರ ಅಂತ್ಯದ ವೇಳೆಗೆ 30,000ಕ್ಕೆ ತಲುಪಲಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಡಿ. 1: ನೀವು ಸ್ಟಾಕ್ಸ್‌ಗಳಲ್ಲಿ (Stock Market) ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ಗುಡ್ ನ್ಯೂಸ್. ಕಳೆದ ಒಂದು ವರ್ಷದಲ್ಲಿ ಭಾರತದ ಸ್ಟಾಕ್ ಮಾರ್ಕೆಟ್ ಕುಸಿತಕ್ಕೀಡಾಗಿದೆ. ಹೂಡಿಕೆದಾರರಿಗೆ ಆದಾಯ ಶೂನ್ಯವಾಗಿದೆ. ಹೀಗಿದ್ದರೂ 2026ರಲ್ಲಿ ಭಾರತದ ಷೇರು ಮಾರುಕಟ್ಟೆ ಚೇತರಿಸಲಿದೆ ಎಂದು ವಾಲ್ ಸ್ಟ್ರೀಟ್ ತಜ್ಞರು ಭವಿಷ್ಯ ನುಡಿದಿದ್ದಾರೆ.
ರಾಯ್ಟರ್ಸ್ ಸಮೀಕ್ಷೆಯ ಪ್ರಕಾರ, 2026ರ ಮಧ್ಯ ಭಾಗದಲ್ಲಿ ಭಾರತೀಯ ಸ್ಟಾಕ್ ಮಾರ್ಕೆಟ್ ಸೂಚ್ಯಂಕಗಳು ಹೊಸ ಎತ್ತರಕ್ಕೆ ಏರಿಕೆಯಾಗಲಿವೆ. ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ದಿಗ್ಗಜ ಜೆಪಿ ಮೋರ್ಗಾನ್ ಪ್ರಕಾರ ನಿಫ್ಟಿ ಸೂಚ್ಯಂಕವು 2026ರ ಅಂತ್ಯದ ವೇಳೆಗೆ 30,000ಕ್ಕೆ ತಲುಪಲಿದೆ. ಅಮೆರಿಕದ ಟಾರಿಫ್ ಸಂಘರ್ಷ, ದುರ್ಬಲ ರುಪಾಯಿಯ ಹೊರತಾಗಿಯೂ ಚೇತರಿಕೆಯ ಆರಂಭಿಕ ಲಕ್ಷಣಗಳೂ ಕಾಣಿಸಿವೆ. ಜಾಗತಿಕ ಹೂಡಿಕೆ ಭಾರತದ ಕಡೆಗೆ ಮತ್ತೆ ಹರಿದು ಬರುವ ನಿರೀಕ್ಷೆಯೂ ಇದೆ. ಮೋರ್ಗಾನ್ ಸ್ಟಾನ್ಲಿ, ಸಿಟಿ ಗ್ರೂಪ್, ಗೋಲ್ಡ್‌ಮನ್ ಸ್ಯಾಕ್ಸ್ ಗ್ರೂಪ್ 2026ರಲ್ಲಿ ಭಾರತೀಯ ಸ್ಟಾಕ್ ಮಾರ್ಕೆಟ್ ಚೇತರಿಸುವ ನಿರೀಕ್ಷೆ ಇದೆ ಎಂದು ವರದಿ ಮಾಡಿವೆ. ಕಾರ್ಪರೇಟ್ ಕಂಪನಿಗ ಆದಾಯ ಸ್ಥಿರತೆ ಕಾಣಲಿದೆ. ಸರ್ಕಾರದ ನೀತಿಗಳೂ ಪುಷ್ಟಿ ನೀಡಲಿದೆ ಎಂದಿದೆ.
2025ರಲ್ಲಿ ಭಾರತೀಯ ಷೇರು ಮಾರುಕಟ್ಟೆಗೆ ತೀವ್ರ ಹಿನ್ನಡೆಯಾಗಿತ್ತು. ರುಪಾಯಿ ಏಷ್ಯಾದ ಕರೆನ್ಸಿಗಳಲ್ಲಿಯೇ ಕಳಪೆ ಪ್ರದರ್ಶನ ದಾಖಲಿಸಿತ್ತು. ಅಮೆರಿಕದ ಟಾರಿಫ್ ವಾರ್ ಪರಿಣಾಮ ರಫ್ತುದಾರರ ಆದಾಯಕ್ಕೆ ಹೊಡೆತ ಬಿದ್ದಿತ್ತು.ಹೀಗಿದ್ದರೂ, ಷೇರು ಮಾರುಕಟ್ಟೆ 2026ರಲ್ಲಿ ಚೇತರಿಸುವ ಬಗ್ಗೆ ಆರಂಭಿಕ ಲಕ್ಷಣಗಳು ಕಾಣಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತದಲ್ಲಿ ಹೂಡಿಕೆಯನ್ನು ಪುನರಾರಂಭಿಸಿದ್ದಾರೆ. ಇತ್ತೀಚಿನ ಆರ್‌ಬಿಐ ರೆಪೊ ದರ ಕಡಿತ, ಜಿಎಸ್‌ಟಿ ದರ ಇಳಿಕೆಯ ಸಕಾರಾತ್ಮಕ ಪರಿಣಾಮದಿಂದ ಆರ್ಥಿಕ ಚಟುವಟಿಕೆಗಳು ವೃದ್ಧಿಸಲಿವೆ ಎಂದು ತಜ್ಞರು ತಿಳಿಸಿದ್ದಾರೆ.
ಆಧಾರ್-ಪ್ಯಾನ್ ಲಿಂಕ್, ಎಟಿಎಂ ವಿತ್‌ಡ್ರಾ ಫೀಸ್...: ಬದಲಾಗಲಿದೆ ಹಲವು ನಿಯಮಗಳು
ಕಾರ್ಪೊರೇಟ್ ಕಂಪನಿಗಳ ಆದಾಯ ಹೆಚ್ಚಳವಾಗುತ್ತಿದೆ. ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಟಾಪ್ 100 ಕಂಪನಿಗಳ ಲಾಭದಲ್ಲಿ 12% ಹೆಚ್ಚಳವಾಗಿದೆ. ಎನ್‌ಎಸ್‌ಇ ನಿಫ್ಟಿ 50 ಇಂಡೆಕ್ಸ್ ನವೆಂಬರ್ 20ಕ್ಕೆ ದಾಖಲೆಯ ಎತ್ತರಕ್ಕೇರಿದೆ. 26,228ಕ್ಕೆ ಏರಿಕೆಯಾಗಿತ್ತು. ಈ ಮೂಲಕ 2024 ಸೆಪ್ಟೆಂಬರ್‌ನ ದಾಖಲೆಯನ್ನು ಹಿಂದಿಕ್ಕಿದೆ. ಆರ್‌ಬಿಐ ಈ ವರ್ಷ 100 ಬೇಸಿಸ್ ಪಾಯಿಂಟ್ ಅಥವಾ 1 ಪರ್ಸೆಂಟ್ ದರ ಕಡಿತ ಮಾಡಿದೆ. ಇದು ಕೂಡ ಚೇತರಿಕೆಗೆ ಪೂರಕವಾಗಿದೆ. ಕಳೆದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ದರ 8.2% ಕ್ಕೆ ಏರಿಕೆಯಾಗಿರುವುದು ಗುಡ್ ನ್ಯೂಸ್ ಆಗಿದೆ. ಆರಂಭಿಕ ಚೇತರಿಕೆಯನ್ನು ಬಿಂಬಿಸಿದೆ.