ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Repo Rate: ಗುಡ್‌ನ್ಯೂಸ್‌! ರೆಪೋ ರೇಟ್‌ ದರ ಇಳಿಕೆ- ಬ್ಯಾಂಕ್‌ ಸಾಲಗಳ ಮೇಲಿನ ಬಡ್ಡಿದರ ಕಡಿತ

Repo Rate: RBI ಗವರ್ನರ್ ಸಂಜಯ್ ಮಲ್ಹೋತ್ರಾ(Sanjay Malhotra) ನೇತೃತ್ವದ ಹಣಕಾಸು ನೀತಿ ಸಮಿತಿ (MPC) ಏಪ್ರಿಲ್ 7 ರಿಂದ 9 ರವರೆಗೆ ಚರ್ಚೆಗಳನ್ನು ನಡೆಸಿದ್ದು, ಇಂದು ಮಹತ್ವದ ಘೋಷಣೆ ಹೊರಡಿಸಿದ್ದಾರೆ. ರೆಪೋ ದರವನ್ನು ಶೇ. 6.25ರಿಂದ ಶೇ 6ಕ್ಕೆ ಇಳಿಸಿರುವುದಾಗಿ ತಿಳಿಸಿದ್ದಾರೆ.

ಮತ್ತೆ ರೆಪೋ ರೇಟ್‌ ಇಳಿಕೆ; RBI ಮಹತ್ವದ ಘೋಷಣೆ

Profile Rakshita Karkera Apr 9, 2025 10:33 AM

ನವದೆಹಲಿ: ಡೊನಾಲ್ಡ್‌ ಟ್ರಂಪ್‌(Donald Trump) ನೇತೃತ್ವದ ಅಮೆರಿಕ ಸರ್ಕಾರದ ಸುಂಕ ಸಮರದಿಂದ ಹೆಚ್ಚುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆಯ ಮಧ್ಯೆಯೇ, ಭಾರತೀಯ ರಿಸರ್ವ್ ಬ್ಯಾಂಕ್ (RBI)ಇಂದು ಈ ಹಣಕಾಸು ವರ್ಷದ ಮೊದಲ ಹಣಕಾಸು ನೀತಿ ನಿರ್ಧಾರವನ್ನು ಪ್ರಕಟಿಸಿದೆ. RBI ಗವರ್ನರ್ ಸಂಜಯ್ ಮಲ್ಹೋತ್ರಾ(Sanjay Malhotra) ನೇತೃತ್ವದ ಹಣಕಾಸು ನೀತಿ ಸಮಿತಿ (MPC) ಏಪ್ರಿಲ್ 7 ರಿಂದ 9 ರವರೆಗೆ ಚರ್ಚೆಗಳನ್ನು ನಡೆಸಿದ್ದು, ಇಂದು ಮಹತ್ವದ ಘೋಷಣೆ ಹೊರಡಿಸಿದೆ. ರೆಪೋ ದರ(Repo Rate)ವನ್ನು ಶೇ 6ಕ್ಕೆ ಇಳಿಕೆ ಆಗಿದ್ದು, ಬೆಲೆ ಏರಿಕೆ ಬಿಸಿಗೆ ಬೆಳಲಿ ಬೆಂಡಾಗಿರುವ ಜನ ಸಾಮಾನ್ಯರಿಗೆ ಕೊಂಚ ರಿಲೀಫ್‌ ಸಿಕ್ಕಂತಾಗಿದೆ.

ಇಂದು ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ ಆರ್​​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಕಮಿಟಿ ನಿರ್ಧಾರಗಳನ್ನು ಪ್ರಕಟಿಸುತ್ತಾ, ರೆಪೋ ದರವನ್ನು ಶೇ. 6.25ರಿಂದ ಶೇ 6ಕ್ಕೆ ಇಳಿಸಿರುವುದನ್ನು ತಿಳಿಸಿದರು. ಆರ್​​ಬಿಐನಿಂದ ಇದು ಸತತ ಎರಡನೇ ರಿಪೋ ದರ ಇಳಿಕೆ ಆಗಿದೆ. ಫೆಬ್ರುವರಿಯಲ್ಲಿ ನಡೆದ ಎಂಪಿಸಿ ಸಭೆಯಲ್ಲೂ 25 ಮೂಲಾಂಕಗಳಷ್ಟು ಬಡ್ಡಿದರವನ್ನು ಇಳಿಸಲಾಗಿತ್ತು. ಈಗ ಮತ್ತೊಮ್ಮೆ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಇನ್ನು ಆರ್‌ಬಿಐನ ಈ ನಿರ್ಧಾರವನ್ನು ಆರ್ಥಿಕ ತಜ್ಞರು ಮೊದಲೇ ಅಂದಾಜಿಸಿದ್ದರು.

ಫೆಬ್ರುವರಿಯಲ್ಲಿ ಕೇಂದ್ರ ಬಜೆಟ್‌ನಲ್ಲಿ12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಬೆನ್ನಲ್ಲೇ ಆರ್‌ಬಿಐ ದೇಶದ ಜನತೆಗೆ ಗುಡ್‌ನ್ಯೂಸ್‌ ಸಿಕ್ಕಿತ್ತು. ನಿರೀಕ್ಷೆಯಂತೆ ರೆಪೋದರವನ್ನು(Repo Rate) ಶೇ. 0.25 ಪ್ರತಿಶತದಷ್ಟುಇಳಿಕೆ ಮಾಡುವ ಮೂಲಕ ಭಾರತೀಯ ರಿಸರ್ವ್‌ ಬ್ಯಾಂಕ್‌(RBI) ಮಹತ್ವದ ಆದೇಶ ಹೊರಡಿಸಿತ್ತು. ಆಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ದುಬಾರಿ ಬಡ್ಡಿ ದರದಿಂದ ಬಸವಳಿದಿರುವ ಸಾಲಗಾರರಿಗೆ RBI ತುಸು ನಿರಾಳ ಒದಗಿಸಿತ್ತು.

ಈ ಸುದ್ದಿಯನ್ನೂ ಓದಿ: RBI: ಹೊಸ ₹10, ₹50 ನೋಟುಗಳು ಶೀಘ್ರದಲ್ಲಿಯೇ ಬಿಡುಗಡೆ; ಆರ್‌ಬಿಐನಿಂದ ಘೋಷಣೆ

ರೆಪೋ ರೇಟ್‌ ಎಂದರೆ ಏನು?

ರೆಪೋ ದರ ಅಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವಾಗಿದೆ. ಒಂದೊಮ್ಮೆ ರೆಪೋ ದರ ಇಳಿಕೆಯಾದಲ್ಲಿ ಬ್ಯಾಂಕ್‌ಗಳಿಗೆ ಕಡಿಮೆ ದರದಲ್ಲಿ ಸಾಲ ಸಿಗಲಿದ್ದು, ಇವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಲಿವೆ. ಇದರಿಂದ ಸಾಲದ ಮೇಲಿನ ಬಡ್ಡಿಗಳು ಕಡಿಮೆಯಾಗಲಿವೆ.

2020ರಲ್ಲಿ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರೆಪೋ ದರವನ್ನು ಶೇ. 0.40ರಷ್ಟು ಇಳಿಸಿದ್ದ ರಿಸರ್ವ್ ಬ್ಯಾಂಕ್ ಕಳೆದ ಸುಮಾರು 5 ವರ್ಷದಿಂದ ಬಡ್ಡಿ ದರವನ್ನು ಇಳಿಸಿಲ್ಲ. ಬದಲಿಗೆ 2022ರಿಂದ 2023ರ ಮೇವರೆಗೆ ಸತತವಾಗಿ ಬಡ್ಡಿ ದರ ಏರಿಸಲಾಗಿತ್ತು. ಸರಿ ಸುಮಾರು ಎರಡು ವರ್ಷಗಳಿಂದ ರೆಪೋ ದರ ಶೇ. 6.5ರಲ್ಲೇ ಇತ್ತು.