ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Money Tips: ಹಣವಿಲ್ಲದಿದ್ದರೂ ಒಂದು ಕೋಟಿ ರೂ. ಮಾಡಬಹುದು ಹೇಗೆ ಗೊತ್ತೇ?

ಕೋಟ್ಯಧಿಪತಿ ಆಗುವ ಕನಸು ಎಲ್ಲರಲ್ಲೂ ಇರುತ್ತದೆ. ಆದರೆ ಅದೃಷ್ಟ ಕೆಲವರ ಕೈ ಮಾತ್ರ ಹಿಡಿಯುತ್ತದೆ. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯವಿದೆ. ನಿಮ್ಮಲ್ಲಿ ಹಣವೇ ಇಲ್ಲದೇ ಇದ್ದರೂ ಸರಿಯಾದ ಯೋಜನೆಯನ್ನು ರೂಪಿಸಿ ಕೆಲವೇ ವರ್ಷಗಳಲ್ಲಿ ಒಂದು ಕೋಟಿಗಿಂತ ಹೆಚ್ಚು ಹಣ ಮಾಡಬಹುದು. ಅದು ಹೇಗೆ ಚಾರ್ಟರ್ಡ್ ಅಕೌಂಟೆಂಟ್ ನಿತಿನ್ ಕೌಶಿಕ್ ಹೇಳಿರುವ ಮಾಹಿತಿ ಇಲ್ಲಿದೆ.

ಹಣವಿಲ್ಲದಿದ್ದರೂ ಒಂದು ಕೋಟಿ ರೂ. ಮಾಡಬಹುದು ಹೇಗೆ ಗೊತ್ತೇ?

ಹಣಕಾಸಿನ ವ್ಯವಹಾರದಲ್ಲಿ (Financial transaction) ಬೇಕಾಗಿರುವುದು ಶಿಸ್ತು. ಆಗ ಶೂನ್ಯದಿಂದಲೂ ಪ್ರಾರಂಭಿಸಿ ಕೋಟ್ಯಂತರ (Billions) ರೂಪಾಯಿ ಹಣ ಮಾಡಬಹುದು ಎನ್ನುತ್ತಾರೆ ಚಾರ್ಟರ್ಡ್ ಅಕೌಂಟೆಂಟ್(Chartered Accountant ) ನಿತಿನ್ ಕೌಶಿಕ್ (Nitin Kaushik). ಕೋಟ್ಯಧಿಪತಿಯಾಗಲು ಅದೃಷ್ಟಕ್ಕಿಂತ ಹೆಚ್ಚು ಯೋಜನೆ, ಶಿಸ್ತು ಮತ್ತು ಸ್ಥಿರತೆಯ ಪಾಲನೆಯನ್ನು ಅವಲಂಭಿಸಿದೆ. ಇದಕ್ಕಾಗಿ ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಐದು ಸಲಹೆಗಳನ್ನು ನೀಡಿದ್ದಾರೆ. ಇದು ಭಾರಿ ವೈರಲ್ ಆಗಿದೆ. ಇದನ್ನು ಪಾಲಿಸುವುದರಿಂದ ಬಹುಬೇಗನೆ ಕೋಟ್ಯಧಿಪತಿ ಆಗಬಹುದು ಎನ್ನುತ್ತಾರೆ ಅವರು.

ಎಕ್ಸ್ ನಲ್ಲಿ ನಿತಿನ್ ಕೌಶಿಕ್ ಅವರು ಹಂಚಿಕೊಂಡಿರುವ ಹೂಡಿಕೆ ಯೋಜನೆಯು ಹೆಚ್ಚಿನ ಹಣ ಗಳಿಸಲು ದಾರಿ ಮಾಡಿಕೊಡುತ್ತದೆ. ಇದಕ್ಕಾಗಿ ಪೂರ್ವಜರ ಆಸ್ತಿಯಲ್ಲಿ ಪಾಲು ಕೇಳಬೇಕಿಲ್ಲ. ನೀವೇ ನಿಮ್ಮ ಸ್ವತಂತ್ರ ದುಡಿಮೆಯಿಂದ ಮಾಡಿಕೊಳ್ಳಬಹುದು ಎಂದಿದ್ದಾರೆ ನಿತಿನ್.

ಹೆಚ್ಚಿನವರು ಆರ್ಥಿಕ ಸ್ವಾತಂತ್ರ್ಯ ಯೋಜನೆಯನ್ನು ನಿರ್ಲಕ್ಷಿಸುತ್ತಾರೆ. ಹೀಗಾಗಿಯೇ ಸಂಪಾದನೆಯನ್ನು ಹಿಂದೆ ಉಳಿಯುತ್ತಾರೆ. ಒಂದು ವೇಳೆ ನೀವು ಒಂದು ರೂಪಾಯಿಯೂ ಇಲ್ಲದೆ ಯೋಜನೆ ಪ್ರಾರಂಭಿಸುವ ಚಿಂತನೆ ಮಾಡುವುದಾದರೆ ಈ ಮಾರ್ಗಸೂಚಿಯನ್ನು ಅನುಸರಿಸಿ. ಇದು ನಿಮಗೆ ಕೋಟಿ ರೂ. ಗಿಂತಲೂ ಹೆಚ್ಚು ಹಣ ಸಂಪಾದನೆಗೆ ದಾರಿ ಮಾಡಿಕೊಡುತ್ತದೆ.



ಉಳಿತಾಯ ಖಾತೆ ತೆರೆಯಿರಿ

ಹೆಚ್ಚಿನ ಹಣ ಸಂಪಾದನೆಗೆ ನಾವು ಇಡಬೇಕಾದ ಮೊದಲ ಹೆಜ್ಜೆ ಆರ್ಥಿಕ ಭದ್ರತೆಯನ್ನು ಖಾತರಿ ಪಡಿಸಿಕೊಳ್ಳುವುದು. ಇದಕ್ಕಾಗಿ ಹೂಡಿಕೆ ಮಾಡಲು ಪ್ರಾರಂಭಿಸುವ ಮೊದಲು ಸುರಕ್ಷತೆಯನ್ನು ಮಾಡಿಕೊಳ್ಳಬೇಕು. ಇದು ಉದ್ಯೋಗ ನಷ್ಟ, ವೈದ್ಯಕೀಯ ತುರ್ತು ಪರಿಸ್ಥಿತಿ, ಅನೀರಿಕ್ಷಿತವಾಗಿ ಖರ್ಚು ಮಾಡಬೇಕಾದ ಸಂದರ್ಭದಲ್ಲಿ ಸಹಾಯ ಮಾಡುತ್ತದೆ. ಉಳಿತಾಯ ಖಾತೆ ಅಥವಾ ಸ್ಥಿರ ಠೇವಣಿಯಲ್ಲಿ ಕನಿಷ್ಠ 1 ಲಕ್ಷ ರೂ. ಅನ್ನು ಇರಿಸಿ ಎಂದಿದ್ದಾರೆ ನಿತಿನ್.

ಎಸ್ ಐಪಿನಲ್ಲಿ ಹೂಡಿಕೆ ಮಾಡಿ

ಕೋಟ್ಯಧಿಪತಿಯಾಗಲು ಎರಡನೇ ಹೆಜ್ಜೆಯಾಗಿ ಎಸ್ ಐಪಿನಲ್ಲಿ ಹೂಡಿಕೆ ಮಾಡುವುದು. ಇದರ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ತಿಂಗಳಿಗೆ 10,000 ರೂ. ಹೂಡಿಕೆ ಮಾಡಿದರೆ 20 ವರ್ಷಗಳಲ್ಲಿ ಇದು 1 ಕೋಟಿ ರೂ. ಗಿಂತಲೂ ಹೆಚ್ಚು ಸಂಪಾದನೆಗೆ ದಾರಿ ಮಾಡಿಕೊಡುತ್ತದೆ.

ಪರ್ಯಾಯ ಆದಾಯದ ದಾರಿ ನೋಡಿ

ಒಂದೇ ಉದ್ಯೋಗದೊಂದಿಗೆ ಹೆಚ್ಚಿನ ಆದಾಯ ಗಳಿಸುವುದು ಸಾಧ್ಯವಿಲ್ಲ. ಹೀಗಾಗಿ ಸಂಪತ್ತು ಹೆಚ್ಚಿಸಲು ಫ್ರೀಲ್ಯಾನ್ಸಿಂಗ್, ವಿಷಯ ರಚನೆ, ಬೋಧನೆ ಕೆಲಸಗಳನ್ನು ಬಿಡುವಿನ ವೇಳೆಯಲ್ಲಿ ಮಾಡಬಹುದು. ಇದರಿಂದ ತಿಂಗಳಿಗೆ ಗರಿಷ್ಠ 30,000 ರೂ. ಪಡೆಯುವ ಗುರಿಯನ್ನು ಇಟ್ಟುಕೊಳ್ಳಿ. 10 ವರ್ಷಗಳಲ್ಲಿ ಇದರಿಂದ 30 ರಿಂದ ರೂ. 40 ಲಕ್ಷ ರೂ. ಗಳಿಸಬಹುದು.

ವಿಮಾ ರಕ್ಷಣೆ ಇರಲಿ

ವಾರ್ಷಿಕ ಆದಾಯದ ಸಮಾನವಾದ ಟರ್ಮ್ ಇನ್ಶುರೆನ್ಸ್ ಮತ್ತು 10 ರಿಂದ 20 ಲಕ್ಷ ರೂ. ಕವರ್‌ನೊಂದಿಗೆ ಬರುವ ಆರೋಗ್ಯ ವಿಮೆಯನ್ನು ಮಾಡಿಕೊಳ್ಳಿ. ಇದು ಬಹಳ ಪ್ರಯೋಜನಕಾರಿಯಾಗಿದೆ. ತುರ್ತು ಸಂದರ್ಭದಲ್ಲಿ ಆರ್ಥಿಕ ಅಪಾಯಗಳನ್ನು ಇದು ಕಡಿಮೆ ಮಾಡುತ್ತದೆ. ಯಾವುದೇ ಕಾರಣಕ್ಕೂ ಹೆಚ್ಚಿನ ಬಡ್ಡಿದರದ ಸಾಲಗಳನ್ನು ತೆಗೆದುಕೊಳ್ಳದಂತೆ ಅಥವಾ ಅನಗತ್ಯವಾಗಿ ಇಎಂಐ ಸಾಲ ಪಡೆಯಕೂಡದು ಎನ್ನುತ್ತಾರೆ ನಿತಿನ್.

ಸ್ವತಂತ್ರ ನಿಧಿ ಹೊಂದಿರಿ

ಸ್ವಾತಂತ್ರ ನಿಧಿಯ ಗುರಿ ವಾರ್ಷಿಕ ವೆಚ್ಚದ 25 ಪಟ್ಟು ಇರಲಿ. ಇದರಿಂದ ವರ್ಷಕ್ಕೆ 6 ಲಕ್ಷ ರೂ. ಖರ್ಚು ಮಾಡಿದರೆ ಕೆಲವೇ ವರ್ಷಗಳಲ್ಲಿ ಆರ್ಥಿಕ ಸ್ವಾತಂತ್ರ ನಿಧಿಯಲ್ಲಿ 1.5 ಕೋಟಿ ರೂ. ಆದಾಯ ಪಡೆಯಬಹುದು.

ಇದನ್ನೂ ಓದಿ: ಶೇ.84ರಷ್ಟು ಮಂದಿಗೆ ವಿಮೆ: ಎಕ್ಸಿಸ್‌ ಮ್ಯಾಕ್ಸ್‌ ಲೈಫ್‌ ಇಂಡಿಯಾ ಪ್ರೊಟೆಕ್ಷನ್ ಸೂಚ್ಯಂಕ 7.0

ಇನ್ನು ಆದಾಯವನ್ನು ಹೆಚ್ಚಿಸಲು ಕೋಡಿಂಗ್, ಬರವಣಿಗೆ, ಮಾರ್ಕೆಟಿಂಗ್ ಅಥವಾ ಹಣಕಾಸಿನಂತಹ ಕಲಿಕೆಯ ಕೌಶಲಗಳು ಕೂಡ ಸಹಾಯ ಮಾಡುತ್ತದೆ. ಸ್ಟಾಕ್ ಮಾರುಕಟ್ಟೆಗಳಲೂ ಹೂಡಿಕೆ ಮಾಡಬಹುದು. ಈ ಯೋಜನೆಗಳಿಂದ 10-15 ವರ್ಷಗಳಲ್ಲಿ ಒಂದು 1 ಕೋಟಿ ರೂ. ಗಿಂತಲೂ ಹೆಚ್ಚು ಸಂಪತ್ತನ್ನು ಗಳಿಸಬಹುದು.