ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RBI: ಹೊಸ ₹10, ₹50 ನೋಟುಗಳು ಶೀಘ್ರದಲ್ಲಿಯೇ ಬಿಡುಗಡೆ; ಆರ್‌ಬಿಐನಿಂದ ಘೋಷಣೆ

ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ, ಪ್ರಸ್ತುತ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿಯನ್ನು ಹೊಂದಿರುವ ಮಹಾತ್ಮ ಗಾಂಧಿ (ಹೊಸ) ಸರಣಿಯ 10 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಹೊಸ ₹10, ₹50  ರೂ. ನೋಟುಗಳು ಶೀಘ್ರದಲ್ಲಿಯೇ ಬಿಡುಗಡೆ; ಆರ್‌ಬಿಐ

Profile Vishakha Bhat Apr 7, 2025 3:31 PM

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ, ಪ್ರಸ್ತುತ ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಸಹಿಯನ್ನು ಹೊಂದಿರುವ ಮಹಾತ್ಮ ಗಾಂಧಿ (ಹೊಸ) ಸರಣಿಯ 10 ರೂ. ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಹೊಸ ನೋಟುಗಳ ವಿನ್ಯಾಸವು ಈಗಾಗಲೇ ಬಿಡುಗಡೆ ಮಾಡಲಾದ 10 ರೂ. ಮತ್ತು 500 ರೂ. ನೋಟುಗಳಂತೆಯೇ ಇರುತ್ತದೆ ಎಂದು ಆರ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಹಿಂದೆ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ 10 ರೂ. ಮುಖಬೆಲೆಯ ಎಲ್ಲಾ ನೋಟುಗಳು ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಮುಂದುವರಿಯುತ್ತವೆ.

ಕಳೆದ ತಿಂಗಳು ಕೂಡ ಆರ್‌ಬಿಐ 100 ರೂ. ಮತ್ತು 200 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು, ಅದಕ್ಕೆ ಗವರ್ನರ್ ಸಂಜಯ್ ಮಲ್ಹೋತ್ರಾ ಸಹಿ ಹಾಕಿದ್ದರು. ಅಲ್ಲದೆ, ಕೇಂದ್ರ ಬ್ಯಾಂಕ್ ಹಿಂದೆ ಬಿಡುಗಡೆ ಮಾಡಿದ ಮಹಾತ್ಮ ಗಾಂಧಿ (ಹೊಸ) ಸರಣಿಯ 500 ರೂ. ಮುಖಬೆಲೆಯ ಎಲ್ಲಾ ನೋಟುಗಳು ಕಾನೂನುಬದ್ಧ ಚಲಾವಣೆಯಲ್ಲಿ ಮುಂದುವರಿಯುತ್ತವೆ ಆರ್‌ಬಿಐ ತಿಳಿಸಿದೆ. ಮಹಾತ್ಮ ಗಾಂಧಿ (ಹೊಸ) ಸರಣಿಯ 500 ರೂ. ನೋಟುಗಳು: ಮಹಾತ್ಮ ಗಾಂಧಿ (ಹೊಸ) ಸರಣಿಯ ಹೊಸ 500 ರೂಪಾಯಿ ನೋಟುಗಳು ಬಣ್ಣ, ಗಾತ್ರ, ಥೀಮ್, ಭದ್ರತಾ ವೈಶಿಷ್ಟ್ಯಗಳ ಸ್ಥಳ ಮತ್ತು ವಿನ್ಯಾಸ ಅಂಶಗಳ ವಿಷಯದಲ್ಲಿ ಪ್ರಸ್ತುತ ಸರಣಿಗಿಂತ ಭಿನ್ನವಾಗಿವೆ.

ಈ ಸುದ್ದಿಯನ್ನೂ ಓದಿ: ಕರೆನ್ಸಿ ನೋಟುಗಳಲ್ಲಿ ಬದಲಾವಣೆಗಳಿಲ್ಲ: ಆರ್‌.ಬಿ.ಐ ಸ್ಪಷ್ಟನೆ

ಶಕ್ತಿಕಾಂತ ದಾಸ್ ಅವರ ಅವಧಿ ಪೂರ್ಣಗೊಂಡ ನಂತರ ಡಿಸೆಂಬರ್ 2024 ರಲ್ಲಿ ಸಂಜಯ್ ಮಲ್ಹೋತ್ರಾ ಆರ್‌ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡರು. ಮಲ್ಹೋತ್ರಾ, 1990 ರ ಬ್ಯಾಚ್ ರಾಜಸ್ಥಾನ ಕೇಡರ್ IAS ಅಧಿಕಾರಿಯಾಗಿದ್ದು, ಮಲ್ಹೋತ್ರಾ ಅವರನ್ನು 26ನೇ ಆರ್‌ಬಿಐ ಗವರ್ನರ್ ಆಗಿ ಆಯ್ಕೆ ಮಾಡಲಾಗಿದೆ. ಭಾರತದಲ್ಲಿ ನೋಟುಗಳು ಬದಲಾವಣೆ ಆಗುವುದು. ಹೊಸ ಮಾದರಿಯ ಹಾಗೂ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವುದು ಇದೇ ಮೊದಲೇನು ಅಲ್ಲ. ಈ ಹಿಂದೆ 500 ಹಾಗೂ 1000 ರೂಪಾಯಿ ನೋಟುಗಳು ಇದ್ದವು. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ರದ್ದು ಮಾಡಿತ್ತು. 2000 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಗಿತ್ತು.