ಬೆಂಗಳೂರು: ಇವತ್ತು ಹಣ (money guide) ಎಲ್ಲರ ಬಳಿಯೂ ಇದೆ. ಆದರೆ ಸಂಪತ್ತು ಕೆಲವರ ಬಳಿ ಮಾತ್ರ ಇರುತ್ತದೆ. ಯಾಕೆಂದರೆ ಹಣದಿಂದ ಸಂಪತ್ತು ಆಗುವ ಪ್ರಯಾಣ ಕೆಲವರಿಗೆ ಮಾತ್ರ ಗೊತ್ತಿದೆ. ಹಣವನ್ನು ಸಂಪತ್ತಾಗಿ ಪರಿವರ್ತಿಸುವುದು ಕೇವಲ ಉಳಿತಾಯದಿಂದ (Investment) ಸಾಧ್ಯವಿಲ್ಲ. ಅದಕ್ಕಾಗಿ ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವುದು ಕೂಡ ಮುಖ್ಯವಾಗುತ್ತದೆ ಎಂದು ಉದ್ಯಮಿ, ಆರ್ಥಿಕ ಸಲಹೆಗಾರರಾದ ಶ್ರೀಕಲಾ ಭಾಷಮ್ (Srikala Bhasam) ಹೇಳಿದರು. 'ವಿಶ್ವವಾಣಿ ಮನಿ' (Vishwavani money) ಯೂಟ್ಯೂಬ್ ಚಾನಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮಲ್ಲಿರುವ ಹಣ ಬೆಳವಣಿಗೆಯಾಗಬೇಕಾದರೆ ಅದರ ನಿರ್ವಹಣೆ ಹೇಗಿರಬೇಕು ಎನ್ನುವ ಕುರಿತು ಅನುಭವ ಹಂಚಿಕೊಂಡರು.
ಕೋವಿಡ್ ಸಾಂಕ್ರಾಮಿಕದ ಬಳಿಕ ಹೂಡಿಕೆ ವಿಭಾಗದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಜನರು ಈಗ ಬೇಗನೆ ಅತೀ ಹೆಚ್ಚು ಸಂಪತ್ತು ಮಾಡಲು ಬಯಸುತ್ತಾರೆ. ಇದಕ್ಕಾಗಿ ಹೆಚ್ಚಿನವರ ಒಲವು ಮ್ಯೂಚುವಲ್ ಫಂಡ್ ಹಾಗೂ ಎಸ್‌ಐಪಿ ಮೇಲಿದೆ. ಮ್ಯೂಚವಲ್ ಫಂಡ್‌ನಲ್ಲಿ ಹಣ ಮಾಡಬೇಕಾದರೆ ತಾಳ್ಮೆ ಮತ್ತು ಶಿಸ್ತು ಮುಖ್ಯವಾಗಿರಬೇಕು. ಅಲ್ಲದೇ ಹಣದ ನಿರ್ವಹಣೆ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು ಎಂದು ತಿಳಿಸಿದರು.
ಮ್ಯೂಚುವಲ್ ಫಂಡ್ ಬಗ್ಗೆ ಇಲ್ಲಿದೆ ಇಂಚಿಂಚು ಮಾಹಿತಿ:
ಹಣದುಬ್ಬರವನ್ನು ಸೋಲಿಸುವಂತೆ ಹೂಡಿಕೆ ಮಾಡಿದರೆ ಮಾತ್ರ ನಮ್ಮಲ್ಲಿರುವ ಹಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದ ಶ್ರೀಕಲಾ ಭಾಷಾಮ್, ಮ್ಯೂಚವಲ್ ಫಂಡ್ ಬಗ್ಗೆ ಈಗ ಬಹುತೇಕ ಮಂದಿಗೆ ಗೊತ್ತಿದೆ. ಇದರಲ್ಲಿ ಹಲವು ವಿಧಗಳಿವೆ. ಅವಧಿಗಳಿಗೆ ಅನುಗುಣವಾಗಿ ಕೂಡ ವಿವಿಧ ಯೋಜನೆಗಳಿವೆ. ಪ್ರತಿಯೊಬ್ಬರು ಕೂಡ ಅವರ ಹಣದ ಅವಶ್ಯಕತೆಗೆ ಅನುಗುಣವಾಗಿ ಇದರಲ್ಲಿ ಹೂಡಿಕೆ ಮಾಡಬಹುದು ಎಂದು ಹೇಳಿದರು.
ಭಾರತದಲ್ಲಿ ಶೂರಿಟಿ ಇನ್ಶುರೆನ್ಸ್ ವ್ಯವಹಾರ ಆರಂಭಿಸಿದ ಲಿಬರ್ಟಿ ಜನರಲ್ ಇನ್ಶುರೆನ್ಸ್
ಮ್ಯೂಚವಲ್ ಫಂಡ್ ತುಂಬಾ ಸುರಕ್ಷಿತವಾಗಿದೆ ಎಂದ ಅವರು ಇದರಲ್ಲಿ ಗ್ರಾಹಕರನ್ನು ಮೋಸ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಒಬ್ಬ ಮ್ಯೂಚುವಲ್ ಫಂಡ್ ವಿತರಕನಾಗಬೇಕಾದರೆ ಹಲವು ನಿಯಮಗಳಿವೆ. ಇದರಲ್ಲಿ ಪರೀಕ್ಷೆ ಬರೆದು ಲೈಸನ್ಸ್ ಪಡೆಯುವುದು ಕೂಡ ಒಂದು. ಹೀಗಾಗಿ ಇದರಲ್ಲಿ ಗ್ರಾಹಕರಿಗೆ ಮೋಸ ಮಾಡಲು ಸಾಧ್ಯವಿಲ್ಲ. ಹಣದ ಹೂಡಿಕೆ ಬಗ್ಗೆ ಗೊಂದಲಗಳಿದ್ದರೆ ಅಡ್ವೈಸರ್ ಸಲಹೆಗಳನ್ನು ಕೂಡ ಪಡೆಯಬಹುದು ಎಂದು ವಿವರಿಸಿದರು.
ಹೊಸದಾಗಿ ಉದ್ಯೋಗಕ್ಕೆ ಸೇರಿದವರು ಎಸ್‌ಐಪಿಯಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು ಎಂದು ಹೇಳಿದರು. ಇದರಲ್ಲಿ ತಿಂಗಳಿಗೊಮ್ಮೆ ಹೂಡಿಕೆ ಮಾಡಿಕೊಂಡು ಹೋದರೆ ಪ್ರಾರಂಭದ ಐದು ವರ್ಷಗಳಲ್ಲಿ ಹೆಚ್ಚು ವ್ಯತ್ಯಾಸ ಕಾಣುವುದಿಲ್ಲ. ಆದರೆ ದೀರ್ಘಾವಧಿಯಲ್ಲಿ ಹೂಡಿಕೆ ಸಾಕಷ್ಟು ಲಾಭದಾಯಕವಾಗುತ್ತದೆ. ಯಾವತ್ತೂ ನಾವು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ ದೀರ್ಘಾವಧಿಯ ಹೂಡಿಕೆ ಮಾಡುವುದು ಹೆಚ್ಚು ಲಾಭದಾಯಕ. ಇದರಲ್ಲಿ ಹಣ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು.
ನಿಮ್ಮ ಹಣ ಡಬಲ್ ಮಾಡುತ್ತೆ ರೂಲ್ 72; ಏನಿದು ಫಾರ್ಮ್ಯುಲಾ? ಇಲ್ಲಿದೆ ಸಂಪೂರ್ಣ ವಿವರ
ಇದೇ ಸಂದರ್ಭದಲ್ಲಿ ಶ್ರೀಕಲಾ ಭಾಷಮ್ ತಾವು ಪತ್ರಿಕೋದ್ಯಮದಿಂದ ಉದ್ಯಮಿಯಾಗಿ ಬೆಳವಣಿಗೆಯಾದ ಬಗ್ಗೆಯೂ ಮಾಹಿತಿ ಹಂಚಿಕೊಂಡರು. ಉದ್ಯಮಿಯಾಗಲು ಗಂಡ, ಮಗಳ ನೀಡಿರುವ ಪ್ರೋತ್ಸಾಹವನ್ನು ನೆನಪಿಸಿಕೊಂಡರು. 2007ರಿಂದ ಉದ್ಯಮಕ್ಕೆ ಕಾಲಿಟ್ಟ ಮೇಲೆ ಅವರು ಆರ್‌ಎಸ್ ಕನ್ಸಲ್ಟೆಂಟ್ ಚೇಂಜಿಂಗ್ ಮನಿ ಟು ವೆಲ್ತ್, ವಿಥ್ ಅದ್ವೈತ ವ್ಯವಹಾರಗಳ ಬಗ್ಗೆಯೂ ತಿಳಿಸಿದ ಅವರು ಇದರಲ್ಲಿ ಮೊದಲಿಗೆ 100 ಕೋಟಿ ರೂ. ಮಾಡಲು ಹತ್ತು ವರ್ಷಗಳು ಬೇಕಾಯಿತು ಎಂದರು.
ಪ್ರಸ್ತುತ ಈ ಕಂಪನಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶ, ವಿದೇಶಗಳಿಂದ ಸರಿಸುಮಾರು 1,800 ಗ್ರಾಹಕರು ಇದ್ದಾರೆ. 600 ಕೋಟಿ ರೂ. ವ್ಯವಹಾರ ನಡೆಯುತ್ತಿದೆ ಎಂದ ಭಾಷಾಮ್, ತಾವು ಉದ್ಯೋಗಿ ಆಗಿ ಉದ್ಯಮಿ ಆಗಲು ಸಾಕಷ್ಟು ಪರಿಶ್ರಮ ಪಡಬೇಕಾಯಿತು. ಈ ಪ್ರಯಾಣ ಹೆಚ್ಚು ಖುಷಿಯನ್ನೂ ಕೊಟ್ಟಿದೆ ಎಂದು ತಿಳಿಸಿದರು.