ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಎಐ-ಶಕ್ತಿಯ ದೂರದ ಸಮಸ್ಯೆ ಪತ್ತೆ ಹಾಗೂ ತೊಂದರೆ ನಿವಾರಣಾ ಸಾಧನದೊಂದಿಗೆ ಗ್ರಾಹಕ ಸೇವೆಯನ್ನು ವರ್ಧಿಸಿದ ಸ್ಯಾಂಸಂಗ್ ಇಂಡಿಯಾ

ಸ್ಯಾಂಸಂಗ್ ಸರ್ವಿಸ್, ಹೋಮ್ ಅಪ್ಲಯನ್ಸ್ ಸಮಸ್ಯೆಪತ್ತೆಯ ಮುನ್ನೆಲೆಯಲ್ಲಿದ್ದು, ಅತಿನಿಖರತೆ ಯೊಂದಿಗೆ ಸಮಸ್ಯೆಗಳನ್ನು ಗುರುತಿಸಲು ಆಧುನಿಕ ಸಾಧನಗಳನ್ನು ವರ್ಧಿಸುತ್ತಿದೆ. ಅದರ ಸ್ಮಾರ್ಟ್ ಸಮಸ್ಯೆಪತ್ತೆ ಸೇವೆಯ ಮೂಲಕ ಗ್ರಾಹಕರು ತೊಂದರೆನಿವಾರಣೆಗೆ ಧನಾತ್ಮಕ ಪರಿಹಾರಗಳನ್ನು ಪಡೆದು ಕೊಂಡು, ದೂರದಿಂದಲೇ ಸಮಸ್ಯೆಗಳನ್ನು ಪರಿಹರಿಸಿಕೊಂಡು ತಂತ್ರಜ್ಞರ ಭೇಟಿಯ ಅಗತ್ಯವನ್ನು ಕಡಿಮೆ ಮಾಡಿಕೊಳ್ಳಬಹುದು

ಗ್ರಾಹಕ ಸೇವೆಯನ್ನು ವರ್ಧಿಸಿದ ಸ್ಯಾಂಸಂಗ್ ಇಂಡಿಯಾ

Profile Ashok Nayak Apr 16, 2025 10:22 PM

ಸ್ಯಾಂಸಂಗ್‌ನ ಹೋಮ್ ಅಪ್ಲಯನ್ಸಸ್ ರಿಮೋಟ್ ಮ್ಯಾನೇಜ್ಮೆಂಟ್ (HRM) ಸಾಧನವು ಸರ್ವಿಸ್ ಕಾದಿರುವಿಕೆ ಸಮಯವನ್ನು ಕಡಿಮೆ ಮಾಡಿ, ಎಐ-ಶಕ್ತಿಯ ದೂರದ ಸಮಸ್ಯೆಪತ್ತೆ ಹಾಗೂ ತೊಂದರೆನಿವಾರಣೆ ಮೂಲಕ ಗ್ರಾಹಕ ಅನುಭವವನ್ನು ವರ್ಧಿಸುತ್ತದೆ.

  • ಸಲಹೆಗಾರರು ಸಮಸ್ಯೆಗಳನ್ನು ಬೇಗನೇ ನಿವಾರಿಸಿ, ಇನ್-ಹೋಮ್ ಭೇಟಿಗಳ ಅಗತ್ಯವನ್ನು ಕಡಿಮೆ ಮಾಡಿ, ಗ್ರಾಹಕರಿಗೆ ಕ್ರಿಯಾಶೀಲ ಪರಿಹಾರಗಳನ್ನು ಒದಗಿಸುವರು
  • HRM, SmartThings ಆಪ್ ಮೇಲೆ ನೋಂದಣಿ ಮಾಡಿದ ಸ್ಯಾಂಸಂಗ್ ಸ್ಮಾರ್ಟ್ ಅಪ್ಲಯನ್ಸ್‌ ಗಳಿಗಾಗಿ ದೂರದ ಸಮಾಲೋಚನೆ, ಮೇಲುಸ್ತುವಾರಿ ಹಾಗೂ ನಿಯಂತ್ರಣ ಅಂಶಗಳೊಂದಿಗೆ ವಾಸ್ತವ-ಸಮಯ ಸಮಸ್ಯೆ ಪರಿಹಾರಕ್ಕೆ ನೆರವಾಗುತ್ತದೆ.

ಬೆಂಗಳೂರು: ಭಾರತದ ಅತಿದೊಡ್ಡ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಬ್ರ್ಯಾಂಡ್ ಆದ ಸ್ಯಾಂಸಂ, ಸರ್ವಿಸ್ ಕಾದಿರುವಿಕೆ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿ ಗ್ರಾಹಕ ಅನುಭವವನ್ನು ವರ್ಧಿಸುವ ಮುಂದಿನ-ಪೀಳಿಗೆ ದೂರದ ಸಮಸ್ಯೆಪತ್ತೆ ಮತ್ತು ತೊಂದರೆ ನಿವಾರಣೆ ಪರಿಹಾರವಾದ ತನ್ನ ಹೋಮ್ ಅಪ್ಲಯನ್ಸಸ್ ರಿಮೋಟ್ ಮ್ಯಾನೇಜ್ಮೆಂಟ್ (HRM) ಸಾಧನವನ್ನು ಬಿಡುಗಡೆ ಮಾಡಿದೆ. ಎಐ-ಶಕ್ತಿಯ ಸಮಸ್ಯೆ ಪತ್ತೆ ಮತ್ತು ತೊಂದರೆ ನಿವಾರಣೆ ಸೇರಿಸುವ ಮೂಲಕ ಸ್ಯಾಂಸಂಗ್ ತಂತ್ರಜ್ಞರು ಈಗ ಸಮಸ್ಯೆಗಳನ್ನು ಬೇಗನೇ ಪರಿಹರಸಿ, ಅತ್ಯಂತ ದುರ್ಭರವಾದ ಇನ್-ಹೋಮ್ ಭೇಟಿಗಳ ಅಗತ್ಯವನ್ನು ಕಡಿಮೆ ಮಾಡಬಹುದು. ಈ ವಿನೂತನ ತಂತ್ರಜ್ಞಾನವು ಕ್ಷಿಪ್ರ ಪರಿಹಾರ ಗಳು ಮತ್ತು ಕಡಿಮೆ ಡೌನ್‌ಟೈಮ್‌ನೊಂದಿಗೆ ಗ್ರಾಹಕ ಅನುಭವವನ್ನು ವರ್ಧಿಸುವುದು ಮಾತ್ರ ವಲ್ಲದೆ ಉದ್ದಿಮೆಗಾಗಿ ಹೊಸ ಮಾನದಂಡವನ್ನು ಸ್ಥಾಪಿಸಿ ಗ್ರಾಹಕ ಆರೈಕೆಯ ಭವಿಷ್ಯತ್ತನ್ನು ಮರು ವಿವರಿಸಿ ಗ್ರಾಹಕರು ಮತ್ತು ಅವರ ಸ್ಮಾರ್ಟ್ ಹೋಮ್ ಅಪ್ಲಯನ್ಸ್‌ಗಳ ನಡುವಿನ ಸಂಬಂಧ ವನ್ನು ಮರುಕಲ್ಪಿಸುತ್ತಿದೆ.

ಇದನ್ನೂ ಓದಿ: Narendra Parekat Column: ಮಕ್ಕಳ ಬೇಸಿಗೆ ಶಿಬಿರ ವಿಕಸನದ ಅವಕಾಶ

“ಸ್ಯಾಂಸಂಗ್ ಸರ್ವಿಸ್, ಹೋಮ್ ಅಪ್ಲಯನ್ಸ್ ಸಮಸ್ಯೆಪತ್ತೆಯ ಮುನ್ನೆಲೆಯಲ್ಲಿದ್ದು, ಅತಿನಿಖರತೆ ಯೊಂದಿಗೆ ಸಮಸ್ಯೆಗಳನ್ನು ಗುರುತಿಸಲು ಆಧುನಿಕ ಸಾಧನಗಳನ್ನು ವರ್ಧಿಸುತ್ತಿದೆ. ಅದರ ಸ್ಮಾರ್ಟ್ ಸಮಸ್ಯೆಪತ್ತೆ ಸೇವೆಯ ಮೂಲಕ ಗ್ರಾಹಕರು ತೊಂದರೆನಿವಾರಣೆಗೆ ಧನಾತ್ಮಕ ಪರಿಹಾರಗಳನ್ನು ಪಡೆದುಕೊಂಡು, ದೂರದಿಂದಲೇ ಸಮಸ್ಯೆಗಳನ್ನು ಪರಿಹರಿಸಿಕೊಂಡು ತಂತ್ರಜ್ಞರ ಭೇಟಿಯ ಅಗತ್ಯವನ್ನು ಕಡಿಮೆ ಮಾಡಿಕೊಳ್ಳಬಹುದು. ಈ ವಿನೂತನ ಶೋಧವು ಕಾಯುವಿಕೆ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಿ, ಶೀಘ್ರ ಪರಿಹಾರಗಳನ್ನು ಖಾತರಿಪಡಿಸಿ, ಉತ್ಪನ್ನ ನಿರ್ವಹಣೆಯ ಕುರಿತು ಸಮಯಕ್ಕೆ ಸರಿಯಾದ ಹೊಸಸುದ್ದಿಗಳನ್ನು ಒದಗಿಸುವ ಮೂಲಕ ಗ್ರಾಹಕ ಅನುಭವ ವನ್ನು ವರ್ಧಿಸುತ್ತದೆ.” ಎಂದು ಹೇಳಿದರು, ಸ್ಯಾಂಸಂಗ್ ಇಂಡಿಯಾದ ಕಸ್ಟಮರ್ ಸ್ಯಾಟಿಸ್‌ ಫ್ಯಾಕ್ಷನ್ ವಿಭಾಗದ ವಿಪಿ ಸುನಿಲ್ ಕುಟಿನ್ಹ.

HRM, SmartThings ಆಪ್ ಮೇಲೆ ನೋಂದಣಿ ಮಾಡಿದ ಸ್ಯಾಂಸಂಗ್ ಸ್ಮಾರ್ಟ್ ಅಪ್ಲಯನ್ಸ್‌ಗಳಿಗಾಗಿ ದೂರದ ಸಮಾಲೋಚನೆ, ಮೇಲುಸ್ತುವಾರಿ ಹಾಗೂ ನಿಯಂತ್ರಣ ಅಂಶಗಳೊಂದಿಗೆ ವಾಸ್ತವ-ಸಮಯ ಸಮಸ್ಯೆ ಪರಿಹಾರಕ್ಕೆ ನೆರವಾಗುತ್ತದೆ. SmartThings, ಗ್ರಾಹಕ-ಮುಖಿ ಆಪ್ ಆಗಿದ್ದು, ಅಪ್ಲಯನ್ಸ್ ಕಾರ್ಯಾಚರಣೆ ಸಾಧನವಾಗಿ ಕಾರ್ಯನಿರ್ವಹಿಸಿ, ಬಳಕೆಯ ಪ್ಯಾಟರ್ನ್‌ಗಳನ್ನು ಸೆರೆಹಿಡಿಯುತ್ತದೆ. ಈ ಆವಿಷ್ಕಾರದೊಂದಿಗೆ ಸ್ಯಾಂಸಂಗ್ ಸ್ಮಾರ್ಟ್ ಸಾಧನ ನಿರ್ವಹಣೆಯಲ್ಲಿ ಮುನ್ನೆಲೆಯಲ್ಲಿದ್ದು, ವಿಶ್ವವ್ಯಾಪಿಯಾಗಿ ಇರುವ ಗ್ರಾಹಕರಿಗೆ, ಹೋಮ್ ಅಪ್ಲಯನ್ಸ್ ನಿರ್ವಹಣೆ ಯನ್ನು ಹೆಚ್ಚು ಸಮರ್ಥ ಹಾಗೂ ಅಡಚಣೆರಹಿತಗೊಳಿಸಿದೆ.

ಗ್ರಾಹಕರು, ತಮ್ಮ ಮನೆಯ ಅಪ್ಲಯನ್ಸ್‌ನಲ್ಲಿರುವ ಸಮಸ್ಯೆಗೆ ಸಂಬಂಧಿಸಿದಂತೆ ಸ್ಯಾಂಸಂಗ್ ಬೆಂಬಲ ತಂಡವನ್ನು ಸಂಪರ್ಕಿಸಿದಾಗ, HRM ಸಿಸ್ಟಮ್, ಸ್ಯಾಂಸಂಗ್‌ನ CRM (Customer Relation ship Management system) ಮೂಲಕ ತಾನೇತಾನಾಗಿ ನೋಂದಣಿ ಮಾಡಿದ ಸಾಧನದ ಮಾಡಲ್ ಮತ್ತು ಸೀರಿಯಲ್ ಸಂಖ್ಯೆಯನ್ನು ಪತ್ತೆಹಚ್ಚುತ್ತದೆ. ಇದನ್ನು ಸಕ್ರಿಯಗೊಳಿಸಿದಾಗ, ಸಂಪರ್ಕ ಕೇಂದ್ರದ ಸಲಹೆಗಾರರು, ಗ್ರಾಹಕರ ಒಪ್ಪಿಗೆಯ ನಂತರ, ಕೆಲವೊಂದು ಅಪ್ಲಯನ್ಸ್ ಕಾರ್ಯಾ ಚರಣೆಗಳನ್ನು ದೂರದಿಂದಲೇ ಪತ್ತೆಹಚ್ಚಿ, ಮೇಲುಸ್ತುವಾರಿ ನಿಯಂತ್ರಣವನ್ನೂ ಮಾಡಿ ತಕ್ಷಣದ ತೊಂದರೆನಿವಾರಣೆ ಮಾರ್ಗದರ್ಶನ ಒದಗಿಸಬಹುದು.

HRM ಯಾವ ರೀತಿ ಎಸಿ ಕೂಲಿಂಗ್ ಸಮಸ್ಯೆಯನ್ನು ನಿವಾರಿಸಬಲ್ಲದು

ಚೆನ್ನೈನಲ್ಲಿ ಬೇಸಿಗೆಯು ಬೇಗನೇ ಬಂದಿರುವಂತಹ ಸಮಯದಲ್ಲಿ ಮತ್ತು ತಾಪಮಾನವು 35⁰C ಗಿಂತ ಹೆಚ್ಚಾಗಿರುವ ಸಂದರ್ಭದಲ್ಲಿ, ರೋಹನ್ ಲೂಥ್ರ ಅವರ ಏರ್ ಕಂಡೀಷನರ್ ಕಡಿಮೆ ಸಾಮರ್ಥ್ಯದಲ್ಲಿ ಕೂಲ್ ಆಗುತ್ತಿತ್ತು. ಅದೃಷ್ಟವಶಾತ್, ರೋಹನ್ SmartThings ಆಪ್‌ಅನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಳವಡಿಸಿದ್ದರಿಂದ ಮತ್ತು ಎಸಿ ಈಗಾಗಲೇ ಆಪ್‌ನಲ್ಲಿ ನೋಂದಣಿಯಾಗಿದ್ದ ರಿಂದ, ಅವರಿಗೆ ಎರರ್ ನೋಟಿಫಿಕೇಶನ್ ಬಂದಿತು. ಕೂಡಲೇ ರೋಹನ್ SmartThings ನಲ್ಲಿ ಹೋಮ್ ಕೇರ್ ಸರ್ವಿಸ್ ಮೂಲಕ ಬೆಂಬಲ ಪಡೆದುಕೊಂಡು ಸಂಪರ್ಕ ಕೇಂದ್ರದ ಸಲಹಾಗಾರ ರೊಡನೆ ಸಂಪರ್ಕಹೊಂದಿದರು. ಸಮಾಲೋಚನೆ ಮಾಡಿದ ಬಳಿಕ, ಸಲಹಾಗಾರರು HRMನ ದೂರದ ಸಮಸ್ಯೆಪತ್ತೆ ಮೂಲಕ ಸಮಸ್ಯೆಯನ್ನು ಪತ್ತೆಹಚ್ಚಿ, ಗ್ರಾಹಕರಿಗೆ ಅದರ ಮೈಕ್ರೋಫಿಲ್ಟರ್ ಶುಚಿಗೊಳಿಸಬೇಕಾಗಿದೆ ಎಂದು ತಿಳಿಸಿ, ಫೋನ್ ಕರೆಯ ಮೇಲೆಯೇ ರೋಹನ್ ಅವರಿಗೆ ಹೆಜ್ಜೆ ಹೆಜ್ಜೆಯ ಮಾರ್ಗದರ್ಶನ ಒದಗಿಸಿ, ಆನ್-ಸೈಟ್ ಭೇಟಿಯ ಅಗತ್ಯವಿಲ್ಲದೇ ಕೆಲವೇ ಕ್ಷಣಗಳಲ್ಲ ಎಸಿ ಕೂಲಿಂಗ್‌ನ ಸಾಮರ್ಥ್ಯವನ್ನು ಮರು ಸ್ಥಾಪಿಸಿದ್ದರು.

ಈ ವಾಸ್ತವ-ಜಗತ್ತಿನ ಉದಾಹರಣೆಯು, ಸ್ಯಾಂಸಂಗ್‌ನ HRM ಸಾಧನವು ಯಾವ ರೀತಿ ಗ್ರಾಹಕ ಬೆಂಬಲವನ್ನು ಪರಿವರ್ತಿಸುತ್ತಿದೆ ಎಂಬುದನ್ನು ಎತ್ತಿ ತೋರಿಸಿ, ಸ್ಮಾರ್ಟ್ ಅಪ್ಲಯನ್ಸ್ ನಿರ್ವಹಣೆ ಯನ್ನು ಹೆಚ್ಚುಸಮರ್ಥ, ಹೆಚ್ಚು ಧನಾತ್ಮಕ ಹಾಗೂ ಅಡಚಣೆರಹಿತಗೊಳಿಸುತ್ತಿದೆ.