ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೇಶಾದ್ಯಂತ 15 ಸಾವಿರಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ Paytm QR ಪಾವತಿ ಸೌಲಭ್ಯ ಒದಗಿಸಲು ChargeZone ಜೊತೆ Paytm ಸಹಭಾಗಿತ್ವ

ಈ ಸಹಭಾಗಿತ್ವದ ಮೂಲಕ ದೇಶಾದ್ಯಂತ 15,000ಕ್ಕೂ ಹೆಚ್ಚು ಹೈ-ಸ್ಪೀಡ್ ಇವಿ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ Paytm QR ಮೂಲಕ ಪಾವತಿ ಮಾಡುವ ಸೌಲಭ್ಯ ಲಭ್ಯವಾಗಲಿದೆ. ಇವಿ ವಾಹನ ಚಾಲಕರು ChargeZone ಕೇಂದ್ರಗಳಲ್ಲಿ ಅಳವಡಿಸಲಾದ ವಿಶೇಷ Paytm QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ತಾವು ಪಾವತಿಸಲು ಬಯಸುವ ಮೊತ್ತವನ್ನು ನಮೂದಿಸಿ, ಚಾರ್ಜಿಂಗ್ ಪ್ರಾರಂಭಿಸುವ ಮೊದಲು Paytm ಮೂಲಕ ಪಾವತಿಯನ್ನು ಪೂರ್ಣಗೊಳಿಸಬಹುದು.

ಕ್ಯೂಆರ್‌ ಪಾವತಿ ಸೌಲಭ್ಯ ಒದಗಿಸಲು ChargeZone ಪೇಟಿಎಂ ಜೊತೆ ಸಹಭಾಗಿತ್ವ

-

Profile
Ashok Nayak Nov 23, 2026 8:01 PM

ಭಾರತದಲ್ಲಿ ಎಂಎಸ್‌ಎಂಇಗಳು ಮತ್ತು ದೊಡ್ಡ ಉದ್ಯಮಗಳಿಗೆ ಸೇವೆ ಒದಗಿಸುವ ಪ್ರಮುಖ ಮರ್ಚೆಂಟ್ ಪೇಮೆಂಟ್ಸ್ ಕಂಪನಿ, ಹಣಕಾಸು ಸೇವೆಗಳ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಹಾಗೂ ಮೊಬೈಲ್ ಪಾವತಿಗಳು, Paytm QR ಮತ್ತು Soundbox ಪರಿಚಯಿಸಿದ ಪ್ರವರ್ತಕ ಸಂಸ್ಥೆಯಾದ Paytm (One 97 Communications Limited), ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ವಾಹನ (ಇವಿ) ಸೂಪರ್‌ಚಾರ್ಜಿಂಗ್ ನೆಟ್‌ವರ್ಕ್‌ಗಳಲ್ಲಿ ಒಂದಾದ ChargeZone ಜೊತೆ ಸಹಭಾಗಿತ್ವ ಮಾಡಿಕೊಂಡಿದೆ.

ಈ ಸಹಭಾಗಿತ್ವದ ಮೂಲಕ ದೇಶಾದ್ಯಂತ 15,000ಕ್ಕೂ ಹೆಚ್ಚು ಹೈ-ಸ್ಪೀಡ್ ಇವಿ ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ Paytm QR ಮೂಲಕ ಪಾವತಿ ಮಾಡುವ ಸೌಲಭ್ಯ ಲಭ್ಯವಾಗಲಿದೆ. ಇವಿ ವಾಹನ ಚಾಲಕರು ChargeZone ಕೇಂದ್ರಗಳಲ್ಲಿ ಅಳವಡಿಸಲಾದ ವಿಶೇಷ Paytm QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ತಾವು ಪಾವತಿಸಲು ಬಯಸುವ ಮೊತ್ತವನ್ನು ನಮೂದಿಸಿ, ಚಾರ್ಜಿಂಗ್ ಪ್ರಾರಂಭಿಸುವ ಮೊದಲು Paytm ಮೂಲಕ ಪಾವತಿಯನ್ನು ಪೂರ್ಣಗೊಳಿಸಬಹುದು.

ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಚಾರ್ಜಿಂಗ್‌ಗಾಗಿ ಪಾವತಿ ಮಾಡು ವುದು ದೈನಂದಿನ ಪ್ರಯಾಣದ ಒಂದು ಭಾಗವಾಗುತ್ತಿದೆ. ಭಾರತದಲ್ಲಿ QR ಆಧಾರಿತ ಮೊಬೈಲ್ ಪಾವತಿಗಳಿಗೆ ನಾಂದಿ ಹಾಡಿದ Paytm, ಜನರು ತಮ್ಮ ನೆರೆಹೊರೆಯ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಅನುಭವಿಸುತ್ತಿರುವ ಅದೇ ಸರಳತೆ ಮತ್ತು ಅನುಕೂಲತೆಯನ್ನು ಬೆಳೆಯುತ್ತಿರುವ ಇವಿ ಚಾರ್ಜಿಂಗ್ ವ್ಯವಸ್ಥೆಗೂ ವಿಸ್ತರಿಸುತ್ತಿದೆ.

ಇದನ್ನೂ ಓದಿ: ಭಾರತದ ಮೊದಲ ಫ್ಯಾಮಿಲಿ ಲೌಂಜ್ ಪ್ರವೇಶ ಸೌಲಭ್ಯವಿರುವ RuPay ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಲು Paytm ಮತ್ತು AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪಾಲುದಾರಿಕೆ

ChargeZone ದೇಶಾದ್ಯಂತ 1,200 ಸ್ಥಳಗಳಲ್ಲಿ 15,000ಕ್ಕೂ ಹೆಚ್ಚು ಹೈ-ಸ್ಪೀಡ್ ಇವಿ ಚಾರ್ಜಿಂಗ್ ಪಾಯಿಂಟ್‌ಗಳ ನೆಟ್‌ವರ್ಕ್ ಅನ್ನು ನಿರ್ವಹಿಸುತ್ತಿದೆ. ಇದರಲ್ಲಿ ಪ್ರಮುಖ ಹೆದ್ದಾರಿಗಳು, ನಗರ ಕೇಂದ್ರಗಳು ಮತ್ತು ವಾಣಿಜ್ಯ ಪ್ರದೇಶಗಳು ಸೇರಿವೆ. ಈ ಸಹಭಾಗಿತ್ವದ ಮೂಲಕ ChargeIndia ಎಂಬ ಇವಿ ಚಾರ್ಜಿಂಗ್ ಅಗ್ರಿಗೇಷನ್ ಪ್ಲಾಟ್‌ಫಾರ್ಮ್ ಸಹಾಯದಿಂದ ChargeZone ನೆಟ್‌ವರ್ಕ್‌ ನಲ್ಲಿ Paytm QR ಪಾವತಿ ಸೌಲಭ್ಯ ಒದಗಿಸಲಾಗುತ್ತಿದೆ. ChargeIndia ಒಂದೇ ತಾಂತ್ರಿಕ ಸಂಯೋಜನೆಯ ಮೂಲಕ Paytm ಅನ್ನು ವಿವಿಧ ಚಾರ್ಜಿಂಗ್ ನೆಟ್‌ವರ್ಕ್‌ಗಳೊಂದಿಗೆ ಸಂಪರ್ಕಿಸುತ್ತದೆ. 2030ರ ವೇಳೆಗೆ 10 ಲಕ್ಷ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುವ ChargeZone ನ ಗುರಿಗೂ ಈ ಸಹಭಾಗಿತ್ವ ಬೆಂಬಲ ನೀಡುತ್ತದೆ.

*Paytm ವಕ್ತಾರರು ಮಾತನಾಡಿ,* “ಭಾರತದಲ್ಲಿ QR ಆಧಾರಿತ ಮೊಬೈಲ್ ಪಾವತಿಗಳಿಗೆ ನಾವು ನಾಂದಿ ಹಾಡಿದ್ದೇವೆ ಮತ್ತು ಅವುಗಳನ್ನು ಜನರ ದೈನಂದಿನ ಜೀವನದ ಭಾಗವನ್ನಾಗಿ ಮಾಡಿದ್ದೇವೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ChargeZone ಜೊತೆಗಿನ ನಮ್ಮ ಸಹಭಾಗಿತ್ವವು ದೇಶಾದ್ಯಂತ ಇವಿ ಚಾರ್ಜಿಂಗ್ ಪಾವತಿಗಳಲ್ಲಿಯೂ ಅದೇ ವಿಶ್ವಾಸ ಮತ್ತು ಅನುಕೂಲತೆಯನ್ನು ಒದಗಿಸುತ್ತದೆ” ಎಂದು ಹೇಳಿದರು.

*ChargeZone ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾರ್ತಿಕೇಯ ಹರಿಯಾಣಿ ಮಾತನಾಡಿ,* “ಚಾರ್ಜಿಂಗ್ ನೆಟ್‌ವರ್ಕ್ ನಿರ್ಮಿಸುವುದು ಈ ಕಾರ್ಯದ ಒಂದು ಭಾಗ ಮಾತ್ರ. ಜನರು ಅದನ್ನು ಎಷ್ಟು ಸುಲಭವಾಗಿ ಬಳಸಬಹುದು ಎಂಬುದು ಹೆಚ್ಚು ಮುಖ್ಯವಾಗಿದೆ. ಜನರಿಗೆ ಅಗತ್ಯವಿರುವ ಸ್ಥಳಗಳಲ್ಲಿ ಚಾರ್ಜಿಂಗ್ ಕೇಂದ್ರಗಳು ಇರಬೇಕು, ಚಾರ್ಜಿಂಗ್ ವಿಶ್ವಾಸಾರ್ಹ ವಾಗಿರಬೇಕು ಮತ್ತು ಆರಂಭದಿಂದ ಅಂತ್ಯದವರೆಗೆ ಸಂಪೂರ್ಣ ಅನುಭವ ಸರಳವಾಗಿರಬೇಕು. Paytm ಜೊತೆಗಿನ ನಮ್ಮ ಸಹಭಾಗಿತ್ವವು ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಜನರಿಗೆ ಪರಿಚಿತವಾಗಿರುವ ಪ್ಲಾಟ್‌ಫಾರ್ಮ್ ಮೂಲಕ ಪಾವತಿಯನ್ನು ಇನ್ನಷ್ಟು ಸುಲಭಗೊಳಿಸುತ್ತದೆ. ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿರುವಂತೆ, ಚಾರ್ಜಿಂಗ್ ನೆಟ್‌ವರ್ಕ್ ವಿಸ್ತರಣೆಯಷ್ಟೇ ಇಂತಹ ದೈನಂದಿನ ಅನುಭವಗಳೂ ಮುಖ್ಯವಾಗುತ್ತವೆ” ಎಂದು ಹೇಳಿದರು.

*ChargeZone ಕೇಂದ್ರಗಳಲ್ಲಿ Paytm ಮೂಲಕ ಇವಿ ಚಾರ್ಜಿಂಗ್‌ಗೆ ಪಾವತಿ ಮಾಡುವುದು ಹೇಗೆ:*

ChargeZone ಇವಿ ಚಾರ್ಜಿಂಗ್ ಕೇಂದ್ರದಲ್ಲಿ Paytm ಆ್ಯಪ್ ತೆರೆಯಿರಿ.

  1. ಚಾರ್ಜಿಂಗ್ ಪಾಯಿಂಟ್‌ನಲ್ಲಿ ಅಳವಡಿಸಲಾದ ವಿಶೇಷ Paytm QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
  2. ಚಾರ್ಜಿಂಗ್ ಸೆಷನ್‌ಗಾಗಿ ಪಾವತಿಸಬೇಕಾದ ಮೊತ್ತವನ್ನು ನಮೂದಿಸಿ.
  3. Paytm ಮೂಲಕ ಪಾವತಿಯನ್ನು ಪೂರ್ಣಗೊಳಿಸಿ.
  4. ಪಾವತಿ ಯಶಸ್ವಿಯಾದ ನಂತರ ಚಾರ್ಜಿಂಗ್ ಪ್ರಾರಂಭಿಸಿ.