ಕಾರ್ಪೊರೇಟ್ ಗಳ ಅಲ್ಪಾವಧಿ ಸಾಲದ ಅಗತ್ಯಕ್ಕೆ 'ಇನ್ ಸ್ಟಂಟ್ ವರ್ಕಿಂಗ್ ಕ್ಯಾಪಿಟಲ್ ಲೋನ್' ನೆರವು: ಕೋಟಕ್ ಮಹೀಂದ್ರಾ ಬ್ಯಾಂಕ್ ಹೊಸ ಹೆಜ್ಜೆ
ದಾಸ್ತಾನು ಖರೀದಿ, ವೆಂಡರ್ ಪಾವತಿಗಳು ಮತ್ತು ವೇತನ ವಿತರಣೆಯಂತಹ ದೈನಂದಿನ ಅಗತ್ಯ ಗಳನ್ನು ಪೂರೈಸಲು ಕಾರ್ಪೊರೇಟ್ ಸಂಸ್ಥೆಗಳು ಹೆಚ್ಚಾಗಿ ಕಾರ್ಯನಿರ್ವಹಣಾ ಬಂಡವಾಳ ಸಾಲಗಳನ್ನು ಅವಲಂಬಿಸಿರುತ್ತವೆ. ಈ ಸಾಲಗಳು ಮೊದಲೇ ಮಂಜೂರಾಗಿದ್ದರೂ, ಹಣ ಪಡೆಯಲು ನಿಗದಿತ ಕೆಲಸದ ಸಮಯ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಈ ಹಿಂದೆ ಇತ್ತು.
-
ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಅಲ್ಪಾವಧಿಯ ಹಣಕಾಸಿನ ಅಗತ್ಯಗಳನ್ನು ನಿರ್ವಹಿಸುವ ವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು 'ಇನ್ ಸ್ಟಂಟ್ ವರ್ಕಿಂಗ್ ಕ್ಯಾಪಿಟಲ್ ಲೋನ್' ಸಹಕಾರಿಯಾಗಲಿದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ ಅಭಿಪ್ರಾಯಪಟ್ಟಿದೆ. ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾಗಿ ₹9,000 ಕೋಟಿಗೂ ಅಧಿಕ ಮೊತ್ತವನ್ನು ವಿತರಿಸಿದ ನಂತರ, ಬ್ಯಾಂಕ್ ಈಗ ಈ ಸೌಲಭ್ಯವನ್ನು ತನ್ನ ಎಲ್ಲಾ ಕಾರ್ಪೊರೇಟ್ ಗ್ರಾಹಕರಿಗಾಗಿ ಒದಗಿಸುತ್ತಿದೆ.
ಅಲ್ಪಾವಧಿ ಸಾಲಗಳು ಅತ್ಯಂತ ವೇಗವಾಗಿ ಲಭ್ಯವಾಗುತ್ತಿರುವುದು, ಕಂಪನಿಗಳು ತಮ್ಮ ದೈನಂದಿನ ಬಂಡವಾಳ ಅಗತ್ಯಗಳನ್ನು ನಿರ್ವಹಿಸುವ ಕ್ರಮದ ಮೇಲೆ ದೊಡ್ಡ ಪ್ರಭಾವ ಬೀರುತ್ತಿದೆ ಎಂದು ಬ್ಯಾಂಕ್ ತಿಳಿಸಿದೆ.
ಈ ಸೌಲಭ್ಯದ ಅಡಿಯಲ್ಲಿ ಅರ್ಹ ಕಾರ್ಪೊರೇಟ್ ಸಂಸ್ಥೆಗಳು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯ ಮೂಲಕ ಕೇವಲ ಕೆಲವೇ ಸೆಕೆಂಡುಗಳಲ್ಲಿ ವರ್ಕಿಂಗ್ ಕ್ಯಾಪಿಟಲ್ (ಕಾರ್ಯ ನಿರ್ವಹಣಾ ಬಂಡ ವಾಳ) ಸಾಲ ಪಡೆಯಬಹುದಾಗಿದೆ. ಸಾಮಾನ್ಯವಾಗಿ ಸಾಲದ ಮಿತಿಗಳು ಮೊದಲೇ ಮಂಜೂರಾ ಗಿದ್ದರೂ ಸಹ, ಬ್ಯಾಂಕಿಂಗ್ ಸಮಯದ ಮಿತಿ ಮತ್ತು ಮ್ಯಾನುಯಲ್ ಹಂತಗಳಿಂದಾಗಿ ಸಾಲದ ಹಣ ಕೈ ಸೇರಲು ವಿಳಂಬವಾಗುತ್ತಿತ್ತು. ಆದರೆ, ಈ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯು ಅಂತಹ ಎಲ್ಲಾ ಅಡೆತಡೆಗಳನ್ನು ನಿವಾರಿಸಿ, ಹಣಕಾಸಿನ ತುರ್ತು ಅಗತ್ಯಗಳನ್ನು ಕ್ಷಣಾರ್ಧದಲ್ಲಿ ಪೂರೈಸ ಲಿದೆ.
ಈ ಕುರಿತು ಕೋಟಕ್ ಮಹೀಂದ್ರಾ ಬ್ಯಾಂಕ್ ನ ಕಾರ್ಪೊರೇಟ್ ಮತ್ತು ಟ್ರಾನ್ಸಾಕ್ಷನ್ ಬ್ಯಾಂಕಿಂಗ್ ವಿಭಾಗದ ಅಧ್ಯಕ್ಷೆ ಅನು ಅಗರ್ವಾಲ್ ಮಾತನಾಡಿ , "ಬ್ಯಾಂಕಿಂಗ್ ಸಮಯಕ್ಕೆ ಅನುಗುಣವಾಗಿ ಹಣಕಾಸಿನ ಯೋಜನೆ ರೂಪಿಸುವ ಬದಲು, ಗ್ರಾಹಕರು ಈಗ ತಮಗೆ ಅಗತ್ಯವಿದ್ದ ತಕ್ಷಣವೇ ವರ್ಕಿಂಗ್ ಕ್ಯಾಪಿಟಲ್ ಅನ್ನು ಪಡೆಯುತ್ತಿದ್ದಾರೆ," ಎಂದು ಹೇಳಿದರು.
ದಾಸ್ತಾನು ಖರೀದಿ, ವೆಂಡರ್ ಪಾವತಿಗಳು ಮತ್ತು ವೇತನ ವಿತರಣೆಯಂತಹ ದೈನಂದಿನ ಅಗತ್ಯ ಗಳನ್ನು ಪೂರೈಸಲು ಕಾರ್ಪೊರೇಟ್ ಸಂಸ್ಥೆಗಳು ಹೆಚ್ಚಾಗಿ ಕಾರ್ಯನಿರ್ವಹಣಾ ಬಂಡವಾಳ ಸಾಲ ಗಳನ್ನು ಅವಲಂಬಿಸಿರುತ್ತವೆ. ಈ ಸಾಲಗಳು ಮೊದಲೇ ಮಂಜೂರಾಗಿದ್ದರೂ, ಹಣ ಪಡೆಯಲು ನಿಗದಿತ ಕೆಲಸದ ಸಮಯ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಈ ಹಿಂದೆ ಇತ್ತು.
ಆದರೆ ಈಗ ಈ ಸಂಪ್ರದಾಯ ಬದಲಾಗುತ್ತಿದೆ. ಕೋಟಕ್ ಬ್ಯಾಂಕ್ ತನ್ನ ಕಾರ್ಪೊರೇಟ್ ಡಿಜಿಟಲ್ ಪ್ಲಾಟ್ ಫಾರ್ಮ್ ‘ಎಫ್ ವೈ ಎನ್’ (ಫಾರ್ ಯುವರ್ ನೀಡ್ಸ್) ಮೂಲಕ ಗ್ರಾಹಕರು ಕೇವಲ ಕೆಲವೇ ಸೆಕೆಂಡುಗಳಲ್ಲಿ ಈ ಸಾಲವನ್ನು ಪಡೆಯಲು ಅನುವು ಮಾಡಿಕೊಟ್ಟಿದೆ. ಕಂಪನಿಗಳು ಸಾಲದ ಮೊತ್ತ ಮತ್ತು ಅವಧಿಯಂತಹ ಮೂಲಭೂತ ವಿವರಗಳನ್ನು ನಮೂದಿಸಿದ ತಕ್ಷಣವೇ, ಡಿಜಿಟಲ್ ತಪಾಸಣೆಗಳು ಪೂರ್ಣಗೊಂಡು ಹಣವು ಅವರ ಖಾತೆಗೆ ತಕ್ಷಣವೇ ಜಮೆಯಾಗುತ್ತದೆ.
ಈ ಕುರಿತು ಮಾಹಿತಿ ನೀಡಿದ ಅನು ಅಗರ್ವಾಲ್ ಅವರು , "ಸಾಲ ವಿತರಣೆಯ ಸಮಯವನ್ನು ನಾವು ಹಲವು ಗಂಟೆಗಳಿಂದ ಕೇವಲ ಕೆಲವೇ ಸೆಕೆಂಡುಗಳಿಗೆ ಇಳಿಸಿದ್ದೇವೆ. ಇದರಿಂದಾಗಿ ಕಂಪನಿ ಗಳು ಕೇವಲ ಬ್ಯಾಂಕಿಂಗ್ ವಿಳಂಬವನ್ನು ಸರಿಹೊಂದಿಸಲು ಹಣವನ್ನು ಕಾಯ್ದಿರಿಸುವ ಬದಲು, ಅಗತ್ಯಬಿದ್ದ ತಕ್ಷಣವೇ ತಮ್ಮ ದೈನಂದಿನ ವಹಿವಾಟಿನ ಅಗತ್ಯಗಳಿಗೆ ಸ್ಪಂದಿಸಲು ಸಾಧ್ಯ ವಾಗುತ್ತಿದೆ," ಎಂದು ಹೇಳಿದರು.
ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ, ಈ ಸೇವೆಯ ಆರಂಭಿಕ ಬಳಕೆಯು ಗ್ರಾಹಕರ ವರ್ತನೆ ಯಲ್ಲಿನ ಬದಲಾವಣೆಯನ್ನು ಎತ್ತಿ ತೋರಿಸುತ್ತಿದೆ. ಹಿಂದೆ ಸಾಲಕ್ಕಾಗಿ ಮನವಿ ಸಲ್ಲಿಸಲು ಬ್ಯಾಂಕಿನ ಸಮಯದ ಮಿತಿಯನ್ನು ಕಾಯುತ್ತಿದ್ದ ಕಂಪನಿಗಳು, ಈಗ ಅಂತಹ ಯಾವುದೇ ಮಿತಿಗಳಿಲ್ಲದೆ ಸಂಜೆಯ ವೇಳೆಯಲ್ಲೂ ಈ ಸೌಲಭ್ಯವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿವೆ.
"ಹಿಂದೆ ಗ್ರಾಹಕರು ನಿಗದಿತ ಅವಧಿಯೊಳಗೆ ಸಾಲದ ಮನವಿ ಸಲ್ಲಿಸಬೇಕಿತ್ತು. ಆದರೆ ಅರ್ಹ ಗ್ರಾಹಕ ರಿಗೆ ಈಗ ಅಂತಹ ಯಾವುದೇ ನಿರ್ಬಂಧಗಳಿಲ್ಲ," ಎಂದು ಅಗರ್ವಾಲ್ ತಿಳಿಸುತ್ತಾರೆ.
ಈ ಯೋಜನೆಯ ಪ್ರಾಯೋಗಿಕ ಹಂತದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಹಾಗೂ ಮಧ್ಯಮ ಮಾರುಕಟ್ಟೆಯ ಕಂಪನಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕೋಟಕ್ ಬ್ಯಾಂಕ್ ಹೇಳಿದೆ. ಇಂತಹ ಸಂಸ್ಥೆಗಳಲ್ಲಿ ಬಂಡವಾಳ ಲಭ್ಯತೆಯಲ್ಲಿ ಸಣ್ಣ ವಿಳಂಬವಾದರೂ ಅದು ಇಡೀ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಬ್ಯಾಂಕ್ ಈ ಸೌಲಭ್ಯವನ್ನು ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗೂ ವಿಸ್ತರಿಸುತ್ತಿದೆ.
ಕಾರ್ಪೊರೇಟ್ ಬ್ಯಾಂಕಿಂಗ್ ನಲ್ಲಿ ಕಾರ್ಯನಿರ್ವಹಣಾ ಬಂಡವಾಳವು ಅತಿ ದೊಡ್ಡ ಪಾತ್ರ ವಹಿಸು ತ್ತದೆ. ಬ್ಯಾಂಕಿನ ಅಂದಾಜಿನ ಪ್ರಕಾರ, ಸುಮಾರು ಶೇ. 70ರಷ್ಟು ಕಾರ್ಪೊರೇಟ್ ಸಾಲದ ಪ್ರಕ್ರಿಯೆಗಳು ವರ್ಕಿಂಗ್ ಕ್ಯಾಪಿಟಲ್ ಗೆ ಸಂಬಂಧಿಸಿವೆ. ಹೀಗಾಗಿ, ಕಂಪನಿಗಳು ಮತ್ತು ಬ್ಯಾಂಕುಗಳ ನಡುವೆ ನಡೆಯುವ ಅತಿ ಹೆಚ್ಚಿನ ವ್ಯವಹಾರಗಳಲ್ಲಿ ಇದೂ ಒಂದಾಗಿದೆ.
ಈ ಕುರಿತು ವಿವರಿಸಿದ ಅನು ಅಗರ್ವಾಲ್ ಅವರು, "ಬೇಡಿಕೆಯ ಏರಿಳಿತ ಮತ್ತು ಬಾಕಿ ಬರಬೇಕಿ ರುವ ಹಣದ ವಿಳಂಬದಂತಹ ಸವಾಲುಗಳನ್ನು ಎದುರಿಸುತ್ತಿರುವ ಕಾರ್ಪೊರೇಟ್ ವಲಯಕ್ಕೆ ಈ 'ಇನ್ ಸ್ಟಂಟ್' ಸಾಲಗಳು 'ಗೇಮ್ ಚೇಂಜರ್' ಆಗಲಿವೆ. ಬ್ಯಾಂಕಿಂಗ್ ಪ್ರಕ್ರಿಯೆಗಳು ತಮ್ಮ ವ್ಯವಹಾರದ ವೇಗಕ್ಕೆ ತಕ್ಕಂತೆ ಇರಬೇಕೆಂದು ಕಾರ್ಪೊರೇಟ್ ಸಂಸ್ಥೆಗಳು ನಿರೀಕ್ಷಿಸುತ್ತಿವೆ," ಎಂದರು.
ಭಾರತದ ರಿಟೇಲ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ 'ಇನ್ ಸ್ಟಂಟ್ ಪೇಮೆಂಟ್' ಸೌಲಭ್ಯಗಳು ಹಲವು ವರ್ಷ ಗಳ ಹಿಂದೆಯೇ ಬಂದಿದ್ದರೂ, ಕಾರ್ಪೊರೇಟ್ ಸಾಲದ ಪ್ರಕ್ರಿಯೆಗಳು ಅವುಗಳ ಸಂಕೀರ್ಣತೆ ಯಿಂದಾಗಿ ನಿಧಾನಗತಿಯಲ್ಲಿ ಬೆಳವಣಿಗೆ ಹೊಂದಿದ್ದವು ಎಂದು ಉದ್ಯಮ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇತ್ತೀಚಿನ ಈ ಬದಲಾವಣೆಯು ಕೇವಲ ಹೊರಗಿನ ಸೇವೆಗಳಿಗಷ್ಟೇ ಅಲ್ಲದೆ, ಆಂತರಿಕ ವಹಿವಾಟಿನ ಪ್ರಕ್ರಿಯೆಗಳಿಗೂ ಈಗ ಆಟೊಮೇಷನ್ ಅಳವಡಿಸಲಾಗುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ.
ಕೋಟಕ್ ಬ್ಯಾಂಕ್‌ನ ‘ಎಫ್ ವೈ ಎನ್’ ವ್ಯವಸ್ಥೆಯ ಮೂಲಕ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಇದು ಪಾವತಿಗಳು, ಕಲೆಕ್ಷನ್ಸ್ ಮತ್ತು ಟ್ರೇಡ್ ಸರ್ವಿಸಸ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ತಂದಿದೆ. ಇದರ ಜೊತೆಗೆ ಅಕೌಂಟ್ ಸ್ಟೇಟ್ ಮೆಂಟ್, ಟ್ಯಾಕ್ಸ್ ಸರ್ಟಿಫಿಕೇಟ್ ನಂತಹ ದೈನಂದಿನ ಸೇವೆಗಳನ್ನೂ ಬ್ಯಾಂಕ್ ಡಿಜಿಟಲೀಕರಣಗೊಳಿಸುತ್ತಿದೆ.
ಈ 'ಇನ್ ಸ್ಟಂಟ್' ಸಾಲ ಸೌಲಭ್ಯವು ಇಡೀ ಬ್ಯಾಂಕಿಂಗ್ ವಲಯದಲ್ಲಿ ಒಂದು ಸಾಮಾನ್ಯ ಮಾನದಂಡವಾಗಿ ಬದಲಾಗಲಿದೆಯೇ ಎಂಬುದು ಮುಂದಿನ ದಿನಗಳಲ್ಲಿ ಇತರೆ ಬ್ಯಾಂಕುಗಳು ಈ ವ್ಯವಸ್ಥೆಯನ್ನು ಹೇಗೆ ಅಳವಡಿಸಿಕೊಳ್ಳುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ. ಈಗಾಗಲೇ ಈ ಸೌಲಭ್ಯ ಬಳಸುತ್ತಿರುವ ಕಂಪನಿಗಳಿಗೆ ಇದರ ಲಾಭ ತಕ್ಷಣವೇ ಸಿಗುತ್ತಿದೆ. ಕೇವಲ ತಂತ್ರಜ್ಞಾನದ ಮೇಲ್ದರ್ಜೆ ಎಂಬಂತೆ ಆರಂಭವಾದ ಈ ಬದಲಾವಣೆಯು, ಈಗ ಕಾರ್ಪೊರೇಟ್ ಸಂಸ್ಥೆಗಳು ಅಲ್ಪಾವಧಿ ಸಾಲ ಪಡೆಯುವ ಮತ್ತು ತಮ್ಮ ವ್ಯವಹಾರದ ಅಗತ್ಯಕ್ಕೆ ತಕ್ಕಂತೆ ಹಣಕಾಸನ್ನು ಬಳಸಿಕೊಳ್ಳುವ ಕ್ರಮವನ್ನೇ ಬದಲಿಸುತ್ತಿದೆ.