ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Repo Rate: ಸಾಲಗಾರರಿಗೆ ಬಿಗ್‌ ರಿಲೀಫ್!‌ ಆರ್‌ಬಿಐ ರೆಪೊ ದರ 0.50% ಕಡಿತ, ಇಳಿಯಲಿದೆ ಗೃಹ, ಕಾರು ಸಾಲ ಇಎಂಐ

RBI Cuts Repo Rate: ರೆಪೊ ದರದಲ್ಲಿ(Repo Rate) 0.50% ಕಡಿತಗೊಳಿಸಿದ್ದು, 5.50% ಕ್ಕೆ ತಗ್ಗಿಸಿದೆ. ಈ ಹಿಂದೆ 6% ಇತ್ತು. ಇದರ ಪರಿಣಾಮ ಗೃಹ ಸಾಲ, ವಾಹನ ಸಾಲ, ಉದ್ದಿಮೆಗಳ ಸಾಲದ ಬಡ್ಡಿ ದರದಲ್ಲಿ ಇಳಿಕೆಯಾಗಲಿದೆ. ಇಎಂಐ ಹೊರೆ ತಗ್ಗಲಿದೆ. ಸತತ ಮೂರನೇ ಸಲ ಆರ್‌ಬಿಐ ಬಡ್ಡಿ ದರ ಕಡಿತಗೊಳಿಸುತ್ತಿದ್ದು ಹ್ಯಾಟ್ರಿಕ್‌ ಸಾಧಿಸಿದೆ.

ಸಾಲಗಾರರಿಗೆ ಬಿಗ್‌ ರಿಲೀಫ್!‌ ಆರ್‌ಬಿಐ ರೆಪೊ ದರ 0.50% ಕಡಿತ

Profile Rakshita Karkera Jun 6, 2025 11:05 AM

ಮುಂಬಯಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(RBI) ನಿರೀಕ್ಷೆಗೂ ಮೀರಿದ ಸಾಲಗಾರರಿಗೆ ಸಿಹಿ ಸುದ್ದಿ ನೀಡಿದೆ. ತನ್ನ ರೆಪೊ ದರದಲ್ಲಿ(Repo Rate) 0.50% ಕಡಿತಗೊಳಿಸಿದ್ದು, 5.50% ಕ್ಕೆ ತಗ್ಗಿಸಿದೆ. ಈ ಹಿಂದೆ 6% ಇತ್ತು. ಇದರ ಪರಿಣಾಮ ಗೃಹ ಸಾಲ, ವಾಹನ ಸಾಲ, ಉದ್ದಿಮೆಗಳ ಸಾಲದ ಬಡ್ಡಿ ದರದಲ್ಲಿ ಇಳಿಕೆಯಾಗಲಿದೆ. ಇಎಂಐ ಹೊರೆ ತಗ್ಗಲಿದೆ. ಸತತ ಮೂರನೇ ಸಲ ಆರ್‌ಬಿಐ ಬಡ್ಡಿ ದರ ಕಡಿತಗೊಳಿಸುತ್ತಿದ್ದು ಹ್ಯಾಟ್ರಿಕ್‌ ಸಾಧಿಸಿದೆ. ಆರ್ಥಿಕ ಬೆಳವಣಿಗೆಗೆ ಪುಷ್ಟಿ ನೀಡುವ ಸಲುವಾಗಿ ಈ ನಿರ್ಧಾರ ಕೈಗೊಂಡಿದೆ.

ಆರ್‌ ಬಿಐ ತನ್ನ ನೀತಿಯನ್ನು ಅಕಮೊಡೇಟಿವ್‌ನಿಂದ ನ್ಯೂಟ್ರಲ್‌ಗೆ ಬದಲಾಯಿಸಿದೆ. ನ್ಯೂಟ್ರಲ್‌ ನಿಲುವು ಎಂದರೆ ಹಣದುಬ್ಬರ ಮತ್ತು ಬೆಳವಣಿಗೆಗೆ ಸಮಾನ ಆದ್ಯತೆ ನೀಡುವಂಥದ್ದು. ಈ ಹಂತದಲ್ಲಿ ಆರ್‌ಬಿಐ ಬಡ್ಡಿ ದರವನ್ನು ಏರಿಕೆ ಅಥವಾ ಇಳಿಕೆ ಮಾಡುವ ಸಾಧ್ಯತೆ ಇರುತ್ತದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 2025-26ರ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು 6.5% ಕ್ಕೆ ಉಳಿಸಿಕೊಂಡಿದೆ. ಜಾಗತಿಕ ಅನಿಶ್ಚಿತತೆಯ ನಡುವೆಯೂ ದೇಶದ ಆರ್ಥಿಕತೆ ಬೆಳವಣಿಗೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಈ ವರ್ಷ ಭಾರತವು ವಿಶ್ವದ 4ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ.

ಸೇವಾ ವಲಯ ಉತ್ತಮ ಪ್ರಗತಿ ದಾಖಲಿಸಿದೆ. ಈ ಸಲ ಮುಂಗಾರು ಮಳೆ ಸಾಮಾನ್ಯ ಮಟ್ಟಕ್ಕಿಂತಲೂ ಹೆಚ್ಚು ಆಗುವ ಸಂಭವ ಇದ್ದು ಕೃಷಿ ಚಟುವಟಿಕೆಗೆ ಪೂರಕವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಜನರ ಆದಾಯ ಮತ್ತು ಬೇಡಿಕೆ ಹೆಚ್ಚಲಿದೆ ಎಂದು ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ತಿಳಿಸಿದ್ದಾರೆ.ಈ ನಡುವೆ ಭಾರತ ಮತ್ತು ಅಮೆರಿಕವು ಮುಕ್ತ ವ್ಯಾಪಾರ ಒಪ್ಪಂದದ ಸಲುವಾಗಿ ಈ ವಾರ ಮಹತ್ವದ ಮಾತುಕತೆ ನಡೆಸಲಿದೆ.

ಸೆನ್ಸೆಕ್ಸ್‌ ಜಿಗಿತ

ಆರ್‌ಬಿಐ ಬಡ್ಡಿ ದರ ಕಡಿತಗೊಳಿಸಿದ ಬೆನ್ನಲ್ಲೇ ಸ್ಟಾಕ್‌ ಮಾರ್ಕೆಟ್‌ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರಿಕೆಯಾಗಿದೆ. ಸೆನ್ಸೆಕ್ಸ್‌ ಬೆಳಗ್ಗೆ 10.40ರ ವೇಳೆಗೆ ದಿಢೀರ್‌ 500 ಅಂಕ ಜಿಗಿದು 81,917ಕ್ಕೆ ಏರಿಕೆಯಾಯಿತು. ನಿಫ್ಟಿ 172 ಅಂಕ ಏರಿಕೆಯಾಗಿ 24,923ಕ್ಕೆ ವೃದ್ಧಿಸಿತು.

ಮುಖ್ಯವಾಗಿ ಬ್ಯಾಂಕಿಂಗ್‌ ವಲಯದ ಷೇರುಗಳು ಲಾಭ ಗಳಿಸಿತು. ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಷೇರು ದರ ಹೆಚ್ಚಳ ದಾಖಲಿಸಿತು. ಹೌಸಿಂಗ್‌ ವಲಯದ ಷೇರುಗಳೂ ಚೇತರಿಸಿತು. ಶೋಭಾ ಲಿಮಿಟೆಡ್‌, ಪ್ರೆಸ್ಟೀಜ್‌ ಎಸ್ಟೇಟ್ಸ್‌, ಸಿಗ್ನೇಚರ್‌ ಗ್ಲೋಬಲ್‌ ಮೊದಲಾದ ರಿಯಾಲ್ಟಿ ಷೇರುಗಳೂ ಲಾಭ ಗಳಿಸಿತು.

ಈ ವರ್ಷ ಫೆಬ್ರವರಿ ಬಳಿಕ ಇಲ್ಲಿಯವರೆಗೆ ಬಡ್ಡಿ ದರದಲ್ಲಿ 1% ಇಳಿದಂತಾಗಿದೆ. ರೆಪೊ ದರ ಎಂದರೆ ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಫಂಡ್‌ಗೆ ಕಟ್ಟುವ ಬಡ್ಡಿ ದರವಾಗಿದೆ. ಇದು ತಗ್ಗಿದರೆ ಬ್ಯಾಂಕ್‌ಗಳಿಗೆ ಕಡಿಮೆ ಬಡ್ಡಿಗೆ ಸಾಲ ನೀಡಲು ಸಾಧ್ಯವಾಗುತ್ತದೆ.