Nirmala Sitharaman:ಬಜೆಟ್ ಮಂಡನೆ ಆಗ್ತಿದ್ದಂತೆ ನಿರ್ಮಲಾ ಸೀತಾರಾಮನ್ ಫೊಟೋಗೆ ಪೂಜೆ ಮಾಡಿದ ಉದ್ಯಮಿ!!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಮ್ಮ ಎಂಟನೇ ಬಜೆಟ್ ಮಂಡಿಸಿದ್ದು, ಇವತ್ತು ಭಾರತೀಯರ ಪಾಲಿಗೆ ‘ಬಜೆಟ್ ಡೇ’ ಎಂದವರು ಯಾರು? ಮತ್ತು ಬಜೆಟ್ ಮಂಡನೆಯ ವಿಶೇಷತೆಗಳೇನು? ಎಂಬ ಮಾಹಿತಿ ಇಲ್ಲಿದೆ...


ನವದೆಹಲಿ: ಕೇಂದ್ರ ಹಣಕಾಸು ಸಚಿವೆ (finance minister) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ದಾಖಲೆಯ 8ನೇ ಬಾರಿಗೆ ಕೇಂದ್ರ ಬಜೆಟನ್ನು (Union Budget) ಮಂಡಿಸಿದ್ದಾರೆ. ಇವತ್ತು ಸೋಷಿಯಲ್ ಮಿಡಿಯಾದಲ್ಲಿ (Social Media) ಬಜೆಟ್ ಘೋಷಣೆಗಳ ಬಗೆಯೇ ಚರ್ಚೆಗಳು ನಡೆಯುತ್ತಿವೆ. ಇವರಲ್ಲಿ ಉದ್ಯಮಿ ಹರ್ಷ ಗೊಯೆಂಕಾ ( Harsh Goenka) ಸಹ ಒಬ್ಬರಾಗಿದ್ದು, ಇವರು ಸೋಷಿಯಲ್ ಮೀಡಿಯಾದಲ್ಲಿ ಬಜೆಟ್ ಘೋಷಣೆಗಳ ಬಗ್ಗೆ ಚರ್ಚೆಗೆ ಸೇರಿಕೊಂಡಿದ್ದು, ಸ್ವಲ್ಪ ವಿಭಿನ್ನ ಚರ್ಚಾ ವಸ್ತುವಿನ ಕಾರಣ ಇವರು ಇದೀಗ ಮಾಧ್ಯಮಗಳ ಗಮನವನ್ನು ಸೆಳೆದಿದ್ದಾರೆ.
ಕೇಂದ್ರ ಸಚಿವರು ಬಜೆಟ್ ನಲ್ಲಿ ಯೋಜನೆಗಳನ್ನು ಘೋಷಿಸುವಾಗ ಎಲ್ಲರೂ ಹೇಗೆ ಕುತೂಹಲದಿಂದಿರುತ್ತಾರೆಂಬುದನ್ನು ಗೊಯಂಕ ಸೂಚಿಸುವ ಮೂಲಕ ಗಮನ ಸೆಳೆದಿದ್ದಾರೆ.
‘ಇವತ್ತು ನಮಗೆಲ್ಲರಿಗೂ ಬಜೆಟ್ ಡೇ’ (Budget Day) ಎಂದು ಉದ್ಯಮ ಕ್ಷೇತ್ರದ ಧಿಗ್ಗಜ ಗೊಯಂಕ ಬರೆದುಕೊಂಡಿದ್ದು, ಇದರೊಂದಿಗೆ ವ್ಯಕ್ತಿಯೊಬ್ಬರು ಟಿವಿ ಮುಂದೆ ಬಜೆಟ್ ನೋಡುತ್ತಾ ಅದಕ್ಕೆ ಊದುಬತ್ತಿ ಹಚ್ಚಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಸೂರತ್ ನ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದರು. ಈ ವಿಡಿಯೋ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ, ಗೊಯಂಕ ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಕೇಂದ್ರ ಸರಕಾರವು ಈ ಬಾರಿ 10 ವೈವಿಧ್ಯಮಯ ಕ್ಷೇತ್ರಗಳತ್ತ ಗಮನ ಹರಿಸಿದ್ದು, ಕೃಷಿ, ಉತ್ಪಾದನೆ, ಉದ್ಯೋಗ, ಎಂ.ಎಸ್.ಎಂ.ಇ., ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಇದರಲ್ಲಿ ಸೇರಿದೆ’ ಎಂದು ಸಚಿವೆ ನಿರ್ಮಲ ಸೀತಾರಾಮನ್ ತಮ್ಮ ಬಜೆಟ್ ಭಾಷಣದ ಪ್ರಾರಂಭದಲ್ಲಿ ಉಲ್ಲೇಖಿಸಿದರು.
ಇದನ್ನೂ ಓದಿ: Union Budget: ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ಬಂಪರ್ ! ತೆರಿಗೆಯಲ್ಲಿ ವಿನಾಯಿತಿ
Meanwhile, all of us #budgetday pic.twitter.com/bOnoklp4VA
— Harsh Goenka (@hvgoenka) February 1, 2025
ಇಷ್ಟು ಮಾತ್ರವಲ್ಲದೇ ರೈತರಿಗೆ ಯೋಜನೆಗಳನ್ನು ಘೋಷಿಸುವುದರೊಂದಿಗೆ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಯನ್ನೂ ಸಹ ಹಣಕಾಸು ಸಚಿವರು ಬಜೆಟ್ ನಲ್ಲಿ ಘೋಷಿಸಿದ್ದಾರೆ. ‘ಗಿಗ್ ಕಾರ್ಮಿಕರು ಮತ್ತು ಆನ್ ಲೈನ್ ಉದ್ಯೊಗಿಗಳಿಗೆ ಸಾಮಾಜಿಕ ಭದ್ರತಾ ಯೋಜನೆಯನ್ನು ಘೋಷಿಸಲಾಗಿದೆ. ಇದಕ್ಕಾಗಿ ಸರಕಾರವು ನೋಂದಣಿಗಾಗಿ ಶೀಘ್ರವೇ ವೆಬ್ ಸೈಟನ್ನು ಪ್ರಾರಂಭಿಸಲಿದೆ. ಇದರಿಂದಾಗಿ ಸುಮಾರು 1 ಕೋಟಿ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.
ಸಚಿವೆ ನಿರ್ಮಲಾ ಅವರು ತಮ್ಮ ಬಜೆಟ್ ಮಂಡನೆಗೆ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸೀರೆಯನ್ನುಟ್ಟು ಗಮನ ಸೆಳೆದರು. ಕೈಮಗ್ಗದ ರೇಷ್ಮೆ ಸೀರೆಯನ್ನುಟ್ಟು ಬಂದ ಸಚಿವರು, ಈ ಸೀರೆಯಲ್ಲಿ ಮತ್ಸ್ಯ – ಥೀಮ್ ನ ಎಂಬ್ರಾಯಿಡರಿ ಇದ್ದು, ಚಿನ್ನದ ಬಾರ್ಡರನ್ನು ಹೊಂದಿಎ. ಇದನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿ ಅವರು ಸಚಿವರಿಗೆ ಉಡುಗೊರೆಯಾಗಿ ನೀಡಿದ್ದರು.
ಡಿಜಿಟಲ್ ಟ್ಯಾಬ್ಲೆಟ್ ಮೂಲಕ ಸಚಿವರು ಸಂಸತ್ತಿನಲ್ಲಿ ತಮ್ಮ ಬಜೆಟ್ ಮಂಡಿಸಿದರು. ಇದನ್ನು ‘ಬಾಹಿ-ಖಾತಾ’ ಪೌಚ್ ಮೂಲಕ ಕವರ್ ಮಾಡಲಾಗಿತ್ತು, 2019ರಿಂದ ಡಿಜಿಟಲ್ ಟ್ಯಾಬ್ಲೆಟ್ ಮೂಲಕ ಸಚಿವರು ಬಜೆಟ್ ಮಂಡಿಸುತ್ತಿದ್ದಾರೆ.