ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಗಿಲು ಮುಚ್ಚಿದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್: ಪರವಾನಗಿ ರದ್ದುಗೊಳಿಸಿದ ಆರ್‌ಬಿಐ

ಕಳೆದ ಎರಡು ವರ್ಷಗಳಿಂದ ವ್ಯವಹಾರದಲ್ಲಿ ತೀವ್ರ ನಿರ್ಬಂಧಗಳನ್ನು ಎದುರಿಸಿದ್ದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪರವಾನಗಿಯನ್ನು ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರದ್ದುಗೊಳಿಸಿದೆ. ಈ ಮೂಲಕ ದೇಶದ ಅತ್ಯಂತ ದೊಡ್ಡ ಮಟ್ಟದ ಪಾವತಿ ಬ್ಯಾಂಕ್ ಒಂದು ಹಠಾತ್ ಆಗಿ ಬಾಗಿಲು ಮುಚ್ಚುವಂತಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ದೇಶದ ಅತ್ಯಂತ ದೊಡ್ಡ ಮಟ್ಟದ ಪಾವತಿ ಬ್ಯಾಂಕ್ (Payment bank) ಗಳಲ್ಲಿ ಒಂದಾಗಿದ್ದ ಪೇಟಿಎಂ (Paytm Payments Bank) ಪೇಮೆಂಟ್ಸ್ ಬ್ಯಾಂಕ್ ಪರವಾನಿಗೆ (Bank licence) ರದ್ದುಗೊಂಡಿದೆ. ಇದರಿಂದ ಅದು ಈಗ ಹಠಾತ್ ಆಗಿ ಮುಚ್ಚಿದೆ. ಕಳೆದ ಎರಡು ವರ್ಷಗಳಿಂದ ವ್ಯವಹಾರದಲ್ಲಿ ತೀವ್ರ ನಿರ್ಬಂಧಗಳನ್ನು ಎದುರಿಸಿದ್ದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಗುರುವಾರ ರದ್ದುಗೊಳಿಸಿದೆ. ಈ ಪ್ರಕರಣವನ್ನು ನ್ಯಾಯಾಲಯದಲ್ಲಿ ಇತ್ಯರ್ಥಗೊಳಿಸಲು ಆರ್‌ಬಿಐ ತೀರ್ಮಾನಿಸಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಕಳೆದ ಎರಡು ವರ್ಷಗಳಿಂದ ತೀವ್ರ ವ್ಯವಹಾರ ನಿರ್ಬಂಧಗಳನ್ನು ಎದುರಿಸುತ್ತಿದೆ. ಇದೀಗ ಅದರ ಪರವಾನಿಗೆ ರದ್ದುಗೊಂಡಿದ್ದು, ಇದು ಈಗ ನಿಯಂತ್ರಣ ಕ್ರಮದಲ್ಲಿ ಹೊಸ ತಿರುವನ್ನು ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸಿದೆ. ಇದರಿಂದ ದೇಶದ ಅತ್ಯಂತ ಉನ್ನತ ಮಟ್ಟದ ಪಾವತಿ ಬ್ಯಾಂಕ್ ಒಂದು ಹಠಾತ್ ಆಗಿ ಬಾಗಿಲು ಮುಚ್ಚುವಂತಾಗಿದೆ.

Keshava Prasad B Column: ಭಾರತದ ಜಿಡಿಪಿ 4ರಿಂದ ಕ್ಕೆ ಕುಸಿದಿದ್ದೇಕೆ, ಆತಂಕಪಡಬೇಕೆ ?

ಈ ಕುರಿತು ಏಪ್ರಿಲ್ 24ರಂದು ಆರ್‌ಬಿಐ ಹೊರಡಿಸಿರುವ ಅಧಿಸೂಚನೆಯಲ್ಲಿ 2026ರ ಏಪ್ರಿಲ್ 24ರಂದು ವ್ಯವಹಾರ ಮುಕ್ತಾಯದೊಂದಿಗೆ ಜಾರಿಗೆ ಬರುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಮತ್ತು ಬ್ಯಾಂಕನ್ನು ಬ್ಯಾಂಕಿಂಗ್ ವ್ಯವಹಾರವನ್ನು ನಡೆಸದಂತೆ ತಕ್ಷಣವೇ ನಿರ್ಬಂಧಿಸಲಾಗಿದೆ. ಇದಕ್ಕೆ ಸಂಬಂಧಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದೆ.

ಪರವಾನಗಿ ರದ್ದುಗೊಂಡಿದ್ದು ಯಾಕೆ?

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ನ ಬ್ಯಾಂಕಿಂಗ್ ಪರವಾನಗಿ ರದ್ದತಿಗೆ ಆರ್‌ಬಿಐ ಹಲವಾರು ಕಾರಣಗಳನ್ನು ನೀಡಿದೆ. ಅವುಗಳಲ್ಲಿ ಮುಖ್ಯವಾಗಿ ಬ್ಯಾಂಕಿನ ವ್ಯವಹಾರಗಳು ಹಾನಿಕಾರಕ ರೀತಿಯಲ್ಲಿ ನಡೆದಿವೆ. ಅದರ ನಿರ್ವಹಣೆಯು ಠೇವಣಿದಾರರು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಹಾನಿಕರವಾಗಿದೆ ಎಂದು ಹೇಳಿದೆ.

ಬ್ಯಾಂಕ್ ಅನ್ನು ಮುಂದುವರಿಸಲು ಅನುಮತಿಸುವುದರಿಂದ ಯಾವುದೇ ಉಪಯುಕ್ತ ಉದ್ದೇಶವಿಲ್ಲ. ಸಾರ್ವಜನಿಕ ಹಿತಾಸಕ್ತಿಯನ್ನು ಪೂರೈಸಲಾಗುವುದಿಲ್ಲ ಎಂದು ತಿಳಿಸಿರುವ ಆರ್‌ಬಿಐ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ನಿಬಂಧನೆಗಳನ್ನು ಅದು ಉಲ್ಲಂಘಿಸಿದೆ ಎಂದು ತಿಳಿಸಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ ವಿರುದ್ಧ ಎರಡು ವರ್ಷಗಳ ಹಿಂದೆಯೇ ನಿರ್ಬಂಧಗಳನ್ನು ವಿಧಿಸಲಾಗಿತ್ತು. 2022ರ ಮಾರ್ಚ್ 11ರಂದು ಹೊರಡಿಸಲಾದ ಅಧಿಸೂಚನೆಯ ಪ್ರಕಾರ ಅದು ಹೊಸ ಗ್ರಾಹಕರನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವಂತೆ ಆದೇಶಿಸಲಾಗಿತ್ತು. ಇದರ ಬಳಿಕ 2024ರಲ್ಲಿ ಗ್ರಾಹಕ ಖಾತೆಗಳು, ಪ್ರಿಪೇಯ್ಡ್ ಉಪಕರಣಗಳು ಮತ್ತು ವ್ಯಾಲೆಟ್‌ಗಳಿಗೆ ಸಂಬಂಧಿಸಿ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಇದರಿಂದ ಬ್ಯಾಂಕಿನ ಬೆಳವಣಿಗೆ ಪರಿಣಾಮಕಾರಿಯಾಗಿ ಸ್ಥಗಿತಗೊಂಡವು.

ಕಾರ್ಪೊರೇಟ್‌ ಗಳ ಅಲ್ಪಾವಧಿ ಸಾಲದ ಅಗತ್ಯಕ್ಕೆ 'ಇನ್‌ ಸ್ಟಂಟ್ ವರ್ಕಿಂಗ್ ಕ್ಯಾಪಿಟಲ್ ಲೋನ್' ನೆರವು: ಕೋಟಕ್ ಮಹೀಂದ್ರಾ ಬ್ಯಾಂಕ್ ಹೊಸ ಹೆಜ್ಜೆ

ಗ್ರಾಹಕರ ಹಣ ಮರುಪಾವತಿ ಭರವಸೆ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಕೊನೆಗೊಂಡರೂ ಅದು ತನ್ನ ಗ್ರಾಹಕರ ಸಂಪೂರ್ಣ ಠೇವಣಿ ಮರುಪಾವತಿ ಮಾಡುವಷ್ಟು ಸಂಪತ್ತನ್ನು ಹೊಂದಿದೆ. ಹೀಗಾಗಿ ನಿಯಂತ್ರಕ ಕಾರ್ಯವಿಧಾನಗಳಿಗೆ ಒಳಪಟ್ಟು ಠೇವಣಿದಾರರಿಗೆ ಹಣ ಮರುಪಾವತಿಯಾಗಲಿದೆ ಎಂದು ಆರ್‌ಬಿಐ ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author