ಸಣ್ಣ ವ್ಯಾಪಾರಿಗಳಿಗೆ ಸಾಲದ ಲಭ್ಯತೆ ಹಿಂದೆಂದಿಗಿಂತ ಈಗ ಏಕೆ ಮುಖ್ಯವಾಗಿದೆ ?
ಸಣ್ಣ ವ್ಯಾಪಾರಗಳು ಸಾಮಾನ್ಯವಾಗಿ ಬಿಗಿಯಾದ ನಗದು ಆವರ್ತಗಳಲ್ಲಿ ಕೆಲಸ ಮಾಡುತ್ತವೆ. ಪಾವತಿಗಳು ತಡವಾಗಿ ಬರಬಹುದು, ಆದರೆ ಬಾಡಿಗೆ, ವೇತನಗಳು ಮತ್ತು ಇನ್ವೆಂಟರಿ ವೆಚ್ಚಗಳು ಕಾಯುವುದಿಲ್ಲ. ಅಂತಹ ಸನ್ನಿವೇಶಗಳಲ್ಲಿ ಔಪಚಾರಿಕ ಸಾಲದ ಲಭ್ಯತೆಯು ಉದ್ಯಮ ಮಾಲೀಕ ರಿಗೆ ನಿರಾಳತೆ ಒದಗಿಸುತ್ತದೆ.
-
ಬೆಂಗಳೂರು: ಭಾರತದಲ್ಲಿ ಸಣ್ಣ ವ್ಯಾಪಾರಗಳ ಮಾಲೀಕರಿಗೆ ಸಾಲ ಎನ್ನುವುದು ಕಷ್ಟದ ಕಾಲಕ್ಕೆ ನೆರವಾಗುವುದು ಮಾತ್ರವಲ್ಲ- ಅದು ಪ್ರಗತಿಯ ಸಾಧನವಾಗಿದೆ. ನಗರಗಳು ಮತ್ತು ಸಣ್ಣ ಪಟ್ಟಣ ಗಳಲ್ಲಿ ಉದ್ಯಮಿಗಳು ಈಗ ತುರ್ತು ಸಂದರ್ಭಗಳಿಗೆ ಮಾತ್ರವಲ್ಲದೆ ಅವರ ವ್ಯಾಪಾರ ವಹಿವಾಟು ಸುಸೂತ್ರವಾಗಿ ನಡೆಸಲೂ ಸಾಲ ಪಡೆಯುತ್ತಿದ್ದಾರೆ. ಸಾಲವು ಅವರ ದೈನಂದಿನ ವೆಚ್ಚಗಳನ್ನು ನಿರ್ವಹಿಸಲು, ಹೊಸ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಮತ್ತು ವಿಶ್ವಾಸದಿಂದ ಭವಿಷ್ಯವನ್ನು ಯೋಜಿಸಲು ನೆರವಾಗುತ್ತದೆ.
ಇಂದಿನ ವೇಗವಾಗಿ ಚಲಿಸುತ್ತಿರುವ ವಾಣಿಜ್ಯ ಪರಿಸರದಲ್ಲಿ ಸಕಾಲಿಕವಾಗಿ ಹಣಕಾಸಿನ ಲಭ್ಯತೆಯು ಸರಳವಾಗಿ ನಿರ್ವಹಿಸಲು ಮತ್ತು ವಾಸ್ತವವಾಗಿ ಬೆಳೆಯುವ ನಡುವಿನ ವ್ಯತ್ಯಾಸವನ್ನು ತರಬಲ್ಲದು.
ಸಣ್ಣ ವ್ಯಾಪಾರಗಳು ಸಾಮಾನ್ಯವಾಗಿ ಬಿಗಿಯಾದ ನಗದು ಆವರ್ತಗಳಲ್ಲಿ ಕೆಲಸ ಮಾಡುತ್ತವೆ. ಪಾವತಿಗಳು ತಡವಾಗಿ ಬರಬಹುದು, ಆದರೆ ಬಾಡಿಗೆ, ವೇತನಗಳು ಮತ್ತು ಇನ್ವೆಂಟರಿ ವೆಚ್ಚಗಳು ಕಾಯುವುದಿಲ್ಲ. ಅಂತಹ ಸನ್ನಿವೇಶಗಳಲ್ಲಿ ಔಪಚಾರಿಕ ಸಾಲದ ಲಭ್ಯತೆಯು ಉದ್ಯಮ ಮಾಲೀಕ ರಿಗೆ ನಿರಾಳತೆ ಒದಗಿಸುತ್ತದೆ.
ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವ ಅಥವಾ ಅನೌಪಚಾರಿಕ ಸಾಲ ಪಡೆಯುವ ಬದಲಿಗೆ ಅವರು ಅಡೆತಡೆಯಿಲ್ಲದೆ ಗ್ರಾಹಕರಿಗೆ ಸೇವೆಯನ್ನು ಮುಂದುವರಿಸಬಹುದು. ವಿಶ್ವಾಸಾರ್ಹ ಸಾಲವು ಅನಿಶ್ಚಿತತೆ ಕಡಿಮೆ ಮಾಡಲು ನೆರವಾಗುತ್ತದೆ ಮತ್ತು ಪ್ರತಿನಿತ್ಯದ ಚಟುವಟಿಕೆಗಳು ಸುಸೂತ್ರವಾಗಿ ನಡೆಯುವಂತೆ ಮಾಡುತ್ತದೆ.
ಇದನ್ನೂ ಓದಿ: Dr Karaveeraprabhu Kyalakonda Column: ಅಸೂಯೆಯ ಅಳಿವಿನಿಂದ ಆರೋಗ್ಯ- ಆನಂದ- ಅಭಿವೃದ್ಧಿ
ವ್ಯಾಪಾರದ ಅವಕಾಶಗಳೂ ಹೆಚ್ಚಿನ ಮುನ್ಸೂಚನೆ ನೀಡದೆ ಬರುತ್ತವೆ. ಹಬ್ಬದ ಋತುಗಳು, ದಿಢೀರ್ ಸಗಟು ಆರ್ಡರ್ ಗಳು ಅಥವಾ ಹೆಚ್ಚಿನ ಗ್ರಾಹಕರ ಬೇಡಿಕೆಗೆ ತ್ವರಿತ ಹೂಡಿಕೆ ಅಗತ್ಯವಾಗಬಹುದು. ಅದು ಹೆಚ್ಚುವರಿ ದಾಸ್ತಾನು ಖರೀದಿ ಇರಬಹುದು, ಯಂತ್ರೋಪಕರಣ ಅಪ್ ಗ್ರೇಡ್ ಆಗಿರಬಹುದು ಅಥವಾ ಸೇವೆಗಳ ವಿಸ್ತರಣೆಯಾಗಿರಬಹುದು, ಸಾಲದ ಲಭ್ಯತೆಯು ಉದ್ಯಮಿಗಳಿಗೆ ತ್ವರಿತವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸುತ್ತದೆ.
ಸಕಾಲಕ್ಕೆ ಪ್ರತಿಕ್ರಿಯಿಸಲು ಶಖ್ತರಾಗುವುದು ಅಲ್ಪಾವಧಿ ಬೇಡಿಕೆಯನ್ನು ದೀರ್ಘಾವಧಿ ಪ್ರಗತಿಯಾಗಿ ಪರಿವರ್ತಿಸಬಲ್ಲದು. ಅನೌಪಚಾರಿಕ ಸಾಲ ಪಡೆಯುವುದರಿಂದ ಸಾಂಸ್ಥಿಕ ಹಣಕಾಸು ವ್ಯವಸ್ಥೆಗಳಿಗೆ ಬದಲಾವಣೆಯು ಗಮನಿಸಬೇಕಾದ ಬದಲಾವಣೆ. ಹಿಂದೆ ಹಲವು ಕಿರು ಮತ್ತು ಅತ್ಯಂತ ಸಣ್ಣ ಉದ್ಯಮಿಗಳು ವೈಯಕ್ತಿಕ ಸಂಪರ್ಕ ಅಥವಾ ದುಬಾರಿ ಸಾಲಗಳ ಮೇಲೆ ಆಧಾರಪಡಬೇಕಾಗಿತ್ತು, ಏಕೆಂದರೆ ಔಪಚಾರಿಕ ಸಾಲ ಪಡೆಯುವುದು ಕಷ್ಟಕರವಾಗಿತ್ತು.
ಡಿಜಿಟಲ್ ಸಾಲ ನೀಡಿಕೆಯ ಪ್ಲಾಟ್ ಫಾರಂಗಳು ಈಗ ಬದಲಾವಣೆ ತಂದಿದ್ದು ಅರ್ಜಿ ಹಾಕುವು ದನ್ನು ಸರಳಗೊಳಿಸಿವೆ, ಕಾಗದದ ಕೆಲಸ ಕಡಿಮೆ ಮಾಡಿವೆ ಮತ್ತು ವೇಗದಲ್ಲಿ ಅನುಮೋದನೆ ನೀಡುತ್ತಿವೆ. ಇದು ವ್ಯಾಪಾರ ಮಾಲೀಕರಿಗೆ ಭವಿಷ್ಯದಲ್ಲಿ ಸಾಲ ಪಡೆಯಲು ಹಣಕಾಸು ಟ್ರ್ಯಾಕ್ ರೆಕಾರ್ಡ್ ನಿರ್ಮಿಸಲು ನೆರವಾಗುತ್ತವೆ.
ಇತ್ತೀಚೆಗೆ ನೀತಿಗಳು ಸಣ್ಣ ವ್ಯಾಪಾರಗಳ ಹಣಕಾಸಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. 2025-26ರ ಆರ್ಥಿಕ ಸಮೀಕ್ಷೆ ಪ್ರಕಾರ ನವೆಂಬರ್ 2025ರಲ್ಲಿ ವರ್ಷದಿಂದ ವರ್ಷಕ್ಕೆ ಎಂ.ಎಸ್.ಎಂ.ಇ. ಸಾಲವು ಶೇ.21.8ರಷ್ಟು ವೃದ್ಧಿಸಿದೆ, ಕಿರು ಮತ್ತು ಸಣ್ಣ ಉದ್ಯಮಗಳು ಶೇ.24.6ರಷ್ಟು ಮತ್ತಷ್ಟು ವೇಗದ ಪ್ರಗತಿ ದಾಖಲಿಸಿರುವುದು ಈ ವಲಯದಲ್ಲಿ ಔಪಚಾರಿಕ ಸಾಲದ ಅಳವಡಿಕೆ ಹೆಚ್ಚುತ್ತಿರುವುದನ್ನು ತೋರಿಸಿದೆ. ಈ ಪ್ರವೃತ್ತಿಯು ಹಲವಾರು ಸಣ್ಣ ವ್ಯಾಪಾರಗಳಿಗೆ ಸಕಾಲಿಕ ದುಡಿಯುವ ಬಂಡವಾಳ ದ ಅಗತ್ಯವಿರುವಾಗ ಹಣಕಾಸಿನ ಸುಧಾರಿತ ಲಭ್ಯತೆಯನ್ನು ಸೂಚಿಸುತ್ತಿದೆ.
ಈ ಸಾಲದ ಇಕೊಸಿಸ್ಟಂ ಸ್ವತಃ ಈ ಅಗತ್ಯಗಳನ್ನು ಪೂರೈಸಲು ವಿಕಾಸಗೊಂಡಿದೆ. ಉದ್ಯಮದ ಒಳನೋಟಗಳ ಪ್ರಕಾರ ಹಲವಾರು ಕಿರು ಮತ್ತು ಸಣ್ಣ ವ್ಯಾಪಾರಗಳು ಔಪಚಾರಿಕ ಸಾಲ ಪಡೆಯಲು ಇನ್ನೂ ಕಷ್ಟಪಡುತ್ತಿವೆ ಮತ್ತು ಕೆಲವೊಮ್ಮೆ ಅನೌಪಚಾರಿಕ ಮೂಲಗಳ ಮೇಲೆ ಆಧಾರಪಟ್ಟಿವೆ.
ಡಿಜಿಟಲ್ ಸಾಲ ನೀಡಿಕೆಯ ಪ್ಲಾಟ್ ಫಾರಂ ಎಂಪಾಕೆಟ್ ಈ ಅಂತರವನ್ನು ಗುರುತಿಸಿದೆ ಮತ್ತು ಇತ್ತೀಚೆಗೆ ತನ್ನ ಸಾಲದ ಮಿತಿಯನ್ನು ₹2 ಲಕ್ಷಕ್ಕೆ ಹೆಚ್ಚಿಸಿದೆ. ಇದರ ಗುರಿ ಉದ್ಯಮಿಗಳಿಗೆ ನಗದು ಹರಿವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು, ಇನ್ವೆಂಟರಿ ಖರೀದಿಗೆ ಮತ್ತು ಹೆಚ್ಚು ಸುಲಭವಾಗಿ ವ್ಯಾಪಾರ ಸುಧಾರಣೆಗಳಿಗೆ ಹೂಡಿಕೆ ಮಾಡಲು ನೆರವಾಗುವುದು.
ವಿಸ್ತಾರ ಮಟ್ಟದಲ್ಲಿ ಸಾಲದ ಉತ್ತಮ ಲಭ್ಯತೆಯು ಸ್ಥಳೀಯ ಅರ್ಥವ್ಯವಸ್ಥೆಗಳಿಗೆ ಕೂಡಾ ಬೆಂಬಲಿಸುತ್ತದೆ. ಭಾರತದಲ್ಲಿ ಲಕ್ಷಾಂತರ ಸಣ್ಣ ವ್ಯಾಪಾರಗಳು ಉದ್ಯೋಗ ಸೃಷ್ಟಿಸುತ್ತವೆ ಮತ್ತು ಸಮುದಾಯದ ಪ್ರಗತಿಗೆ ಕೊಡುಗೆ ನೀಡುತ್ತವೆ. ಈ ಉದ್ಯಮಗಳು ಸಕಾಲಿಕ ಆರ್ಥಿಕ ಬೆಂಬಲ ಪಡೆದಾಗ ಅವು ಕಾರ್ಯಾಚರಣೆಗಳನ್ನು ವಿಸ್ತರಿಸಬಲ್ಲವು, ಜನರ ನೇಮಕ ಮಾಡಿಕೊಳ್ಳಬಲ್ಲವು ಮತ್ತು ಆರ್ಥಿಕ ಚಟುವಟಿಕೆಗೆ ಹೆಚ್ಚು ಸ್ಥಿರವಾಗಿ ಕೊಡುಗೆ ನೀಡಬಲ್ಲವು. ಈ ರೀತಿಯಲ್ಲಿ ಸಾಲದ ಲಭ್ಯತೆ ವೈಯಕ್ತಿಕ ವ್ಯಾಪಾರಗಳಿಗೆ ಮಾತ್ರವಲ್ಲ, ಇಡೀ ಸಮುದಾಯಗಳಿಗೆ ಪ್ರಯೋಜನ ನೀಡುತ್ತದೆ.
ಅಂತಿಮವಾಗಿ ಸಾಲವು ಒಳ್ಳೆಯದು ಅಥವಾ ಕೆಟ್ಟದಲ್ಲ, ಅದರ ಪರಿಣಾಮವು ಅದನ್ನು ಹೇಗೆ ಉಪಯೋಗಿಸುತ್ತೇವೆ ಎನ್ನುವುದನ್ನು ಆಧರಿಸಿರುತ್ತದೆ. ಇಂದಿನ ಸಣ್ಣ ವ್ಯಾಪಾರ ಮಾಲೀಕರು ಅದನ್ನು ಕೊನೆಯ ಆಯ್ಕೆಯಾಗಿ ಬಳಸದೆ ಪ್ರಗತಿಯ ಸಾಧನವಾಗಿ ಬಳಸಿದಾಗ ಸಾಲ ಪಡಯು ವುದು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಹಣಕಾಸು ಸೇವೆಗಳು ಹೆಚ್ಚು ಲಭ್ಯ ಮತ್ತು ತಂತ್ರ ಜ್ಞಾನವು ಸಾಲನೀಡಿಕೆಯನ್ನು ಸರಳೀಕರಿಸುವುದನ್ನು ಮುಂದುವರಿಸಿದಾಗ ಸಾಲವು ಉದ್ಯಮಿಗಳಿಗೆ ಸ್ಥಿರತೆಯಿಂದ ಸುಸ್ಥಿರ ಪ್ರಗತಿಯತ್ತ ಮುನ್ನಡೆಯಲು ನೆರವಾಗುತ್ತದೆ.