Repo Rate: ಗುಡ್‌ನ್ಯೂಸ್! ರೆಪೋ ರೇಟ್ ದರ ಇಳಿಕೆ- ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿದರ ಕಡಿತ; RBI ಮಹತ್ವದ ಘೋಷಣೆ
ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ದುಬಾರಿ ಬಡ್ಡಿ ದರದಿಂದ ಬಸವಳಿದಿರುವ ಸಾಲಗಾರರಿಗೆ RBI ಶುಕ್ರವಾರ ತುಸು ನಿರಾಳ ಒದಗಿಸಿದೆ. ನಿರೀಕ್ಷೆಯಂತೆ ರೆಪೋದರವನ್ನು(Repo Rate) ಶೇ. 0.25 ಪ್ರತಿಶತದಷ್ಟುಇಳಿಕೆ ಮಾಡಿದೆ. ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಪತ್ರಿಕಾಗೋಷ್ಠಿ ನಡೆಸಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
![Repo rate](https://cdn-vishwavani-prod.hindverse.com/media/images/Repo_rate.max-1280x720.jpg)
![Profile](https://vishwavani.news/static/img/user.png)
ಮುಂಬೈ: ಕೇಂದ್ರ ಬಜೆಟ್‌ನಲ್ಲಿ12 ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಬೆನ್ನಲ್ಲೇ ದೇಶದ ಜನತೆಗೆ ಶುಭ ಶುಕ್ರವಾರವೇ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದೆ. ನಿರೀಕ್ಷೆಯಂತೆ ರೆಪೋದರವನ್ನು(Repo Rate) ಶೇ. 0.25 ಪ್ರತಿಶತದಷ್ಟುಇಳಿಕೆ ಮಾಡುವ ಮೂಲಕ ಭಾರತೀಯ ರಿಸರ್ವ್ ಬ್ಯಾಂಕ್(RBI) ಮಹತ್ವದ ಆದೇಶ ಹೊರಡಿಸಿದೆ. ಆಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ದುಬಾರಿ ಬಡ್ಡಿ ದರದಿಂದ ಬಸವಳಿದಿರುವ ಸಾಲಗಾರರಿಗೆ RBI ಶುಕ್ರವಾರ ತುಸು ನಿರಾಳ ಒದಗಿಸಿದೆ. ಸಾಲಗಳು ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರವನ್ನು ನಿರ್ಧರಿಸುವ ಆರ್ಬಿಐನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆ ಇಂದು ಕೊನೆಗೊಂಡಿದ್ದು, ಈ ಹೊಸ ನೀತಿಯನ್ನು ಆರ್‌ಬಿಐ ಘೋಷಿಸಿದೆ. ಇನ್ನು ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ ಪತ್ರಿಕಾಗೋಷ್ಠಿ ನಡೆಸಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
#WATCH | Making a statement on Monetary Policy, RBI Governor Sanjay Malhotra says, "The Monetary Policy Committee unanimously decided to reduce the policy rate by 25 basis points from 6.5% to 6.25%..."
— ANI (@ANI) February 7, 2025
(Source - RBI) pic.twitter.com/wIOOfpAwS4
ಮೊನ್ನೆಯಿಂದ ನಡೆದಿದ್ದ ಎಂಪಿಸಿ ಸಭೆಯ ಬಳಿಕ ಇಂದು ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಜಯ್ ಮಲ್ಹೋತ್ರಾ, ಶೇ. 6.50ರಷ್ಟಿದ್ದ ಬಡ್ಡಿದರವನ್ನು ಶೇ. 6.25ಕ್ಕೆ ಇಳಿಸಲಾಗಿದೆ. ಹತ್ತಿರ ಹತ್ತಿರ ಐದು ವರ್ಷಗಳ ಬಳಿಕ ಮೊದಲ ಬಾರಿಗೆ ಆರ್ಬಿಐನ ರಿಪೋ ದರ ಇಳಿಕೆ ಆಗಿದೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ: Budget 2025 income tax-ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ: 12 ಲಕ್ಷ ರೂ ವರೆಗೆ ಆದಾಯ ತೆರಿಗೆ ಇಲ್ಲ!
ರೆಪೋ ರೇಟ್ ಎಂದರೆ ಏನು?
ರೆಪೋ ದರ ಅಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲಕ್ಕೆ ಪಾವತಿಸುವ ಬಡ್ಡಿ ದರವಾಗಿದೆ. ಒಂದೊಮ್ಮೆ ರೆಪೋ ದರ ಇಳಿಕೆಯಾದಲ್ಲಿ ಬ್ಯಾಂಕ್‌ಗಳಿಗೆ ಕಡಿಮೆ ದರದಲ್ಲಿ ಸಾಲ ಸಿಗಲಿದ್ದು, ಇವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಲಿವೆ. ಇದರಿಂದ ಸಾಲದ ಮೇಲಿನ ಬಡ್ಡಿಗಳು ಕಡಿಮೆಯಾಗಲಿವೆ.
ಐದು ವರ್ಷಗಳಿಂದ ರೆಪೋರೇಟ್ ಇಳಿಕೆ ಮಾಡಿಲ್ಲ
2020ರಲ್ಲಿ ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರೆಪೋ ದರವನ್ನು ಶೇ. 0.40ರಷ್ಟು ಇಳಿಸಿದ್ದ ರಿಸರ್ವ್ ಬ್ಯಾಂಕ್ ಕಳೆದ ಸುಮಾರು 5 ವರ್ಷದಿಂದ ಬಡ್ಡಿ ದರವನ್ನು ಇಳಿಸಿಲ್ಲ. ಬದಲಿಗೆ 2022ರಿಂದ 2023ರ ಮೇವರೆಗೆ ಸತತವಾಗಿ ಬಡ್ಡಿ ದರ ಏರಿಸಲಾಗಿತ್ತು. ಸರಿ ಸುಮಾರು ಎರಡು ವರ್ಷಗಳಿಂದ ರೆಪೋ ದರ ಶೇ. 6.5ರಲ್ಲೇ ಇತ್ತು.