ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Karnataka Budget: ರಾಜ್ಯಕ್ಕೆ 2026-27ರಲ್ಲಿ ಅಂದಾಜು ಸಾಲ 1.32 ಲಕ್ಷ ಕೋಟಿ ರುಪಾಯಿ; ಎಲ್ಲಿಂದ?

Karnataka Budget 2026-27: ರಾಜ್ಯ ಸರಕಾರ 2026-27ರಲ್ಲಿ ಒಟ್ಟು 1,32,190 ಕೋಟಿ ರುಪಾಯಿ ಸಾಲ ಪಡೆಯಲು ಉದ್ದೇಶಿಸಿದೆ. ಹಾಗಾದರೆ ಈ ಸಾಲ ಎಲ್ಲಿಂದ ಸಿಗಲಿದೆ ಮತ್ತು ಬರುವ ಆದಾಯದಲ್ಲಿ ಸಾಲದ ಮರು ಪಾವತಿಗೆ ಎಷ್ಟು ಖರ್ಚಾಗಲಿದೆ? ಇಲ್ಲಿದೆ ವಿವರ.

ರಾಜ್ಯಕ್ಕೆ 2026-27ರಲ್ಲಿ ಅಂದಾಜು ಸಾಲ 1.32 ಲಕ್ಷ ಕೋಟಿ ರುಪಾಯಿ

ಸಿಎಂ ಸಿದ್ದರಾಮಯ್ಯ ಮತ್ತು ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Mar 6, 2026 5:30 PM

ಬೆಂಗಳೂರು, ಮಾ. 6: ರಾಜ್ಯ ಸರಕಾರ 2026-27ರಲ್ಲಿ ಒಟ್ಟು 1,32,190 ಕೋಟಿ ರುಪಾಯಿ ಸಾಲ ಪಡೆಯಲು ಉದ್ದೇಶಿಸಿದೆ. ಹಾಗಾದರೆ ಈ ಸಾಲ ಎಲ್ಲಿಂದ ಸಿಗಲಿದೆ ಮತ್ತು ಬರುವ ಆದಾಯದಲ್ಲಿ ಸಾಲದ ಮರು ಪಾವತಿಗೆ ಎಷ್ಟು ಖರ್ಚಾಗಲಿದೆ? ಈ ಕುತೂಹಲದ ಲೆಕ್ಕಾಚಾರವನ್ನು ನೋಡೋಣ. 2026-27ರ ಆಯವ್ಯಯದ ಪ್ರಕಾರ, ಕೇಂದ್ರ ಸರಕಾರದಿಂದ 6,810 ಕೋಟಿ ರುಪಾಯಿ ಸಾಲ ಪಡೆಯಲಿದೆ (Karnataka Budget). ಮಾರುಕಟ್ಟೆಯಿಂದ 1,22,340 ಕೋಟಿ ರುಪಾಯಿ ಸಾಲ ಪಡೆಯಲಿದೆ. ಎಲ್‌ಐಸಿ, ಎನ್‌ಎಸ್‌ಎಸ್‌ಎಫ್‌, ಎನ್‌ಸಿಡಿಸಿ ಮತ್ತು ಆರ್.‌ ಐ.ಡಿ.ಎಫ್‌ಗಳಿಂದ 2,850 ಕೋಟಿ ರುಪಾಯಿ ಸಾಲ ಸಿಗಲಿದೆ. ಮುಂಗಡ ವಸೂಲಿಯಿಂದ 167 ಕೋಟಿ ರುಪಾಯಿ ಸಿಗಲಿದೆ.

ಸರಕಾರ 2025-26ರಲ್ಲಿ1,16,170 ಕೋಟಿ ರುಪಾಯಿ ಸಾಲ ಗಳಿಸಿತ್ತು. ಸಾಲ ಮರುಪಾವತಿಗೆ 2026-27ರಲ್ಲಿ 35,316 ಕೋಟಿ ರುಪಾಯಿ ವೆಚ್ಚವಾಗಲಿದೆ. ರಾಜ್ಯ ಸರಕಾರಕ್ಕೆ ಸಿಗುವ ಪ್ರತಿ 1 ರುಪಾಯಿ ಆದಾಯದಲ್ಲಿ 20 ಪೈಸೆಯು ಸಾಲದ ಮರು ಪಾವತಿಗೆ ವೆಚ್ಚವಾಗಲಿದೆ.

2026-27 ಕರ್ನಾಟಕ ಬಜೆಟ್‌ ಫೈನಾನ್ಸ್‌ ಹೈಲೈಟ್ಸ್:

  • ಒಟ್ಟು ವೆಚ್ಚ: 4,48,004 ಕೋಟಿ ರುಪಾಯಿ
  • ರಾಜಸ್ವ ವೆಚ್ಚ : 3,38,007 ಕೋಟಿ ರುಪಾಯಿ
  • ಬಂಡವಾಳ ವೆಚ್ಚ: 24,682 ಕೋಟಿ ರುಪಾಯಿ
  • ಸಾಲ ಮರು ಪಾವತಿ ವೆಚ್ಚ: 35,316 ಕೋಟಿ ರುಪಾಯಿ
  • ರಾಜಸ್ವ ಕೊರತೆ: 22,957 ಕೋಟಿ ರುಪಾಯಿ
  • ವಿತ್ತೀಯ ಕೊರತೆ: 97,449 ಕೋಟಿ ರುಪಾಯಿ
  • ಜಿಎಸ್‌ಡಿಪಿಯ 2.95%
  • ಒಟ್ಟು ಹೊಣೆಗಾರಿಕೆ: 8,24,389 ಕೋಟಿ ರುಪಾಯಿ
  • ಜಿಎಸ್‌ಡಿಪಿಯ 24.94%
  • ಜಿಎಸ್‌ಡಿಪಿ ಗ್ರೋತ್‌: 2025-26: 8.1%
  • ದೇಶದ ಜಿಡಿಪಿ: 7.4%
  • ಜಿಎಸ್‌ಟಿ ಸಂಗ್ರಹದಲ್ಲಿ 2ನೇ ಸ್ಥಾನ

ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕ 2026ರ ಫೆಬ್ರವರಿವರೆಗೆ 1,21,598 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ.

ಬನ್ನೇರುಘಟ್ಟದಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರ

  • 2026-27ರ ರಾಜಸ್ವ ಸ್ವೀಕೃತಿ: 3,15,050 ಕೋಟಿ ರುಪಾಯಿ
  • ರಾಜ್ಯದ ಸ್ವಂತ ತೆರಿಗೆ ರಾಜಸ್ವ: 2,20,000 ಕೋಟಿ ರುಪಾಯಿ
  • ತೆರಿಗೆಯೇತರ ರಾಜಸ್ವ: 16,000 ಕೋಟಿ ರುಪಾಯಿ
  • ಕೇಂದ್ರ ಸರಕಾರದ ಸ್ವೀಕೃತಿ: 29,050 ಕೋಟಿ ರುಪಾಯಿ
  • ರಾಜ್ಯದ ಒಟ್ಟು ಸ್ವೀಕೃತಿ: 4,47,240 ಕೋಟಿ ರುಪಾಯಿ
  • 15ನೇ ಹಣಕಾಸು ಆಯೋಗದಿಂದ 6 ವರ್ಷಗಳಲ್ಲಿ 65,000 ಕೋಟಿ ರುಪಾಯಿ ನಷ್ಟ.
  • ಜಿಎಸ್‌ಟಿ ಸಂಗ್ರಹದಲ್ಲಿ ಕುಸಿತದಿಂದ ಹಣಕಾಸು ಒತ್ತಡ.
  • ಜಿಎಸ್‌ಟಿ ದರ ಇಳಿಕೆಯಿಂದ ರಾಜ್ಯದ ರಾಜಸ್ವ ಇಳಿಕೆ, ಪರಿಹಾರಕ್ಕೆ ಒತ್ತಾಯಿಸಲಾಗಿದೆ.
  • 2026-27ಕ್ಕೆ ಒಟ್ಟು ಸಾಲ: 1,32,000 ಕೋಟಿ ರುಪಾಯಿ
  • ಬಜೆಟ್‌ ಗಾತ್ರ: 4.48 ಲಕ್ಷ ಕೋಟಿ ರುಪಾಯಿ

ಗ್ಯಾರಂಟಿ ಯೋಜನೆಗಳಿಗೆ ಎಷ್ಟು ಹಣ?

ಯೋಜನೆ ಅನುದಾನ
ಅನ್ನ ಭಾಗ್ಯ 6,200 ಕೋಟಿ ರುಪಾಯಿ
ಗೃಹ ಜ್ಯೋತಿ 10,578 ಕೋಟಿ ರುಪಾಯಿ
ಗೃಹ ಲಕ್ಷ್ಮಿ 28,608 ಕೋಟಿ ರುಪಾಯಿ

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.