ವಾಯುಪ್ರದೇಶ ನಿರ್ಬಂಧದ ನಡುವೆ ಕತಾರ್ ಏರ್‌ವೇಸ್‌ನಲ್ಲಿ ತವರಿಗೆ ಮರಳಿದ 1,600 ಭಾರತೀಯರು
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ವಿಶ್ವದ ಎಲ್ಲ ರಾಷ್ಟ್ರಗಳನ್ನು ತಟ್ಟಿದೆ. ಅಲ್ಲಲ್ಲಿ ಸಿಲುಕಿರುವ ವಿದೇಶಿಗರು ತವರಿಗೆ ಮರಳಲು ಕಾತರಿಸುತ್ತಿದ್ದಾರೆ. ವಾಯುಪ್ರದೇಶದ ನಿರ್ಬಂಧಗಳ ನಡುವೆ ಇದೀಗ 5 ಕತಾರ್ ಏರ್‌ವೇಸ್ ವಿಮಾನಗಳಲ್ಲಿ 1,600 ಭಾರತೀಯರು ತವರಿಗೆ ಮರಳಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಐದು ಕತಾರ್ ಏರ್‌ವೇಸ್ (Qatar Airways) ವಿಮಾನಗಳಲ್ಲಿ ಮಂಗಳವಾರ ಸುಮಾರು 1,600 ಭಾರತೀಯರು ತವರಿಗೆ ಮರಳಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ (Middle Eastern country) ಉಂಟಾಗಿರುವ ಬಿಕ್ಕಟ್ಟಿನ ಪರಿಣಾಮ ಕತಾರ್ ವಾಯುಪ್ರದೇಶದ (Qatar Airways flights) ಮೇಲೆ ನಿರ್ಬಂಧಗಳಿದ್ದರೂ ವಿಮಾನಯಾನ ಸಂಸ್ಥೆಯು ಸೀಮಿತ ಸೇವೆಗಳನ್ನು ನಿರ್ವಹಿಸುವುದನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಐದು ಕತಾರ್ ಏರ್‌ವೇಸ್ ವಿಮಾನಗಳಲ್ಲಿ ಸುಮಾರು 1,600 ಭಾರತೀಯರು ಮರಳಿ ಭಾರತಕ್ಕೆ ಪ್ರಯಾಣಿಸಿದರು ಎಂದು ಭಾರತೀಯ ರಾಯಭಾರ ಕಚೇರಿ (Indian Embassy) ತಿಳಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿರುವ ಭಾರತೀಯ ರಾಯಭಾರ ಕಚೇರಿಯು, ದೆಹಲಿಗೆ ಎರಡು, ಮುಂಬೈ, ಕೊಚ್ಚಿ ಮತ್ತು ತಿರುವನಂತಪುರಕ್ಕೆ ತಲಾ ಒಂದು ವಿಮಾನಗಳು ತೆರಳಿದೆ. ಈ ಮೂಲಕ ಸುಮಾರು 1600 ಭಾರತೀಯ ಪ್ರಜೆಗಳು ತವರಿಗೆ ಹಿಂದಿರುಗಿದ್ದಾರೆ ಎಂದು ಹೇಳಿದೆ.
ಪಶ್ಚಿಮ ಏಷ್ಯಾ ಸಮರ; ಇಸ್ರೇಲ್ ವೈಮಾನಿಕ ದಾಳಿಗೆ ಇರಾನ್ ಉನ್ನತ ಅಧಿಕಾರಿ ಅಲಿ ಲಾರಿಜಾನಿ ಬಲಿ
ಇರಾನ್ ಮೇಲೆ ಇಸ್ರೇಲ್ ಮತ್ತು ಯುಎಸ್ ಸೇನಾ ಪಡೆಯು ದಾಳಿ ನಡೆಸುತ್ತಿರುವ ಪರಿಣಾಮ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ ಯುಎಸ್ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕತಾರ್‌ನ ವಾಯುಪ್ರದೇಶವನ್ನು ಮುಚ್ಚಲಾಗಿದೆ. ಆದರೂ ಕತಾರ್ ಏರ್‌ವೇಸ್ ಪ್ರಸ್ತುತ ಸೀಮಿತ, ನಿಗದಿತವಲ್ಲದ ವಿಮಾನಗಳನ್ನು ಮಾತ್ರ ನಿರ್ವಹಿಸುತ್ತಿದೆ.
Qatar Airways Operates Limited Flight Schedule to and from Doha
— Qatar Airways (@qatarairways) March 15, 2026
With Qatar Airways scheduled flight operations still temporarily suspended due to the closure of Qatari airspace, we want you to know that we are doing our utmost to support you with your journey, and to reunite you… pic.twitter.com/d5DK1WoAgo
ಭಾರತದ ವಿವಿಧ ಒಂಬತ್ತು ಭಾಗಗಳಿಗೆ ಬುಧವಾರದಿಂದ ವಿಮಾನ ಸೇವೆಗಳನ್ನು ಘೋಷಿಸಲಾಗಿದೆ. ಇದರಲ್ಲಿ ಪ್ರಯಾಣಿಸಲು ಬಯಸುವವರು ಕತಾರ್ ಏರ್ವೇಸ್ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಅಥವಾ ಅಧಿಕೃತ ಪ್ರಯಾಣ ಏಜೆಂಟ್‌ಗಳ ಮೂಲಕ ಬುಕ್ಕಿಂಗ್ ನಡೆಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಸೌದಿ ಅರೇಬಿಯಾ ಮೂಲಕ ಭಾರತಕ್ಕೆ ಪ್ರಯಾಣಿಸಲು ಬಯಸುವ ಭಾರತೀಯರಿಗೆ ರಾಯಭಾರ ಕಚೇರಿಯು ತಾತ್ಕಾಲಿಕ ಸೌದಿ ಸಾರಿಗೆ ವೀಸಾಗಳನ್ನು ಒದಗಿಸುತ್ತಿದೆ. ಪಾಸ್‌ಪೋರ್ಟ್‌ಗಳ ವಿತರಣೆ ಸೇರಿದಂತೆ ಕಾನ್ಸುಲರ್ ಸೇವೆಗಳನ್ನು ಒದಗಿಸಲು ಮುಂಬರುವ ವಾರದಲ್ಲಿ ಎಲ್ಲಾ ದಿನಗಳಲ್ಲಿ ಮಿಷನ್ ತೆರೆದಿರುತ್ತದೆ. ಆದರೆ ಫೋನ್, ಇಮೇಲ್ ಮತ್ತು ವಾಟ್ಸಾಪ್ ಮೂಲಕ ಅದರ ನಿಯಂತ್ರಣ ಕೊಠಡಿ ಮತ್ತು ಸಹಾಯವಾಣಿಗಳು 24/7 ಆಧಾರದ ಮೇಲೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸುವುದಾಗಿ ಹೇಳಿದೆ.
"ಇಸ್ರೇಲ್ ಒತ್ತಡದಿಂದ ಟ್ರಂಪ್ ಯುದ್ಧಕ್ಕೆ ಒಪ್ಪಿದ್ದಾರೆ"; ರಾಜಿನಾಮೆ ನೀಡಿದ ಅಮೆರಿಕದ ಉನ್ನತ ಭದ್ರತಾ ಅಧಿಕಾರಿ
ಸಂಘರ್ಷದ ಈ ಸಂದರ್ಭದಲ್ಲಿ ಕತಾರ್ ಅಧಿಕಾರಿಗಳು ನೀಡುವ ಸೂಚನೆಗಳನ್ನು ಪ್ರಯಾಣಿಕರು ಪಾಲಿಸಿ ಸುರಕ್ಷತೆ ಮತ್ತು ಸಮುದಾಯದ ಸ್ಥಿರತೆಯನ್ನು ಕಾಪಾಡಲು ಸಹಕರಿಸುವಂತೆ ರಾಯಭಾರ ಕಚೇರಿ ತಿಳಿಸಿದೆ.