Bahubali rocket: ಬಾಹ್ಯಾಕಾಶಕ್ಕೆ ಜಿಗಿಯಲು BlueBird Block-2 ಸ್ಯಾಟಲೈಟ್ ಸಜ್ಜು; ಏನೆಲ್ಲಾ ವಿಶೇಷತೆಯಿದೆ ಗೊತ್ತಾ?
ಕ್ರಿಸ್‌ಮಸ್ ಹಬ್ಬದಂದು ಬಾಹುಬಲಿ ರಾಕೆಟ್ ಮೂಲಕ ಎಲ್ ವಿಎಂ3 ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧತೆ ನಡೆಸಿದೆ. ತನ್ನ ಆರನೇ ಕಾರ್ಯಾಚರಣೆಯಲ್ಲಿ ಅತ್ಯಂತ ಭಾರವಾದ ವಾಣಿಜ್ಯ ಸಂವಹನ ಉಪಗ್ರಹವಾದ ಬ್ಲೂಬರ್ಡ್ ಬ್ಲಾಕ್-2 ಅನ್ನು ಲೋ-ಅರ್ಥ್ ಕಕ್ಷೆಗೆ ಸೇರಿಸಲು ಇಸ್ರೋ ಸಜ್ಜಾಗಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು: ಬಾಹ್ಯಾಕಾಶ ಆಧಾರಿತ ಬ್ರಾಡ್‌ಬ್ಯಾಂಡ್ ತಂತ್ರಜ್ಞಾನದಲ್ಲಿ ಪ್ರಮುಖ ಮೈಲಿಗಲ್ಲನ್ನು ಸ್ಥಾಪಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಜ್ಜಾಗಿದೆ. ಕ್ರಿಸ್‌ಮಸ್ ಹಬ್ಬದಂದು (Christmas Eve) ಬಾಹುಬಲಿ ರಾಕೆಟ್ (Bahubali rocket) ಮೂಲಕ ಎಲ್ ವಿಎಂ3 (LVM3) ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ. ಇಸ್ರೋ ತನ್ನ ಆರನೇ ಕಾರ್ಯಾಚರಣೆಯಾದ ಎಲ್ ವಿಎಂ3 ಹಾರಾಟದಲ್ಲಿ ಅತ್ಯಂತ ಭಾರವಾದ ವಾಣಿಜ್ಯ ಸಂವಹನ ಉಪಗ್ರಹವಾದ (commercial communications satellite) ಬ್ಲೂಬರ್ಡ್ ಬ್ಲಾಕ್- 2 (BlueBird Block-2) ಅನ್ನು ಲೋ-ಅರ್ಥ್ ಕಕ್ಷೆಯಲ್ಲಿ ಸೇರಿಸಲು ಸಜ್ಜಾಗಿದೆ.
ದೇಶದ ವಾಣಿಜ್ಯ ಉಪಗ್ರಹ ಉಡಾವಣೆಯಲ್ಲಿ ಇದೊಂದು ಗಮನಾರ್ಹ ಪ್ರಗತಿಯಾಗಿದೆ. ಇಸ್ರೋ ತನ್ನ ಲಾಂಚ್ ವೆಹಿಕಲ್ ಮಾರ್ಕ್-III-ಎಂ6 (LVM3-M6) ನಲ್ಲಿ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಮತ್ತು ಸ್ಪೇಸ್‌ಮೊಬೈಲ್‌ನ ಹಿಂದಿನ ಕಂಪನಿಯಾದ ಎಎಸ್ ಟಿ ಅಂಡ್ ಸೈನ್ಸ್ ಸಹಯೋಗದೊಂದಿಗೆ ಡಿಸೆಂಬರ್ 24ರಂದು ಬೆಳಗ್ಗೆ 8.54ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಪ್ಯಾಡ್‌ನಿಂದ ಉಡಾವಣೆ ಮಾಡಲಿದೆ.
ರಾಜಕೀಯ ವಿರೋಧಿಗಳ ಮಣಿಸಲು ಇಡಿ, ಸಿಬಿಐ ಬಿಜೆಪಿಯ ಅಸ್ತ್ರ; ಜರ್ಮನಿಯಲ್ಲಿ ಮೋದಿ ವಿರುದ್ಧ ರಾಹುಲ್ ಗುಡುಗು
ಯುಎಸ್ ಮೂಲದ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವು ಸ್ಮಾರ್ಟ್‌ಫೋನ್‌ಗಳನ್ನು ನೇರವಾಗಿ ಉಪಗ್ರಹ ಸಂಪರ್ಕ ಕಲ್ಪಿಸುವ ವಿಶ್ವದ ಮೊದಲ ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಅನ್ನು ಒದಗಿಸಲಿದೆ.
ASTbros, are you ready? 🤩
— ISRO Spaceflight (@ISROSpaceflight) December 15, 2025
The BlueBird-6 satellite has been encapsulated within the LVM3 rocket's Payload Fairing in preparation for launch! 🚀
LVM3-M6 is currently scheduled to lift off on 21 December 🗓 pic.twitter.com/qzSsTQIUe4
ವಿಶೇಷತೆಗಳು
ಇಸ್ರೋ ಅಭಿವೃದ್ಧಿಪಡಿಸಿರುವ ಎಲ್ವಿಎಂ3 ಮೂರು-ಹಂತದ ವಿನ್ಯಾಸವನ್ನು ಹೊಂದಿದೆ. ಇದರಲ್ಲಿ ಎರಡು ಘನ ಸ್ಟ್ರಾಪ್-ಆನ್ ಮೋಟಾರ್‌ಗಳು (ಎಸ್200), ಒಂದು ದ್ರವ ಕೋರ್ ಹಂತ (ಎಲ್110) ಮತ್ತು ಕ್ರಯೋಜೆನಿಕ್ ಮೇಲಿನ ಹಂತ (ಸಿ25) ಅನ್ನು ಒಳಗೊಂಡಿದೆ. ಒಟ್ಟು 640 ಟನ್ ಭಾರವಿದ್ದು, 43.5 ಮೀಟರ್ ಎತ್ತರವನ್ನು ಹೊಂದಿದೆ. ಎಲ್ವಿಎಂ3ಯು ಚಂದ್ರಯಾನ-2, ಚಂದ್ರಯಾನ-3 ಮತ್ತು ಎರಡು ಒನ್‌ವೆಬ್ ಕಾರ್ಯಾಚರಣೆಗಳನ್ನು ಉಡಾವಣೆ ಮಾಡುವ ಮೂಲಕ ಒಟ್ಟು 72 ಉಪಗ್ರಹಗಳನ್ನು ಹೊತ್ತೊಯ್ದಿದೆ.
ಎಲ್ವಿಎಂ3-ಎಂ6ಯು 100 ಕೆಜಿ ತೂಕದ ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು 53 ಡಿಗ್ರಿಗಳಲ್ಲಿ ಇಳಿಜಾರಾದ ವೃತ್ತಾಕಾರದ 520-ಕಿಲೋ ಮೀಟರ್ ನಲ್ಲಿ ಕಕ್ಷೆಯಲ್ಲಿ ಇರಿಸಲಿದೆ. 223 ಚದರ ಮೀಟರ್ ಹಂತ ಹಂತದ ಶ್ರೇಣಿಯನ್ನು ಒಳಗೊಂಡಿರುವ ವಾಣಿಜ್ಯ ಸಂವಹನ ಉಪಗ್ರಹಗಳಲ್ಲಿ ಇದು ಹೊಸ ದಾಖಲೆಯಾಗಿದೆ.
ತಮಿಳುನಾಡಿನಲ್ಲಿ ಕಾರ್ತಿಕ ದೀಪದ ವಿವಾದದ ಮಧ್ಯೆ ದರ್ಗಾದಲ್ಲಿ ಮೆರೆಯಿತು ಹಿಂದೂ, ಮುಸ್ಲಿಂ ಭಾವೈಕ್ಯತೆ
ಎಲ್ಲೆಡೆ ಎಲ್ಲರಿಗೂ ಸಂಪರ್ಕವನ್ನು ವಿಸ್ತರಿಸುವ ಗುರಿ ಹೊಂದಿರುವ ಬ್ಲೂಬರ್ಡ್ ಬ್ಲಾಕ್-2 ನಿಂದ ಜಾಗತಿಕ ಎಲ್ ಇಒ ಸಮೂಹವು 4ಜಿ ಮತ್ತು 5ಜಿ ಧ್ವನಿ, ವಿಡಿಯೊ ಕರೆಗಳು, ಸಂದೇಶಗಳು, ಸ್ಟ್ರೀಮಿಂಗ್ ಮತ್ತು ಇಂಟರ್ನೆಟ್ ಡೇಟಾವನ್ನು ಪ್ರಮಾಣಿತ ಮೊಬೈಲ್ ಸ್ಮಾರ್ಟ್‌ಫೋನ್‌ಗಳಿಗೆ ತಲುಪಿಸುವ ಉದ್ದೇಶವನ್ನು ಹೊಂದಿದೆ.
ಎಲ್ವಿಎಂ3-ಎಂ6 ಮಿಷನ್ ಡಿಸೆಂಬರ್ 24ರಂದು ಬೆಳಗ್ಗೆ 8.54ಕ್ಕೆ ಉಡಾವಣಾದ ಮೇಲೆ 520 ಕಿಲೋಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿ ಲಾಂಚ್ ವೆಹಿಕಲ್ ನಿಂದ ಬೇರ್ಪಡುತ್ತದೆ. ಇದು ಸೆಕೆಂಡಿಗೆ 7.6 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಇಸ್ರೋದ ಅಧಿಕೃತ ವೆಬ್‌ಸೈಟ್ ಅಥವಾ ಯೂಟ್ಯೂಬ್ ಚಾನೆಲ್‌ನಲ್ಲಿ ಇದರ ಉಡಾವಣೆಯ ನೇರ ಪ್ರಸಾರವನ್ನು ಮಾಡಲಾಗುತ್ತದೆ.