ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಓಯೊ ಸಂಸ್ಥಾಪಕ ಈಗ ಭಾರತದ ಅತ್ಯಂತ ಕಿರಿಯ ಬಿಲಿಯನೇರ್!

ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಅತ್ಯಂತ ಕಿರಿಯ ಕೋಟ್ಯಧಿಪತಿಯಾಗಿ ಓಯೊ ಸಂಸ್ಥಾಪಕ ರಿತೇಶ್ ಅಗರ್ವಾಲ್ ಹೊರಹೊಮ್ಮಿದ್ದಾರೆ. ಇವರು ತಮ್ಮ 32 ವಯಸ್ಸಿನಲ್ಲಿ 14,440 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಅಗರ್ವಾಲ್ ಅವರು 2013 ರಲ್ಲಿ ಕಾಲೇಜು ಬಿಟ್ಟ ಬಳಿಕ ತಮ್ಮ 19ನೇ ವಯಸ್ಸಿನಲ್ಲಿ ಓಯೋ ಅನ್ನು ಸ್ಥಾಪಿಸಿದರು.

ಸಂಗ್ರಹ ಚಿತ್ರ

ನವದೆಹಲಿ: ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ (OYO founder Ritesh Agarwal) ಅವರು ಭಾರತದ ಅತ್ಯಂತ ಕಿರಿಯ ಕೋಟ್ಯಧಿಪತಿ (India's youngest billionaire) ಎಂದು ಗುರುತಿಸಲಾಗಿದೆ. ಮಾರ್ಚ್ 6ರಂದು ಬಿಡುಗಡೆಯಾದ ಹುರುನ್ ವಿಶ್ವದ ಶ್ರೀಮಂತರ ಪಟ್ಟಿ 2026ರ (Hurun Global Rich List 2026) ಪ್ರಕಾರ ರಿತೇಶ್ ಅವರು ಭಾರತದ ಅತ್ಯಂತ ಕಿರಿಯ ಕೋಟ್ಯಧಿಪತಿಯಾಗಿದ್ದಾರೆ. 32 ವರ್ಷದ ರಿತೇಶ್ ಅವರು 14,440 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದ್ದು, ಇವರು ತಮ್ಮ 19ನೇ ವಯಸ್ಸಿನಲ್ಲಿ ಓಯೋ (OYO) ಅನ್ನು ಸ್ಥಾಪಿಸಿದರು. ಇದು ವಿಶ್ವದ ಅತಿದೊಡ್ಡ ಆತಿಥ್ಯ ತಂತ್ರಜ್ಞಾನ ವೇದಿಕೆಯಾಗಿರುವ ಓಯೋ ಹೊಟೇಲ್‌, ವಸತಿಗಳನ್ನು ಬಾಡಿಗೆ ನೀಡುವ ಕಾರ್ಯನಿರ್ವಹಿಸುತ್ತದೆ.

ಹುರುನ್ ವಿಶ್ವದ ಶ್ರೀಮಂತರ ಪಟ್ಟಿ 2026 ರ ಪ್ರಕಾರ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರು ಭಾರತದ ಅತ್ಯಂತ ಕಿರಿಯ ಕೋಟ್ಯಧಿಪತಿಯಾಗಿದ್ದಾರೆ. ಕೋಟ್ಯಧಿಪತಿ ಶ್ರೇಣಿಯಲ್ಲಿ ಗುರುತಿಸಿಕೊಂಡಿರುವ ಇವರು ಹೊಸ ಯುಗದ ತಂತ್ರಜ್ಞಾನ ಉದ್ಯಮಿಗಳ ಬೆಳೆಯುತ್ತಿರುವ ಪಾತ್ರವನ್ನು ಎತ್ತಿ ತೋರಿಸಿದೆ.

Karnataka Budget 2026: ಅಮರ್ಥ್ಯಸೇನ್‌ ಅಶಯ ಬಿಂಬಿಸಿದ ರಾಜ್ಯ ಬಜೆಟ್‌; 11 ಜಿ ಮಾದರಿ ಎಂದರೇನು?

2013 ರಲ್ಲಿ ಕಾಲೇಜು ಬಿಟ್ಟ ಅಗರ್ವಾಲ್ ತಮ್ಮ 19ನೇ ವಯಸ್ಸಿನಲ್ಲಿ ಓಯೋ ಅನ್ನು ಸ್ಥಾಪಿಸಿದ್ದು, ಇದು ಏಷ್ಯಾ, ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಜಾಗತಿಕವಾಗಿ ವಿಸ್ತರಿಸಿತ್ತು. ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ಸಾಫ್ಟ್‌ಬ್ಯಾಂಕ್, ಸಿಕ್ವೊಯಾ ಕ್ಯಾಪಿಟಲ್ ಮತ್ತು ಲೈಟ್‌ಸ್ಪೀಡ್ ವೆಂಚರ್ ಪಾರ್ಟ್‌ನರ್ಸ್ ಸೇರಿದಂತೆ ಹಲವು ಪ್ರಮುಖ ಜಾಗತಿಕ ಹೂಡಿಕೆದಾರರಿಂದ ಹಣವನ್ನು ಗಳಿಸಿದೆ.

ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಹಲವು ಸವಾಲುಗಳು ಎದುರಾದರೂ ಕಂಪೆನಿಯು ಆತಿಥ್ಯ ವಲಯದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡು ಬೆಳೆಯುತ್ತಲೇ ಇದೆ.

ಹುರುನ್ ವರದಿಯ ಪ್ರಕಾರ, ಭಾರತೀಯ ಕೋಟ್ಯಧಿಪತಿಗಳ ಸರಾಸರಿ ವಯಸ್ಸು 67 ಆಗಿದ್ದು, ಅವರಲ್ಲಿ ಅಗರ್ವಾಲ್ ಅತ್ಯಂತ ಕಿರಿಯರಾಗಿದ್ದಾರೆ. 2026ರ ಶ್ರೀಮಂತರ ಪಟ್ಟಿಯಲ್ಲಿ 57 ಹೊಸಬರು ಶ್ರೇಯಾಂಕದ ಪಟ್ಟಿಗೆ ಸೇರಿದ್ದಾರೆ. ಇದರೊಂದಿಗೆ ಭಾರತದ ಒಟ್ಟು ಕೋಟ್ಯಧಿಪತಿಗಳ ಸಂಖ್ಯೆ 308ಕ್ಕೆ ತಲುಪಿದೆ. ಈ ಮೂಲಕ ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಬಳಿಕ ಜಾಗತಿಕವಾಗಿ ಅತ್ಯಧಿಕ ಕೋಟ್ಯಧಿಪತಿಗಳನ್ನು ಹೊಂದಿರುವ ದೇಶ ಭಾರತವಾಗಿದೆ.

ಹುರುನ್ ವರದಿ ಪ್ರಕಾರ ಅನೇಕ ಕೋಟ್ಯಧಿಪತಿಗಳಲ್ಲಿ ಹೊಸಬರು ಆರೋಗ್ಯ ರಕ್ಷಣೆ, ಆಟೋ ಘಟಕಗಳು, ಇಂಧನ ಮತ್ತು ಹಣಕಾಸು ಸೇವೆಗಳಂತಹ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಹೊಸಬರ ನಿವ್ವಳ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ. 24ರಷ್ಟು ಈ ವರ್ಷ ಹೆಚ್ಚಾಗಿದೆ. ಕಳೆದ ವರ್ಷದ ಕೋಟ್ಯಧಿಪತಿಗಳಲ್ಲಿ ಕೆಲವರು ಈ ಬಾರಿ ಹೊರಗೆ ಉಳಿದಿದ್ದಾರೆ. ಭಾರತೀಯ ಕೋಟ್ಯಧಿಪತಿಗಳ ಒಟ್ಟು ಸಂಪತ್ತು ಸುಮಾರು 112 ಲಕ್ಷ ಕೋಟಿ ರೂ. ಗಳಾಗಿದೆ.

ರಿತೇಶ್ ಅಗರ್ವಾಲ್ ಯಾರು?

1993ರ ನವೆಂಬರ್ 16ರಂದು ಒಡಿಶಾದ ರಾಯಗಡ ಜಿಲ್ಲೆಯ ಬಿಸ್ಸಮ್ ಕಟಕ್‌ನಲ್ಲಿ ಜನಿಸಿದ ರಿತೇಶ್ ಅಗರ್ವಾಲ್, ಅವರ ತಂದೆ ಸಣ್ಣ ಮೂಲಸೌಕರ್ಯ ವ್ಯವಹಾರವನ್ನು ನಡೆಸುತ್ತಿದ್ದರು. ಇದು ಅಗರ್ವಾಲ್ ಮೇಲೆ ತುಂಬಾ ಪ್ರಭಾವ ಬೀರಿತ್ತು. ಹರೆಯದಲ್ಲಿ ತಂತ್ರಜ್ಞಾನ ಮತ್ತು ಉದ್ಯಮಶೀಲತೆಯಲ್ಲಿ ಆಸಕ್ತಿ ತೋರಿಸಿದ ರಿತೇಶ್ ಅಗರ್ವಾಲ್ ರಾಯಗಡದಲ್ಲಿರುವ ಸೇಕ್ರೆಡ್ ಹಾರ್ಟ್ ಶಾಲೆಯಲ್ಲಿ ಶಿಕ್ಷಣ ಪಡೆದು ಉನ್ನತ ಶಿಕ್ಷಣಕ್ಕಾಗಿ ದೆಹಲಿಗೆ ತೆರಳಿದರು.

ಅನಂತರ ಲಂಡನ್ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾದ ಕಾರ್ಯಕ್ರಮಗಳನ್ನು ನೀಡುವ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ ಅಂಡ್ ಫೈನಾನ್ಸ್ ಸೇರಕೊಂಡರು. ಮುಂದೆ ಅಗರ್ವಾಲ್ ಅವರ ತಮ್ಮದೇ ಆದ ಉದ್ಯಮ ಸ್ಥಾಪಿಸುವತ್ತ ಗಮನಹರಿಸಲು ಕಾಲೇಜಿನಿಂದ ಹೊರಬಂದರು.

Karnataka Budget: ರಾಜ್ಯಕ್ಕೆ 2026-27ರಲ್ಲಿ ಅಂದಾಜು ಸಾಲ 1.32 ಲಕ್ಷ ಕೋಟಿ ರುಪಾಯಿ; ಎಲ್ಲಿಂದ?

19ನೇ ವಯಸ್ಸಿನಲ್ಲಿ ಒರಾವೆಲ್ ಸ್ಟೇಸ್ ಎಂಬ ತಮ್ಮ ಮೊದಲ ಉದ್ಯಮವನ್ನು ಪ್ರಾರಂಭಿಸಿದ ಅವರು ಇದರ ಮೂಲಕ ವಾಸ್ತವ್ಯ ಮತ್ತು ನವೋದ್ಯಮವನ್ನು ಪ್ರಾರಂಭಿಸಿದರು. ಥಿಯಲ್ ಫೆಲೋಶಿಪ್ ಪಡೆದ ಅತ್ಯಂತ ಕಿರಿಯ ಉದ್ಯಮಿಗಳಲ್ಲಿ ಒಬ್ಬರಾದ ಅಗರ್ವಾಲ್, 2013ರಲ್ಲಿ,ಒರಾವೆಲ್ ಸ್ಟೇಸ್ ಅನ್ನು ಓಯೋ ಎಂದು ಮಾಡಿದರು.

ಇದರಲ್ಲಿ ಬಜೆಟ್ ಗೆ ಅನುಗುಣವಾಗಿ ಪ್ರವಾಸಿಗರಿಗೆ ಸ್ವಚ್ಛ ಕೊಠಡಿ, ವೈ-ಫೈ ಸೌಲಭ್ಯವನ್ನು ಕಾಯ್ದಿರಿಸಲು ಸಹಾಯ ಮಾಡಲಾರಂಭಿಸಿದರು. ಬಳಿಕ ಇವರ ಕಂಪೆನಿಯು ಹೊಟೇಲ್ ಮಾಲೀಕರೊಂದಿಗೆ ಪಾಲುದಾರಿಕೆ ಮಾಡಿಕೊಂಡಿತ್ತು. ಈ ಮಾದರಿಯು ದೇಶ, ವಿದೇಶಗಳಲ್ಲೂ ಜನಪ್ರಿಯತೆ ಗಳಿಸಿತು.

ವಿದ್ಯಾ ಇರ್ವತ್ತೂರು

View all posts by this author